Get Updates
Get notified of breaking news, exclusive insights, and must-see stories!

India vs New Zealand: ಟಿ20 ವಿಶ್ವಕಪ್ ಫೈನಲ್ ವೀಕ್ಷಣೆ ಸಂಖ್ಯೆಯಲ್ಲಿ ಹೊಸ ದಾಖಲೆ

T20 World Cup 2026: ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆದ ಐಸಿಸಿ ಟಿ20 ಪುರುಷರ ವಿಶ್ವಕಪ್ ಫೈನಲ್ ಪಂದ್ಯದವು ಸ್ಟ್ರೀಮಿಂಗ್‌ನಲ್ಲಿಹೊಸ ಇತಿಹಾಸ ಬರೆದಿದೆ. ಜಿಯೋಹಾಟ್‌ಸ್ಟಾರ್ ಪ್ಲಾಟ್‌ಫಾರ್ಮ್‌ನಲ್ಲಿ ಈ ಪಂದ್ಯವು ವೀಕ್ಷಣೆಯ ಎಲ್ಲಾ ಹಳೆಯ ದಾಖಲೆಗಳನ್ನು ಉಡೀಸ್ ಮಾಡಿದೆ.

ನ್ಯೂಜಿಲೆಂಡ್ ತಂಡದ ಕೊನೆಯ ವಿಕೆಟ್ ಪತನಗೊಂಡ ವೇಳೆ ಜಿಯೋಹಾಟ್‌ಸ್ಟಾರ್‌ನಲ್ಲಿ ಪಂದ್ಯ ವೀಕ್ಷಿಸುತ್ತಿದ್ದವರ ಸಂಖ್ಯೆ ಒಂದಲ್ಲ.. ಎರಡಲ್ಲ ಬರೋಬ್ಬರಿ 74.5 ಕೋಟಿಗೂ ಅಧಿಕ ಆಗಿತ್ತು. ಪಂದ್ಯದ ನಂತರದ ಪ್ರಶಸ್ತಿ ಪ್ರದಾನ ಸಮಾರಂಭದ ವೇಳೆಗೆ ಈ ಸಂಖ್ಯೆ ಮತ್ತಷ್ಟು ಏರಿಕೆ ಕಂಡಿದ್ದು, 89.5 ಕೋಟಿ ತಲುಪುವ ಮೂಲಕ ಜಾಗತಿಕ ದಾಖಲೆ ನಿರ್ಮಿಸಿತು.

India vs New Zealand T20 World Cup 2026 Final Sets Historic Streaming Record in JioHotstar on sunday

ಸೆಮಿಫೈನಲ್ ಪಂದ್ಯ ವೀಕ್ಷಣೆ ವಿವರ

ಇದಕ್ಕೂ ಮೊದಲು ಭಾರತ ಮತ್ತು ಇಂಗ್ಲೆಂಡ್ ನಡುವಿನ ಸೆಮಿಫೈನಲ್ ಪಂದ್ಯವನ್ನು 6.5 ಕೋಟಿ ಜನ ವೀಕ್ಷಣೆ ಮಾಡಿದ್ದರು. ಆದರೆ, ಫೈನಲ್ ಪಂದ್ಯವು ಈ ಸಂಖ್ಯೆಯನ್ನು ಹಿಂದಿಕ್ಕಿದೆ. ಅಹಮದಾಬಾದ್‌ನಲ್ಲಿ ಭಾನುವಾರ (ಮಾರ್ಚ್ 8, 2026) ನಡೆದ ಈ ರೋಚಕ ಫೈನಲ್‌ ಪಂದ್ಯದಲ್ಲಿ ಭಾರತ ತಂಡವು ನ್ಯೂಜಿಲೆಂಡ್ ವಿರುದ್ಧ 96 ರನ್‌ಗಳ ಭರ್ಜರಿ ಜಯ ಸಾಧಿಸಿ, ಮೂರನೇ ಬಾರಿಗೆ ಟಿ20 ವಿಶ್ವಕಪ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು.

ಫೈನಲ್‌ನಲ್ಲಿ ಕಿವೀಸ್‌ ವಿರುದ್ಧ ಭಾರತ ಭರ್ಜರಿ ಜಯ

ಈ ಗೆಲುವಿನೊಂದಿಗೆ ಭಾರತವು ಮತ್ತೊಂದು ಅಪರೂಪದ ಸಾಧನೆ ಮಾಡಿದೆ. ಟಿ20 ವಿಶ್ವಕಪ್ ಇತಿಹಾಸದಲ್ಲಿ ತನ್ನದೇ ನೆಲದಲ್ಲಿ ಅಂದರೆ ತವರಿನಲ್ಲಿ ಪ್ರಶಸ್ತಿಯನ್ನು ಗೆದ್ದ ಮೊದಲ ಮತ್ತು ಏಕೈಕ ತಂಡ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಪಂದ್ಯದ 19ನೇ ಓವರ್‌ನಲ್ಲಿ ನ್ಯೂಜಿಲೆಂಡ್ ತಂಡದ ಕೊನೆಯ ವಿಕೆಟ್ ಪತನಗೊಂಡಿದ್ದು, ಭಾರತ 96 ರನ್‌ಗಳಿಂದ ಭರ್ಜರಿ ಸಾಧಿಸಿತು. ಈ ವೇಳೆ ಜಿಯೋಹಾಟ್‌ಸ್ಟಾರ್‌ನಲ್ಲಿ ಏಕಕಾಲಕ್ಕೆ ಪಂದ್ಯ ವೀಕ್ಷಿಸುತ್ತಿದ್ದವರ ಸಂಖ್ಯೆ 74.5 ಕೋಟಿಯನ್ನು ತಲುಪಿತ್ತು.

ಅಷ್ಟಕ್ಕೇ ನಿಲ್ಲದ ಈ ಸಂಖ್ಯೆ, ಪಂದ್ಯದ ನಂತರ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದ ಅಂತ್ಯದ ವೇಳೆಗೆ ಬರೋಬ್ಬರಿ 89.5 ಕೋಟಿಗೆ ಏರುವ ಮೂಲಕ ಡಿಜಿಟಲ್ ಲೋಕದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿತು. ಪಂದ್ಯದ ಆರಂಭಕ್ಕೂ ಮುನ್ನ ಖ್ಯಾತ ಗಾಯಕ ರಿಕಿ ಮಾರ್ಟಿನ್ ಅವರು ಹಾಡು ಹೇಳುತ್ತಿದ್ದಾಗ ವೀಕ್ಷಕರ ಸಂಖ್ಯೆ 2.1 ಕೋಟಿ ಇತ್ತು. ಟಾಸ್ ನಡೆಯುವ ಸಮಯಕ್ಕೆ ಈ ಸಂಖ್ಯೆಯು 4.2 ಕೋಟಿಗೆ ಏರಿಕೆಯಾಯಿತು.

ಭಾರತದ ಬ್ಯಾಟಿಂಗ್ ಇನ್ನಿಂಗ್ಸ್‌ನ ಮೊದಲ ಎಸೆತ ಎಸೆಯುವ ಮುನ್ನವೇ ವೀಕ್ಷಕರ ಸಂಖ್ಯೆ 6.5 ಕೋಟಿ ದಾಟಿತ್ತು. ಈ ಸಂಖ್ಯೆಯು 2023ರ ನವೆಂಬರ್ 20ರಂದು ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 50 ಓವರ್‌ಗಳ ವಿಶ್ವಕಪ್ ಫೈನಲ್ ಪಂದ್ಯದ ದಾಖಲೆಯನ್ನು ಮುರಿಯಿತು. ಅಂದು ಗರಿಷ್ಠ ವೀಕ್ಷಕರ ಸಂಖ್ಯೆ 5.9 ಕೋಟಿ ಇತ್ತು. ವಿಶೇಷ ಅಂದ್ರೆ, 2023ರ ಆ ಪಂದ್ಯ ಕೂಡ ಅಹಮದಾಬಾದ್‌ನಲ್ಲೇ ನಡೆದಿದ್ದು, ಆಗ ಭಾರತ ಸೋಲನುಭವಿಸಿತ್ತು. ಆದರೆ, ಈ ಬಾರಿ ಅದೇ ಮೈದಾನದಲ್ಲಿ ಭಾರತ ಗೆಲುವು ಸಾಧಿಸುವುದರ ಜೊತೆಗೆ ವೀಕ್ಷಣೆಯಲ್ಲೂ ಹೊಸ ಇತಿಹಾಸ ಬರೆದಿದೆ.

ಕುತೂಹಲಕಾರಿ ವಿಷಯವೆಂದರೆ, ಈ ಹಿಂದಿನ ದಾಖಲೆಯ ಪಂದ್ಯವೂ (2023ರ ಏಕದಿನ ವಿಶ್ವಕಪ್ ಫೈನಲ್) ಅಹಮದಾಬಾದ್‌ನಲ್ಲೇ ನಡೆದಿತ್ತು. ಅಂದು ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ ಸೋಲನ್ನು ಅನುಭವಿಸಿತ್ತು. ಆದರೆ ಈ ಬಾರಿ ಅದೇ ಮೈದಾನದಲ್ಲಿ ಭಾರತ ಭರ್ಜರಿ ಜಯ ಸಾಧಿಸಿ ಹಳೆಯ ಸೇಡನ್ನು ತೀರಿಸಿಕೊಂಡಿದೆ.

ಭಾರತ ತಂಡದ ಬ್ಯಾಟಿಂಗ್ ಮುಗಿಯುವ ವೇಳೆಗೆ ವೀಕ್ಷಕರ ಸಂಖ್ಯೆಯು 43.9 ಕೋಟಿಗೆ ಏರಿತ್ತು. ಮೊದಲ ಇನ್ನಿಂಗ್ಸ್ ಮತ್ತು ಎರಡನೇ ಇನ್ನಿಂಗ್ಸ್ ನಡುವಿನ ವಿರಾಮದ ಸಮಯದಲ್ಲಿ ಈ ಸಂಖ್ಯೆಯು 44.3 ಕೋಟಿಯನ್ನು ತಲುಪಿತು. ಭಾರತ ನೀಡಿದ 255 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಲು ನ್ಯೂಜಿಲೆಂಡ್ ತಂಡ ಮೈದಾನಕ್ಕೆ ಇಳಿದಾಗ, ವೀಕ್ಷಕರ ಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡುಬಂದಿದ್ದು, 49.9 ಕೋಟಿ ತಲುಪಿತ್ತು. ನ್ಯೂಜಿಲೆಂಡ್ ಇನ್ನಿಂಗ್ಸ್‌ನ ಕೇವಲ ಮೊದಲ ಓವರ್ ಮುಗಿಯುವಷ್ಟರಲ್ಲೇ ಈ ಸಂಖ್ಯೆಯು 50.3 ಕೋಟಿಗೆ ಏರಿತು.

2024ರ ಟಿ20 ವಿಶ್ವಕಪ್ ಫೈನಲ್ ವೀಕ್ಷಣೆಯ ವಿವರ

2024ರಲ್ಲಿ ನಡೆದ ಟಿ20 ವಿಶ್ವಕಪ್ ಫೈನಲ್ ಪಂದ್ಯವು ಭಾರತದ ಪಾಲಿಗೆ ಅತ್ಯಂತ ಸ್ಮರಣೀಯವಾಗಿತ್ತು. ಆ ಗೆಲುವಿನೊಂದಿಗೆ ಐಸಿಸಿ ಟ್ರೋಫಿಗಾಗಿ ಭಾರತ 13 ವರ್ಷಗಳ ಸುದೀರ್ಘ ಕಾಯುವಿಕೆ ಕೊನೆಗೊಂಡಿತ್ತು. ಅಂದಿನ ಒಟಿಟಿ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಆಗಿದ್ದ ಡಿಸ್ನಿ+ಹಾಟ್‌ಸ್ಟಾರ್ (Disney+Hotstar)ನಲ್ಲಿ ಈ ಪಂದ್ಯವು ದಾಖಲೆಯ 5.3 ಕೋಟಿ ಗರಿಷ್ಠ ವೀಕ್ಷಣೆಯನ್ನು ಕಂಡಿತ್ತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+