• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೈಸೂರಿನಲ್ಲಿ ಒಟ್ಟು 12 ಮಂದಿಗೆ ಕೊರೊನಾ: ಸಚಿವ ಸೋಮಣ್ಣ

By ಮೈಸೂರು ಪ್ರತಿನಿಧಿ
|

ಮೈಸೂರು, ಮಾರ್ಚ್ 30: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ 12 ಜನರಿಗೆ ಕೊರೊನಾ ಸೋಂಕು ಪತ್ತೆಯಾಗಿದೆ ಎಂದು ವಸತಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದೇಶ-ವಿದೇಶಗಳಲ್ಲಿ ಗಂಭೀರವಾಗಿರುವ ಕೊರೊನಾ ಸೋಂಕು ಮೈಸೂರಿಗೂ ಆವರಿಸಿದೆ. ಜಿಲ್ಲಾಡಳಿತ ಕೊರೊನಾ ಹರಡದಂತೆ ತಡೆಗಟ್ಟಲು ಮುಂದಾಗಿದ್ದಾರೆ. ಜ್ಯುಬಿಲಿಯಂಟ್ ಕಾರ್ಖಾನೆಯ 1443 ಜನರಿದ್ದಾರೆ. 821 ಜನ ಹೋಮ್ ಕ್ವಾರಂಟೈನ್ ಮುಗಿಸಿದ್ದಾರೆ ಎಂದು ತಿಳಿಸಿದರು.

ಲಾಕ್ ಡೌನ್; ಮೈಸೂರಿನಲ್ಲಿ ನಿರ್ಗತಿಕರ ನೆರವಿಗೆ ನಿಂತ ಜಿಲ್ಲಾಡಳಿತಲಾಕ್ ಡೌನ್; ಮೈಸೂರಿನಲ್ಲಿ ನಿರ್ಗತಿಕರ ನೆರವಿಗೆ ನಿಂತ ಜಿಲ್ಲಾಡಳಿತ

ಮೈಸೂರು ಜಿಲ್ಲೆಯಲ್ಲಿ 12 ಜನರಿಗೆ ಕೊರೊನಾ ಸೋಂಕು ತಗುಲಿದ್ದು, 6 ಜನ ಸೋಂಕಿತ ವ್ಯಕ್ತಿಗಳು ಜಿಲ್ಲಾ ಆಸ್ಪತ್ರೆಯಲ್ಲಿದ್ದಾರೆ. ಸಂಜೆ ವೇಳೆಗೆ ಇತರ ಪಾಸಿಟಿವ್ ವ್ಯಕ್ತಿಗಳನ್ನ ಜಿಲ್ಲಾಸ್ಪತ್ರೆಗೆ ಶಿಫ್ಟ್ ಮಾಡಲಿದ್ದೇವೆ ಎಂದರು.

ಹೋಂ ಕ್ವಾರಂಟೈನ್ ಮನೆಗಳಿಗೆ ಅಗತ್ಯ ಸೌಲಭ್ಯ

ಹೋಂ ಕ್ವಾರಂಟೈನ್ ಮನೆಗಳಿಗೆ ಅಗತ್ಯ ಸೌಲಭ್ಯ

ಕೊರೊನಾ ಸೋಂಕು ಹೆಚ್ಚಾಗುವ ಸಾಧ್ಯತೆ ಹಿನ್ನಲೆಯಲ್ಲಿ ನಂಜನಗೂಡಿನ ಸಂಚಾರಕ್ಕೆ ನಿರ್ಬಂಧ ಏರಲಾಗಿದೆ. ನಂಜನಗೂಡಿನಲ್ಲಿ 753 ಜನ ಹೋಂ ಕ್ವಾರೆಂಟೈನ್ ಲ್ಲಿ ಇದ್ದಾರೆ. 10 ಮನೆಗೆ ಒಬ್ಬ ಪೋಲಿಸ್ ನೇಮಕ ಮಾಡಿದ್ದೇವೆ. ಅವರ ಮನೆಗೆ ಅಗತ್ಯ ವಸ್ತು ನೀಡುವಂತೆ ಸೂಚನೆ ನೀಡಿದ್ದೇವೆ ಎಂದು ಹೇಳಿದರು.

ಅಂಗನವಾಡಿ ಕಾರ್ಯಕರ್ತರು ಕಾರ್ಯನಿರ್ವಹಿಸಲು ಡಿಸಿ ಸೂಚಿಸಿದ್ದಾರೆ. ಮಾಸ್ಕ್ ತೊಂದರೆ ಇತ್ತು. ನಾಳೆಯಿಂದ ಎಲ್ಲಾ ಸಿಗಲಿದೆ. 18 ವೆಂಟಿಲೇಟರ್ಸ್ ಇದೆ. ಅವಶ್ಯಕತೆ ಇದ್ದರೆ ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡಲಿದ್ದೇವೆ ಎಂದು ಮಾಹಿತಿ ನೀಡಿದರು.

ವಲಸೆ ಬಂದವರಿಗೆ ಊಟದ ವ್ಯವಸ್ಥೆ

ವಲಸೆ ಬಂದವರಿಗೆ ಊಟದ ವ್ಯವಸ್ಥೆ

ಹೋಂ ಕ್ವಾರಂಟೈನ್ ಲ್ಲಿ ಇರುವವರಿಗೆ ಮಾನವೀಯತೆಯಿಂದ ಹೇಳಿದ್ದೇವೆ. ನಿಯಮ ಉಲ್ಲಂಘಿಸಿದರೆ ಕ್ರಿಮಿನಲ್ ಕೇಸ್ ದಾಖಲು‌ ಮಾಡುತ್ತೇವೆ. ಸಾಮಾಜಿಕ ಅಂತರ ಕಾಪಾಡಲು ಎಲ್ಲಾ ತಾಲ್ಲೂಕು ಶಿಕ್ಷಣಾಧಿಕಾರಿಗಳ ನೇತೃತ್ವದಲ್ಲಿ ಪ್ಲೇಯಿಂಗ್ ಸ್ಕ್ವಾಡ್ ರಚನೆ ಮಾಡಲಾಗಿದೆ ಎಂದರು. ವಲಸೆ ಬಂದವರಿಗೆ, ಹಾಡಿಗಳಲ್ಲಿ ವಾಸ ಮಾಡುವವರಿಗೆ ಊಟದ ವ್ಯವಸ್ಥೆ ಮಾಡಲು ಸರ್ಕಾರ ಆದೇಶಿಸಿದೆ.

ಕೊರೊನಾದಿಂದ ನಂಜನಗೂಡು ಕೈಗಾರಿಕಾ ಪ್ರದೇಶ ಈಗ ರೆಡ್ ಝೋನ್ಕೊರೊನಾದಿಂದ ನಂಜನಗೂಡು ಕೈಗಾರಿಕಾ ಪ್ರದೇಶ ಈಗ ರೆಡ್ ಝೋನ್

ಕೊರೊನಾ ಓಡಿಸಲು ಸರ್ಕಾರ ಸಿದ್ಧವಾಗಿದೆ

ಕೊರೊನಾ ಓಡಿಸಲು ಸರ್ಕಾರ ಸಿದ್ಧವಾಗಿದೆ

ಒಬ್ಬ ವ್ಯಕ್ತಿ ಹಸಿವಿನಿಂದ ಇರಬಾರದು ಅಂತ ಸಿಎಂ ಯಡಿಯೂರಪ್ಪ ಸೂಚಿಸಿದ್ದಾರೆ. ರೇಷನ್ ಕಾರ್ಡ್ ಸಮಸ್ಯೆ ಹೇಳದೆ ಬಿಪಿಎಲ್ ಕುಟುಂಬಗಳಿಗೆ ಆಹಾರ ಪೂರೈಕೆ ಮಾಡುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.

ಜ್ಯುಬಿಲಿಯಂಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದವರಿಗೆ ಶೇ.30 ರಿಂದ ಶೇ.40 ಹಣ ನೀಡುವಂತೆ ಎರಡು ಮೂರು ದಿನಗಳಲ್ಲಿ ಯೋಜನೆ ಮಾಡಲಿದ್ದೇವೆ. ಮಹಾಮಾರಿ ಓಡಿಸೋದಕ್ಕೆ ಸರ್ಕಾರ ಮುಂದಾಗಿದೆ.

ಮೈಸೂರು ಜಿಲ್ಲಾ ಪ್ರತಿನಿಧಿಗಳು ಭಾಗಿ

ಮೈಸೂರು ಜಿಲ್ಲಾ ಪ್ರತಿನಿಧಿಗಳು ಭಾಗಿ

ಮೈಸೂರು ಜಿಲ್ಲಾಡಳಿತ ಸಮರ್ಪಕವಾಗಿ ಕೆಲಸ ಮಾಡುತ್ತಿದೆ. ಜ್ಯುಬಿಲಿಯಂಟ್ ಕಂಪನಿಯ 10 ಜನರಿಗೆ ಸೋಂಕು ತಗುಲಿದೆ ಎಂದು ಸಚಿವ ವಿ.ಸೋಮಣ್ಣ ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಶಾಸಕರಾದ ಜಿ.ಟಿ ದೇವೇಗೌಡ, ಎಸ್.ಎ ರಾಮದಾಸ್, ಡಾ.ಯತೀಂದ್ರ ಸಿದ್ದರಾಮಯ್ಯ, ಕೆ.ಮಹದೇವ, ಸಂಸದ ಪ್ರತಾಪ್ ಸಿಂಹ, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ನಗರ ಪಾಲಿಕೆ ಆಯುಕ್ತ ಗುರುದತ್ ಹೆಗಡೆ, ಮುಡಾ ಆಯುಕ್ತ ಕಾಂತರಾಜ್ ಮತ್ತಿತರರು ಉಪಸ್ಥಿತರಿದ್ದರು.

English summary
Minister V Somanna informed that 12 people Has been detected with coronavirus in Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X