ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಾತ್ಯಾತೀತ ನಮ್ಮ ಜೀವವಾಯು, ಅದಿಲ್ಲದಿದ್ದರೆ ಭಾರತವಿಲ್ಲ: ಡಾ. ಕೆ. ಟಿ. ಜಲೀಲ್

|
Google Oneindia Kannada News

ಮಂಗಳೂರು, ಮೇ 31: "ಭಾರತವನ್ನು ಪಾಕಿಸ್ತಾನದಂತಹ ರಾಷ್ಟ್ರವನ್ನಾಗಿಸಲು ನಾವು ಅವಕಾಶ ನೀಡಬಾರದು. ನಮ್ಮ ದೇಶದಲ್ಲಿ ಜಾತ್ಯಾತೀತಯೇ ನಮ್ಮ ಜೀವವಾಯು, ಜಾತ್ಯತೀತತೆ ಇಲ್ಲವಾದರೆ ಭಾರತ ಇಲ್ಲವಾಗುತ್ತದೆ," ಎಂದು ಕೇರಳದ ಮಾಜಿ ಉನ್ನತ ಶಿಕ್ಷಣ ಸಚಿವರಾದ ಡಾ. ಕೆ. ಟಿ. ಜಲೀಲ್ ಹೇಳಿದರು.

ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಮಂಗಳವಾರ 'ಜಾತ್ಯಾತೀತತೆ, ಸಬಲೀಕರಣ ಮತ್ತು ಮುನ್ನಡೆ' ಎಂಬ ಘೋಷಣೆಯಡಿ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸವಾದಿ) ಕರ್ನಾಟಕ ರಾಜ್ಯ ಸಮಿತಿ ಆಯೋಜಿಸಿದ್ದ ರಾಜ್ಯ ಮಟ್ಟದ ಮುಸ್ಲಿಂ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ವ್ಯಾಪಾರಿಗಳ ಮೇಲೆ ಶ್ರೀರಾಮ ಸೇನೆ ದಾಳಿ: ಕ್ರಮ ವಹಿಸಿ, ಇಲ್ಲವೇ ತೊಲಗಿ ಎಂದ ಸಿಪಿಐ(ಎಂ)ವ್ಯಾಪಾರಿಗಳ ಮೇಲೆ ಶ್ರೀರಾಮ ಸೇನೆ ದಾಳಿ: ಕ್ರಮ ವಹಿಸಿ, ಇಲ್ಲವೇ ತೊಲಗಿ ಎಂದ ಸಿಪಿಐ(ಎಂ)

"ನಮ್ಮ ದೇಶ ಜಾತ್ಯಾತೀತ ರಾಷ್ಟ್ರವಾಗಿದೆ. ಎಲ್ಲವನ್ನು ಭಾರತ ಒಳಗೊಳ್ಳುತ್ತಿದೆ. ಈ ಜಾತ್ಯಾತೀತತೆಯ ಸಂಪ್ರದಾಯವೇ ಪ್ರಜಾಪ್ರಭುತ್ವವನ್ನು ಕಾಯುತ್ತಿರುವುದು. ದೇಶದ ಅಭಿವೃದ್ದಿಗೆ ಎಲ್ಲಾ ಜನಾಂಗಗಳೂ ಕೊಡುಗೆ ನೀಡಿದೆ. ಯಾವುದೇ ಒಂದು ಸಮುದಾಯವನ್ನು ದೂರವಿಟ್ಟು, ದೇಶ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ," ಎಂದು ಹೇಳಿದರು.

Kerala Former Minister Dr. KT Jaleel Inaugurated Muslim Conference In Mangaluru

"ನಮ್ಮ ದೇಶ ಜಾತ್ಯತೀತ ರಾಷ್ಟ್ರವಾಗಿದೆ. ಎಲ್ಲವನ್ನು ಭಾರತ ಒಳಗೊಳ್ಳುತ್ತಿದೆ. ಈ ಜಾತ್ಯಾತೀತತೆಯ ಸಂಪ್ರದಾಯವೇ ಪ್ರಜಾಪ್ರಭುತ್ವವನ್ನು ಕಾಯುತ್ತಿರುವುದು. ನಮ್ಮ ದೇಶವು ಯಾವುದೇ ಧರ್ಮವನ್ನು ಯಾವುದೇ ಕಾಲದಲ್ಲಿ ನಿರಾಕರಿಸಿಲ್ಲ. ವರ್ತಮಾನ ಕಾಲದಲ್ಲಿ ಕಾಂಗ್ರೆಸ್‌ನ ಮೃದು ಹಿಂದುತ್ವ ಕಾಣುವಾಗ ಬೇಸರವಾಗುತ್ತದೆ. ವಾಜಪೇಯಿ ಆಡಳಿತ ಮಾಡಬೇಕಾದರೆ ಭಾರತ ಇಷ್ಟು ಮಟ್ಟದಲ್ಲಿ ಕೋಮುದೃವೀಕರಣಗೊಂಡಿರಲಿಲ್ಲ. ವಾಜಪೇಯಿ ಈ ರೀತಿ ಕೋಮದೃವೀಕರಣ ಮಾಡಿರಲಿಲ್ಲ. ಸಹಿಷ್ಣುತೆ, ಜಾತ್ಯಾತೀತೆಗೆ ವಾಜಪೇಯಿ ಬದ್ಧರಾಗಿದ್ದರು. ವಾಜಪೇಯಿ ನಂತರ ಬಂದ ನರೇಂದ್ರ ಮೋದಿ ಸರ್ಕಾರವು ನಿರಂತರವಾಗಿ ಒಂದು ಸರ್ಕಾರವನ್ನು ತಿರಸ್ಕಾರ ಮಾಡುತ್ತಾ ಬಂದಿದೆ," ಎಂದು ತಿಳಿಸಿದರು.

ಕೇಂದ್ರದಿಂದ ಜನರಿಗೆ 'ಸ್ಲೋ ಡೆತ್‌': ಇಂಧನ ಬೆಲೆ ಏರಿಕೆಗೆ ಸಿಪಿಐಎಂ ಆಕ್ರೋಶಕೇಂದ್ರದಿಂದ ಜನರಿಗೆ 'ಸ್ಲೋ ಡೆತ್‌': ಇಂಧನ ಬೆಲೆ ಏರಿಕೆಗೆ ಸಿಪಿಐಎಂ ಆಕ್ರೋಶ

"ನರೇಂದ್ರ ಮೋದಿ ಸರ್ಕಾರದ ಧಮನಕಾರಿ ಕ್ರಮ ಅಪಾಯಕಾರಿ. ಅದನ್ನು ನಾವು ಪರಾಭವಗೊಳಿಸಬೇಕು. ಎಲ್ಲಾ ಧರ್ಮಗಳು ಬೇರೆ ಬೇರೆಯಾದರೂ ಒಂದೇ ಜಾತ್ಯತೀತ ನಂಬಿಕೆ ಹೊಂದಿದೆ. ಬೈಬಲ್, ಕುರಾನ್, ಭಗವದ್ಗೀತೆ ಒಂದೇ ಭಾವೈಕತೆಯನ್ನು ಸಾರುತ್ತದೆ. ನೂರಾರು ವರ್ಷ ಕಾಲ ಆಳಿದ ಬ್ರಿಟಿಷರನ್ನು ಸೋಲಿಸಲು ಸಾಧ್ಯವಾಗುತ್ತದೆ ಎಂದಾದರೆ ಕೇವಲ ಎಂಟು ವರ್ಷ ಆಳಿದ ಮೋದಿ ಸರ್ಕಾರವನ್ನು ಕೂಡಾ ಸೋಲಿಸಲು ನಮಗೆ ಸಾಧ್ಯವಾಗಲಿದೆ," ಎಂದು ಹೇಳಿದರು.

Kerala Former Minister Dr. KT Jaleel Inaugurated Muslim Conference In Mangaluru

ದಾಳಿಗಳು ಮುಗಿಯುತ್ತದೆಯೇ?; "ದೇಶದಲ್ಲಿ ಗೋಮಾಂಸದ ವಿಚಾರದಲ್ಲಿ ಅದೆಷ್ಟೋ ಜನರ ಮೇಲೆ ದಾಳಿ ನಡೆಯುತ್ತಿದೆ. ಒಂದು ವೇಳೆ ಈ ಆರ್‌ಎಸ್‌ಎಸ್‌ ಹಾಗೂ ಬಿಜೆಪಿ ಎಲ್ಲಾ ಮುಸ್ಲಿಮರನ್ನು ಈ ದೇಶದಲ್ಲಿ ಇಲ್ಲವಾಗಿಸಿದರೆ ಇಲ್ಲಿ ನಡೆಯುವ ಎಲ್ಲಾ ದಾಳಿಗಳು ಮುಗಿಯುತ್ತದೆಯೇ?, ದೇಶದಲ್ಲಿ ಮುಸ್ಲಿಮರು ಇಲ್ಲವಾದರೆ, ದಲಿತ ಮತ್ತು ಹಿಂದುಳಿದ ವರ್ಗಗಳ ಮೇಲಿನ ದಾಳಿಯು ಮುಂದುವರಿಯುತ್ತದೆ. ಕೇರಳದಲ್ಲಿ ಹಿಂದೂ ಮುಸ್ಲಿಮರ ಪ್ರತ್ಯೇಕ ಗಲ್ಲಿಗಳು ಇಲ್ಲ. ಯಾವುದೇ ಜಾತಿಯ ಬೀದಿಗಳು ಇಲ್ಲ. ನಾವು ಒಂದು ಧರ್ಮ ಜಾತಿಗೆ ಒಂದು ಬೀದಿ ಎಂಬ ಚಿಂತನೆಯನ್ನು ದೂರಮಾಡಬೇಕು. ಹಿಂದೂ ಕೋಮುವಾದಕ್ಕೆ ಮುಸ್ಲಿಂ ಕೋಮುವಾದ ಉತ್ತರವಲ್ಲ," ಎಂದು ತಿಳಿಸಿದರು.

ಮುಸ್ಲಿಮರ ಸಮಾವೇಶವಲ್ಲ; ಸಮಾವೇಶದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಸಿಪಿಐಎಂ ಕರ್ನಾಟಕ ರಾಜ್ಯ ಸಮಿತಿ ಸದಸ್ಯ ಮುನೀರ್ ಕಾಟಿಪಳ್ಳ, "ಮೋದಿ ಅಧಿಕಾರಕ್ಕೆ ಬಂದ ಬಳಿಕ ಮುಸ್ಲಿಮರ ಮೇಲಿನ ದಾಳಿ ಹೆಚ್ಚಾಗಿದೆ. ಕಳೆದ ಎರಡು ವರ್ಷಗಳಿಂದ ಇಡೀ ವ್ಯವಸ್ಥೆಯೇ ಮುಸ್ಲಿಮರ ವಿರುದ್ಧವಾಗಿದೆ. ಮುಸ್ಲಿಮರ ವಿರುದ್ಧವಾಗಿ ಏನೇ ಹೇಳಿದರೂ ಅದು ಸತ್ಯ ಎಂಬಂತೆ ಮಾಧ್ಯಮಗಳು ಕೂಡಾ ಬಿಂಬಿಸುತ್ತಿರುವುದು ಖೇಧಕರ. ಮುಸ್ಲಿಮರು ಪ್ರತ್ಯೇಕತಾ ಮನಸ್ಥಿತಿಗೆ ತಲುಪಬಾರದು, ಮುಸ್ಲಿಮರನ್ನು ಜಾತ್ಯಾತೀತ ಶಕ್ತಿಗಳೊಂದಿಗೆ ಒಟ್ಟಿಗೆ ಕೊಂಡೊಯ್ಯವುದು ಈ ಸಮಾವೇಶದ ಮುಖ್ಯ ಉದ್ದೇಶವಾಗಿದೆ. ಇದು ಮುಸ್ಲಿಮರ ಸಮಾವೇಶವಲ್ಲ, ಮುಸ್ಲಿಂ ಸಮಾವೇಶ," ಎಂದರು.

Kerala Former Minister Dr. KT Jaleel Inaugurated Muslim Conference In Mangaluru

ಸಮಾವೇಶದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷರಾದ ಮಾವಳ್ಳಿ ಶಂಕರ್‌, ಸಾಹಿತಿ ಕೆ. ಶರಿಫಾ, ಸಿಪಿಐಎಂ ರಾಜ್ಯ ಕಾರ್ಯದರ್ಶಿಯಾದ ಯು. ಬಸವರಾಜು, ಸಿಪಿಐಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಸಯ್ಯದ್ ಮುಜೀಬ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಪತ್ರಕರ್ತ ನವೀನ್ ಸೂರಿಂಜೆರ "ನೇತ್ರಾವತಿಯಲ್ಲಿ ನೆತ್ತರು", ಸಾಹಿತಿ ಬಿಎಂ ಹನೀಫ್‌ರ "ಸೆಕ್ಯೂಲರ್ ಸೇನಾನಿ ಸುಭಾಸ್ ಚಂದ್ರ ಬೋಸ್" ಕೃತಿಗಳನ್ನು ಬಿಡುಗಡೆ ಮಾಡಲಾಯಿತು.

ವೇದಿಕೆಯಲ್ಲಿ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ) ರಾಜ್ಯಾಧ್ಯಕ್ಷರು ಮಾವಳ್ಳಿ ಶಂಕರ್, ಹಿರಿಯ ಸಾಹಿತಿ ಡಾ. ಕೆ ಷರೀಫಾ, ಸಿಪಿಐಎಂ ಕರ್ನಾಟಕ ರಾಜ್ಯ ಕಾರ್ಯದರ್ಶಿ ಯು ಬಸವರಾಜು, ಸಿಪಿಐಎಂ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಕೆ ಯಾದವ್ ಶೆಟ್ಟಿ, ಸಾಹಿತಿ ಕೆ ನೀಲಾ, ರಾಜ್ಯ ಮುಖಂಡರು ಎಸ್ ವರಲಕ್ಷ್ಮೀ, ಕೆ.ಪ್ರಕಾಶ್‌, ಅಕ್ರಂ ಪಾಶ ಬಾಗೇಪಳ್ಳಿ, ಶೇಖ್ ಷಾ ಖಾದ್ರಿ, ಖಾಸಿಂ ಸರ್ದಾರ್ ರಾಮದುರ್ಗ, ಖಾಸಿಂ ಕೊಪ್ಪಳ, ಉಪಸ್ಥಿತರಿದ್ದರು. ಸಿಪಿಐಎಂನ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರು ಸಯ್ಯದ್ ಮುಜೀಬ್ ಅಧ್ಯಕ್ಷತೆ ವಹಿಸಿದ್ದರು.

English summary
Kerala Former Minister, MLA Dr. KT Jaleel Inaugurated State Level Muslim Conference Held by CPIM State Committee In Mangaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X