ನನ್ನ ಬಟ್ಟೆ ನನ್ನಿಷ್ಟ ಅಂತಾದರೆ, ಅವನ ಕಣ್ಣು, ಅವನಿಷ್ಟ ಹೇಳಬಹುದು! ವಿವಾದಕ್ಕೆ ಸಿಲುಕಿದ್ದ ಗಾಯಕಿ ಸುನೀತಾ ಸ್ಪಷ್ಟನೆ

ತೆಲುಗು ಚಿತ್ರರಂಗದ ಜನಪ್ರಿಯ ಹಿನ್ನೆಲೆ ಗಾಯಕಿ ಮತ್ತು ಡಬ್ಬಿಂಗ್ ಕಲಾವಿದೆ ಸುನೀತಾ ಉಪದ್ರಷ್ಟ ಅವರು ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ನನ್ನ ಬಟ್ಟೆ ನನ್ನಿಷ್ಟ ಅಂತಾದರೆ, ಅವನ ಕಣ್ಣು, ಅವನಿಷ್ಟ ಅನ್ನೋದನ್ನೂ ಒಪ್ಪಿಕೊಳ್ಳಬೇಕು ಎಂದಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ಹಾಗೂ ವಿವಾದಕ್ಕೆ ಕಾರಣವಾಗಿವೆ. ಅದಕ್ಕೀಗ ಗಾಯಕಿ ಸ್ಪಷ್ಟನೆ ಏನು ಕೊಟ್ಟಿದ್ದಾರೆ ನೋಡಿ.

ತೆಲುಗು ಚಿತ್ರರಂಗದ ಜನಪ್ರಿಯ ಗಾಯಕಿ ಸುನೀತಾ ಉಪದ್ರಷ್ಟ ತನ್ನ ಹಾಡಿನ ಜೊತೆಗೆ ಮಾತಿನ ಮೂಲಕವೂ ಸುದ್ದಿ ಆಗುತ್ತ ಬಂದವರು. ಇತ್ತೀಚೆಗೆ ಅವರ ಸಂದರ್ಶನವೊಂದು ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆಗೆ ಕಾರಣವಾಗಿತ್ತು. ಸಂದರ್ಶನದಲ್ಲಿ ಮಾತನಾಡುತ್ತಾ ಇವರು ಇಂದಿನ ಆಧುನಿಕ ಸ್ತ್ರೀವಾದದ ಕೆಲವು ಆಲೋಚನೆಗಳ ಬಗ್ಗೆ ವಿರೋಧದ ಮಾತುಗಳನ್ನು ಆಡಿದ್ದರು. ಹೆಣ್ಣುಮಕ್ಕಳು ಧೂಮಪಾನ ಮಾಡುವುದು ಅಥವಾ ತಮಗೆ ಇಷ್ಟಬಂದ ಬಟ್ಟೆ ಧರಿಸುವುದು ಮಾತ್ರವೇ ನಿಜವಾದ ಸ್ವಾತಂತ್ರ್ಯವಲ್ಲ ಎಂಬುದು ಅವರ ಮಾತಿನ ಹೈಲೈಟ್‌ ಆಗಿತ್ತು.

Singer Sunitha Upadrashta

ಇದೇ ವೇಳೆ ಸಂದರ್ಶಕರು ಇಂದಿನ ಮಹಿಳೆಯರ ಪ್ರಮುಖ ಘೋಷಣೆಯಾದ ʼನನ್ನ ದೇಹ ನನ್ನ ಹಕ್ಕುʼ ಎಂಬುದರ ಬಗ್ಗೆ ಕೇಳಿದಾಗ, ಸುನೀತಾ, ʼಮಹಿಳೆಯರಿಗೆ ನನ್ನ ದೇಹ ನನ್ನ ಹಕ್ಕುʼ ಎಂದಾದರೆ, ಪುರುಷರಿಗೆ ʼಅವನ ಕಣ್ಣು ಅವನ ಹಕ್ಕು ಎಂದಾಗುತ್ತದೆʼ ಎಂದು ಉತ್ತರಿಸಿದರು. ಅಲ್ಲದೆ, ಬೇರೆಯವರ ದೃಷ್ಟಿಕೋನವನ್ನು ಬದಲಾಯಿಸುವುದಕ್ಕಿಂತ ನಮ್ಮನ್ನು ನಾವು ಸುರಕ್ಷಿತವಾಗಿರಿಸಿಕೊಳ್ಳುವುದು ಸುಲಭ ಎಂದು ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು.

ನರಗಳ ಸಮಸ್ಯೆಯಿಂದ ಆಸ್ಪತ್ರೆಗೆ ಅಲೆದಾಟ, ನನ್ನ ಧ್ವನಿಯ ಮೇಲೂ ಎಫೆಕ್ಟ್‌ ಆಗಿದೆ: ಇನ್ಮುಂದೆ ಸೋನು ನಿಗಮ್‌ ಹಾಡಲ್ವಾ?
ನರಗಳ ಸಮಸ್ಯೆಯಿಂದ ಆಸ್ಪತ್ರೆಗೆ ಅಲೆದಾಟ, ನನ್ನ ಧ್ವನಿಯ ಮೇಲೂ ಎಫೆಕ್ಟ್‌ ಆಗಿದೆ: ಇನ್ಮುಂದೆ ಸೋನು ನಿಗಮ್‌ ಹಾಡಲ್ವಾ?

ಮಹಿಳಾಪರ ನಿಲುವಿನವರ ತೀವ್ರ ಆಕ್ರೋಶ

ಸುನೀತಾ ಅವರ ಈ ಹೇಳಿಕೆ ಹೊರಬೀಳುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಮತ್ತು ಮಹಿಳಾ ಹಕ್ಕುಗಳ ಹೋರಾಟಗಾರರಿಂದ ತೀವ್ರ ಆಕ್ರೋಶ ವ್ಯಕ್ತವಾಯಿತು. ನನ್ನ ದೇಹ ನನ್ನ ಹಕ್ಕು ಎನ್ನುವುದು ಹೆಣ್ಣಿನ ಬಗೆಗಿನ ಬಹಳ ಸೂಕ್ಷ್ಮ ಸಂಗತಿ. ಇದಕ್ಕೊಂದು ಹಿನ್ನೆಲೆ ಇದೆ, ಸೆನ್ಸಿಬಿಲಿಟಿ ಇದೆ. ಇದನ್ನು ಪುರುಷರ ಕೆಟ್ಟ ದೃಷ್ಟಿಗೆ ಹೋಲಿಸುವುದು ತಪ್ಪು ಎಂದು ಅನೇಕರು ಆಕ್ಷೇಪಿಸಿದರು.

ಗಾಯಕಿ ಚಿನ್ಮಯಿ ಶ್ರೀಪಾದ್ ಸೇರಿದಂತೆ ಪ್ರಮುಖರು ಸುನೀತಾ ಅವರ ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದರು. ಇಂತಹ ಹೇಳಿಕೆಗಳು ಸಮಾಜದಲ್ಲಿ ಮಹಿಳೆಯರ ಸುರಕ್ಷತೆಯನ್ನು ಮತ್ತಷ್ಟು ಕಷ್ಟಕರವಾಗಿಸುತ್ತವೆ ಮತ್ತು ಪುರುಷರ ತಪ್ಪು ನಡವಳಿಕೆಯನ್ನು ಸಮರ್ಥಿಸಿದಂತೆ ಆಗುತ್ತದೆ ಎಂದು ಟೀಕಿಸಿದರು.

ನಾನು ಸೋತೆ, ಚೆನ್ನೈ ಬಿಡುತ್ತಿದ್ದೇನೆ: ನಟ ರವಿ ಮೋಹನ್ ಸಂಸಾರ ಒಡೆದ ಆರೋಪಕ್ಕೆ ಬೇಸತ್ತು ಗಾಯಕಿ ಕೆನಿಶಾ ಪೋಸ್ಟ್‌
ನಾನು ಸೋತೆ, ಚೆನ್ನೈ ಬಿಡುತ್ತಿದ್ದೇನೆ: ನಟ ರವಿ ಮೋಹನ್ ಸಂಸಾರ ಒಡೆದ ಆರೋಪಕ್ಕೆ ಬೇಸತ್ತು ಗಾಯಕಿ ಕೆನಿಶಾ ಪೋಸ್ಟ್‌

ಸುನೀತಾ ಪರವಾಗಿಯೂ ಬ್ಯಾಟಿಂಗ್‌

ಸುನೀತಾ ಪರವಾಗಿಯೂ ಅನೇಕರು ಮಾತನಾಡಿದ್ದರು. ಸುನೀತಾ ಹೇಳಿದ್ದು ಇಂದಿನ ಸಮಾಜದ ಕಹಿ ಸತ್ಯ. ಸಮಾಜ ತಕ್ಷಣಕ್ಕೆ ಬದಲಾಗುವುದಿಲ್ಲ, ಆದ್ದರಿಂದ ಹೆಣ್ಣುಮಕ್ಕಳು ತಮ್ಮ ಸುರಕ್ಷತೆಯ ಬಗ್ಗೆ ತಾವೇ ಜಾಗ್ರತೆ ವಹಿಸಬೇಕು ಎನ್ನುವುದು ಅವರ ಮಾತಿನ ಅರ್ಥವಾಗಿತ್ತು ಎಂದು ಅವರ ಫಾಲೋವರ್ಸ್‌ ಹೇಳಿದರು.

ಸ್ಪಷ್ಟನೆ ನೀಡಿದ ಗಾಯಕಿ

ವಿವಾದ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಗಾಯಕಿ ಸುನೀತಾ ಅವರು ತಮ್ಮ ಇನ್‌ಸ್ಟಾಗ್ರಾಮ್ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಸಮಾಜದಲ್ಲಿ ಕೆಲವು ಪುರುಷರು ಮಹಿಳೆಯರನ್ನು ನೋಡುವ ರೀತಿಗೆ ಬೇಸತ್ತು, ಕೋಪ ಮತ್ತು ನಿರಾಶೆಯಿಂದ ತಾವು ಆ ರೀತಿ ಮಾತನಾಡಿದ್ದಾಗಿ ತಿಳಿಸಿದ್ದಾರೆ. ಮಹಿಳೆಯರ ಮೇಲಿನ ಗೌರವವನ್ನು ಕಡಿಮೆ ಮಾಡುವುದು ಅಥವಾ ದುರುದ್ದೇಶದ ನಡವಳಿಕೆಯನ್ನು ಸಮರ್ಥಿಸುವುದು ತಮ್ಮ ಉದ್ದೇಶವಾಗಿರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಒಬ್ಬ ಮಹಿಳೆಯಾಗಿ ತಮಗೆ ಸ್ತ್ರೀ ಸಮಾನತೆ, ಗೌರವ ಮತ್ತು ಹಕ್ಕುಗಳ ಮೇಲೆ ಸಂಪೂರ್ಣ ನಂಬಿಕೆ ಇದೆ ಎಂದು ಸುನೀತಾ ಹೇಳಿದ್ದಾರೆ. ಇಡೀ ಸಂದರ್ಶನವನ್ನು ಪೂರ್ತಿಯಾಗಿ ಗಮನಿಸದೆ ಕೇವಲ ಒಂದು ಸಣ್ಣ ತುಣುಕನ್ನು ನೋಡಿ ತಪ್ಪು ತಿಳಿಯಬೇಡಿ ಎಂದು ಅವರು ವಿನಂತಿಸಿದ್ದಾರೆ. ಸದ್ಯ ಈ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಪರ-ವಿರೋಧದ ಚರ್ಚೆಗಳನ್ನು ಹುಟ್ಟುಹಾಕಿದೆ.

45ನೇ ವಯಸ್ಸಲ್ಲಿ ಎರಡನೇ ಮದುವೆಯಾಗಿದ್ದ ಗಾಯಕಿ

ಸುನೀತಾ ಅವರ ವೈಯಕ್ತಿಕ ಬದುಕೂ ಕೆಲವು ವರ್ಷಗಳ ಕೆಳಗೆ ಸುದ್ದಿಯಾಗಿತ್ತು. 19ನೇ ವಯಸ್ಸಿನಲ್ಲಿ ಮೊದಲ ಮದುವೆಯಾಗಿದ್ದ ಈ ಗಾಯಕಿ ಮುಂದೆ ಕಾರಣಾಂತರಗಳಿಂದ ಪತಿಗೆ ವಿಚ್ಛೇದನ ನೀಡಿದ್ದರು. ಕೆಲವು ವಷಗಳ ಕೆಳಗೆ ಅವರು ಉದ್ಯಮಿ ರಾಮ್ ವೀರಪನೇನಿ ಅವರನ್ನು ವಿವಾಹವಾದ್ರು. ನಲವತ್ತೈದರ ಹರೆಯದಲ್ಲಿ ಮದುವೆಯಾಗಿದ್ದರೂ ಅವರು ಗರ್ಭಿಣಿ ಅನ್ನುವ ಸುದ್ದಿ ಆಗಾಗ ವೈರಲ್‌ ಆಗುತ್ತಿರುತ್ತದೆ.

(ಬರಹ: ಭವಾನಿ ಭಟ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+