Water Crisis: ಜಲಕ್ಷಾಮ ತಡೆಗೆ ಜಲಸಂರಕ್ಷಣೆಯೇ ಪರಿಹಾರ: ಎಚ್ಚೆತ್ತುಕೊಳ್ಳುತ್ತಾ ಸರ್ಕಾರ?
ಮೈಸೂರು, ಏಪ್ರಿಲ್ 24: ಸತತ ಐದು ವರ್ಷಗಳ ಕಾಲ ಅತಿವೃಷ್ಠಿಯಿಂದ ಭಾರೀ ಹಾನಿಯಾಯಿತು ಜತೆಗೆ ನೀರು ಹರಿದು ಸಮುದ್ರ ಸೇರಿತು. ಕೆಲವು ಕಡೆಗಳಲ್ಲಿ ಕೆರೆಗಳು ತುಂಬಿ ಕಟ್ಟೆಗಳು ಒಡೆದವು. ನಾವು ಅವುಗಳನ್ನು ದುರಸ್ತಿಪಡಿಸಿ ನೀರನ್ನು ಹಿಡಿದಿಡುವ ಕೆಲಸ ಮಾಡಲಿಲ್ಲ. ನದಿಯಲ್ಲಿ ತುಂಬಿ ಹರಿದ ನೀರನ್ನು ಕೆರೆ, ಕಟ್ಟೆಗಳಿಗೆ ಹಾಯಿಸಿ ತುಂಬಿಸಿಡುವ ಪ್ರಯತ್ನ ಮಾಡಲಿಲ್ಲ. ಹೀಗಾಗಿ ಕಳೆದ ಐದು ವರ್ಷಗಳ ಬಳಿಕ ಈ ಬಾರಿ ಜಲಕ್ಷಾಮ ಎದುರಾಗಿದೆ.
ಈಗ ನೋಡಿ ಐದು ವರ್ಷಗಳ ಬಳಿಕ ಒಂದೇ ಒಂದು ಮುಂಗಾರು ಕೈಕೊಟ್ಟಿದಕ್ಕೆ ನಾವು ಪಡಬಾರದ ಪಾಡನ್ನು ಅನುಭವಿಸುತ್ತಿದ್ದೇವೆ. ಎದುರಾಗಿರುವ ಜಲಕ್ಷಾಮವನ್ನು ನಿಭಾಯಿಸಲಾಗದೆ ಪರದಾಡುತ್ತಿದ್ದೇವೆ. ನೀರಿಗಾಗಿ ಪರಿತಪಿಸುತ್ತಿದ್ದೇವೆ. ವರುಣ ನಮ್ಮ ಕಡೆಗೆ ಕರುಣೆ ತೋರಿದಂತೆ ಕಾಣುತ್ತಿಲ್ಲ ಹೀಗಾಗಿಯೇ ಈ ಬೇಸಿಗೆ ನಮಗೆಲ್ಲರಿಗೂ ಎಚ್ಚರಿಕೆಯ ಸಂದೇಶವನ್ನು ನೀಡುತ್ತಿದೆ.

ಈಗಿನ ಪರಿಸ್ಥಿ ತಿಯಲ್ಲಿ ಕೆಆರ್‌ಎಸ್, ಕಬಿನಿ ಸೇರಿದಂತೆ ಜಲಾಶಯಗಳಲ್ಲಿ ನೀರಿನ ಮಟ್ಟ ಪಾತಾಳದ ಕಡೆಗೆ ಹೋಗುತ್ತಿದ್ದರೆ, ಕೆರೆಗಳು ಒಣಗಿ ಬಿರುಕು ಬಿಟ್ಟಿವೆ.. ಬಾವಿಗಳಲ್ಲಿ ನೀರು ತಳ ಸೇರಿದೆ.. ಕೊಳವೆಬಾವಿಯಲ್ಲಿ ನೀರು ಬರುತ್ತಿಲ್ಲ.. ನದಿಯಲ್ಲಿ ನೀರು ಹರಿಯುತ್ತಿಲ್ಲ. ಇದರ ನಡುವೆ ಬಿಸಿಲಿನ ಝಳ ಮೈ ಸುಡುತ್ತಿದೆ.. ಕುಡಿಯುವ ನೀರಿಗೆ ತಾತ್ವಾರ ಶುರುವಾಗಿದೆ. ಬೇರೇನು ಬೇಡ ಬೇರು ಕೊಡಿ ಸಾಕು ಎನ್ನುವ ಸ್ಥಿತಿಗೆ ಜನ ಬಂದಿದ್ದಾರೆ.
ಒಂದು ಮುಂಗಾರು ಕೈಕೊಟ್ಟಿದ್ದಕ್ಕೆ ಈ ಪಾಡು
ಮೊದಲೆಲ್ಲ ಯುಗಾದಿ ಕಳೆಯುತ್ತಿದ್ದಂತೆಯೇ ಮಳೆಯೂ ಆರಂಭವಾಗುತ್ತಿತ್ತು. ಜೂನ್ ಜುಲೈನಲ್ಲಿ ಎಡೆಬಿಡದೆ ಮಳೆ ಸುರಿದು ಮಲೆನಾಡಿನಲ್ಲಿ ನೀರಿನ ಸೆಲೆಯಿರುವ ಸ್ಥಳಗಳಲ್ಲಿ ಜಲ ಹುಟ್ಟಿ ನೀರು ಹರಿಯುತ್ತಿತ್ತು. ಬೆಟ್ಟಗುಡ್ಡಗಳ ಮೇಲಿನಿಂದ ನೀರು ಉಕ್ಕಿ ಬರುತ್ತಿತ್ತು. ಹಿರಿಯರು ತಮ್ಮೂರಿನ ಬೆಟ್ಟದಲ್ಲಿ ಮಳೆಯಾಗಿ ಜಲ ಉಕ್ಕಿ ಹರಿದರೆ ಈ ಬಾರಿ ಉತ್ತಮ ಮಳೆಯಾಗಿದೆ. ಮುಂದಿನ ಬೇಸಿಗೆಯಲ್ಲಿ ನೀರಿಗೆ ತೊಂದರೆಯಾಗುವುದಿಲ್ಲ ಎಂದು ಹೇಳುತ್ತಿದ್ದರು.

ಕಳೆದ ವರ್ಷ ಇಂತಹ ಯಾವ ಅನುಭವವೂ ಆಗಿಲ್ಲ ಅದರ ಪರಿಣಾಮವನ್ನು ನಾವು ಎದುರಿಸುತ್ತಿದ್ದೇವೆ. ಮೊದಲೆಲ್ಲ ಮಲೆನಾಡಿನಲ್ಲಿ ಜಲದ ಸೆಲೆಗಳು ದಾರಿಯುದ್ದಕ್ಕೂ ಕಾಣಸಿಗುತ್ತಿದ್ದವು. ಈಗ ಅವುಗಳೆಲ್ಲವೂ ಬತ್ತಿ ಹೋಗಿವೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಮಲೆನಾಡಿನಲ್ಲಿಯೂ ಅಂತರ್ಜಲದ ಸಮಸ್ಯೆ ಎದುರಾಗಿದೆ. ಸುಮಾರು ಎರಡು ದಶಕಗಳ ಹಿಂದೆ ಕಾಫಿ ತೋಟ ಹೆಚ್ಚು ಇರಲಿಲ್ಲ. ಏಲಕ್ಕಿ ತೋಟ ಹೆಚ್ಚಾಗಿತ್ತು.
ವೃದ್ಧಿಯಾಗದ ಅಂತರ್ಜಲದಿಂದ ಸಮಸ್ಯೆ
ಏಲಕ್ಕಿ ತೋಟ ಸದಾ ತಂಪನ್ನು ಬಯಸುತ್ತಿತ್ತು. ಏಲಕ್ಕಿ ತೋಟ ನಾಶವಾಗಿ ಕಾಫಿ ತೋಟವಾಗಿ ಮಾರ್ಪಾಡಾಯಿತೋ ಎಲ್ಲವೂ ಉಲ್ಟ ಆಗಿದೆ. ಪ್ರಕೃತಿ ನಾಶವಾಗಿದೆ. ಇದರೊಂದಿಗೆ ಕಾರ್ಮಿಕರ ಸಮಸ್ಯೆ, ನಷ್ಟವಾಗುತ್ತಿರುವ ಕಾರಣದಿಂದ ಭತ್ತದ ಬೆಳೆಯುವ ಪ್ರದೇಶ ಕಡಿಮೆಯಾಗುತ್ತಿದೆ. ಭತ್ತದ ಗದ್ದೆಯಲ್ಲಿ ಸುಮಾರು ಮೂರ್ನಾಗಲ್ಕು ತಿಂಗಳು ನೀರನ್ನು ನಿಲ್ಲಿಸುವುದರಿಂದ ಅಂತರ್ಜಲ ಹೆಚ್ಚುತ್ತಿತ್ತು.
ಇವತ್ತು ಗದ್ದೆಗಳು ತೋಟಗಳಾಗಿವೆ. ನಿವೇಶನಗಳಾಗಿವೆ. ಇನ್ನು ಕೆಲವು ಕಡೆಗಳಲ್ಲಿ ನಾಟಿ ಮಾಡಲು ಸಾಧ್ಯವಾಗದೆ ಪಾಳು ಬಿದ್ದಿವೆ. ಆಧುನಿಕತೆಯ ಭರದಲ್ಲಿ ನಮಗೆ ನಾವೇ ವಂಚನೆ ಮಾಡಿಕೊಳ್ಳುತ್ತಿದ್ದೇವೆ ಅದರ ಪರಿಣಾಮ ಪ್ರಕೃತಿ ಮೇಲಾಗುತ್ತಿದೆ. ದಶಕಗಳ ಹಿಂದೆಯೇ ಪ್ರತಿ ಶಾಲೆಯಲ್ಲಿ ಮಳೆಕೊಯ್ಲು ಮಾಡಲೇ ಬೇಕೆಂಬ ಯೋಜನೆ ಜಾರಿಗೆ ತರಲಾಯಿತು. ಒಂದಷ್ಟು ಶಾಲೆಗಳಲ್ಲಿ ಅನುಷ್ಠಾನವೂ ಆಯಿತು. ಆದರೀಗ ಅದು ಹಳ್ಳಹಿಡಿದಿದೆ.

ಜಲಸಂರಕ್ಷಣೆಗೆ ಸರ್ಕಾರ ಒತ್ತು ನೀಡಲಿ
ಸರ್ಕಾರಗಳು ಕೂಡ ನೀರಾವರಿಯತ್ತ ತಲೆ ಕೆಡಿಸಿಕೊಳ್ಳುತ್ತಿಲ್ಲ. ಅಂತರ್ಜಲದ ರಕ್ಷಣೆಗೆ ಮುಂದಾಗುತ್ತಿಲ್ಲ. ಪಾಳು ಬಿದ್ದಿರುವ ಕೆರೆಗಳ ಅಭಿವೃದ್ಧಿ ಮಾಡುತ್ತಿಲ್ಲ. ಇವತ್ತು ರಾಜ್ಯದಾದ್ಯಂತ ಇರುವ ಕೆರೆ, ಕಟ್ಟೆಗಳನ್ನು ಅಭಿವೃದ್ಧಿಗೊಳಿಸಿ ಅದರಲ್ಲಿ ನೀರು ಸಂಗ್ರಹಣೆ ಮಾಡಿದ್ದೇ ಆದರೆ ಅಂತರ್ಜಲ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಲು ಸಾಧ್ಯವಾಗುತ್ತದೆ. ಜತೆಗೆ ನೀರು ಹಿಡಿದಿಡುವ ಮರಗಳನ್ನು ಅರಣ್ಯ ಪ್ರದೇಶಗಳಲ್ಲಿ ಬೆಳೆಸುವ ಕೆಲಸ ಮಾಡಬೇಕಿದೆ.
ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಎದುರಾಗುತ್ತದೆ. ಅಂತರ್ಜಲದ ಮಟ್ಟ ಕುಸಿಯುತ್ತದೆ. ಅದನ್ನು ತಡೆಯಬೇಕಾದರೆ ಈಗಿನಿಂದಲೇ ಮಳೆ ಕೊಯ್ಲುನೊಂದಿಗೆ ಜಲಸಂರಕ್ಷಣೆ ಮಾಡಬೇಕೆಂಬುದನ್ನು ಸರ್ಕಾರಗಳು ಮನಗಾಣಬೇಕಾಗಿದೆ. ಅದರಲ್ಲೂ ವಿದ್ಯಾರ್ಥಿ ದೆಸೆಯಿಂದಲೇ ವಿದ್ಯಾರ್ಥಿಗಳಲ್ಲಿ ಜಲಸಂರಕ್ಷಣೆಯ ಅರಿವು ಮೂಡಿಸಿದರೆ ಅದು ಮುಂದೆ ಪರಿಣಾಮಕಾರಿಯಾಗುತ್ತದೆ.
ಎಚ್ಚೆತ್ತುಕೊಳ್ಳುವ ಕಾಲ ಬಂದಿದೆ
ಈ ಬಾರಿ ಕೆರೆಗಳು ಒಣಗಿವೆ. ಸರ್ಕಾರ ಮನಸ್ಸು ಮಾಡಿ ಕೆರೆಗಳಲ್ಲಿ ಶೇಖರಣೆಯಾಗಿರುವ ಹೂಳು ತೆಗೆಸಿ ಕೆರೆಯ ಏರಿಯನ್ನು ಅಭಿವೃದ್ಧಿಪಡಿಸಿದರೆ ಮುಂದಿನ ಮುಂಗಾರಿನಲ್ಲಿ ಮಳೆ ಸುರಿದರೆ ಕೆರೆಗಳಲ್ಲಿ ನೀರು ಸಂಗ್ರಹಣೆಯಾಗಲು ಸಹಕಾರಿಯಾಗಲಿದೆ. ಜತೆಗೆ ನದಿಯಿಂದ ಕೆರೆಗೆ ನೀರು ತುಂಬಿಸುವ ಕಾರ್ಯವನ್ನು ಮಾಡಬೇಕಾಗಿದೆ. ಅದು ಬಿಟ್ಟು ಮುಂದಿನ ದಿನಗಳಲ್ಲಿ ನೀರಾವರಿ ಬಗ್ಗೆ ಎಚ್ಚೆತ್ತುಕೊಳ್ಳದೆ ಮೈಮರೆತರೆ ಸಂಕಷ್ಟ ತಪ್ಪಿದಲ್ಲ.
-
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ -
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral












Click it and Unblock the Notifications