Char Dham: ಮೇ 10ಕ್ಕೆ ಕೇದಾರನಾಥ ದೇವಸ್ಥಾನ ಓಪನ್: ನೀವು ಹೋಗಬೇಕಾ? ಮಂಗಳೂರಿನಿಂದ ಹರಿದ್ವಾರಕ್ಕೆ ನೇರ ರೈಲು ಸಂಪರ್ಕ
ಮೇ ತಿಂಗಳಿನಿಂದ ಚಾರ್‌ಧಾಮ್ ಯಾತ್ರೆ ಆರಂಭವಾಗಲಿದೆ. ಹೀಗಾಗಿ ಇಲ್ಲಿಗೆ ಭೇಟಿ ನೀಡುವವರ ಸಂಖ್ಯೆ ಅಧಿಕವಾಗಲಿದೆ. ಸದ್ಯ ಬೇಸಿಗೆ ರಜೆಗಳು ಆರಂಭವಾಗುವುದರಿಂದ ಕರ್ನಾಟಕದಲ್ಲೂ ಚಾರ್‌ಧಾಮ ಯಾತ್ರೆ ಮಾಡುವವರ ಸಂಖ್ಯೆ ದ್ವಿಗುಣವಾಗಲಿದೆ. ಹೀಗೆ ಕರ್ನಾಟಕದಿಂದ ಕೇದಾರನಾಥ್‌ಗೆ ಹೋಗಲು ಪ್ಲ್ಯಾನ್ ಮಾಡಿರುವವರಿಗೆ ಮಂಗಳೂರಿನಿಂದ ನೇರವಾದ ರೈಲು ಇದೆ.
ಹೌದು... ಮೇ 10ಕ್ಕೆ ಕೇದಾರನಾಥ ದೇವಸ್ಥಾನ ತೆರೆಯಲಿದೆ. ಹೀಗಾಗಿ ಕೇದಾರನಾಥ ದೇವಸ್ಥಾನಕ್ಕೆ ಭೇಟಿ ನೀಡಲು ಭಕ್ತರು ಯೋಜಿಸುತ್ತಿದ್ದಾರೆ. ಕೇದಾರನಾಥ ದೇವಸ್ಥಾನಕ್ಕೆ ಹೋಗಬೇಕು ಅಂತ ಪ್ಲ್ಯಾನ್ ಮಾಡುತ್ತಿರುವವರಿಗೆ ಕರ್ನಾಟಕದಿಂದ ಇರುವ ಟ್ರೈನ್ ಫೆಸಿಲಿಟಿ ಬಗ್ಗೆ ಮಾಹಿತಿ ಇಲ್ಲಿದೆ.

ಕೇದಾರನಾಥಕ್ಕೆ ಹೋಗಲು ಹತ್ತಿರ ಇರುವ ರೈಲ್ವೇ ಸ್ಟೇಷನ್ ಅಂದರೆ ಒಂದು ಹರಿದ್ವಾರ ರೈಲ್ವೇ ಸ್ಟೇಷನ್ ಹಾಗೂ ಇನ್ನೊಂದು ಋಷಿಕೇಷ ರೈಲ್ವೇ ಸ್ಟೇಷನ್. ಕರ್ನಾಟಕದಿಂದ ಇಲ್ಲಿಗೆ ಒಂದು ನೇರವಾದ ರೈಲು ಸಂಪರ್ಕ ಇದೆ. ಈ ರೈಲು ಹೊರಡುವುದು ಮಂಗಳೂರಿನಿಂದ. KCVL YNRK Super Fast express Train ಇದು. ಈ ರೈಲು ಸಂಖ್ಯೆ 22659 ಆಗಿದೆ. ಪ್ರತಿ ಶುಕ್ರವಾರ ರಾತ್ರಿ 8.10ಕ್ಕೆ ಮಂಗಳೂರು ರೈಲ್ವೇ ಸ್ಟೇಷನ್‌ನಿಂದ ಈ ರೈಲು ಹೊರಡುತ್ತದೆ. ಶುಕ್ರವಾರ ಸಂಪೂರ್ಣ ರಾತ್ರಿ ಪ್ರಯಾಣ ಇರುತ್ತದೆ. ಶನಿವಾರ ಹಗಲು ರಾತ್ರಿ ಪ್ರಯಾಣ ಮಾಡಬೇಕಾಗುತ್ತದೆ. ನಂತರ ಭಾನುವಾರ ಬೆಳಗ್ಗೆ 12.25ಕ್ಕೆ ಹರಿದ್ವಾರಕ್ಕೆ ಹೋಗಿ ಈ ರೈಲು ತಲುಪುತ್ತದೆ.
ಈ ರೈಲು ಪ್ರಯಾಣ ದರ ನೋಡುವುದಾದರೆ-
SL: 930 Rs.
3E: 2305 Rs.
3A: 2400 Rs.
2A: 3500 Rs.
ಹರಿದ್ವಾರಕ್ಕೆ ಈ ರೈಲು ಪ್ರಯಾಣ ಕೊನೆಗೊಳ್ಳುತ್ತದೆ. ಅಲ್ಲಿಂದ ನೀವು ಬಸ್ ಮೂಲಕ ಪ್ರಯಾಣ ಮುಂದುವರೆಸಬೇಕಾಗುತ್ತದೆ. ಮೊದಲು ಬಸ್ ಮೂಲಕ ಸೋನ್‌ಪ್ರಯಾಗ್ ಗೆ ಹೋಗಬೇಕು. ಅಲ್ಲಿಂದ ಶೇರಿಂಗ್ ಟ್ಯಾಕ್ಸಿಯಲ್ಲಿ ಗೌರಿಕುಂಡಕ್ಕೆ ಹೋಗಬೇಕು. ಅದಾದ ನಂತರ 24 ಕಿ.ಮೀ ನಡೆದುಕೊಂಡು ಹೋದರೆ ಕೇದಾರನಾಥ್ ಸನ್ನಿಧಾನವನ್ನು ತಲುಪಬಹುದು.

ಬೆಂಗಳೂರಿನಿಂದ ಯಾವುದೇ ನೇರವಾದ ರೈಲು ಇಲ್ಲ. ಬೆಂಗಳೂರಿನಿಂದ ಕೇದಾರನಾಥಕ್ಕೆ ಹೋಗುವವರು ದೆಹಲಿಗೆ ಹೋಗಬೇಕು ಅಲ್ಲಿಂದ ಕೇದಾರನಾಥಕ್ಕೆ ಹೋಗಬೇಕು. ಹೀಗಾಗಿ ಮಂಗಳೂರು ರೈಲು ಕೇದಾರನಾಥಕ್ಕೆ ತೆರಳಲು ಸುಲಭವಾದ ಮಾರ್ಗವಾಗಿದೆ. ಜೊತೆಗೆ ಆರಾಮದಾಕವಾಗಿ ನೀವು ಕೇದಾರನಾಥಕ್ಕೆ ಭೇಟಿ ನೀಡಬಹುದು.
ಮೇ 10 ರಂದು ಕೇದಾರನಾಥ ಧಾಮದ ಬಾಗಿಲು ಓಪನ್
ಮೇ 10 ರಂದು ಬೆಳಿಗ್ಗೆ 7 ಗಂಟೆಗೆ ಶಿವನ 12 ಜ್ಯೋತಿರ್ಲಿಂಗಗಳಲ್ಲಿ ಒಂದಾದ ಕೇದಾರನಾಥ ದೇವಸ್ಥಾನದ ಬಾಗಿಲು ತೆರೆಯಲಾಗುತ್ತದೆ. ಈ ದೇವಾಲಯದ ಬಾಗಿಲು ಚಳಿಗಾಲದ ಹಿಮಪಾತದ ಸಮಯದಲ್ಲಿ ಮುಚ್ಚಲ್ಪಡುತ್ತದೆ. ವರ್ಷದ ಆರು ತಿಂಗಳು ಈ ದೇವಸ್ಥಾನವನ್ನು ಮುಚ್ಚಲಾಗುತ್ತದೆ. ಇನ್ನುಳಿದ ಆರು ತಿಂಗಳು ಇದನ್ನು ತೆರೆಯಲಾಗುತ್ತದೆ. ಪ್ರತಿ ವರ್ಷ ಲಕ್ಷಾಂತರ ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ.
ಕಳೆದ ಯಾತ್ರಾ ಋತುವಿನಲ್ಲಿ ಕೇದಾರನಾಥ ಧಾಮಕ್ಕೆ ದಾಖಲೆಯ ಸಂಖ್ಯೆಯ ಭಕ್ತರು ಆಗಮಿಸಿದ್ದು, ಈ ವರ್ಷ ಯಾತ್ರಿಕರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಇದೆ. ಹೀಗಾಗಿ ಶೀಘ್ರದಲ್ಲೇ ದೇವಸ್ಥಾನ ಸಮಿತಿಯ ತಂಡ ದೇವಸ್ಥಾನಕ್ಕೆ ಭೇಟಿ ನೀಡಿ ಯಾತ್ರೆಯ ಪೂರ್ವ ಸಿದ್ಧತೆಗಳನ್ನು ಪರಿಶೀಲಿಸಲಿದೆ.
ಚಾರ್‌ಧಾಮ್ ಯಾತ್ರೆ
ಕೇದಾರನಾಥ ಉತ್ತರಾಖಂಡ ರಾಜ್ಯದ ಅತ್ಯಂತ ಪವಿತ್ರವಾದ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ. ಹಿಂದೂಗಳ ತೀರ್ಥಯಾತ್ರಾ ಸ್ಥಳವಾಗಿರುವ ಕೇದಾರನಾಥ ಚೋಟಾ ಚಾರ್ ಧಾಮ್ ಯಾತ್ರೆಯ ಒಂದು ಭಾಗವಾಗಿದೆ. ಕೇದಾರನಾಥ ಎಂಬ ಹೆಸರಿನಿಂದ ಕರೆಯಲ್ಪಡುವ ಮಹಾಶಿವನು ಇಲ್ಲಿ ನೆಲೆಸಿದ್ದಾನೆ. ಭಾರತದ 12 ಜ್ಯೋತಿರ್ಲಿಂಗಗಳಲ್ಲಿ ಇದು ಪ್ರಮುಖವಾದುದು ಎಂದು ನಂಬಲಾಗಿದೆ.
ಚೋಟಾ ಚಾರ್ ಧಾಮ್ ಯಾತ್ರೆ ಎಂದೇ ಜನಪ್ರಿಯವಾಗಿರುವ ಯಾತ್ರೆಯಲ್ಲಿ ಗಂಗೋತ್ರಿ, ಯಮನೋತ್ರಿ, ಕೇದಾರನಾಥ ಹಾಗು ಬದರಿನಾಥ ಅಲಯಗಳಿವೆ. ಹಿಂದೂಗಳು ತಮ್ಮ ಜೀವಿತಾವಧಿಯಲ್ಲಿ ಒಮ್ಮೆ ಈ ಯಾತ್ರೆಯನ್ನು ಕೈಗೊಳ್ಳಲು ಬಯಸುತ್ತಾರೆ.












Click it and Unblock the Notifications