ಬೆಂಗಳೂರು: 24 ಲಕ್ಷ ಪ್ಯಾಕೇಜ್ ಇದ್ದರೂ 1BHKಗೆ 45,000 ರೂ. ಬಾಡಿಗೆ ಕಟ್ಟಲಾಗದೆ ಬೇಸತ್ತ ಟೆಕ್ಕಿ

ಬೆಂಗಳೂರಿನಲ್ಲಿ ದಿನೇ ದಿನೇ ಏರಿಕೆಯಾಗುತ್ತಿರುವ ಮನೆ ಬಾಡಿಗೆ ಹಾಗೂ ಜೀವನ ನಿರ್ವಹಣಾ ವೆಚ್ಚಗಳು ಯುವ ವೃತ್ತಿಪರರಿಗೆ ದೊಡ್ಡ ಹೊರೆಯಾಗಿ ಪರಿಣಮಿಸಿದೆ. ಐಟಿ ಕಚೇರಿಗಳಿಗೆ ಹತ್ತಿರವಿರುವ ಕಾರಣ ಮತ್ತು ವಾರಾಂತ್ಯದ ಪಾರ್ಟಿ, ಸಾಮಾಜಿಕ ಜೀವನಕ್ಕೆ ಹೇಳಿ ಮಾಡಿಸಿದಂತಿರುವ ಎಚ್‌ಎಸ್‌ಆರ್ ಲೇಔಟ್‌ನಂತಹ ಪ್ರದೇಶಗಳು ಯಾವಾಗಲೂ ಬೇಡಿಕೆಯಲ್ಲಿರುತ್ತವೆ. ಆದರೆ, ಇಲ್ಲಿನ ದುಬಾರಿ ಮನೆ ಬಾಡಿಗೆಯನ್ನು ನೋಡಿ, ಇಷ್ಟು ಹಣ ಕೊಡುವುದು ನಿಜಕ್ಕೂ ಯೋಗ್ಯವೇ ಎಂದು ಹಲವು ನಿವಾಸಿಗಳು ಪ್ರಶ್ನಿಸಲು ಶುರುಮಾಡಿದ್ದಾರೆ.

ಇದಕ್ಕೆ ಉದಾಹರಣೆ ಎಂಬಂತೆ, ಪೇಪಾಲ್ ಕಂಪನಿಯಲ್ಲಿ ಕೆಲಸ ಮಾಡುವ ಬೆಂಗಳೂರಿನ ಉದ್ಯೋಗಿಯೊಬ್ಬರು ಗ್ರೇಪ್‌ವೈನ್ ಎಂಬ ನೆಟ್‌ವರ್ಕಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಮಾಡಿರುವ ಪೋಸ್ಟ್ ಇದೀಗ ಭಾರಿ ವೈರಲ್ ಆಗಿದೆ.

Bengaluru Techie

'ಗುಡ್ ಬೈ ಎಚ್‌ಎಸ್‌ಆರ್ ಲೇಔಟ್! 1BHK ಮನೆಗೆ 45,000 ರೂ. ಬಾಡಿಗೆ ಕಟ್ಟುವುದು ನಿಜಕ್ಕೂ ಹುಚ್ಚುತನ' ಎಂಬ ಶೀರ್ಷಿಕೆಯಡಿ ಆತ ತನ್ನ ನೋವನ್ನು ತೋಡಿಕೊಂಡಿದ್ದಾನೆ. ವಿಪರೀತ ಬಾಡಿಗೆಯ ಕಾರಣದಿಂದಾಗಿ ತಾನು ಆ ಪ್ರತಿಷ್ಠಿತ ಏರಿಯಾವನ್ನು ಖಾಲಿ ಮಾಡುತ್ತಿರುವುದಾಗಿ ಆತ ಹೇಳಿಕೊಂಡಿದ್ದಾನೆ.

"ಕೇವಲ ಕಾಮನ್ ಸೆನ್ಸ್ ಬಳಸಿ ಇಂದು ನಾನು ಎಚ್‌ಎಸ್‌ಆರ್ ಲೇಔಟ್‌ನಿಂದ ಮನೆ ಖಾಲಿ ಮಾಡುತ್ತಿರುವುದನ್ನು ಹೇಳಲು ನನಗೆ ಅತ್ಯಂತ ನಿರಾಳವೆನಿಸುತ್ತಿದೆ. ನನ್ನ ತಲೆಯ ಮೇಲಿದ್ದ ದೊಡ್ಡ ಭಾರವೊಂದು ಇಳಿದಂತಾಗಿದೆ ಮತ್ತು ಈ ವಾಸ್ತವವನ್ನು ಹಂಚಿಕೊಳ್ಳಲು ನನಗೆ ನಿಜಕ್ಕೂ ಖುಷಿಯಾಗುತ್ತಿದೆ" ಎಂದು ಆ ಉದ್ಯೋಗಿ ಬರೆದುಕೊಂಡಿದ್ದಾರೆ.

ಆರಂಭದಲ್ಲಿ ಸ್ನೇಹಿತರ ಒತ್ತಡಕ್ಕೆ ಮಣಿದು ಈ ಏರಿಯಾಕ್ಕೆ ಬಂದಿದ್ದ ಆತ, ಬಾಡಿಗೆಗೆಂದು ತುಬ ಹಣವನ್ನು ಕಳೆದುಕೊಂಡಿದ್ದಾರೆ. ಹಾಗಾಗಿ, ಆತನ ಸಹೋದ್ಯೋಗಿಯೊಬ್ಬರು ಬ್ರೂಕ್‌ಫೀಲ್ಡ್ ಪ್ರದೇಶದಲ್ಲಿ ಮನೆ ಹುಡುಕುವಂತೆ ಸಲಹೆ ನೀಡಿದ್ದಾರೆ. "ನಾವು ಸ್ವಲ್ಪ ಹೊತ್ತು ಮಾತನಾಡಿದೆವು ಮತ್ತು ಕೊನೆಗೆ ಬ್ರೋಕರ್ ಜೊತೆ ಮನೆಗಳನ್ನು ನೋಡಲು ಹೋದೆವು. ನನ್ನ ಬಜೆಟ್ ಮತ್ತು ನನಗೆ ಎಂತಹ ಮನೆ ಬೇಕು ಎಂಬುದನ್ನು ವಿವರಿಸಿದೆ" ಎಂದು ಆತ ತಿಳಿಸಿದ್ದಾನೆ.

ಬ್ರೂಕ್‌ಫೀಲ್ಡ್‌ಗೆ ಭೇಟಿ ನೀಡಿ ಅಲ್ಲಿನ ಅಪಾರ್ಟ್‌ಮೆಂಟ್‌ಗಳನ್ನು ನೋಡಿದ ಮೇಲೆ, ತನ್ನ ಬಜೆಟ್‌ಗೆ ತಕ್ಕಂತೆ ಉತ್ತಮ ಆಯ್ಕೆಗಳು ಲಭ್ಯವಿರುವುದು ಆತನಿಗೆ ಅರಿವಾಗಿದೆ. "ಅಲ್ಲಿನ ವ್ಯವಸ್ಥೆ ನನ್ನ ಕಣ್ಣು ತೆರೆಸಿತು. ನಾವು ಸುಮಾರು 15 ಅಪಾರ್ಟ್‌ಮೆಂಟ್‌ಗಳನ್ನು ನೋಡಿದೆವು, ಅದರಲ್ಲಿ 3 ಮಾತ್ರ ಚೆನ್ನಾಗಿದ್ದವು ಮತ್ತು ಕೇವಲ ಒಂದರಲ್ಲಿ ಮಾತ್ರ ಕಾವೇರಿ ನೀರಿನ ಸರಿಯಾದ ಪೂರೈಕೆ ಇತ್ತು" ಎಂದು ಆತ ಹೇಳಿದ್ದಾನೆ. ಅಂತಿಮವಾಗಿ, ಐಟಿ ಹಬ್‌ಗಳ ಗದ್ದಲದಿಂದ ಸ್ವಲ್ಪ ದೂರವಿರುವ, ಪ್ರಶಾಂತವಾದ ವಸತಿ ಪ್ರದೇಶದಲ್ಲಿ ಆತ ಒಂದು ಫ್ಲಾಟ್‌ಗೆ ಒಪ್ಪಂದ ಮಾಡಿಕೊಂಡಿದ್ದಾನೆ.

ತನ್ನ ಅನುಭವವನ್ನು ಮೆಲುಕು ಹಾಕುತ್ತಾ, "ನಾನು ಒಪ್ಪಿಕೊಳ್ಳಲೇಬೇಕು, ಆ ನಕಲಿ ಜೀವನಶೈಲಿಯಿಂದ ನಾನು ಸಂಪೂರ್ಣವಾಗಿ ಸುಸ್ತಾಗಿದ್ದೆ. ಕಷ್ಟಪಟ್ಟು ಉಳಿತಾಯ ಮಾಡಬೇಕೆಂದಿದ್ದ ನನ್ನ 24 ಲಕ್ಷ ರೂಪಾಯಿ ವಾರ್ಷಿಕ ಆದಾಯವನ್ನು ಅದು ಬರಿದು ಮಾಡಿತ್ತು. ಗುಡ್ ಬೈ ಎಚ್‌ಎಸ್‌ಆರ್, ಮತ್ತು ಈ ನಿರ್ಧಾರವನ್ನು ಇಷ್ಟು ಸುಲಭವಾಗಿಸಿದ ಆ ಭೀಕರ ಟ್ರಾಫಿಕ್‌ಗೂ ಗುಡ್ ಬೈ" ಎಂದು ಆತ ಹೇಳಿದ್ದಾನೆ.

ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆ

ಈ ಪೋಸ್ಟ್ ಆನ್‌ಲೈನ್‌ನಲ್ಲಿ ವೇಗವಾಗಿ ಹರಡಿದ್ದು, ನೆಟ್ಟಿಗರು ಬೆಂಗಳೂರಿನಲ್ಲಿ ತಮಗಾದ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ.

"ನಾನು ಕೂಡ ಒಂದು ವರ್ಷದ ಹಿಂದೆ ಇದೇ ರೀತಿ ಮಾಡಿದ್ದೆ. ಜೆಪಿ ನಗರದಿಂದ ಯಲಹಂಕಕ್ಕೆ ವಾಸ್ತವ್ಯ ಬದಲಾಯಿಸಿದೆ. ಅದೇ ದುಡ್ಡಿಗೆ 5 ಪಟ್ಟು ಉತ್ತಮವಾದ ಫ್ಲಾಟ್, 3 ಪಟ್ಟು ದೊಡ್ಡ ಜಾಗ, ಸುಂದರವಾದ ಕೆರೆಯ ನೋಟ ಮತ್ತು ಒಳ್ಳೆಯ ಮನೆ ಮಾಲೀಕರು ಸಿಕ್ಕರು. ಆದರೆ ಪ್ರದೇಶ, ಫ್ಲಾಟ್ ಮತ್ತು ಮಾಲೀಕರು ಒಳ್ಳೆಯವರೇ ಎಂದು ಅರ್ಥಮಾಡಿಕೊಳ್ಳುವುದು ಸ್ವಲ್ಪ ಕಷ್ಟ" ಎಂದು ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+