ಭಾರತದ ಹೆಗಲಿಗೆ ಜಿ-20 ಅಧ್ಯಕ್ಷ ಸ್ಥಾನ: ಪ್ರತಿ ಭಾರತೀಯನ ಹೆಮ್ಮೆ ಎಂದ ಪ್ರಧಾನಿ ಮೋದಿ

ಇಂಡೋನೇಷ್ಯಾ, ನವೆಂಬರ್ 16: ಇಂಡೋನೇಷ್ಯಾದಲ್ಲಿ ನಡೆದ ಬಾಲಿ ಶೃಂಗಸಭೆಯ ಸಮಾರೋಪ ಸಮಾರಂಭದಲ್ಲಿ ಇಂಡೋನೇಷ್ಯಾ ಅಧ್ಯಕ್ಷ ಜೋಕೊ ವಿಡೋಡೊ ಅವರು ಜಿ-20 ಅಧ್ಯಕ್ಷತೆ ಸ್ಥಾನವನ್ನು ಭಾರತಕ್ಕೆ ಹಸ್ತಾಂತರಿಸಿದರು. ಡಿಸೆಂಬರ್ 1ರಿಂದ ಜಿ20 ಅಧ್ಯಕ್ಷ ಸ್ಥಾನವನ್ನು ಭಾರತ ಅಧಿಕೃತವಾಗಿ ವಹಿಸಿಕೊಳ್ಳಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶೃಂಗಸಭೆಯಲ್ಲಿ ಹೇಳಿದ್ದಾರೆ.

ಇನ್ನು ಮುಂದಿನ ವರ್ಷದ G-20 ಶೃಂಗಸಭೆಯು ರಾಜಧಾನಿ ನವದೆಹಲಿಯಲ್ಲಿ ಎರಡು ದಿನಗಳ ಕಾಲ (ಸೆಪ್ಟೆಂಬರ್ 9 ಮತ್ತು 10) ನಡೆಯಲಿದೆ.

ಇಂಡೋನೇಷ್ಯಾ ಜಿ 20 ಅಧ್ಯಕ್ಷ ಸ್ಥಾನವನ್ನು ಭಾರತಕ್ಕೆ ಹಸ್ತಾಂತರಿಸಲಾಗಿದ್ದು, ಇದರೊಂದಿಗೆ ಜಿ 20ರ ಬಾಲಿ ಶೃಂಗಸಭೆಯು ಇಂದು ಎರಡನೇ ದಿನಕ್ಕೆ ಕೊನೆಗೊಂಡಿತು. ಈಗ ಮುಂದಿನ ವರ್ಷ ನಡೆಯಲಿರುವ ಸಮ್ಮೇಳನದ ಅಧ್ಯಕ್ಷತೆಯನ್ನು ಭಾರತ ವಹಿಸಲಿದೆ. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, "ಜಿ-20 ನೇತೃತ್ವ ವಹಿಸುವುದು ಪ್ರತಿಯೊಬ್ಬ ಭಾರತೀಯನ ಹೆಮ್ಮೆಯ ವಿಷಯವಾಗಿದೆ. ನಾವು ನಮ್ಮ ವಿವಿಧ ನಗರಗಳು ಮತ್ತು ರಾಜ್ಯಗಳಲ್ಲಿ ಸಭೆಗಳನ್ನು ನಡೆಸುತ್ತೇವೆ. ನಮ್ಮ ಅತಿಥಿಗಳಿಗೆ ಭಾರತೀಯ ವೈವಿಧ್ಯತೆ, ಅಂತರ್ಗತ ಸಂಪ್ರದಾಯಗಳನ್ನು ಪರಿಚಯಿಸಲಾಗುವುದು. ನೀವು ಸಾಂಸ್ಕೃತಿಕ ಶ್ರೀಮಂತಿಕೆಯ ಸಂಪೂರ್ಣ ಅನುಭವವನ್ನು ಪಡೆಯುತ್ತೀರಿ ಎಂದು ಪ್ರಧಾನಿ ಮೋದಿ ಶೃಂಗಸಭೆಯ ಸಮಾರೋಪ ಸಮಾರಂಭದಲ್ಲಿ ಭರವಸೆ ಮೂಡಿಸಿದರು.

G-20 Presidency Handed Over To India; Next Year’s Summit To Be Held In New Delhi

ಜಿ-20 ಕಾರ್ಯಸೂಚಿಯಲ್ಲಿ ಮಹಿಳಾ ನಾಯಕತ್ವ

ಇದರೊಂದಿಗೆ ಮಹಿಳೆಯರ ಸಹಭಾಗಿತ್ವವಿಲ್ಲದೆ ವಿಶ್ವದ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಪ್ರಧಾನಿ ಮೋದಿ ಹೇಳಿದರು. ನಮ್ಮ ಜಿ-20 ಕಾರ್ಯಸೂಚಿಯಲ್ಲಿಯೂ ಮಹಿಳಾ ನಾಯಕತ್ವಕ್ಕೆ ಆದ್ಯತೆ ನೀಡಬೇಕು. ಇದರೊಂದಿಗೆ, "ಭಾರತದ ಜಿ -20 ಅಧ್ಯಕ್ಷ ಸ್ಥಾನವು ಮಹತ್ವಾಕಾಂಕ್ಷೆ, ನಿರ್ಣಾಯಕ ಮತ್ತು ಕಾರ್ಯ-ಆಧಾರಿತವಾಗಲಿದೆ ಎಂದು ನಾನು ಭರವಸೆ ನೀಡುತ್ತೇನೆ' ಎಂದು ಮೋದಿ ಹೇಳಿದರು.

G-20 Presidency Handed Over To India; Next Year’s Summit To Be Held In New Delhi

ಭೌಗೋಳಿಕ-ರಾಜಕೀಯ ಉದ್ವಿಗ್ನತೆ, ಆರ್ಥಿಕ ಮಂದಗತಿ, ಹೆಚ್ಚಿದ ಇಂಧನ ಬೆಲೆಗಳು, ಸಾಂಕ್ರಾಮಿಕ ರೋಗದ ಅಡ್ಡಪರಿಣಾಮಗಳು ಮತ್ತು ಇತರ ಸಮಸ್ಯೆಗಳಿಂದ ಜಗತ್ತು ಹೆಣಗಾಡುತ್ತಿರುವ ಸಮಯದಲ್ಲಿ ಭಾರತವು ಜಿ-20 ಜವಾಬ್ದಾರಿ ತೆಗೆದುಕೊಳ್ಳುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಇಂತಹ ಹೊತ್ತಿನಲ್ಲಿ ವಿಶ್ವವೇ ಜಿ-20ಯತ್ತ ಭರವಸೆಯ ಕಣ್ಣಿನಿಂದ ನೋಡುತ್ತಿದೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+