• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ @ 20 ಕಾರ್ಯಕ್ರಮದಲ್ಲಿ ಪ್ರಧಾನಿಯನ್ನು ಹಾಡಿ ಹೊಗಳಿದ ಸಿಎಂ

|
Google Oneindia Kannada News

ಬೆಂಗಳೂರು, ಜೂನ್ 27: ಪ್ರಧಾನಮಂತ್ರಿ ನರೇಂದ್ರ ಮೋದಿ ನಾಯಕತ್ವದಲ್ಲಿ 2023ನೇ ಸಾಲಿನಲ್ಲಿ ನಡೆಯಲಿರುವ ಜಿ-20 ಶೃಂಗಸಭೆಯು ಜಗತ್ತಿನ ಎದುರಿಗೆ ಭಾರತವು ಎಷ್ಟು ಸಮರ್ಥವಾಗಿದೆ ಎಂಬುದನ್ನು ಬಿಂಬಿಸಲು ಸಾಕ್ಷಿ ಆಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಸೋಮವಾರ 'ಮೋದಿ @ 20: ಡ್ರೀಮ್ಸ್ ಮೀಟ್ ಡೆಲಿವರಿ' ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, 2023ರ ಜಿ-20 ಶೃಂಗಸಭೆಯ ಬಗ್ಗೆ ಉಲ್ಲೇಖಿಸಿದರು. ಮುಂಜಿವ ವರ್ಷ ಜಿ-20 ಸಭೆಯನ್ನು ಭಾರತವೇ ಆಯೋಜಿಸಲಿದೆ ಎಂದರು.

ಮುಂದಿನ ವರ್ಷದೊಳಗೆ ವಿಧಾನಸೌಧದ ಮುಂದೆ ಕೆಂಪೇಗೌಡರ ಪ್ರತಿಮೆ: ಸಿಎಂ ಮುಂದಿನ ವರ್ಷದೊಳಗೆ ವಿಧಾನಸೌಧದ ಮುಂದೆ ಕೆಂಪೇಗೌಡರ ಪ್ರತಿಮೆ: ಸಿಎಂ

ವಿಶ್ವದ 20 ಪ್ರಮುಖ ರಾಷ್ಟ್ರಗಳ ಸಮ್ಮೇಳನ ಈ ಬಾರಿ ಭಾರತದಲ್ಲಿ ನಡೆಯಲಿದ್ದು, ಬೆಂಗಳೂರಿನಲ್ಲಿಯೂ ಜಿ-20ಯ 9 ಸಭೆಗಳು ನಡೆಯಲಿದೆ. ಭಾರತದ ರಕ್ಷಣಾ ವಲಯ, ಆರ್ಥಿಕತೆ, ಶಿಕ್ಷಣ ಸೇರಿದಂತೆ ವಿವಿಧ ರಂಗಗಳಲ್ಲಿ ಪ್ರಾಬಲ್ಯವನ್ನು ಸಾಧಿಸುತ್ತಿದೆ ಎಂದು ಹೇಳಿದರು.

 ಪ್ರಧಾನಿಯನ್ನು ಹಾಡಿ ಹೊಗಳಿದ ಸಿಎಂ ಬೊಮ್ಮಾಯಿ

ಪ್ರಧಾನಿಯನ್ನು ಹಾಡಿ ಹೊಗಳಿದ ಸಿಎಂ ಬೊಮ್ಮಾಯಿ

ಜನರ ಜನರ ಹೃದಯದಲ್ಲಿ ಸ್ಥಾನ ಗಳಿಸುವುದಕ್ಕೆ ಒಬ್ಬ ಜನನಾಯಕನಿಂದ ಮಾತ್ರವೇ ಸಾಧ್ಯ ಎಂದ ಸಿಎಂ ಬಸವರಾಜ ಬೊಮ್ಮಾಯಿ, ಪ್ರಧಾನಿ ನರೇಂದ್ರ ಮೋದಿಯನ್ನು ಹಾಡಿ ಹೊಗಳಿದರು. 130 ಕೋಟಿ ಜನಸಂಖ್ಯೆ, ಸಾವಿರಾರು ಜಾತಿ, ಹಲವಾರು ಸಂಸ್ಕೃತಿಗಳ, ನೂರಾರು ಭಾಷೆಗಳಿರುವ ದೇಶದಲ್ಲಿ ಎಲ್ಲರ ಮಧ್ಯೆ ಭರವಸೆ ಹುಟ್ಟಿಸುವುದು ಸುಲಭದ ಮಾತಲ್ಲ. ಅದಕ್ಕೆ ತಕ್ಕಂತೆ ಕೆಲಸ ಮಾಡಿರುವುದು ಅಷ್ಟು ಸುಲಭದ ಕೆಲಸವೂ ಅಲ್ಲ.

ಪ್ರಧಾನಿ ಮೋದಿ ಭಾರತವನ್ನು ಕಠಿಣ ನಿರ್ಣಯ, ಕರಾರುವಾಕ್ಕು ಕಾರ್ಯಕ್ರಮ, ದಿಟ್ಟತನದ ನಾಯಕತ್ವ, ಬಡವರಿಗಾಗಿ ವಿಶೇಷ ಕಾರ್ಯಕ್ರಮ, ಆರ್ಥಿಕ , ಸಾಮಾಜಿಕ ಬದಲಾವಣೆ ತರುವ ಕೆಲಸ ಮಾಡಿದ್ದಾರೆ. ಗ್ರಾಮೀಣ, ನಗರ, ರಾಜ್ಯ ಪ್ರದೇಶಗಳಲ್ಲಿ ನಮ್ಮ ಜೀವನದ ಗುಣಮಟ್ಟ, ಬ್ಯಾಂಕಿಂಗ್ ವ್ಯವಹಾರದಿಂದ, ರಾಷ್ಟ್ರೀಯ ಹೆದ್ದಾರಿ, ಬಂದರು ಮತ್ತು ರೈಲ್ವೆ ಅಭಿವೃದ್ಧಿ, ಸ್ವಚ್ಛ ಭಾರತ ಅಭಿಯಾನ, ಜಲಜೀವನ್ ಮಿಷನ್, ಡಿಬಿಟಿ ವ್ಯವಸ್ಥೆ ಮಾಡಿದ್ದಾರೆ ಎಂದರು.

"ಜನಸಂಖ್ಯೆ ಭಾರತಕ್ಕೆ ಶಾಪವಲ್ಲ ವರ ಎಂದು ತೋರಿಸಿದ ಪ್ರಧಾನಿ"

ಕೇಂದ್ರ ಸರ್ಕಾರದಲ್ಲಿ ಸೆಮಿಕಂಡಕ್ಟರ್ ಉತ್ಪಾದನೆಗೆ ವಿಶೇಷ ನೀತಿಯನ್ನು ರೂಪಿಸಿ 66 ಸಾವಿರ ಕೋಟಿ ರೂಪಾಯಿ ಅನುದಾನ ಮೀಸಲಿಡಲಾಗಿದೆ. ಪರಿಸರ ಸಂರಕ್ಷಣೆ ಹಾಗೂ ನವೀಕರಿಸಬಹುದಾದ ಇಂಧನಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಎಥನಾಲ್ ಉತ್ಪಾದಿಸಲಾಗುತ್ತಿದೆ. ಮಾಲಿನ್ಯ ತಗ್ಗುವುದಲ್ಲದೇ, ಇಂಧನ ಆಮದು ನಿಯಂತ್ರಿಸಬಹುದಾಗಿದೆ. ಜನಸಂಖ್ಯೆಯೇ ಭಾರತ ದೇಶಕ್ಕೆ ಶಾಪ ಎಂದು ಪರಿಗಣಿಸಲಾಗುತ್ತಿತ್ತೋ ಮೋದಿಯವರು ಅದನ್ನು ವರವಾಗಿ ಪರಿಣಮಿಸಿದರು. ಶೇ. 46ರಷ್ಟು ಯುವಜನತೆ ಭಾರತ ದೇಶದ ಶಕ್ತಿಯಾಗಿ ಪರಿಚಯಿಸಿದರು ಎಂದು ಸಿಎಂ ಹೇಳಿದರು.

ರಾಜ್ಯಾದ್ಯಂತ ಮೋದಿ @ 20 ಪುಸ್ತಕ ತಲುಪಿಸುವ ಕಾರ್ಯ

ರಾಜ್ಯಾದ್ಯಂತ ಮೋದಿ @ 20 ಪುಸ್ತಕ ತಲುಪಿಸುವ ಕಾರ್ಯ

ಪ್ರಧಾನಮಂತ್ರಿ ನರೇಂದ್ರ ಮೋದಿ ವಿಚಾರಗಳು ಮೋದಿ @ 20 ಪುಸ್ತಕದಲ್ಲಿ ನಮೂದಿಸಲಾಗಿದೆ. ಸುಧಾ ಮೂರ್ತಿ, ಡಾ.ದೇವಿ ಶೆಟ್ಟಿ, ಕ್ರೀಡಾಪಟು ಪಿ.ವಿ.ಸಿಂಧೂ ಸೇರಿ ಹಲವು ಸಾಧಕರು ಈ ಪುಸ್ತಕಕ್ಕೆ ಬರೆದಿದ್ದಾರೆ. ಕರ್ನಾಟಕದ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ಪ್ರಧಾನಿ ಮೋದಿ, ಕನ್ನಡ ನೆಲ, ಜಲ, ಉದ್ಯಮ, ಹೊಸ ತಂತ್ರಜ್ಞಾನ ಬಗೆಗೆ ಅಭಿಮಾನ ಹೊಂದಿದ್ದಾರೆ. ಅವರ ವಿಚಾರಧಾರೆಗಳನ್ನು ಕರ್ನಾಟಕದಲ್ಲಿ ಜನರಿಗೆ ತಲುಪಿಸುವ ಕೆಲಸ ಮಾಡಲಾಗುವುದು. ಅವರ ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸಿ ರಾಜ್ಯಾದ್ಯಂತ ಹಂಚುವ ಕೆಲಸ ಮಾಡಲಾಗುವುದು ಎಂದು ಹೇಳಿದರು.

ಜಗತ್ತಿನ ಎದುರು ಭಾರತಕ್ಕೆ ಅಗ್ರಮಾನ್ಯ ಸ್ಥಾನ

ಜಗತ್ತಿನ ಎದುರು ಭಾರತಕ್ಕೆ ಅಗ್ರಮಾನ್ಯ ಸ್ಥಾನ

ಸಾರ್ವಜನಿಕ ಮೌಲ್ಯಗಳನ್ನು, ಆದರ್ಶಗಳನ್ನು ಸ್ಥಾಪನೆ ಮಾಡುವ ಮೂಲಕ ಮೋದಿ ದೇಶಕ್ಕೆ ಉತ್ತಮ ಚಾರಿತ್ರ್ಯವನ್ನು ನೀಡಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದಾರೆ. ಜನರ ಎಲ್ಲ ಭರವಸೆಗಳನ್ನು ಯಶಸ್ವಿಯಾಗಿ ಈಡೇರಿಸಿದ್ದಾರೆ. ಸಮರ್ಥ ನಾಯಕತ್ವ, ಮಾನವೀಯ ಆಡಳಿತ, ಮೌಲ್ಯಯುತ ರಾಜಕಾರಣ ನೀಡುತ್ತಿರುವ ಮೋದಿ ಅವಶ್ಯಕತೆ ಭಾರತಕ್ಕಿದೆ. ಇಡೀ ವಿಶ್ವದಲ್ಲಿ ದೇಶವು ಈಗ ಅಗ್ರಮಾನ್ಯ ಸ್ಥಾನ ಪಡೆಯುವಂತಾಗಲು ಅವರು ಶ್ರಮ ವಹಿಸುತ್ತಿದ್ದಾರೆ. ಮೋದಿಯವರ ವಿಚಾರಧಾರೆಗಳ್ನು ಕಾರ್ಯಕ್ರಮಗಳನ್ನು ಒಪ್ಪಿ ಬೆಂಬಲಿಸುವ ಅವಶ್ಯಕತೆ ಇದೆ ಎಂದು ಸಿಎಂ ಹೇಳಿದರು.

ಜನಸೇವೆಯೇ ಜೀವನಕ್ಕೆ ಧ್ಯೇಯ

ಜನಸೇವೆಯೇ ಜೀವನಕ್ಕೆ ಧ್ಯೇಯ

ಮೋದಿ ಹತ್ತಿರವಿದ್ದವರಿಗೆ ಪ್ರೀತಿ, ವಿಶ್ವಾಸದ, ಬಡವರ ಬಗ್ಗೆ ಮಿಡಿಯುವ ಹೃದಯವಂತಿಕೆಯ ವ್ಯಕ್ತಿ ಆಗಿದ್ದಾರೆ. ಗುಜರಾತಿನಲ್ಲಿ ಬಾಲ್ಯದಲ್ಲಿ ರೈಲ್ವೆ ನಿಲ್ದಾಣದಲ್ಲಿ ಚಹಾ ಮಾರಿದ ವ್ಯಕ್ತಿ. ನೋವು, ಅಪಮಾನ ಎಲ್ಲವನ್ನು ಅನುಭವಿಸಿದ ವ್ಯಕ್ತಿ. ಇವೆಲ್ಲದರ ನಡುವೆ ತತ್ವ, ಆದರ್ಶಗಳನ್ನು ಬೆಳೆಸಿಕೊಂಡು, ಅದನ್ನು ಬದುಕಿನಲ್ಲಿಯೂ ಅಳವಡಿಸಿಕೊಂಡವರು. ರಾಮಕೃಷ್ಣಾಶ್ರಮದಿಂದ ಪ್ರಭಾವಿತರಾಗಿ ರಾಮಕೃಷ್ಣ ಪರಮಹಂಸ, ವಿವೇಕಾನಂದರ ವಿಚಾರಧಾರೆಗಳನ್ನು ಅರ್ಥ ಮಾಡಿಕೊಂಡ ಆರ್.ಎಸ್.ಎಸ್ ಪ್ರಚಾರಕರಾದರು. ತಮ್ಮ ಆತ್ಮವಿಕಾಸಕ್ಕಾಗಿ, ಜ್ಞಾನೋದಯಕ್ಕಾಗಿ ಎರಡು ವರ್ಷ ಹಿಮಾಲಯದಲ್ಲಿ ಕೂತು ಧ್ಯಾನದಲ್ಲಿದ್ದರು. ಮಾನವೀಯ ಗುಣಗಳನ್ನು ಅಳವಡಿಸಿಕೊಂಡು ಜನಸೇವೆಯೇ ಜೀವನದ ಧ್ಯೇಯ ಎಂದು ತಿಳಿದು ಜೀವನವನ್ನು ಆರಂಭ ಮಾಡಿವದರು ಎಂದು ಹೇಳಿದರು.

ಮಾನವೀಯ ಗುಣಗಳ ಬಗ್ಗೆ ಉಲ್ಲೇಖಿಸಿದ ಸಿಎಂ

ನರೇಂದ್ರ ಮೋದಿಯವರ ಬಡತನದ ಅನುಭವವನ್ನು ಮುಖ್ಯಮಂತ್ರಿಯಾದಾಗ, ಗುಜರಾತಿನಲ್ಲಿ ಬಡತನವನ್ನು ನಿವಾರಣೆ ಮಾಡಲು ಕಾರ್ಯಕ್ರಮ ರೂಪಿಸಿದರು. ಎಲ್ಲರ ಕೈಗೆ ಕೆಲಸ ನೀಡಿ ಬಡತವನ್ನು ದೂರ ಮಾಡಿದ ಧೀಮಂತ ನಾಯಕ ಮೋದಿ ಆಗಿದ್ದಾರೆ. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎನ್ನುವ ಗಾಂಧೀಯವರ ತತ್ವಗಳನ್ನು ಅನುಸರಿಸಿ, ಅತ್ಯಂತ ತಳಮಟ್ಟದ ವ್ಯಕ್ತಿಗೂ ಸ್ವಾಭಿಮಾನದ ಬದುಕನ್ನು ಬದುಕಲು ಅವಕಾಶ ಕೊಟ್ಟಿದ್ದಾರೆ. ಅವರು ನಿಜವಾಗಿಯೂ ಮಾನವೀಯ ಗುಣಗಳಿರುವ ವ್ಯಕ್ತಿತ್ವ ಎಂದರು.

ತನಗಾಗಿ ಬದುಕುವುದು ಸಹಜ ಆದರೆ, ಇತರರಿಗಾಗಿ ಬದುಕುವುದು ದೊಡ್ಡ ಗುಣ. ಅಧಿಕಾರ ಬಂದಾಗ ದೇಶ, ನಾಡು, ಬಡವರ ಬಗ್ಗೆ ಚಿಂತೆ ಮಾಡುವವರೇ ನಿಜವಾದ ನಾಯಕ ಆಗುತ್ತಾರೆ. ಅಧಿಕಾರಕ್ಕೆ ಬರುವ ಪೂರ್ವದಲ್ಲಿ ಹಾಗೂ ಬಂದ ನಂತರ ಮೋದಿ ವಿಚಾರಧಾರೆ, ಆದರ್ಶ ಬದುಕು ಬದಲಾವಣೆಯಾಗಿಲ್ಲ. ಎಲ್ಲವೂ ಇದ್ದ ಹಾಗೇ ಇದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹಾಡಿ ಹೊಗಳಿದ್ದಾರೆ.

Recommended Video

   ಮಹಾ ರಾಜಕೀಯಕ್ಕೆ‌ ರಣರೋಚಕ ತಿರುವು:BJP ಜೊತೆ ಶಿಂಧೆ ಮೈತ್ರಿ ಮಾಡ್ಕೊಳ್ಳೊದು ಪಕ್ಕಾ!!! | *Politics | OneIndia
   English summary
   How G-20 Summit 2023 will be Organized under the Prime Minister Modi leadership in India, CM Basavaraj Bommai Explains.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X