ಹಳೆಯ ಬೆಡ್‌ಶೀಟ್‌ಗಳನ್ನು ವೇಸ್ಟ್‌ ಎಂದು ಎಸೆಯುವ ಬದಲು ಹೀಗೆ ಮಾಡಿ : ಮತ್ತೆ ಮತ್ತೆ ಬಳಸಬಹುದು

ಬಹಳ ಕಾಲದವರೆಗೆ ಬಳಕೆಯಾದ ಮೇಲೆ ಬೆಡ್‌ಶೀಟ್‌ಗಳ ಬಣ್ಣ ಮಸುಕಾಗುತ್ತದೆ. ಕಲರ್‌ ಹೋದ ಮೇಲೆ ಇವುಗಳನ್ನು ಬಳಸಿದರೆ ಬೆಡ್‌ ರೂಮಿನ ಅಂದ ಕೆಡುತ್ತದೆ ಎನ್ನುವ ಕಾರಣಕ್ಕೆ ನಂತರ ಅದು ಸ್ಟೋರೇಜ್‌ ಕ್ಯಾಬಿನ್‌ ಸೇರಿಕೊಳ್ಳುತ್ತದೆ. ಇದರ ಬದಲು ಹಳೆಯ ಕಲರ್‌ ಹೋದ ಬೆಡ್‌ಶೀಟ್‌ಗಳು ಮತ್ತೆ ಮತ್ತೆ ಉಪಯೋಗಕ್ಕೆ ಬರುವಂತೆ ಮಾಡಬಹುದು. ಹೌದು, ಈ ಬೆಡ್‌ಶೀಟ್‌ಗಳನ್ನು ಖಂಡಿತವಾಗಿಯೂ ಮರುಬಳಕೆ ಮಾಡಬಹುದು. ಮನೆಯ ಅನೇಕ ಕೆಲಸಗಳಲ್ಲಿ ಬಳಸಿಕೊಳ್ಳಬಹುದು. ಇದು ಹಣ ಉಳಿತಾಯದ ಜೊತೆಗೆ ಹೆಚ್ಚು ಪರಿಸರ ಸ್ನೇಹಿ ಜೀವನಶೈಲಿಯನ್ನು ನಡೆಸಲು ಸಹಾಯ ಮಾಡುತ್ತದೆ.

ಸ್ವಚ್ಛಗೊಳಿಸುವ ಬಟ್ಟೆಗಳಾಗಿ ಬಳಸಿ:

ಬೆಡ್ ಶೀಟ್‌ಗಳನ್ನು ಮರುಬಳಕೆ ಮಾಡಲು ಬಹುಶಃ ಸುಲಭವಾದ ಮಾರ್ಗವೆಂದರೆ ಅವುಗಳನ್ನು ಶುಚಿಗೊಳಿಸುವ ಬಟ್ಟೆಗಳನ್ನಾಗಿ ಪರಿವರ್ತಿಸುವುದು. ಮೃದುವಾದ ವಸ್ತುವಿನಿಂದ ತಯಾರಿಸಲ್ಪಟ್ಟ ಈ ಶೀಟ್‌ಗಳು ಧೂಳು ಒರೆಸಲು, ಅಡುಗೆ ಮನೆಯ ಕೈ ಹಿಡಿ ಬಟ್ಟೆಗಳಾಗಿ, ಕಿಟಕಿ ಕ್ಲೀನರ್‌ಗಳಾಗಿ ಉಪಯೋಗಕ್ಕೆ ಬರುತ್ತವೆ. ಹಳೆಯ ಬೆಡ್‌ಶೀಟ್‌ಗಳನ್ನು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿ ತೆಗೆದಿಟ್ಟರೆ ನಿಮಗೆ ಬೇಕಾದಾಗ ತೆಗೆದು ಕ್ಲೀನಿಂಗ್‌ ಕೆಲಸಕ್ಕೆ ಬಳಸಬಹುದು.

Old Bedsheet Reuse Ideas

ಪೀಠೋಪಕರಣಗಳ ಮೇಲೆ ಹಾಸಲು:

ಬೆಡ್‌ಶೀಟ್‌ಗಳ ಮರುಬಳಕೆಗೆ ಮತ್ತೊಂದು ಉತ್ತಮ ಆಯ್ಕೆಯೆಂದರೆ ಮನೆಯ ಪೀಠೋಪಕರಣಗಳಿಗೆ ರಕ್ಷಣಾತ್ಮಕ ಕವರ್‌ಗಳಾಗಿ ಬಳಸುವುದು. ಹಳೆಯ ಬೆಡ್‌ಶೀಟ್‌ಗಳು ಅವುಗಳ ಗಾತ್ರ ಮತ್ತು ಬಾಳಿಕೆಯಿಂದಾಗಿ ಈ ಕೆಲಸಕ್ಕೆ ಹೆಚ್ಚು ಸೂಕ್ತವಾಗಿವೆ. ನವೀಕರಣ ಅಥವಾ ಶುಚಿಗೊಳಿಸುವ ಕೆಲಸ ನಡೆಯುತ್ತಿರುವಾಗ ಪೀಠೋಪಕರಣಗಳ ಮೇಲೆ ಧೂಳು ಬೀಳದಂತೆ ತಡೆಯಲು ಈ ಹಳೆಯ ಬೆಡ್‌ಶೀಟ್‌ಗಳನ್ನು ಬಳಸಬಹುದು. ಇವು ಪೀಠೋಪಕರಣಗಳನ್ನು ರಕ್ಷಿಸಲು ಹೆಚ್ಚು ಸೂಕ್ತವಾಗಿವೆ.

ಹೆಚ್ಚು ಶ್ರಮ ಪಡಬೇಕಿಲ್ಲ, ಈ ರೀತಿ ಮಾಡಿದರೆ ನಿಮಿಷಗಳಲ್ಲಿ ಕ್ಲೀನ್‌ ಆಗುವುದು ಸೀಲಿಂಗ್‌ ಫ್ಯಾನ್‌
ಹೆಚ್ಚು ಶ್ರಮ ಪಡಬೇಕಿಲ್ಲ, ಈ ರೀತಿ ಮಾಡಿದರೆ ನಿಮಿಷಗಳಲ್ಲಿ ಕ್ಲೀನ್‌ ಆಗುವುದು ಸೀಲಿಂಗ್‌ ಫ್ಯಾನ್‌

ತೋಟದ ಗಿಡಗಳಿಗೆ ಸಹಾಯಕ:

ಹಳೆಯ ಬೆಡ್‌ಶೀಟ್‌ಗಳನ್ನು ತೋಟದಲ್ಲಿಯೂ ಬಳಸಬಹುದು. ಈ ಬೆಡ್‌ಶೀಟ್‌ಗಳು ಪರಿಪೂರ್ಣ ಸಸ್ಯ ಹೊದಿಕೆಗಳನ್ನು ರೂಪಿಸುತ್ತವೆ. ಚಳಿಗಾಲದ ತಿಂಗಳುಗಳಲ್ಲಿ ಚಳಿಗಾಳಿ ಅಥವಾ ಹಿಮದಿಂದ ಗಿಡಗಳನ್ನು ರಕ್ಷಿಸಿದರೆ ಬೇಸಿಗೆಯಲ್ಲಿ ಸೂರ್ಯನ ಕಡು ಬಿಸಿಲಿಗೆ ನೆರಳಾಗುತ್ತದೆ. ಇದಲ್ಲದೆ, ತೋಟಗಾರರು ಬೇಸಿಗೆಯಲ್ಲಿ ತರಕಾರಿಗಳು ಮತ್ತು ಹಣ್ಣುಗಳನ್ನು ಕೊಯ್ಲು ಮಾಡುವಾಗ ತಮ್ಮ ಸಸ್ಯಗಳನ್ನು ಮುಚ್ಚಲು ಮತ್ತು ಉತ್ಪನ್ನಗಳನ್ನು ಸ್ವಚ್ಛವಾಗಿಡಲು ಕೂಡಾ ಈ ಬೆಡ್‌ಶೀಟ್‌ಗಳನ್ನು ಬಳಸಬಹುದು.

ಮರುಬಳಕೆ ಮಾಡಬಹುದಾದ ಚೀಲಗಳಾಗಿ:

ಇನ್ನೊಂದು ಪ್ರಾಯೋಗಿಕ ಸಲಹೆಯೆಂದರೆ ಹಳೆಯ ಬೆಡ್ ಶೀಟ್‌ಗಳನ್ನು ಪೌಚ್‌ಗಳು, ಶಾಪಿಂಗ್ ಬ್ಯಾಗ್‌ಗಳು ಮತ್ತು ಟೋಟ್ ಬ್ಯಾಗ್‌ಗಳನ್ನು ತಯಾರಿಸಲು ಬಳಸುವುದು. ಅಂತಹ ಪೌಚ್‌ಗಳನ್ನು ಹೊಲಿಯುವುದು ಕಷ್ಟವೇನಲ್ಲ. ಇದನ್ನು ಯಾರೂ ಬೇಕಾದರೂ ಮನೆಯಲ್ಲಿಯೇ ತಯಾರಿಸಬಹುದು. ಹಾಗೆ ಮಾಡುವುದರಿಂದ, ಜನರು ತಮ್ಮ ತ್ಯಾಜ್ಯ ಉತ್ಪಾದನೆಯ ಮಟ್ಟವನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು. ಪ್ಲಾಸ್ಟಿಕ್ ಚೀಲಗಳ ಬಳಕೆಯನ್ನು ತಪ್ಪಿಸಬಹುದು.

ಈ ಮೂರರಲ್ಲಿ ನೀವು ಆಯ್ಕೆ ಮಾಡುವ ಕನ್ನಡಿಯೇ ಹೇಳುತ್ತದೆ ನಿಮ್ಮ ವ್ಯಕ್ತಿತ್ವ, ಯೋಚನಾ ಲಹರಿ!ಒಮ್ಮೆ ಟ್ರೈ ಮಾಡಿ
ಈ ಮೂರರಲ್ಲಿ ನೀವು ಆಯ್ಕೆ ಮಾಡುವ ಕನ್ನಡಿಯೇ ಹೇಳುತ್ತದೆ ನಿಮ್ಮ ವ್ಯಕ್ತಿತ್ವ, ಯೋಚನಾ ಲಹರಿ!ಒಮ್ಮೆ ಟ್ರೈ ಮಾಡಿ

ಸಾಕುಪ್ರಾಣಿಗಳಿಗೆ ಹಾಸಿಗೆಯನ್ನಾಗಿಸಲು:

ಈ ಬೆಡ್ ಶೀಟ್‌ಗಳನ್ನು ಬಳಸಿ ಸಾಕುಪ್ರಾಣಿಗಳಿಗೆ ಆರಾಮದಾಯಕ ಹಾಸಿಗೆ ಮಾಡಬಹುದು. ಮೃದುವಾದ ಬಟ್ಟೆಗಳಿಂದ ಕೂಡಿದ ಹಾಸಿಗೆಗಳ ಮೇಲೆ ಮಲಗುವುದೆಂದರೆ ಬೆಕ್ಕು ಮತ್ತು ನಾಯಿಗಳಿಗೆ ವಿಶೇಷವಾಗಿ ಆರಾಮದಾಯಕವಾಗಿರುತ್ತವೆ. ಅವುಗಳನ್ನು ಸುಲಭವಾಗಿ ಸ್ವಚ್ಛಗೊಳಿಸಬಹುದು ಅಥವಾ ಬದಲಾಯಿಸಬಹುದು. ಆದ್ದರಿಂದ, ಬೆಡ್ ಶೀಟ್‌ಗಳನ್ನು ಈ ಉದ್ದೇಶಕ್ಕಾಗಿಯೂ ಬಳಸಬಹುದು.

ಹಳೆಯ ಬೆಡ್‌ಶೀಟ್‌ಗಳನ್ನು ಎಸೆಯುವ ಬದಲು, ಅವುಗಳನ್ನು ಸ್ವಚ್ಛಗೊಳಿಸಲು, ಪೀಠೋಪಕರಣಗಳ ರಕ್ಷಣೆಗೆ, ತೋಟಗಾರಿಕೆಗೆ, ಮರುಬಳಕೆ ಮಾಡಬಹುದಾದ ಚೀಲಗಳಿಗೆ ಅಥವಾ ಸಾಕುಪ್ರಾಣಿಗಳ ಹಾಸಿಗೆಗೆ ಮರುಬಳಕೆ ಮಾಡಬಹುದು. ಈ ರೀತಿ ಮಾಡಿದರೆ ತ್ಯಾಜ್ಯವನ್ನು ಕಡಿಮೆ ಮಾಡಬಹುದು. ಇದರಿಂದ ಹಣ ಉಳಿತಾಯವಾಗುವುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+