ಮಂಗಳೂರು ಸೆಂಟ್ರಲ್-ಮಡಗಾಂವ್ ರೈಲು ಸಂಚಾರ ಭಾಗಶಃ ರದ್ದು-ಯಾವಾಗಿನಿಂದ ಹಾಗೂ ಕಾರಣ ಏನು?
ಮಂಗಳೂರು, ಏಪ್ರಿಲ್, 15: ಹಳಿ ಅಳವಡಿಕೆ, ವಿದ್ಯತ್ ಅಳವಡಿಕೆ ಕಮಾಗಾರಿ ಸೇರಿದಂತೆ ಇನ್ನಿತರ ಸಮಸ್ಯೆಗಳ ಮಾರ್ಗಗಳಲ್ಲಿ ರೈಲು ಸಂಚಾರವನ್ನು ರದ್ದು ಮಾಡಲಾಗುತ್ತಿದೆ. ಹಾಗೆಯೇ ಇದೀಗ ಮಡಗಾಂವ್-ಕುಮಟಾ ವಿಭಾಗದ ನಡುವಿನ ರೈಲ್ವೆ ಕಾಮಗಾರಿ ಹಿನ್ನೆಲೆ ಈ ಭಾಗದಲ್ಲಿ ರೈಲು ಸೇವೆಯನ್ನು ರದ್ದು ಮಾಡಲಾಗುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದರೆ ಎಲ್ಲೆಲ್ಲಿ ಎಲ್ಲಿವರೆಗೂ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಏಪ್ರಿಲ್ 18ರಂದು ಮಧ್ಯಾಹ್ನ 12:10 ಗಂಟೆಯಿಂದ 3:10 ಗಂಟೆವರೆಗೂ 3 ಗಂಟೆ ರೈಲು ಸಂಚಾರದಲ್ಲಿ ವ್ಯತ್ಯಯ ಆಗಲಿದೆ. ಇದರಿಂದ ಮಂಗಳೂರು ಸೆಂಟ್ರಲ್-ಮಡಗಾಂವ್ ರೈಲು ಸಂಚಾರ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ತಿಳಿದುಬಂದಿದೆ.

ಮಂಗಳೂರು ಸೆಂಟ್ರಲ್-ಮಡಗಾಂವ್ ವಿಶೇಷ ರೈಲು (ರೈಲು ಸಂಖ್ಯೆ 06602) ಏಪ್ರಿಲ್ 18ರಂದು ಕಾರವಾರ ನಿಲ್ದಾಣದವರೆಗೂ ಸಂಚಾರ ಮಾಡಲಿದೆ. ಕಾರವಾರ-ಮಡಗಾಂವ್ ವಿಭಾಗದ ನಡುವೆ ರೈಲು ಸಂಚಾರ ಭಾಗಶಃ ರದ್ದಾಗಲಿದೆ. ಇನ್ನು ಮಡಗಾಂವ್ - ಮಂಗಳೂರು ಸೆಂಟ್ರಲ್ ವಿಶೇಷ ರೈಲು (ರೈಲು ಸಂಖ್ಯೆ 06601) ವಿಶೇಷ ರೈಲು ಸಂಚಾರವು ಏಪ್ರಿಲ್ 18ರಂದು ಮಡಗಾಂವ್ - ಕಾರವಾರ ವಿಭಾಗದ ನಡುವೆ ಭಾಗಶಃ ರದ್ದಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಮೈಸೂರು-ಅಜ್ಮೇರ್ ನಡುವೆ ವಿಶೇಷ ರೈಲು: ಭಾರತೀಯ ರೈಲ್ವೆಯು ಆಗಾಗ ಪ್ರಯಾಣಕರ ಅನುಕೂಲಕ್ಕೆ ತಕ್ಕಂತೆ ಹಾಗೂ ದಟ್ಟಣೆಯನ್ನು ನಿಯಂತ್ರಿಸುವ ದೃಷ್ಟಿಯಿಂದ ವಿಶೇಷ ರೈಲುಗಳನ್ನು ಬಿಡುತ್ತಲೇ ಇರುತ್ತದೆ. ಇದೀಗ ಬೇಸಿಗೆ ಹಿನ್ನೆಲೆ ಮೈಸೂರು-ಅಜ್ಮೇರ್ ನಡುವೆ ಸಾಪ್ತಾಹಿಕ ವಿಶೇಷ ರೈಲು ಬಿಡಲು ನಿರ್ಧರಿಸಿದೆ. ಹಾಗಾದರೆ ದಿನಾಂಕ, ಸಮಯಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಬೇಸಿಗೆ ಕಾಲದಲ್ಲಿ ಪ್ರಯಾಣಿಕರ ದಟ್ಟಣೆಯ ನಿಯಂತ್ರಿಸುವ ಉದ್ದೇಶದಿಂದ ಭಾರತೀಯ ರೈಲ್ವೇಯು ಮೈಸೂರು ಮತ್ತು ಅಜ್ಮೀರ್ ಮಾರ್ಗದಲ್ಲಿ ಸಾಪ್ತಾಹಿಕ ವಿಶೇಷ ರೈಲನ್ನು ಬಿಡಲು ಘೋಷಣೆ ಮಾಡಿದೆ. ಈ ರೈಲು ರತ್ಲಂ, ಮಂದಸೌರ್, ನೀಮಚ್ ಮತ್ತು ಚಿತ್ತೋರ್‌ಗಢದಲ್ಲಿ ನಿಲುಗಡೆ ಆಗಲಿದೆ.
ವಿಶೇಷ ರೈಲು ಸಂಖ್ಯೆ 06281 ಮೈಸೂರಿನಿಂದ ಏಪ್ರಿಲ್ 13ರಿಂದ ಮೇ 18ರವರೆಗೆ ಪ್ರತಿ ಶನಿವಾರ ಬೆಳಗ್ಗೆ 10 ಗಂಟೆಗೆ ಹೊರಡಲಿದ್ದು, ಅಜ್ಮೀರ್‌ಗೆ ಪ್ರಯಾಣ ಬೆಳೆಸಲಿದೆ. ಇದು ರಾತ್ರಿ 9:05ಕ್ಕೆ (ಭಾನುವಾರ) ರತ್ಲಂ ಸೇರಿದಂತೆ ವಿವಿಧ ನಿಲ್ದಾಣಗಳಲ್ಲಿ ನಿಗದಿತ ನಿಲುಗಡೆಯಾಗಲಿದೆ. ರಾತ್ರಿ 10:20ಕ್ಕೆ (ಭಾನುವಾರ) ಮಂದಸೌರ್, ನೀಮಚ್ 11.55ಕ್ಕೆ (ಭಾನುವಾರ), ಮತ್ತು ಚಿತ್ತೌರ್ಗಢ್ 12.30 ಕ್ಕೆ(ಸೋಮವಾರ), ಅಂತಿಮವಾಗಿ ಸೋಮವಾರ ಬೆಳಗ್ಗೆ 4 ಗಂಟೆಗೆ ಅಜ್ಮೀರ್ ತಲುಪುತ್ತದೆ.
ರೈಲು ಸಂಖ್ಯೆ 06282 ಅಜ್ಮೀರ್‌ನಿಂದ ಮೈಸೂರಿಗೆ ಕಾರ್ಯನಿರ್ವಹಿಸುತ್ತದೆ. ಇದು ಪ್ರತಿ ಮಂಗಳವಾರ ಏಪ್ರಿಲ್ 16ರಿಂದ ಮೇ 21ರವರೆಗೆ ರಾತ್ರಿ 8:10ಕ್ಕೆ ಹೊರಡುತ್ತದೆ. ಗುರುವಾರ ಸಂಜೆ 4:40ಕ್ಕೆ ಮೈಸೂರು ತಲುಪುವ ಮೊದಲು ಚಿತ್ತೋರ್‌ಗಢ, ನೀಮಚ್, ಮಂದಸೌರ್ ಮತ್ತು ರತ್ಲಂನಲ್ಲಿ ನಿಲುಗಡೆ ಆಗಲಿದೆ.
ಮಂಡ್ಯ, ಕೆಎಸ್‌ಆರ್ ಬೆಂಗಳೂರು, ತುಮಕೂರು, ಅರಸೀಕೆರೆ, ಚಿಕ್ಕಜಾಜೂರು, ದಾವಣಗೆರೆ, ಹರಿಹರ, ಹಾವೇರಿ, ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ಮೀರಜ್, ಸಾಂಗ್ಲಿ, ಪುಣೆ, ಕಲ್ಯಾಣ್, ವಸಾಯಿ ರಸ್ತೆ, ಸೂರತ್, ವಡೋದರಾ, ಮಂದಸೌರ್, ನೀಮುಚ್ ಮತ್ತು ಚಿತ್ತೌರ್‌ಗಢ್ ರೈಲು ನಿಲ್ದಾಣಗಳಾಗಿವೆ.












Click it and Unblock the Notifications