Ashirwad Sooryavanshi: ಕ್ರಿಕೆಟ್‌ ದಿಗ್ಗಜರ ಗಮನ ಸೆಳೆದ 'ಸೂರ್ಯವಂಶಿ'ಯ ಮತ್ತೊಂದು ಕುಡಿ, ವೈಭವ್ ಸಹೋದರ ಅಮೋಘ ಸಾಧನೆ

Ashirwad Sooryawanshi: ಇಷ್ಟು ದಿನ 15 ವರ್ಷದ ವೈಭವ್ ಸೈರ್ಯವಂಶಿ ತನ್ನ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿಯಿಂದ ಇದೇ ಕ್ರಿಕೆಟ್ ಜಗತ್ತು ತನ್ನ ತಿರುಗಿನೋಡುವಂತೆ ಮಾಡಿದ್ದರು. ಇದೀಗ ಅವರ 13 ವರ್ಷದ ಸಹೋದರ ಕೂಡ ಅವರ ಹಾದಿಯನ್ನೇ ಹಿಡಿದು ದಿಗ್ಗಜರ ಗಮನ ಸೆಳೆದಿದ್ದಾರೆ. ಹಾಗಾದ್ರೆ ಈ ಕುರಿತು ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಭಾರತೀಯ ದೇಶಿ ಕ್ರಿಕೆಟ್‌ನಲ್ಲಿ ಸದ್ಯ ಬಿಹಾರದ ಮೂಲದ ಸೂರ್ಯವಂಶಿ ಸಹೋದರರ ಹೆಸರು ಭಾರಿ ಸದ್ದು ಮಾಡುತ್ತಿದೆ. ಕಳೆದ ಎರಡು ವರ್ಷಗಳಿಂದ 13 ವರ್ಷದ ಬಾಲಕ ವೈಭವ್ ಸೂರ್ಯವಂಶಿ ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್‌ಗಳಲ್ಲಿ ಒಂದಾದ ಐಪಿಎಲ್ ಹರಾಜಿನಲ್ಲಿ ಕೋಟಿ ಮೊತ್ತಕ್ಕೆ ಮಾರಾಟವಾಗಿದ್ದರು. ಅಲ್ಲದೆ, ತನ್ನ ಆಕ್ರಮಣಕಾರಿ ಬ್ಯಾಟಿಂಗ್ ಮೂಲಕವೇ ಹೊಸ ಇತಿಹಾಸವನ್ನೇ ಸೃಷ್ಟಿಸಿದ್ದಾರೆ.

Ashirwad Sooryavanshi Shines Like Brother Vaibhav Scores Stunning Century in Under 14 Cricket

ವೈಭವ್ ಹಾದಿ ಹಿಡಿದ ಸಹೋದರ ಆಶೀರ್ವಾದ್

ಇದೀಗ ವೈಭವ್ ಸೂರ್ಯವಂಶಿ ಕಿರಿಯ ಸಹೋದರ ಆಶೀರ್ವಾದ್ ಸೂರ್ಯವಂಶಿ ಕೂಡ ಬ್ಯಾಟಿಂಗ್‌ನಲ್ಲಿ ಅಬ್ಬರಿಸುವ ಮೂಲಕ ತಾನೂ ಕೂಡ ಅಣ್ಣನ ಹಾದಿಯಲ್ಲೇ ಸಾಗುತ್ತಿರುವುದಾಗಿ ಸಾರಿದ್ದಾನೆ. ಬಿಹಾರದಲ್ಲಿ ನಡೆದ 14 ವರ್ಷದೊಳಗಿನವರ ಪಂದ್ಯಾವಳಿಯಲ್ಲಿ ಆಶೀರ್ವಾದ್ ಭರ್ಜರಿ ಶತಕ ಸಿಡಿಸಿ ಕ್ರಿಕೆಟ್‌ ದಿಗ್ಗಜರ ಗಮನ ಸೆಳೆದಿದ್ದಾನೆ. ಇದೀಗ ಇವರ ಆಟಕ್ಕೆ ಮೆಚ್ಚುಗೆಗಳ ಸುರಿಮಳೆ ಹರಿದುಬರುತ್ತಿದೆ.

ಬೌಲರ್‌ಗಳ ಬೆವರಳಿಸಿ ಶತಕ ಸಿಡಿಸಿದ ಆಶೀರ್ವಾದ್

ಬಿಹಾರ ಕ್ರಿಕೆಟ್ ಅಸೋಸಿಯೇಷನ್ ಆಯೋಜಿಸಿದ್ದ ಅಂಡರ್-14 ಅಂತರ-ಜಿಲ್ಲಾ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಈ ಅದ್ಭುತ ಪ್ರತಿಭೆಯ ಉತ್ತಮ ಪ್ರದರ್ಶನ ಹೊರಬಂದಿದೆ. ಟೂರ್ನಿಯಲ್ಲಿ ಸಮಸ್ತಿಪುರ್ ಜಿಲ್ಲಾ ತಂಡವನ್ನು ಪ್ರತಿನಿಧಿಸುತ್ತಿರುವ ಆಶೀರ್ವಾದ್ ಸೂರ್ಯವಂಶಿ ಅವರು ಬೇಗುಸರಾಯ್ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಕ್ರೀಸ್‌ಗೆ ಇಳಿದಿದ್ದರು. ಎದುರಾಳಿ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ ಆಶೀರ್ವಾದ್ ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಅಟ್ಟಿದರು.

ಕೇವಲ 98 ಎಸೆತಗಳನ್ನು ಎದುರಿಸಿದ ಆಶೀರ್ವಾದ್ 13 ಬೌಂಡರಿ ಹಾಗೂ 2 ಸಿಕ್ಸರ್‌ಗಳ ನೆರವಿನಿಂದ ಭರ್ಜರಿ 108 ರನ್ ಸಿಡಿಸಿದರು. ಅವರ ಈ ಸ್ಫೋಟಕ ಇನಿಂಗ್ಸ್ ನೆರವಿನಿಂದ ಸಮಸ್ತಿಪುರ್ ತಂಡವು ನಿಗದಿತ 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 275 ರನ್‌ಗಳ ಬೃಹತ್ ಮೊತ್ತವನ್ನು ಕಲೆಹಾಕಲು ಸಾಧ್ಯವಾಯಿತು. ಆಶೀರ್ವಾದ್ ಅವರ ಈ ಕ್ಲಾಸಿಕ್ ಬ್ಯಾಟಿಂಗ್ ಶೈಲಿ ಮತ್ತು ರನ್ ಗಳಿಸುವ ವೇಗವನ್ನು ಕಂಡು ಮೈದಾನದಲ್ಲಿದ್ದ ಆಯ್ಕೆಗಾರರು ಹಾಗೂ ಹಿರಿಯ ಕ್ರಿಕೆಟ್ ಪ್ರೇಮಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ವೈಭವ್ ಸೂರ್ಯವಂಶಿ ಸಾಧನೆ

ಆಶೀರ್ವಾದ್ ಅವರ ಹಿರಿಯ ಸಹೋದರ ವೈಭವ್ ಸೂರ್ಯವಂಶಿ ಈಗಾಗಲೇ ಆಕ್ರಮಣಕಾರಿ ಆಟದಿಂದ ಕ್ರಿಕೆಟ್ ಜಗತ್ತಿನಲ್ಲಿ ಸಂಚಲನ ಮೂಡಿಸಿದ್ದಾರೆ. ಕೇವಲ 13 ವರ್ಷ 243 ದಿನಗಳ ಪ್ರಾಯದಲ್ಲೇ ರಾಜಸ್ಥಾನ್ ರಾಯಲ್ಸ್ ತಂಡವು ಇವರನ್ನು 1.10 ಕೋಟಿ ರೂಪಾಯಿ ನೀಡಿ ಹರಾಜಿನಲ್ಲಿ ಖರೀದಿಸಿತ್ತು. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ಹರಾಜಾದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ವೈಭವ್ ಪಾತ್ರರಾಗಿದ್ದರು. ಕೇವಲ ಐಪಿಎಲ್ ಮಾತ್ರವಲ್ಲದೆ ಭಾರತದ ಅಂಡರ್-19 ತಂಡದ ಪರವಾಗಿ ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಕೇವಲ 58 ಎಸೆತಗಳಲ್ಲಿ ಶತಕ ಸಿಡಿಸಿ ವೈಭವ್ ಜಾಗತಿಕ ಮಟ್ಟದಲ್ಲಿ ತಾನೊಬ್ಬ ಅಪ್ರತಿಮ ಪ್ರತಿಭೆ ಎಂಬುದನ್ನು ಸಾಬೀತುಪಡಿಸಿದ್ದರು.

ಸಂಜೀವ್ ಸೂರ್ಯವಂಶಿ ಹೇಳಿದ್ದೇನು?

ಮಕ್ಕಳಿಬ್ಬರ ಬ್ಯಾಟಿಂಗ್ ಪ್ರತಿಭೆ ಮತ್ತು ಸಾಲು ಸಾಲು ಸಾಧನೆಗಳ ಕುರಿತು ಅವರ ತಂದೆ ಸಂಜೀವ್ ಸೂರ್ಯವಂಶಿ ಸಂತೋಷ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 'ದೊಡ್ಡ ಮಗ ವೈಭವ್ ಐಪಿಎಲ್‌ಗೆ ಆಯ್ಕೆಯಾದ ಬೆನ್ನಲ್ಲೇ, ಈಗ ಕಿರಿಯ ಮಗ ಆಶೀರ್ವಾದ್ ಕೂಡ ಸ್ಥಳೀಯ ಟೂರ್ನಿಯಲ್ಲಿ ಶತಕ ಬಾರಿಸಿರುವುದು ನಮಗೆ ಹೆಮ್ಮೆಯ ತಂದಿದೆ. ಇಬ್ಬರೂ ಕ್ರಿಕೆಟ್ ಅನ್ನು ತುಂಬಾ ಪ್ರೀತಿಸುತ್ತಾರೆ ಮತ್ತು ಕಷ್ಟಪಟ್ಟು ದಿನವಿಡೀ ಅಭ್ಯಾಸ ಮಾಡುತ್ತಾರೆ. ಆದರೆ ಇಬ್ಬರ ಆಟದ ಶೈಲಿ ವಿಭಿನ್ನವಾಗಿದೆ. ವೈಭವ್ ಎಡಗೈ ಬ್ಯಾಟರ್ ಆಗಿದ್ದರೆ, ಆಶೀರ್ವಾದ್ ಬಲಗೈ ಬ್ಯಾಟರ್ ಆಗಿದ್ದಾನೆ,' ಎಂದು ಅವರು ತಿಳಿಸಿದ್ದಾರೆ.

ದೊಡ್ಡ ಭರವಸೆ ಮೂಡಿಸಿದ ಸೂರ್ಯವಂಶಿ ಕುಡಿಗಳು

ಬಿಹಾರದ ಸಣ್ಣ ಹಳ್ಳಿಯಿಂದ ಬಂದ ಈ ಸಹೋದರರು ಸದ್ಯ ದೇಶಿ ಕ್ರಿಕೆಟ್‌ನಲ್ಲಿ ಹೊಸ ಭರವಸೆ ಮೂಡಿಸಿದ್ದಾರೆ. ಅಣ್ಣ ವೈಭವ್ ಈಗಾಗಲೇ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದ್ದರೆ. ಕಿರಿಯಣ್ಣ ಆಶೀರ್ವಾದ್ ಕೂಡ ತನ್ನ ಮೊದಲ ಹೆಜ್ಜೆಯಲ್ಲೇ ಭಾರಿ ಭರವಸೆ ಮೂಡಿಸಿದ್ದಾನೆ. ಸೂರ್ಯವಂಶಿ ಕುಟುಂಬದ ಈ ಇಬ್ಬರು ಪ್ರತಿಭಾನ್ವಿತ ಆಟಗಾರರು ಮುಂಬರುವ ದಿನಗಳಲ್ಲಿ ಭಾರತೀಯ ಕ್ರಿಕೆಟ್‌ನ ದೊಡ್ಡ ತಾರೆಗಳಾಗಿ ಬೆಳೆಯುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+