• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊರೊನಾದಿಂದ ನಂಜನಗೂಡು ಕೈಗಾರಿಕಾ ಪ್ರದೇಶ ಈಗ ರೆಡ್ ಝೋನ್

By ಮೈಸೂರು ಪ್ರತಿನಿಧಿ
|

ಮೈಸೂರು, ಮಾರ್ಚ್ 27: ಮೈಸೂರಿನ ನಂಜನಗೂಡಿನ ವ್ಯಕ್ತಿಯೊಬ್ಬರಲ್ಲಿ ಕೊರೊನಾ ಪಾಸಿಟಿವ್ ಇರುವುದು ಪತ್ತೆಯಾದ ಹಿನ್ನೆಲೆಯಲ್ಲಿ ನಂಜನಗೂಡಿನ ಕೈಗಾರಿಕಾ ಪ್ರದೇಶವನ್ನು ರೆಡ್ ಝೋನ್ ವ್ಯಾಪ್ತಿಗೆ ಸೇರಿಸಲಾಗಿದೆ.

ನಿನ್ನೆಯಷ್ಟೆ ನಂಜನಗೂಡಿನ ವ್ಯಕ್ತಿಯೊಬ್ಬರಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಇರುವುದು ದೃಢಪಟ್ಟಿತ್ತು. ಹೀಗಾಗಿ ನಂಜನಗೂಡು ಕೈಗಾರಿಕಾ ಪ್ರದೇಶದಲ್ಲಿರುವ ಜುಬಿಲಿಯೆಟ್ ಕಾರ್ಖಾನೆಯಲ್ಲಿ ತೀವ್ರ ನಿಗಾವಹಿಸಲಾಗಿದ್ದು, ಏಕಕಾಲಕ್ಕೆ ಸಾವಿರ ಮಂದಿಗೆ ಕ್ವಾರೈಂಟೈನ್ ನಲ್ಲಿರುವಂತೆ ಸೂಚಿಸಲಾಗಿದೆ.

ಭಾರೀ ಕುತೂಹಲ ಮೂಡಿಸಿದ್ದ ನಂಜನಗೂಡಿನ ಕೊರೊನಾ ಪ್ರಕರಣ ರಹಸ್ಯ ಬಯಲು

ಪ್ರತಿಯೊಬ್ಬರನ್ನು ವಿಚಾರಿಸಿ ಕೈಗೆ ಕ್ವಾರೈಂಟೈನ್ ಸೀಲ್ ಹಾಕಲಾಗಿದೆ. ಸೋಂಕಿತ ಸಂಪರ್ಕ ಹೊಂದಿದ್ದ 7 ಮಂದಿಯನ್ನು ಈಗಾಗಲೇ ಹೋಂ ಕ್ವಾರಂಟೈನ್ ಮಾಡಲಾಗಿದೆ. ಇದೀಗ ಕಾರ್ಖಾನೆಯ ಎಲ್ಲ ಸಿಬ್ಬಂದಿ ಕೈಗೆ ಸೀಲ್ ಮಾಡಿ ಕ್ವಾರಂಟೈನ್ ಸೂಚನೆ ನೀಡಲಾಗಿದೆ. ನಂಜನಗೂಡು ಪೊಲೀಸರ ಸಹಕಾರದೊಂದಿಗೆ ಆರೋಗ್ಯ ಇಲಾಖೆಯಿಂದ ತಪಾಸಣೆ ಸಹ ಮಾಡಲಾಗಿದೆ.

ಮಾರುಕಟ್ಟೆ ಸ್ಥಳಾಂತರಕ್ಕೆ ನೋ ರೆಸ್ಪಾನ್ಸ್: ಕೊರೊನಾ ಕಾರಣಕ್ಕಾಗಿ ಮೈಸೂರಿನ ಎಂ.ಜಿ. ರಸ್ತೆಯಲ್ಲಿದ್ದ ತರಕಾರಿ ಮಾರುಕಟ್ಟೆಯನ್ನು ಶಿಫ್ಟ್ ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ, ನಗರ ಪಾಲಿಕೆ ನೀಡಿದ್ದ ಎಲ್ಲಾ ಸೂಚನೆಗಳ ಕುರಿತು ಜನರು ಕ್ಯಾರೇ ಎನ್ನುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಎಂ.ಜಿ.ರಸ್ತೆ ಮಾರುಕಟ್ಟೆಯನ್ನು ದಸರಾ ವಸ್ತು ಪ್ರದರ್ಶನ ಮೈದಾನಕ್ಕೆ ಶಿಫ್ಟ್ ಮಾಡಲಾಗಿತ್ತು. ಹೀಗಿದ್ದರೂ, ಸ್ಥಳೀಯ ವ್ಯಾಪಾರಿಗಳು ಜಿಲ್ಲಾಡಳಿತ ನೀಡಿದ ಸೂಚನೆಗಳನ್ನು ಪಾಲಿಸದೆ, ಈ ಹಿಂದೆ ಇದ್ದ ಸ್ಥಳದಲ್ಲೇ ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ.

English summary
One more corona virus positive case has confirmed in nanjanagudu yesterday. So district administration has listed nanjanagudu industrial area as red zone
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X