Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ

ಚಿನ್ನ.. ಚಿನ್ನ.. ಅಂತಾ ಚಿನ್ನದ ಬಗ್ಗೆ ಸಿಕ್ಕಾಪಟ್ಟೆ ಕುತೂಹಲ ಹೊಂದಿದ್ದ ಆಭರಣ ಪ್ರಿಯರು ಈಗ ಚಿನ್ನ ಖರೀದಿ ಮಾಡುವುದು ಬಿಡಿ ಬಂಗಾರ ಕನಸಲ್ಲಿ ಬಂದರೂ ಭಯಪಡುವ ವಾತಾವರಣ ನಿರ್ಮಾಣ ಆಗಿದೆ. ಏಕೆಂದರೆ ಚಿನ್ನದ ಬೆಲೆ ಭಾರಿ ದೊಡ್ಡ ಪ್ರಮಾಣದಲ್ಲಿ ಏರಿಕೆ ಕಾಣುತ್ತಾ ಸಾಗಿದ್ದು, ಇನ್ನೇನು ಬರೋಬ್ಬರಿ 2,00,000 ರೂಪಾಯಿ ತಲುಪುವ ಸಾಧ್ಯತೆ ಕೂಡ ದಟ್ಟವಾಗಿದೆ. ಇದೇ ಕಾರಣಕ್ಕೆ ಚಿನ್ನ ಖರೀದಿ ಮಾಡಲು ಕೂಡ ಯೋಚಿಸುವ ವಾತಾವರಣ ಇದೆ. ಆದರೆ ದಿಢೀರ್ ಚಿನ್ನ ಖರೀದಿ ಮಾಡುವ ಜನರಿಗೆ ಭರ್ಜರಿ ಸುದ್ದಿಯೊಂದು ಸಿಕ್ಕಿದ್ದು, ಚಿನ್ನ ಬೆಲೆ ಭಾರಿ ಕುಸಿತ ಕಾಣುವ ಸಾಧ್ಯತೆ ದಟ್ಟವಾಗಿದೆ.

ಹೌದು, ಚಿನ್ನದ ಬೆಲೆ ಇಂದು ಕೂಡ ಭಾರಿ ದೊಡ್ಡ ಪ್ರಮಾಣದಲ್ಲಿ ಏರಿಕೆ ಕಂಡಿದ್ದು ಈಗ 24 ಕ್ಯಾರೆಟ್ ಶುದ್ಧ ಚಿನ್ನ ಬೆಲೆ ಪ್ರತಿ 10 ಗ್ರಾಂಗೆ 1,63,000 ರೂಪಾಯಿ ದಾಟಿದೆ. ಆದರೆ ಇದೇ ಸಮಯದಲ್ಲೇ ಭಾರಿ ಸುದ್ದಿಯೊಂದು ಸಿಕ್ಕಿದ್ದು, ಚಿನ್ನದ ಬೆಲೆಯಲ್ಲಿ ಭರ್ಜರಿ ಕುಸಿತ ಕಾಣುವ ಸಾಧ್ಯತೆ ದಟ್ಟವಾಗಿದೆ ಎಂಬ ಮಾಹಿತಿ ಹರಿದಾಡುತ್ತಿದೆ. ಅಂದಹಾಗೆ ಯುರೋಪ್ ಖಂಡದ ಒಂದು ದೇಶ ಇದೀಗ ತನ್ನ ಬಳಿ ಇರುವ ಭಾರಿ ಪ್ರಮಾಣದ ಚಿನ್ನ ಮಾರಾಟ ಮಾಡಲು ಮುಂದಾಗಿದೆ ಎಂಬ ಮಾಹಿತಿ ಹರಿದಾಡುತ್ತಿದ್ದು, ಈ ಮಾಹಿತಿ ಕಾರ್ಯರೂಪಕ್ಕೆ ಬಂದರೆ ಚಿನ್ನದ ಬೆಲೆ ಭಾರಿ ದೊಡ್ಡ ಕುಸಿತ ಕಾಣುವುದು ಗ್ಯಾರಂಟಿ ಎಂಬ ಮಾತು ತಜ್ಞರಿಂದ ಕೇಳಿಬಂದಿದೆ. ಹಾಗಾದರೆ ಯಾವುದು ಆ ಯುರೋಪ್ ಖಂಡದ ದೇಶ? ಮುಂದೆ ಓದಿ.

Gold Price

ಚಿನ್ನದ ಬೆಲೆ ಭಾರಿ ಕುಸಿತ?

ಕಳೆದ 2 ವರ್ಷಗಳಿಂದಲು ವಿಶ್ವದ ಸೆಂಟ್ರಲ್ ಬ್ಯಾಂಕ್‌ಗಳಿಂದ ಅತಿ ಹೆಚ್ಚು ಚಿನ್ನ ಖರೀದಿಸಿದ ದೇಶ ಅಂದ್ರೆ ಅದು ಪೋಲೆಂಡ್. ಈ ಅವಧಿಯಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆಗೆ ಇದೂ ಪ್ರಮುಖ ಕಾರಣಗಳ ಪೈಕಿ ಒಂದಾಗಿದೆ ಎನ್ನಲಾಗಿದೆ. ಹೀಗಾಗಿ ಆಭರಣ ಪ್ರಿಯರು ಚಿನ್ನದ ಬೆಲೆ ಹೆಚ್ಚಾಗುತ್ತಿದೆ ಎಂಬ ಕಾರಣಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ ಎನ್ನಲಾಗಿತ್ತು. ಆದರೆ ಈಗ ಪೋಲಂಡ್ ಸರ್ಕಾರ ಮಹತ್ವದ ನಿರ್ಧಾರ ಕೈಗೊಳ್ಳಲು ಸಿದ್ಧವಾಗಿದೆ. ಈ ನಿರ್ಧಾರ ಜಾಗತಿಕವಾಗಿ ಚಿನ್ನದ ಬೆಲೆಯ ಮೇಲೆ ಭಾರಿ ದೊಡ್ಡ ಪರಿಣಾಮ ಬೀರುವ ಸಾಧ್ಯತೆ ಇದೀಗ ದಟ್ಟವಾಗಿದೆ.

ಚಿನ್ನ ಮಾರಾಟ ಮಾಡಲು ಕಾರಣ?

ಅಂದಹಾಗೆ ರಷ್ಯಾ ಹಾಗೂ ಉಕ್ರೇನ್ ಮಧ್ಯೆ ಯುದ್ಧ ಶುರುವಾದ ನಂತರ, ಪೋಲೆಂಡ್ ಗಡಿ ಭಾಗವು ಕೂಡ ಬೂದಿ ಮುಚ್ಚಿದ ಕೆಂಡವಾಗಿತ್ತು. ಇಂತಹ ಸ್ಥಿತಿಯಲ್ಲಿ ಭವಿಷ್ಯದ ಬಗ್ಗೆ ಯೋಚನೆ ಶುರುವಾಗಿ ತಲ್ಲಣ ಏರ್ಪಟ್ಟಿತ್ತು. ಇಂತಹ ಸಮಯದಲ್ಲೇ ಕಳೆದ 2 ವರ್ಷಗಳಿಂದಲೂ ಸತತವಾಗಿ ಭಾರಿ ದೊಡ್ಡ ಪ್ರಮಾಣದಲ್ಲಿ ಚಿನ್ನ ಖರೀದಿ ಮಾಡಿರುವ ಪೋಲೆಂಡ್ ದೇಶ ಈಗ ಹಲವು ಕಾರಣಗಳಿಂದ ಚಿನ್ನವನ್ನ ಭಾರಿ ದೊಡ್ಡ ಪ್ರಮಾಣದಲ್ಲಿ ಮಾರಾಟ ಮಾಡಲು ಸಜ್ಜಾಗಿದೆ ಎಂಬ ಸುದ್ದಿ ಹಬ್ಬಿದೆ. ಅಕಸ್ಮಾತ್ ಈ ಮಾತು ನಿಜವಾಗಿಬಿಟ್ಟರೆ ಅದು ದೊಡ್ಡ ತಲ್ಲಣ ಸೃಷ್ಟಿ ಮಾಡಲಿದ್ದು, ಚಿನ್ನದ ಬೆಲೆ ದೊಡ್ಡ ಕುಸಿತ ಕಾಣುವುದು ಗ್ಯಾರಂಟಿ ಎನ್ನಲಾಗುತ್ತಿದೆ.

ಅಷ್ಟಕ್ಕೂ ಈಗ ಪೋಲೆಂಡ್ ಸೆಂಟ್ರಲ್ ಬ್ಯಾಂಕ್ ಗವರ್ನರ್ ಗ್ಲಾಪಿನ್ಸ್ಕಿ ಅವರ ಪ್ರಕಾರ, ಈ ದೇಶದ ಚಿನ್ನದ ಸಂಗ್ರಹ ಮಾರಾಟ ಮಾಡಿ ಸುಮಾರು 13 ಬಿಲಿಯನ್ ಡಾಲರ್ ಹಣ ಸಂಗ್ರಹಿಸುವ ಗುರಿ ಇದೆಯಂತೆ. ಆ ಮೂಲಕ ದೇಶದ ರಕ್ಷಣಾ ಬಜೆಟ್ ಡಬಲ್ ಮಾಡಲು ಅಗತ್ಯ ಹಣಕಾಸು ಒದಗಿಸುವ ಉದ್ದೇಶ ಜಾರಿಗೆ ತರಲು ನಿರ್ಧರಿಸಲಾಗಿದೆ ಎಂಬ ಸುದ್ದಿ ಚಿನ್ನದ ಮಾರುಕಟ್ಟೆಯಲ್ಲಿ ಹೊಸ ಅಲೆ ಎಬ್ಬಿಸಿದೆ. ಹೀಗಾಗಿ ಶೀಘ್ರದಲ್ಲೇ ಬಂಗಾರದ ಬೆಲೆ ಕುಸಿತ ಕಾಣುತ್ತಾ? ಎಂಬ ಚರ್ಚೆ ಜೋರಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+