ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯಾರಾಗಲಿದ್ದಾರೆ ಮಂಗಳೂರಿನ ನೂತನ ಮೇಯರ್?

|
Google Oneindia Kannada News

ಮಂಗಳೂರು, ಮಾರ್ಚ್ 3: ರಾಜ್ಯ ವಿಧಾನಸಭಾ ಚುನಾವಣೆಯ ನಡುವೆ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಸ್ಥಾನಕ್ಕೆ ನಡೆಯಲಿರುವ ಚುನಾವಣೆ ಕುತೂಹಲ ಕೆರಳಿಸಿದೆ.

ಮಾರ್ಚ್ 8ಕ್ಕೆ ಮೇಯರ್ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿದ್ದು ಕಾಂಗ್ರೆಸ್‌ ಹಿಡಿತದಲ್ಲಿರುವ ಪಾಲಿಕೆಯಲ್ಲಿ ಮಹಾಪೌರರ ಪಟ್ಟಕ್ಕೆ ಕೈ ಪಕ್ಷದಲ್ಲಿ ಲಾಬಿ ಜೋರಾಗಿದೆ.

ಬಿಜೆಪಿಯ 'ಮಂಗಳೂರು ಚಲೋ' ಕರಪತ್ರದಲ್ಲಿ ಗೊಂದಲವೋ ಗೊಂದಲಬಿಜೆಪಿಯ 'ಮಂಗಳೂರು ಚಲೋ' ಕರಪತ್ರದಲ್ಲಿ ಗೊಂದಲವೋ ಗೊಂದಲ

ಮಂಗಳೂರು ಮಹಾನಗರ ಪಾಲಿಕೆಯ 60 ಸ್ಥಾನಗಳ ಪೈಕಿ 35 ಸ್ಥಾನಗಳು ಕಾಂಗ್ರೆಸ್ ಕೈಯಲ್ಲಿವೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಅಂತಿಮಗೊಳಿಸುವ ಅಭ್ಯರ್ಥಿ ಮುಂದಿನ ಮೇಯರ್ ಆಗಲಿದ್ದಾರೆ. ಕಾಂಗ್ರೆಸ್ ಅಂತಿಮಗೊಳಿಸುವ ಅಭ್ಯರ್ಥಿ ಯಾರು ಎಂಬುದು ಸದ್ಯದ ಕುತೂಹಲಕ್ಕೆ ಕಾರಣವಾಗಿದೆ.

Mangaluru mayor election on March 8 th

ಈ ಬಾರಿ ಮೇಯರ್ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವುದರಿಂದ ಮುಸ್ಲಿಂ ಕಾರ್ಪೋರೇಟರ್ ಗೆ ಮೇಯರ್ ಹುದ್ದೆ ನೀಡಬೇಕೆಂಬ ಒತ್ತಡ ಹೆಚ್ಚಾಗುತ್ತಿದೆ. ಕಳೆದ ಬಾರಿ ಮೇಯರ್ ಆಯ್ಕೆಯಾದಾಗ ಮುಸ್ಲಿಂ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಿಲ್ಲದೆ ಇರುವುದರಿಂದ ಈ ಬಾರಿ ಮುಸ್ಲಿಂ ಸದಸ್ಯರಿಗೆ ಸಿಗುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗಿದೆ.

ಮನಪಾ ಸದಸ್ಯ, ಮಿಲಾಗ್ರಿಸ್ ವಾರ್ಡ್‌ನ ಅಬ್ದುಲ್ ರವೂಫ್ ಮತ್ತು ಕುಂಜತ್ತಬೈಲ್‌ ವಾರ್ಡ್‌ನ ಮುಹಮ್ಮದ್ ಮೇಯರ್ ಸ್ಥಾನದ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ವಿಧಾನಸಭಾ ಕ್ಷೇತ್ರದ ಸಮಸ್ಯೆಗಳುದಕ್ಷಿಣ ಕನ್ನಡ ಜಿಲ್ಲೆಯ ವಿಧಾನಸಭಾ ಕ್ಷೇತ್ರದ ಸಮಸ್ಯೆಗಳು

ಇದರ ನಡುವೆ ಕಾಂಗ್ರೆಸ್ ನ ಸದಸ್ಯ ಭಾಸ್ಕರ ಮೊಯ್ಲಿಯವರು ಕೂಡ ಮೇಯರ್ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ವೀರಪ್ಪ ಮೊಯ್ಲಿಯವರ ಸಂಬಂಧಿಯಾಗಿರುವ ಭಾಸ್ಕರ ಮೊಯ್ಲಿ ಈ ಹಿಂದೆ ಕೂಡ ಮೇಯರ್ ಸ್ಥಾನಕ್ಕೆ ಆಕಾಂಕ್ಷಿಯಾಗಿದ್ದರು.

ಕೊನೆಯ ಅವಧಿಯಲ್ಲಾದರೂ ಮೇಯರ್ ಸ್ಥಾನಕ್ಕಾಗಿ ಅವರು ಪ್ರಯತ್ನ ಪಡುತ್ತಿದ್ದು ವೀರಪ್ಪ ಮೊಯ್ಲಿಯವರ ಪ್ರಭಾವದಿಂದ ಭಾಸ್ಕರ ಮೊಯ್ಲಿಯವರಿಗೆ ಮೇಯರ್ ಪಟ್ಟ ಸಿಗಲೂಬಹುದು ಎಂಬ ಮಾತು ಕೇಳಿಬರುತ್ತಿದೆ.

ಸಿಎಂ ವಿರುದ್ಧ ಎಫ್ಐಆರ್ ದಾಖಲಿಸಲು ಅನುಮತಿ ಕೋರಿ ರಾಜ್ಯಪಾಲರಿಗೆ ಮನವಿಸಿಎಂ ವಿರುದ್ಧ ಎಫ್ಐಆರ್ ದಾಖಲಿಸಲು ಅನುಮತಿ ಕೋರಿ ರಾಜ್ಯಪಾಲರಿಗೆ ಮನವಿ

English summary
The election to choose a new Mangaluru Mayor and Deputy Mayor will be held on March 8th. The Regional Commissioner, Mysuru, will conduct the election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X