ಲಾಕ್ ಡೌನ್; ಮೈಸೂರಿನಲ್ಲಿ ನಿರ್ಗತಿಕರ ನೆರವಿಗೆ ನಿಂತ ಜಿಲ್ಲಾಡಳಿತ
ಮೈಸೂರು, ಮಾರ್ಚ್ 28: ಕೊರೊನಾ ವೈರಸ್ ನಿಂದಾಗಿ ದೇಶದಾದ್ಯಂತ ಲಾಕ್ ಡೌನ್ ವಿಧಿಸಲಾಗಿದ್ದು, ಇದರಿಂದಾಗಿ ಎಷ್ಟೊ ಮಂದಿ ನಿರ್ಗತಿಕರು ಅನ್ನ, ನೀರಿಲ್ಲದೇ ಪರದಾಡುತ್ತಿದ್ದಾರೆ.
ಇದೀಗ ಅಂಥವರನ್ನು ಗುರುತಿಸಿ ಮೈಸೂರು ಜಿಲ್ಲಾಡಳಿತವು ಯೂತ್ ಹಾಸ್ಟೆಲ್ ನಲ್ಲಿ ಸೌಕರ್ಯ ಕಲ್ಪಿಸಿದೆ. ಅವರಿಗೆ ಇಂದು ಫ್ಯಾಷನ್ ಅಡ್ಡದ ಕೃಷ್ಣ ಅವರು ಕ್ಷೌರ ಮಾಡುವ ಕೆಲಸಕ್ಕೆ ಮುಂದಾದರು. ಹಾಸ್ಟೆಲ್ ನಲ್ಲಿದ್ದ ಐವತ್ತಕ್ಕೂ ಹೆಚ್ಚು ನಿರ್ಗತಿಕರಿಗೆ ಕ್ಷೌರವನ್ನು ಮಾಡಲಾಯಿತು. ಇವರಿಗೆ ಕ್ಷೌರ ಮಾಡುವಲ್ಲಿ ಪೌರಕಾರ್ಮಿಕರೂ ನೆರವಾಗಿದ್ದು ವಿಶೇಷವಾಗಿತ್ತು.

ನಗರ ಸ್ವಚ್ಛ ಮಾಡುವುದಲ್ಲದೇ ನಿರ್ಗತಿಕರನ್ನು ಸ್ವಚ್ಛ ಮಾಡಲು ಮುಂದಾದ ಪೌರಕಾರ್ಮಿಕರ ಸೇವೆಗೆ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು. ಸುಮಾರು 60ಕ್ಕೂ ಹೆಚ್ಚು ನಿರ್ಗತಿಕರಿಗೆ ಮೈಸೂರು ಜಿಲ್ಲಾಡಳಿತವು ಸೌಕರ್ಯ ಕಲ್ಪಿಸಿದೆ. ಇಂದು ಅವರಿಗೆಲ್ಲ ಅಗತ್ಯ ವಸ್ತುಗಳನ್ನು ಪೂರೈಸಲಾಯಿತು. ವಸ್ತ್ರಗಳನ್ನು ಮತ್ತು ಊಟವನ್ನು ವಿತರಿಸಲಾಯಿತು.












Click it and Unblock the Notifications