ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್‌ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers
ನಾಗರಿಕ ಸೇವಾ ಪರೀಕ್ಷೆ ಬರೆಯಬೇಕು, ಐಎಎಸ್ & ಐಪಿಎಸ್ ಅಧಿಕಾರಿ ಆಗಿ ದೇಶ ಸೇವೆ ಮಾಡಬೇಕು ಎಂಬುದು ಕೋಟ್ಯಂತರ ಜನರ ಕನಸು. ಆದರೆ ಈ ಕನಸು ಕೆಲವರಿಗೆ ಮಾತ್ರ ನನಸಾಗುತ್ತದೆ, ಹೀಗೆ ಇದ್ದಾಗ ಕನ್ನಡ ನಾಡಿನ ಪ್ರತಿಭೆಗಳು ಕೂಡ ಈ ಬಾರಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಅಂದಹಾಗೆ 2025-26ನೇ ಸಾಲಿನ ನಾಗರಿಕ ಸೇವೆ ಅಂತಿಮ ಫಲಿತಾಂಶವನ್ನ, ಈಗ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) ಪ್ರಕಟಿಸಿದೆ. 958 ಅಭ್ಯರ್ಥಿಗಳು ಐಎಎಸ್, ಐಪಿಎಸ್, ಐಎಫ್‌ಎಸ್ ಸೇರಿ ವಿವಿಧ ಕೇಂದ್ರ ಸೇವೆಗಳಿಗೆ ಆಯ್ಕೆ ಆಗಿದ್ದಾರೆ. ಈ ಪೈಕಿ ಕರ್ನಾಟಕದ ಒಟ್ಟು 22 ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು ಗಮನ ಸೆಳೆದಿದ್ದಾರೆ.
ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆ ಭಾರತದ ಅತ್ಯಂತ ಕಠಿಣ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಂದಾಗಿದೆ ಎನ್ನಬಹುದು. ಈ ವರ್ಷದ ಅಂತಿಮ ಪಟ್ಟಿಯಲ್ಲಿ ದೇಶದಾದ್ಯಂತ ಆಯ್ಕೆಯಾದ ಅಭ್ಯರ್ಥಿಗಳಿಗೆ ಸೇವಾ ಹಂಚಿಕೆಗಾಗಿ ಶಿಫಾರಸು ಮಾಡಲಾಗಿದೆ. ವಿಶೇಷವಾಗಿ ಬೆಂಗಳೂರು ನಗರದಲ್ಲಿ ಇರುವ ಒಂದು ತರಬೇತಿ ಅಕಾಡೆಮಿಯಿಂದ ಕರ್ನಾಟಕದ ಹೆಚ್ಚಿನ ಸಂಖ್ಯೆಯ ಅಭ್ಯರ್ಥಿಗಳು ಉತ್ತೀರ್ಣರಾಗಿರುವುದು ಗಮನಾರ್ಹ ಎನ್ನಬಹುದು. ದೇಶ ಮಟ್ಟದಲ್ಲಿ ಅನುಜ್ ಅಗ್ನಿಹೋತ್ರಿ ಎಲ್ಲರ ಗಮನ ಸೆಳೆದು ಮೊದಲ ಪ್ರಯತ್ನದಲ್ಲೇ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. ಹಾಗೇ ಕರ್ನಾಟಕ ಮೂಲದ ಒಟ್ಟಾರೆ 22 ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಕನ್ನಡ ನಾಡಿನ ಪ್ರತಿಭೆಗಳ ಸಾಧನೆ
ಕರ್ನಾಟಕದ ಅಭ್ಯರ್ಥಿಗಳಲ್ಲಿ ಕಿರಣ್ ಕಾಮಟೆ ಅವರು ಆಲ್ ಇಂಡಿಯಾ 53ನೇ ರ‍್ಯಾಂಕ್ ಪಡೆಯುವ ಮೂಲಕ ಕರ್ನಾಟಕ ರಾಜ್ಯದ ಮಟ್ಟಿಗೆ ಮೊದಲ ಸ್ಥಾನ ಪಡೆದಿದ್ದಾರೆ. ಹಾಗೇ ಸಂದೀಪ್ ಬಾದಾದ್ ರಾಜ್ಯಕ್ಕೆ 2ನೇ ಸ್ಥಾನ ಪಡೆದಿದ್ದರೆ, ದೇಶ ಮಟ್ಟದಲ್ಲಿ ಅವರು 82ನೇ ರ‍್ಯಾಂಕ್ ಪಡೆದು ಸಾಧಿಸಿದ್ದಾರೆ. ಅಂತಿಮ ಫಲಿತಾಂಶದಂತೆ 958 ಅಭ್ಯರ್ಥಿಗಳ, ವಿವಿಧ ಪ್ರತಿಷ್ಠಿತ ಸೇವೆಗಳಿಗೆ ಶಿಫಾರಸು ಮಾಡಲಾಗಿದೆ. ಈ ಪೈಕಿ IAS, IPS ಮತ್ತು IFS ಸೇರಿದಂತೆ ಹಲವು ಕೇಂದ್ರ ನಾಗರಿಕ ಸೇವೆಗಳು ಪಟ್ಟಿಯಲ್ಲಿವೆ. ಹಿಂದೆ ಕೂಡ ಕರ್ನಾಟಕ ಮೂಲದ ಅಭ್ಯರ್ಥಿಗಳು ಇಡೀ ದೇಶದ ಗಮನ ಸೆಳೆದಿದ್ದರು, ಹಾಗೇ ವರ್ಷದಿಂದ ವರ್ಷಕ್ಕೆ ಕರ್ನಾಟಕ ಮೂಲದ ಅಭ್ಯರ್ಥಿಗಳ ಸಾಧನೆ ಮತ್ತಷ್ಟು ಎತ್ತರಕ್ಕೆ ಹೋಗುತ್ತಿರುವುದು ದೊಡ್ಡ ಬೆಳವಣಿಗೆ ಆಗಿದ್ದು ನಾಗರಿಕ ಸೇವಾ ಪರೀಕ್ಷೆ ಬರೆಯುವವರ ಸಂಖ್ಯೆಯೂ ಹೆಚ್ಚಾಗುತ್ತಾ ಸಾಗಿದೆ ಈಗ.












Click it and Unblock the Notifications