ಮಂಗಳೂರು: ಪ್ರಧಾನಿ ಮೋದಿ ರೋಡ್ ಶೋ ವೇಳೆ ಕರಾವಳಿ ಸಂಸ್ಕೃತಿ ಅನಾವರಣ
ಪ್ರಧಾನಿ ಮೋದಿ ಈಗಾಗಲೇ ದೇಶದ ವಿವಿಧೆಡೆ ಚುನಾವಣಾ ರ್ಯಾಲಿಗಳನ್ನು ನಡೆಸುತ್ತಿದ್ದಾರೆ. ಅಲ್ಲದೆ ಕರ್ನಾಟಕದ ಕಲಬುರ್ಗಿಯಲ್ಲಿ ಈಗಾಗಲೇ ಒಂದು ರ್ಯಾಲಿ ನಡೆಸಿ ಆಗಿದೆ. ಈಗ ಕರಾವಳಿ ಭಾಗದತ್ತ ಮೋದಿ ಚಿತ್ತವನ್ನು ನೆಟ್ಟಿದ್ದಾರೆ.
ಭಾನುವಾರ ಪ್ರಧಾನಿ ಮೋದಿ ಅವರು ಕರ್ನಾಟಕ ಪ್ರವಾಸ ಕೈಗೊಳಲಿದ್ದಾರೆ. ಈ ವೇಳೆ ಮಂಗಳೂರಿನಲ್ಲಿ ಮೊದಲ ಬಾರಿಗೆ ರೋಡ್ ಶೋನಲ್ಲಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಈಗಾಗಲೇ ಭರದ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ. ಕರವಾಳಿಯ ಸೊಗಡನ್ನು ಮೋದಿ ಅವರಿಗೆ ಪರಿಚಯಿಸುವ ಇರಾದೆಯನ್ನು ಇಲ್ಲಿನ ಸ್ಥಳಿಯ ನಾಯಕರು ಮಾಡಿಕೊಂಡಿದ್ದಾರೆ.

ಕರಾವಳಿಯ ಸಂಸ್ಕೃತಿ ಅನಾವರಣ
ಮಂಗಳೂರಿನಲ್ಲಿ ಮೋದಿ ರೋಡ್ ಶೋ ನಡೆಸಲಿದ್ದಾರೆ. ತೆರೆದ ವಾಹನದಲ್ಲಿ ಮೋದಿ ಮತ ಬೇಟೆಗೆ ಇಳಿಯುವಾಗಲೇ ತಮ್ಮ ಕಲೆಯನ್ನು ಪ್ರಧಾನಿಗೆ ತೋರಿಸಲು ಸ್ಥಳೀಯ ಮುಖಂಡರು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಅಂತೆ, ಪ್ರಧಾನಿ ರೋಡ್ ಶೋ ನಡೆಯುವ ರಸ್ತೆಗಳ ಇಕ್ಕೆಲುಗಳಲ್ಲಿ ಕರವಾಳಿಯ ಸಂಸ್ಕೃತಿಯನ್ನು ಅನಾವರಣ ಮಾಡಲು ತಯಾರಿ ನಡೆದಿದೆ. ಇದರಂತೆ ದೈವಾರಾಧನೆಯ ತುಣುಕ, ಕಂಬಳದ ಚಿತ್ರಣ, ಹಲಿ ವೇಷ, ಭರತ ನಾಟ್ಯಗಳು ಮೋದಿಯವರ ಗಮನ ಸೆಳೆಯಲು ಯೋಜನೆ ರೂಪಿಸಿಕೊಂಡಿವೆ.
ವಿಶೇಷ ದಿನಗಳಂದು ಕಾಣುವ ಸ್ತಬ್ಧ ಚಿತ್ರಗಳನ್ನೇ ಹೋಲುವ ರೀತಿ ಕಂಬಳ ಸ್ತಬ್ಧ ಚಿತ್ರ ರೆಡಿ ಮಾಡಿಕೊಳ್ಳಲಾಗುತ್ತಿದೆ. ಕಲಾವಿದರು ರಸ್ತೆಯ ಪಕ್ಕದಲ್ಲಿ ಹುಲಿ ವೇಷ ಹಾಗೂ ಭರತ ನಾಟ್ಯವನ್ನು ಮಾಡಲಿದ್ದಾರೆ. ಇನ್ನು ದೈವಾರಾಧನೆಯ ತುಣುಕುಗಳನ್ನು ಬೃಹತ್ ಎಲ್‌ಇಡಿ ಪರದೆಯ ಮೇಲೆ ಪ್ರಸಾರ ಮಾಡಲು ಪ್ಲ್ಯಾನ್ ಮಾಡಿಕೊಳ್ಳಲಾಗುತ್ತಿದೆ.

ಅಂದಹಾಗೆ ಕರಾವಳಿಯ ಕಲೆಯನ್ನು ಪ್ರದರ್ಶಿಸುವ ಪ್ಲ್ಯಾನ್ ಇನ್ನು ಅಂತಿಮವಾಗಿಲ್ಲ. ಮೋದಿ ಭದ್ರತಾ ಸಿಬ್ಬಂದಿಗಳು ಇದಕ್ಕೆ ಒಪ್ಪಿಗೆ ನೀಡಿದ್ದೇ ಆದಲ್ಲಿ ಈ ರೋಡ್ ಶೋ ಅಪಾರ ಜನ ಮನ್ನಣೆ ಗಳಿಸುವ ಸಾಧ್ಯತೆ ಇದೆ. ಇದು ಯಾವುದೇ ಪಕ್ಷದ ಕಾರ್ಯಕ್ರಮವಲ್ಲದೆ, ಮೋದಿ ಅಭಿಮಾನಿಗಳು ಅಭಿಮಾನದಿಂದ ಪ್ರಧಾನಿಗೆ ತಮ್ಮ ಸಂಸ್ಕೃತಿಯನ್ನು ತೋರಿಸುವ ಇರಾದೆ ಹೊಂದಿದ್ದಾರೆ.
ಭಾನುವಾರ ನಡೆಯುವ ರೋಡ್ ಶೋಗೆ ಈಗಾಗಲೇ ಎಸ್‌ಪಿಜಿ ಭದ್ರತಾ ಕಾರ್ಯವನ್ನು ಆರಂಭಿಸಿದೆ. ಈಗಾಗಲೇ ಜಿಲ್ಲಾಡಳಿತ, ಪೊಲೀಸ್ ಕಮಿಷನರ್ ಸೇರಿದಂತೆ ಹಿರಿಯ ಅಧಿಕಾರಿಗಳ ಸಭೆ ನಡೆದಿದ್ದು, ಹಲವು ಅಂಶಗಳ ಬಗ್ಗೆ ಬೆಳಕು ಚೆಲ್ಲಲಾಗಿದೆ.

ಅರಣ್ಯಾಧಿಕಾರಿಗಳಿಗೆ ಸೂಚನೆ
ಭಾನುವಾರ ಪ್ರಧಾನಿ ಮೋದಿ ರೋಡ್ ಶೋ ನಡೆಯಲಿದ್ದು ಈ ವೇಳೆ, ಮರ ಹಾಗೂ ಕಟ್ಟಡಗಳ ಮೇಲೆ ಕಟ್ಟಿರುವ ಜೇನುಗುಡುಗಳನ್ನು ತೆರವುಗೊಳಿಸುವಂತೆ ಪೊಲೀಸ್ ಆಯುಕ್ತರ ಕಚೇರಿಯಿಂದ ಅರಣ್ಯಾಧಿಕಾರಿಗಳಿಗೆ ಸೂಚಸಿಲಾಗಿದೆ.
ಏಪ್ರಿಲ್ 14ಕ್ಕೆ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೆ ಆಗಮಿಸಲಿದ್ದು, ಆರಂಭದಲ್ಲಿ ಬೆಂಗಳೂರು ವ್ಯಾಪ್ತಿಯಲ್ಲಿ ಪ್ರಚಾರ ನಡೆಸಲಿದ್ದಾರೆ. ಅಲ್ಲದೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರವಾದ ಬ್ಯಾಟರಾಯನಪುರ ಹಾಗೂ ಹೆಬ್ಬಾಳದಲ್ಲಿ ರೋಡ್ ಶೋ ನಡೆಸುವ ಸಾಧ್ಯತೆ ಇದೆ. ಅಲ್ಲದೆ ಇದೇ ದಿನ ಮೈಸೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾಜಿ ಪ್ರಧಾನಿ ದೇವೇಗೌಡ ಅವರೊಂದಿಗೆ ಪ್ರಧಾನಿ ಮೋದಿ ವೇದಿಕೆ ಹಂಚಿಕೊಳ್ಳಲಿದ್ದು, ಹಳೆ ಮೈಸೂರು ಭಾಗದ ಮತದಾರರನ್ನು ಟಾರ್ಗೆಟ್ ಮಾಡಲಿದ್ದಾರೆ.












Click it and Unblock the Notifications