ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೇವನಹಳ್ಳಿ ಟೋಲ್ ಗೇಟ್ ಬಳಿ ಸಿಕ್ತು ಬರೋಬ್ಬರಿ 233 ಕೆಜಿ ಗಾಂಜಾ

|
Google Oneindia Kannada News

ಬೆಂಗಳೂರು, ನವೆಂಬರ್ 16: ಮಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದ 233 ಕೆಜಿ ಗಾಂಜಾವನ್ನು ಕೇಂದ್ರ ಮಾದಕದ್ರವ್ಯ ನಿಯಂತ್ರಣ ದಳ ಅಧಿಕಾರಿಗಳು ಜಪ್ತಿ ಮಾಡಿ ಮೂವರನ್ನು ವಶಕ್ಕೆ ಪಡೆದಿದ್ದಾರೆ.

ಹನೂರಲ್ಲಿ ಅರಿಶಿನದ ನಡುವೆ ಗಾಂಜಾ ಬೆಳೆದ ಆರೋಪಿಗಳ ಬಂಧನ ಹನೂರಲ್ಲಿ ಅರಿಶಿನದ ನಡುವೆ ಗಾಂಜಾ ಬೆಳೆದ ಆರೋಪಿಗಳ ಬಂಧನ

ಮಾದಕವಸ್ತು ಮಾರಾಟ ದಂಧೆಯ ಕಿಂಗ್ ಪಿನ್ ಆಂಧ್ರಪ್ರದೇಶ ಮೂಲದ ಅನುಮುಲು ಪ್ರಸಾದ್ ಅಲಿಯಾಸ್ ಗುರು, ಈತನ ಸಹಚರರಾದ ಎಸ್ ರಾಮಕೃಷ್ಣ ಹಾಗೂ ಕೆ ರಾಜೇಶ್ ಬಂಧಿತರು, ಆರೋಪಿಗಳು ನವೆಂಬರ್ 13ರಂದು ಆಂಧ್ರಪ್ರದೇಶ ನೋಂದಣಿ ಸಂಖ್ಯೆಯ ಸ್ವಿಫ್ಟ್ ಡಿಸೈರ್ ಕಾರಿನ ಡಿಕ್ಕಿಯಲ್ಲಿಟ್ಟು ಗಾಂಜಾ ತುಂಬಿಕೊಂಡು ವಿಶಾಖಪಟ್ಟಣದಿಂದ ಮಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದರು.

ಮಲೆಮಹದೇಶ್ವರ ನೆಲೆ ನಿಂತ ಊರಿನಲ್ಲಿ ಹೆಚ್ಚುತ್ತಲೇ ಇದೆ ಗಾಂಜಾ ಮಾರಾಟ! ಮಲೆಮಹದೇಶ್ವರ ನೆಲೆ ನಿಂತ ಊರಿನಲ್ಲಿ ಹೆಚ್ಚುತ್ತಲೇ ಇದೆ ಗಾಂಜಾ ಮಾರಾಟ!

ಆದರೆ, ತೆಲಂಗಾಣದಲ್ಲಿ ಚುನಾವಣೆ ಹಿನ್ನೆಲೆಯಲ್ಲಿ ವ್ಯಾಪಕ ಬಂದೋಬಸ್ತ್ ಜೊತೆಗೆ ಚೆಕ್ ಪೋಸ್ಟ್ ಗಳಲ್ಲಿ ತಪಾಸಣೆ ಇದ್ದ ಕಾರಣ ತಮ್ಮ ಎಂದಿನ ಮಾರ್ಗ ಬದಲಿಸಿ ಬೆಂಗಳೂರು ಮೂಲಕ ಮಹಾರಾಷ್ಟ್ರ ಹೊರಟಿದ್ದರು.

Police seized 233 kg ganja near Devanahalli toll gate

ದೇವನಹಳ್ಳಿ ಟೋಲ್ ಬಳಿ ಕಾರು ಬರುತ್ತಿರುವ ಮಾಹಿತಿ ಆಧರಿಸಿ ತಡೆದು ತಪಾಸಣೆ ನಡೆಸಿದಾಗ ಗಾಂಜಾ ಸಿಕ್ಕಿದೆ. ಆರೋಪಿಗಳು 110 ಪ್ಯಾಕೆಟ್ ನಲ್ಲಿ 223 ಕೆಜಿ ಗಾಂಜಾ ಸಾಗಣೆ ಮಾಡುತ್ತಿದ್ದರು ಎಂದು ಎನ್‌ಸಿಬಿ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಮುಖ ಆರೋಪಿ ಪ್ರಸಾದ್ ಆಂಧ್ರ, ತಮಿಳುನಾಡು, ತೆಲಂಗಾಣ, ಕರ್ನಾಟಕ, ಮಹಾರಾಷ್ಟ್ರ ಸೇರಿದತೆ ಹಲವೆಡೆ ದೊಡ್ಡ ನೆಟ್ ವರ್ಕ್ ಹೊಂದಿದ್ದಾನೆ.

English summary
Bengaluru police have seized 233 kg ganja in a car near Devanahalli toll gate which was transporting to Maharashtra from Andhra Pradesh on Thursday night.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X