ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು; ಕೋವಿಡ್‌ಗೆ ತಂದೆ ಬಲಿ, ಶವ ಬೇಡವೆಂದ ಮಗ!

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಮೇ 23; ಕೋವಿಡ್‌ನಿಂದ ಮೃತಪಟ್ಟ ವ್ಯಕ್ತಿಯ ಶವವನ್ನು ಪಡೆಯಲು ಮಗ ನಿರಾಕರಿಸಿದ ಘಟನೆ ನಡೆದಿದೆ. ಆದರೆ ತಂದೆಯ ಮನೆಯಲ್ಲಿ ಸಿಕ್ಕ ಸುಮಾರು 6 ಲಕ್ಷ ಹಣ, ಮೊಬೈಲ್ ಇತರೆ ವಸ್ತುಗಳನ್ನು ತಲುಪಿಸಿ ಎಂದು ಹೇಳಿದ್ದಾನೆ.

ಹೆಬ್ಬಾಳ ಸಮೀಪದ ಸೂರ್ಯ ಬೇಕರಿ ಬಳಿಯ ವ್ಯಕ್ತಿಯೊಬ್ಬರು ಕೊರೊನಾಗೆ ಬಲಿಯಾಗಿದ್ದರು. ಈ ಬಗ್ಗೆ ಸ್ಥಳೀಯ ನಗರ ಪಾಲಿಕೆ ಸದಸ್ಯ ಕೆ. ವಿ. ಶ್ರೀಧರ್ ಮೃತ ವ್ಯಕ್ತಿಯ ಮಗನಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ.

ಕೋಲಾರ; ಶವ ಸಾಗಣೆಗೆ ಅಂಬ್ಯುಲೆನ್ಸ್ ಮಾಲೀಕರ ಗಲಾಟೆಕೋಲಾರ; ಶವ ಸಾಗಣೆಗೆ ಅಂಬ್ಯುಲೆನ್ಸ್ ಮಾಲೀಕರ ಗಲಾಟೆ

ಆದರೆ ಕೊರೊನಾ ಸೋಂಕಿಗೆ ತಂದೆ ಬಲಿಯಾದ ತಂದೆಯ ಮೃತ ದೇಹ ಪಡೆಯಲು ಮಗ ನಿರಾಕರಿಸಿದ್ದಾರೆ. ನೀವೇ ಅಂತ್ಯಕ್ರಿಯೆ ಮಾಡಿ ಮುಗಿಸಿ ಎಂದು ತಮಗೆ ಫೋನ್ ಮಾಡಿದ ಪಾಲಿಕೆ ಸದಸ್ಯರಿಗೆ ತಿಳಿಸಿದ್ದಾರೆ.

ಶಿವಮೊಗ್ಗ; ಕೋವಿಡ್ ಸೋಂಕಿತರ ಶವ ಅದಲು ಬದಲು ಶಿವಮೊಗ್ಗ; ಕೋವಿಡ್ ಸೋಂಕಿತರ ಶವ ಅದಲು ಬದಲು

Covid-19 Patients Son Refuses To Take Father Dead Body

ಫೋನ್ ಮಾಡಿದಾಗ ಮನೆಯಲ್ಲಿ ಹಣ, ಎಟಿಎಂ ಕಾರ್ಡ್, 3 ಮೊಬೈಲ್ ಇರುವ ವಿಚಾರವನ್ನು ಮಗನಿಗೆ ತಿಳಿಸಲಾಗಿದೆ. ಹಣ ತಂದು ಕೊಡಿ. ಆದರೆ ಶವ ತೆಗೆದುಕೊಳ್ಳುವುದಿಲ್ಲ ಎಂದು ಮಗ ಹೇಳಿದ್ದಾನೆ.

ಆನೇಕಲ್ ಆಸ್ಪತ್ರೆ ಎಡವಟ್ಟು; ಕೋವಿಡ್ ಸೋಂಕಿತರ ಶವ ಅದಲು ಬದಲು ಆನೇಕಲ್ ಆಸ್ಪತ್ರೆ ಎಡವಟ್ಟು; ಕೋವಿಡ್ ಸೋಂಕಿತರ ಶವ ಅದಲು ಬದಲು

ತಂದೆಯ ಶವ ಬೇಡ ಆದರೆ ಅವರು ದುಡಿದ ಹಣ ಬೇಕು ಎನ್ನುವ ಮೂಲಕ ಜನ್ಮನೀಡಿದ ತಂದೆಯ ಶವ ಪಡೆಯಲು ಹಿಂದೇಟು ಹಾಕಿದ ಮಗನ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜನ್ಮ ನೀಡಿದ ಮಗ, ಬಂಧು, ಬಳಗವಿದ್ದರೂ ಕೊರೊನಾ ಸೋಂಕಿತ ವ್ಯಕ್ತಿ ಅನಾಥ ಶವವಾಗಿ ಇಹಲೋಕ ತ್ಯಜಿಸಿದ್ದಾನೆ. ಶವ ಸಂಸ್ಕಾರವನ್ನು ಮಾಡಿ ಮುಗಿಸಲಾಗಿದೆ.

English summary
Son refused to take the body of his father for the last rites in Mysuru. Man found dead in house due to Covid 19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X