Narendra Modi:ಮಂಗಳೂರು ಕಲಾವಿದನಿಗೆ ಮೋದಿ ಮೆಚ್ಚುಗೆ: ಚಿತ್ರ ಕೇಳಿ ಪಡೆದ ಪ್ರಧಾನಿ
ಮಂಗಳೂರು, ಏಪ್ರಿಲ್ 15: ಲೋಕಸಭಾ ಚುನಾವಣೆ ಹಿನ್ನಲೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಮಂಗಳೂರಿನಲ್ಲಿ ಮೇಗಾ ರೋಡ್ ಶೋ ನಡೆಸಿದ್ದಾರೆ. ಸಾವಿರಾರು ಜನರು ಈ ರೋಡ್ ಶೋನಲ್ಲಿ ಭಾಗಿಯಾಗಿದ್ದರು. ನಗರದೆಲ್ಲೆಡೆ ಮೋದಿ, ಮೋದಿ ಘೋಷಣೆ ಮೊಳಗಿದ್ದು, ಮೋದಿ ಅಭಿಮಾನಿಗಳು ಕಟ್ಟಡ, ಕಾಂಪೌಂಡ್ ಮೇಲೇರಿ ನಿಂತು ಪ್ರಧಾನಿಯತ್ತ ಕೈ ಬೀಸಿದರು.
ಕಿಕ್ಕಿರಿದು ಸೇರಿದ ಅಭಿಮಾನಿಗಳನ್ನು ಕಂಡು ಪ್ರಧಾನಿ ಮೋದಿ ಕೂಡ ಅಭಿಮಾನಿಗಳ ಕೈ ಬೀಸಿದರುಕಮಲದ ಚಿಹ್ನೆ ತೋರಿಸಿ ಬಿಜೆಪಿಗೆ ಮತ ನೀಡುವಂತೆ ಅಭಿಮಾನಿಗಳಿಗೆ ಹಾಗೂ ಕಾರ್ಯಕರ್ತರಿಗೆ ಪ್ರಧಾನಿ ಮೋದಿ ಮನವಿ ಮಾಡಿದರು. ಈ ವೇಳೆ ಯುವ ಕಲಾವಿದರೊಬ್ಬರು ಪ್ರಧಾನಿ ಮೋದಿ ಚಿತ್ರ ಬಿಡಿಸಿ ರೋಡ್ ಶೋ ವೇಳೆ ಪ್ರದರ್ಶಿಸಿದ್ದು, ತಮ್ಮ ಚಿತ್ರವನ್ನು ಪ್ರಧಾನಿ ಮೋದಿ ಕಲಾವಿದರಿಂದ ಕೇಳಿ ಪಡೆದುಕೊಂಡಿದ್ದಾರೆ.

ಮಂಗಳೂರಿನ ತೊಕ್ಕೊಟ್ಟು ನಿವಾಸಿ ಯುವ ಚಿತ್ರ ಕಲಾವಿದ ಕಿರಣ್ ಪ್ರಧಾನ ಮಂತ್ರಿ ನರೇಂದ್ರ ಮೋದಿ ಚಿತ್ರ ಬಿಡಿಸಿದ್ದು, ಪ್ರಧಾನಿಗಳಿಗೆ ಹೇಗಾದರೂ ತಲುಪಿಸಬೇಕು ಎಂದು ರೋಡ್ ಶೋನಲ್ಲಿ ಭಾಗಿಯಾಗಿದ್ದರು. ಪ್ರಧಾನಿಗಳ ಮೆರವಣಿಗೆ ನಡೆಯುತ್ತಿದ್ದ ವೇಳೆ ಕಿರಣ್ ಪ್ರಧಾನಿಗಳ ಚಿತ್ರ ಪ್ರದರ್ಶಿಸಿದ್ದಾರೆ. ಸಾವಿರಾರು ಕಾರ್ಯಕರ್ತರ ನಡುವೆ ಕಿರಣ್ ಬಿಡಿಸಿದ ಚಿತ್ರ ಗಮನಿಸಿದ ಪ್ರಧಾನಿ ನರೇಂದ್ರ ಮೋದಿ ಫೋಟೋಗೆ ಮೆಚ್ಚುಗೆ ಸೂಚಿಸಿ ಫೋಟೋ ನೀಡುವಂತೆ ಹೇಳಿದ್ದಾರೆ.
ಪ್ರಧಾನಿಗಳು ಫೋಟೋ ಕೇಳುತ್ತಿದ್ದಂತೆ ಕಿರಣ್ ಫುಲ್ ಖುಷಿಯಾಗಿದ್ದು, ಎಸ್‌ಪಿಜಿ ಅಧಿಕಾರಿಗಳ ಸಹಾಯದಿಂದ ಫೋಟೋವನ್ನು ಪ್ರಧಾನಿ ಮೋದಿ ಅವರಿಗೆ ಮುಟ್ಟಿಸಿದ್ದಾರೆ. ಕಿರಣ್ 20*24 ಫ್ರೇಮ್‌ನಲ್ಲಿ ಪ್ರಧಾನಿ ಮೋದಿಗಳ ಆಯಿಲ್ ಪೈಂಟ್ ಚಿತ್ರ ಬಿಡಿಸಿದ್ದಾರೆ. ಯುವ ಕಲಾವಿದನ ಕಲೆಯನ್ನು ಗುರುತಿಸಿ ಮೆಚ್ಚಿ ಫೋಟೋ ಪಡೆದ ಪ್ರಧಾನಿ ನರೇಂದ್ರ ಮೋದಿಗಳ ಸರಳತೆಗೆ ಮಂಗಳೂರಿನ ಅಭಿಮಾನಿಗಳು ಫಿದಾ ಆಗಿದ್ದು, ಮೋದಿ ಮತ್ತೊಮ್ಮೆ ಎಂದು ಘೋಷಣೆ ಮೊಳಗಿಸಿದ್ದಾರೆ.












Click it and Unblock the Notifications