ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ಹೆಚ್ಚಾಗುತ್ತಿದೆ ಗಾಂಜಾ ಮಾಫಿಯಾ

|
Google Oneindia Kannada News

ಮೈಸೂರು, ಫೆಬ್ರವರಿ 2 : ನಗರದಲ್ಲಿ ಕಳೆದ ಕೆಲವು ತಿಂಗಳಿನಿಂದೀಚೆಗೆ 10ಕ್ಕೂ ಹೆಚ್ಚು ಗಾಂಜಾ ಮಾರಾಟ ಪ್ರಕರಣಗಳನ್ನು ಪತ್ತೆ ಹಚ್ಚಿರುವ ಪೊಲೀಸರು 15ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ್ದಾರೆ. ಆದರೂ, ಗಾಂಜಾ ಮಾರಾಟ ಪ್ರಕರಣಗಳು ನಿಯಂತ್ರಣಕ್ಕೆ ಬರುತ್ತಿಲ್ಲ.

ನಗರದಲ್ಲಿ ಗಾಂಜಾಗೆ ಹೆಚ್ಚಿನ ಬೇಡಿಕೆ ಇದೆ. ಯುವಜನರು ಗಾಂಜಾ ಸೇವನೆಯ ಚಟಕ್ಕೆ ದಾಸರಾಗಿದ್ದಾರೆ. ಕನಿಷ್ಠ ವಾರಕ್ಕೊಮ್ಮೆಯಾದರೂ ಗಾಂಜಾ ಸೇವಿಸದೇ ಇರಲಾದಂತಹ ಸ್ಥಿತಿಗೆ ತಲುಪಿದ್ದಾರೆ.

ಗಾಂಜಾ ಮಾರಾಟ ಮಾಡುತ್ತಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಬಂಧನ ಗಾಂಜಾ ಮಾರಾಟ ಮಾಡುತ್ತಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಬಂಧನ

ಹೆಚ್ಚಾಗಿ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ, ಹೊರವಲಯದಲ್ಲಿ, ರಿಂಗ್‌ರಸ್ತೆಯ ಬದಿಯಲ್ಲಿ ಗಾಂಜಾ ಸೇವನೆ ನಡೆಯುತ್ತಿದೆ ಎಂದು ಕೊಂಡರೆ ಅದು ತಪ್ಪಾಗುತ್ತದೆ. ಇದಕ್ಕಿಂತಲೂ ಮುಖ್ಯವಾಗಿ ನಗರದ ಹೃದಯ ಭಾಗಗಳಲ್ಲಿ, ಜನವಸತಿ ಇರುವ ಪ್ರದೇಶಗಳಲ್ಲಿ ಯಾರಿಗೂ ತಿಳಿಯದ ಹಾಗೆ ಗಾಂಜಾ ಸೇವನೆ ನಡೆಯುತ್ತಿದೆ.

Drugs maphia is getting increase at Mysuru district

ಇವರಿಗೆ ಗಾಂಜಾ ಅತ್ಯಂತ ಸುಲಭವಾಗಿಯೇ ಸಿಗುತ್ತಿದೆ. ಕೆಲವೊಂದು ಆಯಕಟ್ಟಿನ ಜಾಗದಲ್ಲಿ ಸಣ್ಣ ಸಣ್ಣ ಪೊಟ್ಟಣಗಳಲ್ಲಿ ಗಾಂಜಾ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾರೆ. ಇವು ಕನಿಷ್ಠ ಎಂದರೂ 50ರೂ ರಿಂದ ಆರಂಭವಾಗುತ್ತವೆ. ಗಾಂಜಾ ಪೂರೈಕೆ ಹೇಗೆ?: ಇಲ್ಲಿರುವ ಗಾಂಜಾ ಮಾರಾಟಗಾರರನ್ನು ಪತ್ತೆ ಹಚ್ಚಿರುವ ಪೊಲೀಸರಿಗೆ ಗಾಂಜಾ ಎಲ್ಲಿಂದ ಪೂರೈಕೆಯಾಗುತ್ತಿದೆ ಎಂಬುದು ಯಕ್ಷಪ್ರಶ್ನೆ ಎನಿಸಿದೆ.

ಮಲೆನಾಡಿನಲ್ಲೂ ಗಾಂಜಾ ವಾಸನೆ: ಸಾರ್ವಜನಿಕರಲ್ಲಿ ಆತಂಕ ಮಲೆನಾಡಿನಲ್ಲೂ ಗಾಂಜಾ ವಾಸನೆ: ಸಾರ್ವಜನಿಕರಲ್ಲಿ ಆತಂಕ

ಖಾಟ್' ನಂತರ ದುಬಾರಿ ಮಾದಕವಸ್ತುಗಳು ವಿದೇಶಗಳಿಂದ ಪಾರ್ಸಲ್ ಮೂಲಕವೇ ಸುಲಭವಾಗಿ ನಗರ ಪ್ರವೇಶಿಸುತ್ತಿರುವ ವಿಷಯ ಪತ್ತೆಯಾಗಿದೆ. ಆದರೆ, ಗಾಂಜಾ ಎಲ್ಲಿಂದ ಬರುತ್ತಿದೆ ಎಂಬ ಮಾಹಿತಿ ಯಾರಲ್ಲೂ ಇಲ್ಲ. ಸದ್ಯ ಸಿಕ್ಕಿಹಾಕಿಕೊಂಡಿರುವ ಆರೋಪಿಗಳೆಲ್ಲ ಯಾರೋ ಒಂದಿಷ್ಟು ಮಂದಿ ತಂದು ಕೊಡುತ್ತಿದ್ದ ಗಾಂಜಾವನ್ನು ಮಾರಾಟ ಮಾಡುತ್ತಿದ್ದುದಾಗಿ ಹೇಳಿದ್ದಾರೆ.

ಆದರೆ, ಆ ವ್ಯಕ್ತಿಗಳು ಯಾರು ಎಂಬುದು ಅವರಿಗೆ ಗೊತ್ತಿಲ್ಲ. ಮಾದಕವಸ್ತು ಜಾಲ ವ್ಯವಸ್ಥಿತ ರೀತಿಯಲ್ಲಿ ನಗರದಲ್ಲಿ ಕಾರ್ಯಾಚರಿಸುತ್ತಿದೆ.ಕೇರಳದಿಂದ ಪೂರೈಕೆಯಾಗುತ್ತಿದೆ ಎಂಬ ವಾದವೊಂದಿದೆ.

ದೇವನಹಳ್ಳಿ ಟೋಲ್ ಗೇಟ್ ಬಳಿ ಸಿಕ್ತು ಬರೋಬ್ಬರಿ 233 ಕೆಜಿ ಗಾಂಜಾ ದೇವನಹಳ್ಳಿ ಟೋಲ್ ಗೇಟ್ ಬಳಿ ಸಿಕ್ತು ಬರೋಬ್ಬರಿ 233 ಕೆಜಿ ಗಾಂಜಾ

ಹುಣಸೂರು, ಪಿರಿಯಾಪಟ್ಟಣ ಹಾಗೂ ಚಾಮರಾಜನಗರದ ಹನೂರು ತಾಲ್ಲೂಕಿನಲ್ಲಿ ಹೆಚ್ಚು ಗಾಂಜಾ ಸೊಪ್ಪನ್ನು ಬೆಳೆಯಲಾಗುತ್ತಿದೆ. ಶುಂಠಿ ಬೇಸಾಯಕ್ಕೆ ಎಂದು ಕೇರಳದಿಂದ ಬಂದ ಕೆಲವರು ಇಲ್ಲಿ ಭೂಮಿಯನ್ನು ಗುತ್ತಿಗೆಗೆ ಪಡೆದು ಯಾರೂ ಒಳಬಾರದಂತೆ ತಂತಿಬೇಲಿ ಹಾಕಿ, ಒಳಗೆ ಗಾಂಜಾ ಬೆಳೆಯುತ್ತಾರೆ ಎಂಬ ಮಾತೂ ಇದೆ.

English summary
Drugs maphia is getting wide at Mysuru district. Mysuru police had arrested 15 people on this case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X