ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು-ಕೊಡಗು ಕ್ಷೇತ್ರ:ಚುನಾವಣಾ ರಾಯಭಾರಿಯಾಗಿ ಶ್ರೀ ಹರ್ಷ ಆಯ್ಕೆ

|
Google Oneindia Kannada News

ಮೈಸೂರು, ಏಪ್ರಿಲ್ 3: ಮೈಸೂರಿನ ಯುವ ಗಾಯಕ ಸಿಂಗರ್ ಶ್ರೀ ಹರ್ಷ ಮೈಸೂರು - ಕೊಡಗು ಲೋಕಸಭಾ ಕ್ಷೇತ್ರದ ಚುನಾವಣಾ ರಾಯಭಾರಿಯಾಗಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಈಗಾಗಲೇ ರಾಯಭಾರಿಯಾಗಿ ಕಾರ್ಯಪ್ರವೃತ್ತರಾಗಿರುವ ಶ್ರೀ ಹರ್ಷ, ಹಳ್ಳಿ ಹಳ್ಳಿಗಳಲ್ಲಿ ಚುನಾವಣೆ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಇವಿಎಂ ಮತ ಯಂತ್ರ ಬಳಕೆಯ ಕುರಿತು ಮಾಹಿತಿ ನೀಡುವುದರ ಜೊತೆಗೆ ಕಡ್ಡಾಯ ಮತದಾನ ಮಾಡಬೇಕೆಂದು ಸಾರ್ವಜನಿಕರಿಗೆ ಕರೆ ನೀಡುತ್ತಿದ್ದಾರೆ.

ಮೈಸೂರು - ಕೊಡಗು ಕ್ಷೇತ್ರ: ಮೈತ್ರಿ ಪಕ್ಷದ ನಡುವೆ ಮುಂದುವರೆದ ಮುಸುಕಿನ ಗುದ್ದಾಟ!ಮೈಸೂರು - ಕೊಡಗು ಕ್ಷೇತ್ರ: ಮೈತ್ರಿ ಪಕ್ಷದ ನಡುವೆ ಮುಂದುವರೆದ ಮುಸುಕಿನ ಗುದ್ದಾಟ!

"ಮತದಾನ ಮಾಡುವುದು ನಮ್ಮ ಹಕ್ಕು. ತಪ್ಪದೇ ಎಲ್ಲರು ಮತದಾನ ಮಾಡಬೇಕು ಹಾಗೂ ಚುನಾವಣೆ ಪ್ರಜಾಪ್ರಭುತ್ವದ ಹಬ್ಬ. ನಾವು ಮತದಾನ ದಿನವನ್ನು ವಿಶೇಷ ಹಬ್ಬದಂತೆ ಆಚರಣೆ ಮಾಡಬೇಕು. ನಾನೊಬ್ಬ ಗಾಯಕ. ಚುನಾವಣಾ ಆಯೋಗದ ಜಿಲ್ಲಾ ಸ್ವೀಪ್ ಸಮಿತಿಯು ನನ್ನನ್ನು ಜಿಲ್ಲಾ ಸ್ವೀಪ್ ಸಮಿತಿಯ ರಾಯಭಾರಿಯಾಗಿ ಆಯ್ಕೆ ಮಾಡಿದ್ದಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ" ಎನ್ನುತ್ತಾರೆ ಶ್ರೀ ಹರ್ಷ.

Singer Sri Harsha selected as a Brand Ambassador to Mysuru-Kodagu constituency

ಮತದಾನದ ಕುರಿತು ಒಂದು ಹಾಡು ಏತಕ್ಕೆ ಮಾಡಬಾರದು ಎಂದು ಅಧಿಕಾರಿಗಳಿಗೆ ತಿಳಿಸಿದೆ. ಅಧಿಕಾರಿಗಳು ಕೂಡ ಜಾಗೃತಿ ಹಾಡಿಗೆ ಅನುಮತಿ ಕೊಟ್ಟಿದ್ದಾರೆ. ಜಾಗೃತಿ ಹಾಡು ಕ್ರಿಯೇಟಿವ್ ಆಗಿದೆ. ಸಂಗೀತದ ಜೊತೆ ನೃತ್ಯವನ್ನು ಅಳವಡಿಸಲಾಗಿದೆ. ವಿಶೇಷವಾಗಿ ಮತದಾನ ಜಾಗೃತಿ ಮೂಡಿಸಲು ಮುಂದಾಗಿದ್ದೇವೆ. ಇನ್ನೆರಡು ದಿನಗಳಲ್ಲಿ ಮತದಾನ ಜಾಗೃತಿ ಹಾಡು ಬಿಡುಗಡೆ ಮಾಡಲಿದ್ದೇವೆ. ಸಾಮಾಜಿಕ ಜಾಲತಾಣದ ಮೂಲಕ ಯುವಕರಲ್ಲಿ ಮತದಾನ ಜಾಗೃತಿ ಮೂಡಿಸಲು ಈ ಹಾಡು ಕ್ರಿಯೇಟ್ ಮಾಡಲಾಗಿದೆ ಎಂದರು.

 ಮೈಸೂರು-ಕೊಡಗು ಕ್ಷೇತ್ರದಿಂದ 25 ಅಭ್ಯರ್ಥಿಗಳ ನಾಮಪತ್ರ ಸ್ವೀಕೃತ ಮೈಸೂರು-ಕೊಡಗು ಕ್ಷೇತ್ರದಿಂದ 25 ಅಭ್ಯರ್ಥಿಗಳ ನಾಮಪತ್ರ ಸ್ವೀಕೃತ

2 ನಿಮಿಷ 40 ಸೆಕೆಂಡ್ ಹಾಡು ಕ್ರಿಯೇಟ್ ಆಗಿದೆ. ಭವ್ಯ ಭಾರತ, ನವ್ಯ ಭಾರತ, ಅದಮ್ಯ ಭಾರತ ಎಂಬ ಹಾಡನ್ನು ಸಹ ಬರೆದಿದ್ದೇನೆ. ಒಂದು ಮಗುವಿನ ಮೂಲಕ ವೋಟ್ ಮಾಡಿ ಅಂತ ಸಂದೇಶ ಕೊಟ್ಟಿದ್ದೇವೆ. ಈ ಮತದಾನದ ಹಕ್ಕನ್ನು ಸಂಭ್ರಮದಿಂದ ಆಚರಿಸಿ ಎಂದು ಶ್ರೀಹರ್ಷ ತಿಳಿಸಿದ್ದಾರೆ.

English summary
Singer Sri Harsha selected as a Brand Ambassador to Mysuru-Kodagu Lok Sabha constituency.He wrote one song about voting awareness.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X