• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿ 20 ಶೃಂಗಸಭೆಯಲ್ಲಿ ರಷ್ಯಾ ಅಧ್ಯಕ್ಷ ವಾಡ್ಲಿಮಿರ್‌ ಪುಟಿನ್‌ ಭಾಗವಹಿಸದಿರಲು ಕಾರಣವೇನು?

|
Google Oneindia Kannada News

ನವದೆಹಲಿ, ನವೆಂಬರ್‌ 14: ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಕ್ರಿಮಿಯಾವನ್ನು ವಶಪಡಿಸಿಕೊಂಡ ನಂತರ 2014ರಲ್ಲಿ ನಡೆಯುತ್ತಿದ್ದ ಜಿ 20 ಶೃಂಗಸಭೆಯಿಂದ ಬೇಗನೆ ಹೊರಟು ಹೋದರು. ಈಗ ಉಕ್ರೇನ್‌ ಮೇಲೆ ದೀರ್ಘಕಾಲಿನ ಕದನಕ್ಕಿಳಿದಿರುವ ಅವರು ಜಿ 20 ಶೃಂಗಸಭೆಯಲ್ಲಿ ಭಾಗವಹಿಸುತ್ತಿಲ್ಲ. ಇದಕ್ಕೆ ಕಾರಣ ತೀರ ಸರಳವಾಗಿದೆ.

ಎಂಟು ವರ್ಷಗಳ ನಂತರ ಫೆಬ್ರವರಿಯಲ್ಲಿ ಉಕ್ರೇನ್‌ ಮೇಲೆ ಪೂರ್ಣ ಪ್ರಮಾಣದ ಆಕ್ರಮಣವನ್ನು ಪುಟಿನ್‌ ಪ್ರಾರಂಭಿಸಿದರು. ನಂತರ ಪರಮಾಣು ಶಸ್ತ್ರಾಸ್ತ್ರಗಳೊಂದಿಗೆ ಪಶ್ಚಿಮಕ್ಕೆ ಬೆದರಿಕೆ ಹಾಕಿದರು. ಇದರಿಂದ ಎದುರಾಗುವ ಅಂತಾರಾಷ್ಟ್ರೀಯ ವಿರೋಧದಿಂದ 70 ವರ್ಷ ವಯಸ್ಸಿನ ರಷ್ಯಾದ ನಾಯಕ ವಾಡ್ಲಿಮಿರ್‌ ಪುಟಿನ್‌ ಇಂಡೋನೇಷ್ಯಾದ ಬಾಲಿ ದ್ವೀಪದಲ್ಲಿ ಈ ವಾರ ನಡೆಯುವ ಜಿ 20 ಸಭೆಯಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಿದ್ದಾರೆ.

ಖೆರ್ಸನ್ ನಗರದಿಂದ ಹಿಂದೆ ಸರಿದ ರಷ್ಯಾ: ಉಕ್ರೇನ್‌ ಪ್ರಜೆಗಳ ಸಂಭ್ರಮಖೆರ್ಸನ್ ನಗರದಿಂದ ಹಿಂದೆ ಸರಿದ ರಷ್ಯಾ: ಉಕ್ರೇನ್‌ ಪ್ರಜೆಗಳ ಸಂಭ್ರಮ

ಇಂಡೋನೇಷ್ಯಾದಲ್ಲಿನ ಎದುರಾಗುವ ಟೀಕೆಗಳಿಂದ ರಷ್ಯಾದ ನಾಯಕನನ್ನು ರಕ್ಷಿಸಲು ಅವರ ವಿದೇಶಾಂಗ ಇಲಾಖೆ ಪ್ರಯತ್ನಿಸುತ್ತಿದೆ ಎಂದು ವೀಕ್ಷಕರು ಹೇಳುತ್ತಾರೆ. ಆದರೆ ಪುಟಿನ್ ಅವರ ನಿರ್ಧಾರವು ಪಾಶ್ಚಿಮಾತ್ಯ ನಿರ್ಬಂಧಗಳಿಂದ ಈಗಾಗಲೇ ಜರ್ಜರಿತವಾಗಿರುವ ರಷ್ಯಾ ದೇಶವನ್ನು ಮತ್ತಷ್ಟು ಪ್ರತ್ಯೇಕಿಸುವ ಅಪಾಯವಿದೆ.

ಸಿವಿಲೈಜೆಶನ್‌ ಇನ್‌ಸ್ಟಿಟ್ಯೂಟ್‌ನ ಮುಖ್ಯ ಸಂಶೋಧಕ ಅಲೆಕ್ಸಿ ಮಲಾಶೆಂಕೊ, ಪುಟಿನ್ ಮತ್ತೊಮ್ಮೆ ಸಾರ್ವಜನಿಕವಾಗಿ ಅವಮಾನಗೊಳ್ಳಲು ಬಯಸುವುದಿಲ್ಲ. 2014ರಲ್ಲಿ ಬ್ರಿಸ್ಬೇನ್ ಶೃಂಗಸಭೆಯಲ್ಲಿ ಪುಟಿನ್ ಅವರನ್ನು ನಾಯಕರು ಸಾಮೂಹಿಕವಾಗಿ ತೆಗೆಸಿಕೊಳ್ಳುವ ಫೋಟೋದ ಕೊನೆಯಲ್ಲಿ ಇರಿಸಲಾಗಿತ್ತು ಎಂದು ಹೇಳಿದ್ದಾರೆ. ಶೃಂಗಸಭೆಯಲ್ಲಿ ವಿವಿಧ ದೇಶಗಳ ನಾಯಕರೊಂದಿಗೆ ಮಾತನಾಡಬೇಕಾಗುತ್ತದೆ. ಅಲ್ಲದೆ ಫೋಟೋ ತೆಗೆಸಿಕೊಳ್ಳಬೇಕಾಗುತ್ತದೆ. ಅಲ್ಲಿ ಅವರಿಗೆ ಇರಿಸು ಮುರಿಸು ಆಗುವ ಸಾಧ್ಯತೆ ಇದೆ.

Breaking: ಖೆರ್ಸನ್‌ನಿಂದ ಸೇನೆ ವಾಪಸ್ ಕರೆಸಿಕೊಂಡ ರಷ್ಯಾ!Breaking: ಖೆರ್ಸನ್‌ನಿಂದ ಸೇನೆ ವಾಪಸ್ ಕರೆಸಿಕೊಂಡ ರಷ್ಯಾ!

ಉಕ್ರೇನ್‌ ಮೇಲೆ ರಷ್ಯಾದ ಆಕ್ರಮಣದಿಂದ ಇದು ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಆಘಾತಗೊಳಿಸಿದ್ದು, ಆಹಾರದ ಕೊರತೆಯನ್ನು ಉಲ್ಬಣಗೊಳಿಸಿದೆ. ಹಾಗಾಗಿ ಜಿ 20 ಕೂಟವು ಅನಿವಾರ್ಯವಾಗಿ ಚರ್ಚೆ ಆಗಲೇಬೇಕಾಗುತ್ತದೆ. ಕ್ರೆಮ್ಲಿನ್‌ಗೆ ನಿಕಟವಾಗಿರುವ ವಿದೇಶಾಂಗ ನೀತಿ ತಜ್ಞ ಫ್ಯೋಡರ್ ಲುಕ್ಯಾನೋವ್, ಪುಟಿನ್ ಉಕ್ರೇನ್ ಮೇಲೆ ಬಗ್ಗಲು ಸಿದ್ಧರಿಲ್ಲ ಎಂದು ತಿಳಿಸಿದ್ದಾರೆ.

Why did Russian President Vladimir Putin not attending the G20 summit?

ಅವರಿಗೆ ಅವರ ನಿಲುವು ಚೆನ್ನಾಗಿ ತಿಳಿದಿದೆ. ಅದು ಬದಲಾಗುವುದಿಲ್ಲ. ಇನ್ನೊಂದು ಬದಿಯ ಅಂದರೆ ಉಕ್ರೇನ್‌ ನಿಲುವು ಕೂಡ ಚೆನ್ನಾಗಿ ತಿಳಿದಿದೆ. ಹಾಗಾಗಿ ಅವರು ಹೋಗಿ ಏನು ಪ್ರಯೋಜನ? ಎಂದು ರಷ್ಯಾದ ಮಾಧ್ಯಮ ಗ್ಲೋಬಲ್ ಅಫೇರ್ಸ್ ಜನರಲ್‌ ಸಂಪಾದಕ ಲುಕ್ಯಾನೋವ್ ಹೇಳಿದ್ದಾರೆ. ಯುದ್ಧದ ಪರಿಸ್ಥಿತಿಯಲ್ಲಿ ಪುಟಿನ್ ಅತ್ಯುನ್ನತ ಜಾಗತಿಕ ಶೃಂಗಸಭೆಯಿಂದ ಹೊರಗಿರಲು ಪ್ರೇರೇಪಿಸಿತು ಎಂಬುದನ್ನು ತೋರಿಸಿದೆ.

ವಿಡಿಯೋ ಲಿಂಕ್ ಮೂಲಕ ಪುಟಿನ್ ಶೃಂಗಸಭೆಯಲ್ಲಿ ಭಾಗವಹಿಸುವುದಿಲ್ಲ ಎಂದು ಕ್ರೆಮ್ಲಿನ್ ತಿಳಿಸಿದ್ದಾರೆ. ಏಕೆಂದರೆ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಭೌತಿಕವಾಗಿ ಕೂಟಕ್ಕೆ ಹಾಜರಾಗುತ್ತಾರೆ. ರಷ್ಯಾದ ಆಕ್ರಮಣವನ್ನು ಖಂಡಿಸಿ ಅವರು ಬಲವಾದ ಪ್ರತಿಕ್ರಿಯೆಗಾಗಿ ಜಾಗತಿಕ ನಾಯಕರನ್ನು ಲಾಬಿ ಮಾಡುವ ನಿರೀಕ್ಷೆಯಿದೆ.

English summary
Russian President Vladimir Putin stormed out of the G20 summit in 2014 after annexing Crimea. Now he is not participating in the G20 summit as he is embroiled in a protracted war over Ukraine. The reason for this is very simple.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X