Get Updates
Get notified of breaking news, exclusive insights, and must-see stories!

ಎಸ್‌ಸಿಒ ಶೃಂಗಸಭೆ: ಪಾಕ್ ಪ್ರಧಾನಿ, ಚೀನಾ ಅಧ್ಯಕ್ಷರನ್ನು ಮಾತನಾಡಿಸುವುದಿಲ್ಲವೇ ಮೋದಿ!?

ನವದೆಹಲಿ, ಸೆಪ್ಟೆಂಬರ್ 15: ಸಾಂಸ್ಕೃತಿಕ ರಾಜಧಾನಿ ಸಮರ್‌ಕಂಡ್‌ನಲ್ಲಿ ನಡೆಯುತ್ತಿರುವ ಎರಡು ದಿನಗಳ ಶಾಂಘೈ ಸಹಕಾರ ಸಂಘಟನೆ ಶೃಂಗಸಭೆಗಾಗಿ ಪ್ರಧಾನಿ ನರೇಂದ್ರ ಮೋದಿ ಗುರುವಾರ ಉಜ್ಬೇಕಿಸ್ತಾನ್‌ಗೆ ತೆರಳಲಿದ್ದಾರೆ. ಕಳೆದ ಎರಡು ದಶಕಗಳಲ್ಲಿ ಗುಂಪಿನ ಚಟುವಟಿಕೆಗಳನ್ನು ಪರಿಶೀಲಿಸುವ ನಾಯಕರು ಮತ್ತು ಬಹುಪಕ್ಷೀಯ ಸಹಕಾರದ ನಿರೀಕ್ಷೆಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.

ಶಾಂಘೈ ಸಹಕಾರ ಸಂಘಟನೆ ಶೃಂಗಸಭೆಯಲ್ಲಿ ಆತಿಥೇಯ ಉಜ್ಬೆಕ್ ಅಧ್ಯಕ್ಷ ಶವ್ಕತ್ ಮಿರ್ಜಿಯೊಯೆವ್, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ಭಾರತದ ಪ್ರಧಾನಿ ನರೇಂದ್ರ ಮೋದಿ, ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್, ಕಜಕಿಸ್ತಾನ್ ಅಧ್ಯಕ್ಷ ಕಾಸಿಮ್-ಜೋಮಾರ್ಟ್ ಟೊಕಾಯೆವ್, ಕಿರ್ಗಿಜ್ ಗಣರಾಜ್ಯದ ಅಧ್ಯಕ್ಷ ಸದಿರ್ ಜಪರೋವ್ ಮತ್ತು ತಜ್ಕಿಸ್ತಾನ್ ಅಧ್ಯಕ್ಷ ಎಮೋಮಾಲಿ ರಹಮಾನ್ ಸೇರಿದಂತೆ ಪ್ರಮುಖರು ಭಾಗವಹಿಸಲಿದ್ದಾರೆ.

ಇದೇ ಶೃಂಗಸಭೆಗೆ ಹಾಜರಾಗುವ ರಷ್ಯಾ ಅಧ್ಯಕ್ಷ ವ್ಲಾಡಿಮಿಯರ್ ಪುಟಿನ್ ಅನ್ನು ಪ್ರಧಾನಿ ಮೋದಿ ಭೇಟಿಯಾಗಲಿದ್ದಾರೆ. ಏಷ್ಯಾ ಪೆಸಿಫಿಕ್ ಪ್ರದೇಶದ ಪರಿಸ್ಥಿತಿ, ಕಾರ್ಯತಂತ್ರದ ಸ್ಥಿರತೆ ಮತ್ತು ವಿಶ್ವಸಂಸ್ಥೆ ಹಾಗೂ ಜಿ 20 ಒಳಗೆ ದ್ವಿಪಕ್ಷೀಯ ಸಹಕಾರದ ವಿಷಯಗಳ ಬಗ್ಗೆ ಚರ್ಚಿಸಲಿದ್ದಾರೆ ಎಂದು ಕ್ರೆಮ್ಲಿನ್ ಪ್ರಕಟಿಸಿದೆ.

ಶಾಂಘೈ ಸಹಕಾರಿ ಶೃಂಗಸಭೆ ಮಹತ್ವ ಪಡೆದಿದ್ದು ಏಕೆ?

ಶಾಂಘೈ ಸಹಕಾರಿ ಶೃಂಗಸಭೆ ಮಹತ್ವ ಪಡೆದಿದ್ದು ಏಕೆ?

ಕಳೆದ 2019ರ ನಂತದಲ್ಲಿ ವ್ಯಕ್ತಿಗತ ಶಾಂಘೈ ಸಹಕಾರಿ ಶೃಂಗಸಭೆಯು ನಡೆದಿರಲಿಲ್ಲ. ಕೊರೊನಾ ವೈರಸ್ ಹಿನ್ನೆಲೆ ವರ್ಚುವಲ್ ಮೂಲಕ ಈ ಸಭೆಯನ್ನು ನಡೆಸಲಾಗಿತ್ತು. ಎರಡು ವರ್ಷಗಳ ನಂತರದಲ್ಲಿ ಮೊದಲ ಬಾರಿಗೆ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ರಷ್ಯಾದ ಅಧ್ಯಕ್ಷ ಪುಟಿನ್ ಮತ್ತು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಒಂದು ಸಭೆಯಲ್ಲಿ ಸೇರುತ್ತಿದ್ದಾರೆ. ಹೀಗಾಗಿ ನಾಯಕರ ನಡುವೆ ದ್ವಿಪಕ್ಷೀಯ ಸಭೆಗಳು ನಡೆಯುವ ಸಾಧ್ಯತೆಗಳನ್ನು ಎದುರು ನೋಡಲಾಗುತ್ತಿದೆ.

ಕಿರ್ಗಿಸ್ತಾನ್‌ನ ಬಿಷ್ಕೆಕ್‌ನಲ್ಲಿ SCO ಶೃಂಗಸಭೆಯು ಜೂನ್ 2019ರ ನಂತರ ನಡೆದ ಮೊದಲ ವೈಯಕ್ತಿಕ ಶೃಂಗಸಭೆಯಾಗಿದೆ. 2020 ರ ಮಾಸ್ಕೋ ಶೃಂಗಸಭೆಯನ್ನು COVID-19 ಸಾಂಕ್ರಾಮಿಕ ರೋಗದಿಂದಾಗಿ ವಾಸ್ತವಿಕವಾಗಿ ನಡೆಸಲಾಯಿತು. 2021 ರ ದುಶಾನ್ಬೆಯಲ್ಲಿ ನಡೆದ ಶೃಂಗಸಭೆಯನ್ನು 'ಹೈಬ್ರಿಡ್ ಮೋಡ್'ನಲ್ಲಿ ನಡೆಸಲಾಯಿತು.

ಪಾಕಿಸ್ತಾನ್ ಪ್ರಧಾನಿಯನ್ನು ಭೇಟಿ ಮಾಡುವುದಿಲ್ಲವೇ ಮೋದಿ?

ಪಾಕಿಸ್ತಾನ್ ಪ್ರಧಾನಿಯನ್ನು ಭೇಟಿ ಮಾಡುವುದಿಲ್ಲವೇ ಮೋದಿ?

ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯು ಚೀನಾದ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅಥವಾ ಪಾಕಿಸ್ತಾನದ ಷರೀಫ್ ಅನ್ನು ಭೇಟಿ ಮಾಡುತ್ತಾರೆಯೇ ಎಂಬುದರ ಕುರಿತು ಯಾವುದೇ ಅಧಿಕೃತ ಸ್ಪಷ್ಟನೆ ಸಿಕ್ಕಿಲ್ಲ. ಅದಾಗ್ಯೂ, ಬಹಳ ವರ್ಷಗಳ ನಂತರದಲ್ಲಿ ಮೊದಲ ಬಾರಿಗೆ ಈ ಎಲ್ಲಾ ನಾಯಕರು ಶೃಂಗಸಭೆಗಾಗಿ ಒಂದೇ ಸ್ಥಳದಲ್ಲಿ ಮುಖಾಮುಖಿ ಆಗುತ್ತಿರುವುದು ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕುತ್ತಿದೆ.

ಪಾಕಿಸ್ತಾನದ ಮಾಧ್ಯಮಗಳ ವರದಿ ಹೀಗಿದೆ

ಪಾಕಿಸ್ತಾನದ ಮಾಧ್ಯಮಗಳ ವರದಿ ಹೀಗಿದೆ

ಪಾಕಿಸ್ತಾನದ ಡಾನ್ ಪತ್ರಿಕೆ ಬುಧವಾರ ಈ ಕುರಿತು ವರದಿ ಮಾಡಿದ್ದು, ಸಮರ್‌ಕಂಡ್‌ನಲ್ಲಿ ಪ್ರಧಾನಿ ಷರೀಫ್ ತಮ್ಮ ಭಾರತೀಯ ಸಹವರ್ತಿ ನರೇಂದ್ರ ಮೋದಿಯನ್ನು ಭೇಟಿ ಮಾಡುವ ಯಾವುದೇ ಯೋಜನೆಯನ್ನು ಹೊಂದಿಲ್ಲ ಎಂದಿದೆ.ಇದೇ ವೇಳೆ ಸಂಕ್ಷಿಪ್ತ ಹಾಗೂ ಸೌಜನ್ಯ ಭೇಟಿಯನ್ನು ತಳ್ಳಿಹಾಕುವುದಿಲ್ಲ ಎಂದು ತಿಳಿಸಿದೆ.

ಈ ಶೃಂಗಸಭೆಯಲ್ಲಿ ಭಾರತದ ಉಪಸ್ಥಿತಿ

ಈ ಶೃಂಗಸಭೆಯಲ್ಲಿ ಭಾರತದ ಉಪಸ್ಥಿತಿ

ಶಾಂಘೈ ಸಹಕಾರಿ ಶೃಂಗಸಭೆಯಲ್ಲಿ ಭಾರತದ ಉಪಸ್ಥಿತಿಯು ಮುಖ್ಯವಾಗಿದೆ, ಏಕೆಂದರೆ ಅದು ಸಮರ್ಕಂಡ್ ಶೃಂಗಸಭೆಯ ಕೊನೆಯಲ್ಲಿ ಮುಂದಿನ ಬಾರಿ ಸಭೆಯ ನೇತೃತ್ವವನ್ನು ಭಾರತವೇ ವಹಿಸಿಕೊಳ್ಳಲಿದೆ. ದೆಹಲಿಯಲ್ಲಿ ಸೆಪ್ಟೆಂಬರ್ 2023ರವರೆಗೆ ಒಂದು ವರ್ಷದವರೆಗೆ ಗುಂಪಿನ ಅಧ್ಯಕ್ಷತೆಯನ್ನು ಹೊಂದಿರುತ್ತದೆ. ಮುಂದಿನ ವರ್ಷ ಭಾರತವೇ ಶಾಂಘೈ ಸಹಕಾರಿ ಶೃಂಗಸಭೆಯನ್ನು ಆಯೋಜಿಸುತ್ತದೆ. ಇದರಲ್ಲಿ ಚೀನಾ, ರಷ್ಯಾ, ಪಾಕಿಸ್ತಾನದ ನಾಯಕರು ಸಹ ಭಾಗವಹಿಸಲಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+