Mangaluru- Vijayapura Express: ಮಂಗಳೂರು ಸೆಂಟ್ರಲ್‌ಗೂ ಬರಲಿದೆ ವಿಜಯಪುರ-ಮಂಗಳೂರು ಜಂಕ್ಷನ್ ಎಕ್ಸ್‌ಪ್ರೆಸ್
ಮಂಗಳೂರು, ಏಪ್ರಿಲ್.05: 2019 ರ ನವೆಂಬರ್‌ನಿಂದ ಆರಂಭವಾದ ವಿಶೇಷ ವಿಜಯಪುರ - ಮಂಗಳೂರು ಜಂಕ್ಷನ್ ರೈಲನ್ನು ಮಂಗಳೂರು ಸೆಂಟ್ರಲ್ ತನಕ ವಿಸ್ತರಣೆ ಮಾಡಬೇಕು ಎಂಬ ಕರಾವಳಿ ಮತ್ತು ಉತ್ತರ ಕರ್ನಾಟಕ ಭಾಗದ ರೈಲು ಪ್ರಯಾಣಿಕರ ಒತ್ತಾಯಕ್ಕೆ ರೈಲ್ವೆ ಇಲಾಖೆ ಮಣಿದಿದೆ. ವಿಜಯಪುರ - ಮಂಗಳೂರು ಜಂಕ್ಷನ್ ರೈಲನ್ನು ಮಂಗಳೂರು ಸೆಂಟ್ರಲ್ ತನಕ ವಿಸ್ತರಣೆ ಮಾಡಿ, ಈಗ ಅಧಿಕೃತ ದಿನಾಂಕ ಘೋಷಿಸಿದೆ.
ಪ್ರಯಾಣಿಕರ ಬೇಡಿಕೆಗೆ ಮಣಿದು ರೈಲು ಸಂಖ್ಯೆ 07377 / 07378 ವಿಜಯಪುರ - ಮಂಗಳೂರು ಜಂಕ್ಷನ್ - ವಿಜಯಪುರ ಎಕ್ಸ್‌ಪ್ರೆಸ್ ರೈಲು ಮಾರ್ಗವನ್ನು ಕ್ರಮವಾಗಿ ಏಪ್ರಿಲ್ 20 ಮತ್ತು 21 ರಿಂದ ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸಲು ರೈಲ್ವೆ ಸಚಿವಾಲಯ ಆದೇಶಿಸಿದೆ. ಈ ಮೂಲಕ ಕರಾವಳಿ ಮತ್ತು ಉತ್ತರ ಕರ್ನಾಟಕ ಭಾಗದ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದೆ.

ಈಗೀನ ವೇಳಾಪಟ್ಟಿಯಂತೆ ವಿಜಯಪುರ-ಮಂಗಳೂರು ಜಂಕ್ಷನ್ (07377) ರೈಲು ಸಂಜೆ 4 ಗಂಟೆಗೆ ವಿಜಯಪುರದಿಂದ ಹೊರಟು ಮರುದಿನ ಬೆಳಗ್ಗೆ 9.30ಕ್ಕೆ ಮಂಗಳೂರು ಜಂಕ್ಷನ್‌ಗೆ ಬರುತ್ತಿತ್ತು. ಆದರೆ ಪ್ರಸ್ತುತ ರೈಲ್ವೆ ವೇಳಾಪಟ್ಟಿಯಂತೆ ಏಪ್ರಿಲ್ 20 ರಂದು ಈ ರೈಲು ಮಧ್ಯಾಹ್ನ 12.40 ಕ್ಕೆ ಮಂಗಳೂರು ಜಂಕ್ಷನ್‌ಗೆ ಬರುವ ಬದಲು ಬೆಳಗ್ಗೆ 9.50 ಕ್ಕೆ ಮಂಗಳೂರು ಸೆಂಟ್ರಲ್‌ಗೆ ಬರಲಿದೆ..
ವಿಜಯಪುರಕ್ಕೆ ಹೊರಡುವ ರೈಲು ಸಂಖ್ಯೆ 07378 ಮಂಗಳೂರು ಜಂಕ್ಷನ್-ವಿಜಯಪುರ ಎಕ್ಸ್‌ಪ್ರೆಸ್ ವಿಶೇಷ ಪ್ರಯಾಣವು ಏಪ್ರಿಲ್ 21 ರಂದು ಮಂಗಳೂರು ಸೆಂಟ್ರಲ್‌ನಲ್ಲ ಮಧ್ಯಾಹ್ನ 2.35 ಕ್ಕೆ ಮತ್ತು ಮಂಗಳೂರು ಜಂಕ್ಷನ್‌ನಿಂದ ಮಧ್ಯಾಹ್ನ 2.50 ಕ್ಕೆ ಹೊರಡಲಿದೆ. ಮರುದಿನ ಬೆಳಗ್ಗೆ 9.35ಕ್ಕೆ ವಿಜಯಪುರ ತಲುಪಲಿದೆ. ಮಂಗಳೂರು ಜಂಕ್ಷನ್‌ನಲ್ಲಿ (ಮಧ್ಯಾಹ್ನ 2.50) ಹೊರಡುವ ಸಮಯದಲ್ಲಿ ಯಾವುದೇ ಬದಲಾವಣೆ ಇಲ್ಲ. ಬರೋಬ್ಬರಿ ಐದು ವರ್ಷಗಳ ನಂತರ ಮಂಗಳೂರು ಸೆಂಟ್ರಲ್‌ಗೆ ವಿಶೇಷ ರೈಲನ್ನು ವಿಸ್ತರಿಸುವ ಬೇಡಿಕೆಯನ್ನು ರೈಲ್ವೆ ಸಚಿವಾಲಯ ಒಪ್ಪಿಕೊಂಡಿದೆ.

ವಿಜಯಪುರ ಮಂಗಳೂರು ರೈಲಿನ ಪರಿಷ್ಕೃತ ಸಮಯ
ಮಾರ್ಚ್ 22 ರಂದು ವಿಶೇಷ ರೈಲು ಸೇವೆಯ ಕಾರ್ಯಾಚರಣೆಯ ಅವಧಿಯನ್ನು ವಿಸ್ತರಿಸುವಾಗ ಪರಿಷ್ಕತ ಸಮಯವನ್ನು ಕೂಡ ತಿಳಿಸಿದೆ. ವಿಜಯಪುರದಲ್ಲಿ ರೈಲು ಸಂಖ್ಯೆ 07377 ರ ನಿರ್ಗಮನ ಸಮಯವನ್ನು ಸಂಜೆ 6.35 ರಿಂದ ಮಧ್ಯಾಹ್ನ 3.35ಕ್ಕೆ ಹಾಕಿತ್ತು. ಇದರಿಂದಾಗಿ ಮಂಗಳೂರು ಜಂಕ್ಷನ್‌ಗೆ ಅದು ಮರುದಿನ ಮಧ್ಯಾಹ್ನ 12.40ಕ್ಕೆ ಬರುವ ಬದಲು ಮರುದಿನ ಬೆಳಗ್ಗೆ 9.30ಕ್ಕೆ ತಲುಪುತ್ತಿದೆ. ಈ ರೈಲು ಮಂಗಳೂರು ಜಂಕ್ಷನ್‌ನಿಂದ ಬೆಳಗ್ಗೆ 9.32 ಕ್ಕೆ ಹೊರಟು 9.50 ಕ್ಕೆ ಸೆಂಟ್ರಲ್ ತಲುಪುತ್ತದೆ.
ವಿಜಯಪುರದಿಂದ ಮಂಗಳೂರು ಸೆಂಟ್ರಲ್ ಮಾರ್ಗ
ನಿಲ್ದಾಣದ ಹೊಸ ಸಮಯ ಅಸ್ತಿತ್ವದಲ್ಲಿರುವ ಸಮಯ
ವಿಜಯಪುರ ಸಂಜೆ 3.35 ಸಂಜೆ 6.35
ಬಸವನ ಬಾಗೇವಾಡಿ ರಸ್ತೆ ಸಂಜೆ 4.08 ಸಂಜೆ 7.13
ಆಲಮಟ್ಟಿ ಸಂಜೆ 4.26 ಸಂಜೆ 7.31
ಬಾಗಲಕೋಟ ಸಂಜೆ 5.12 ರಾತ್ರಿ 8.20
ಗುಳೇದಗುಡ್ಡ ರಸ್ತೆ ಸಂಜೆ 5.25 ರಾತ್ರಿ 8.34
ಬಾದಾಮಿ ಸಂಜೆ 5.40 ರಾತ್ರಿ 8.48
ಹೊಳೆ ಆಲೂರು ಸಂಜೆ 6.01 ರಾತ್ರಿ 9.12
ಮಲ್ಲಾಪುರ ಸಂಜೆ 6.20 ರಾತ್ರಿ 9.32
ಗದಗ ರಾತ್ರಿ 7.30 ರಾತ್ರಿ 10.35
ಹುಬ್ಬಳ್ಳಿ ರಾತ್ರಿ 9.30 ಬೆಳಗ್ಗೆ 12.05
ಹಾವೇರಿ ರಾತ್ರಿ 10.45 ಬೆಳಗ್ಗೆ 1.15
ಬ್ಯಾಡಗಿ ರಾತ್ರಿ 11 ಬೆಳಗ್ಗೆ 1.30
ರಾಣೆಬೆನ್ನೂರು ರಾತ್ರಿ 11.18 ಬೆಳಗ್ಗೆ 1.50
ಹರಿಹರ ರಾತ್ರಿ 11.40 ಬೆಳಗ್ಗೆ 2.15
ದಾವಣಗೆರೆ ರಾತ್ರಿ 11.57 ಬೆಳಗ್ಗೆ 2.37
ಚಿಕ್ಕಜಾಜೂರು ಮಧ್ಯರಾತ್ರಿ 12.42 ಬೆಳಗ್ಗೆ 3.17
ಬೀರೂರು ಮಧ್ಯರಾತ್ರಿ 1.27 ಬೆಳಗ್ಗೆ 4.15
ಕಡೂರು ಮಧ್ಯರಾತ್ರಿ 1.38 ಬೆಳಗ್ಗೆ 4.25
ಅರಸೀಕೆರೆ ಮಧ್ಯ ರಾತ್ರಿ 2.20 ಬೆಳಗ್ಗೆ 5.20
ಹಾಸನ ಬೆಳಗ್ಗೆ 3.10 ಬೆಳಗ್ಗೆ 6.20
ಸಕಲೇಶಪುರ ಬೆಳಗ್ಗೆ 4.15 ಬೆಳಗ್ಗೆ 7.30
ಸುಬ್ರಹ್ಮಣ್ಯ ರಸ್ತೆ ಬೆಳಗ್ಗೆ 7.25 ಬೆಳಗ್ಗೆ 10.20
ಕಬಕ ಪುತ್ತೂರು ಬೆಳಗ್ಗೆ 8.15 ಬೆಳಗ್ಗೆ 11.20
ಬಂಟ್ವಾಳ ಬೆಳಗ್ಗೆ 8.50 ಮಧ್ಯಾಹ್ನ 12
ಮಂಗಳೂರು ಜಂಕ್ಷನ್ ಬೆಳಗ್ಗೆ 9.32 ಮಧ್ಯಾಹ್ನ 12.40
ಮಂಗಳೂರು ಸೆಂಟ್ರಲ್ ಬೆಳಗ್ಗೆ 9.50
ವೇಳಾಪಟ್ಟಿ ಮಾಹಿತಿ- ದಿ ಹಿಂದೂ












Click it and Unblock the Notifications