ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವ್ಯಾಪಾರಿಗಳ ಮೇಲೆ ಶ್ರೀರಾಮ ಸೇನೆ ದಾಳಿ: ಕ್ರಮ ವಹಿಸಿ, ಇಲ್ಲವೇ ತೊಲಗಿ ಎಂದ ಸಿಪಿಐ(ಎಂ)

|
Google Oneindia Kannada News

ಬೆಂಗಳೂರು, ಏಪ್ರಿಲ್ 11: ಧಾರವಾಡ ಜಿಲ್ಲೆಯ ನುಗ್ಗಿಕೇರಿಯಲ್ಲಿ ಕಳೆದ ಎರಡು ದಶಕಗಳಿಂದ ಹಣ್ಣು ವ್ಯಾಪಾರದಲ್ಲಿ ತೊಡಗಿದ್ದ ಸಣ್ಣ ವ್ಯಾಪಾರಿಗಳ ಮೇಲೆ ದಾಳಿ ನಡೆಸಿ ಹಲ್ಲೆ ಮಾಡಿರುವ ಘಣನೆ ಏಪ್ರಿಲ್‌ 09ರಂದು ನಡೆದಿದ್ದು, ಈ ಘಟನೆಯನ್ನು ಸಿಪಿಐಎಂ ಕರ್ನಾಟಕ ರಾಜ್ಯ ಸಮಿತಿ ಖಂಡನೆ ಮಾಡಿದೆ.

Recommended Video

ಮುಸ್ಲಿಂ ವ್ಯಾಪಾರಿಯ ಕಲ್ಲಂಗಡಿ ನಾಶ ಮಾಡಿದ ಹಿಂದೂ ಯುವಕರ ಮೇಲೆ HDK ಕೆಂಡಾಮಂಡಲ | Oneindia Kannada

ವ್ಯಾಪಾರಿಗಳ ಮೇಲೆ ದಾಳಿ ಮಾಡಿರುವುದು ಮಾತ್ರವಲ್ಲದೇ ಅವರು ಮಾರಾಟಕ್ಕಾಗಿ ಸಂಗ್ರಹಿಸಿದ್ದ ಕಲ್ಲಂಗಡಿ ಹಣ್ಣುಗಳನ್ನು ರಸ್ತೆಗೆ ದೂಡಿ ನಾಶ ಪಡಿಸಿದ ಶ್ರೀ ರಾಮ ಸೇನೆಯ ಗೂಂಡಾದಾಳಿಯನ್ನು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಕರ್ನಾಟಕ ರಾಜ್ಯ ಸಮಿತಿ ಬಲವಾಗಿ ಖಂಡಿಸುತ್ತದೆ ಎಂದು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಯು.ಬಸವರಾಜ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ರಾಜೀನಾಮೆ ನೀಡಿ ಕುರ್ಚಿಯ ಮಾನ ಕಾಪಾಡಿ: ಸಿಎಂ ವಿರುದ್ಧ ಸಿದ್ದರಾಮಯ್ಯ ಕಿಡಿರಾಜೀನಾಮೆ ನೀಡಿ ಕುರ್ಚಿಯ ಮಾನ ಕಾಪಾಡಿ: ಸಿಎಂ ವಿರುದ್ಧ ಸಿದ್ದರಾಮಯ್ಯ ಕಿಡಿ

ರಾಜ್ಯ ಸರಕಾರ ಈ ಕೂಡಲೇ ಈ ಕೂಡಲೇ ಈ ಗೂಂಡಾದಾಳಿಯಲ್ಲಿ ತೊಡಗಿದವರನ್ನು ಮತ್ತು ಅವರಿಗೆ ನಿರ್ದೇಶನ ನೀಡಿದ ನಾಯಕರನ್ನು ಬಂಧಿಸಿ ಅವರ ಮೇಲೆ ಗೂಂಡಾ ಕಾಯ್ದೆಯಡಿ ಮೊಕದ್ದಮೆಗಳನ್ನು ದಾಖಲಿಸಿ ಅಗತ್ಯ ಕಾನೂನಿನ ಕ್ರಮವಹಿಸಬೇಕೆಂದು ಕೂಡಾ ಸಿಪಿಐಎಂ ಕರ್ನಾಟಕ ರಾಜ್ಯ ಸಮಿತಿ ಒತ್ತಾಯ ಮಾಡಿದೆ.

CPIM Karnataka State Committee Condemns Perpetrators collapse Muslim Shops near Dharwad

"ರಾಜ್ಯದ ಅಲ್ಪಸಂಖ್ಯಾತ ಹಾಗು ಮುಸ್ಲಿಂ ವ್ಯಾಪಾರಿಗಳಿಗೆ ರಕ್ಷಣೆ ಒದಗಿಸಿ"

ಹಾಗೆಯೇ ನಷ್ಟಕ್ಕೊಳಗಾದ ಮುಸ್ಲಿಂ ವ್ಯಾಪಾರಿಗಳಿಗೆ ತಕ್ಷಣವೇ ನಷ್ಟ ಪರಿಹಾರವನ್ನು ಒದಗಿಸಲು ಕ್ರಮವಹಿಸಬೇಕೆಂದು ಸಿಪಿಐ(ಎಂ) ಪಕ್ಷವು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಲ್ಲಿ ಒತ್ತಾಯಿಸಿದೆ. ಅದೇ ರೀತಿ, ರಾಜ್ಯದಾದ್ಯಂತ ಇರುವ ಎಲ್ಲ ಅಲ್ಪಸಂಖ್ಯಾತ ಹಾಗು ಮುಸ್ಲಿಂ ವ್ಯಾಪಾರಿಗಳಿಗೆ ಇಂತಹ ಗೂಂಡಾಗಳಿಂದ ರಕ್ಷಣೆ ಒದಗಿಸಬೇಕೆಂದು ಸಿಪಿಐ(ಎಂ) ಸರ್ಕಾರವನ್ನು ಆಗ್ರಹಿಸಿದೆ.

"ಇಂತಹ ಘಟನೆಗಳು ರಾಜ್ಯದ ಸೌಹಾರ್ಧತೆಯನ್ನು ದುರ್ಬಲಗೊಳಿಸುವುದು ಮಾತ್ರವಲ್ಲ ಎಲ್ಲ ಜನತೆಯ ಮೇಲೆ ದಾಳಿ ನಡೆಸಿ ಹಫ್ತಾ ವಸೂಲಿ ಮಾಡುವಂಹ ಮಾಫಿಯಾ ಶಕ್ತಿಗಳಿಗೆ ಜನ್ಮ ನೀಡಲಿವೆ. ಇದರಿಂದ ಕೇವಲ ಮುಸ್ಲಿಂ ಧರ್ಮದ ವ್ಯಾಪಾರಿಗಳು ಮಾತ್ರವಲ್ಲಾ ಎಲ್ಲ ಧರ್ಮೀಯರು ಸಂಕಷ್ಟಕ್ಕೆ ಈಡಾಗುತ್ತಾರೆ ಎಂಬುದು ಅವಶ್ಯವಾಗಿ ಗಮನಿಸಬೇಕು ಎಂದು ಸಿಪಿಐ(ಎಂ) ರಾಜ್ಯದ ಎಲ್ಲ ವ್ಯಾಪಾರಿಗಳಿಗೆ ಮತ್ತು ನಾಗರಿಕರನ್ನು ಎಚ್ಚರಿಸಿದೆ.

ನುಗ್ಗಿಕೇರಿ ಮುಸ್ಲಿಂ ವ್ಯಾಪಾರಿ ಮೇಲಿನ ದಾಳಿಗೆ ಎಚ್‌ಡಿಕೆ ಖಂಡನೆ: ಬಂಧನಕ್ಕೆ ಆಗ್ರಹನುಗ್ಗಿಕೇರಿ ಮುಸ್ಲಿಂ ವ್ಯಾಪಾರಿ ಮೇಲಿನ ದಾಳಿಗೆ ಎಚ್‌ಡಿಕೆ ಖಂಡನೆ: ಬಂಧನಕ್ಕೆ ಆಗ್ರಹ

"ರಾಜ್ಯ ಸರಕಾರವು ಇಂತಹ ಗೂಂಡಾ ದಾಳಿಯನ್ನು ನಿಗ್ರಹಿಸಲಾಗದಂತೆ ದುರ್ಬಲಗೊಳಿಸಲಾಗಿದೆ. ಆರ್.ಎಸ್.ಎಸ್. ಹಿಡಿತದಲ್ಲಿ ಸರಕಾರ ಸಿಲುಕಿರುವುದರಿಂದ ಈ ಮತಾಂಧ ಗೂಂಡಾಗಳು ಬಹಿರಂಗವಾಗಿ ದಾಳಿಗೆ ಮುಂದಾಗುತ್ತಿದ್ದಾರೆ. ಇದರಿಂದಾಗಿ ರಾಜ್ಯದಲ್ಲಿ ಇಂಹತ ಗೂಂಡಾಗಿರಿಗಳು ಹೆಚ್ಚಾಗುವಂತಾಗಿದೆ," ಎಂದು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಯು.ಬಸವರಾಜ ಹೇಳಿದ್ದಾರೆ.
ಹಲವಾರು ಘಟನೆಗಳನ್ನು ಪ್ರಸ್ತಾಪಿಸಿದ ಸಿಪಿಐಎಂ

CPIM Karnataka State Committee Condemns Perpetrators collapse Muslim Shops near Dharwad

"ಈಗಾಗಲೇ, ಗದಗ ಜಿಲ್ಲೆಯ ನರಗುಂದದ ಇಬ್ಬರು ಅಲ್ಪಸಂಖ್ಯಾತ ಯುವಕರನ್ನು ಬಹಿರಂಗವಾಗಿ ಭಜರಂಗ ದಳದ ಕಾರ್ಯಕರ್ತರು ಮಾರಣಾಂತಿಕ ಹಲ್ಲೆ ನಡೆಸಿ ಒಬ್ಬ ಯುವಕನನ್ನು ಕೊಂದಿದ್ದಾರೆ. ಅದೇ ರೀತಿ ದಕ್ಷಿಣ ಜಿಲ್ಲೆಯ ಆದಿವಾಸಿ ಯುವಕನ ಮೇಲೆಯು ದಾಳಿ ಮಾಡಲಾಗಿದೆ. ಶಿವಮೊಗ್ಗದ ಭಜರಂಗ ದಳದ ಕಾರ್ಯಕರ್ತನನ್ನು ಕೊಲ್ಲಲಾಗಿದೆ. ಕಾನೂನು ಸುವ್ಯವಸ್ಥೆಯನ್ನು ಕಾಪಾಡಲಾಗದಂತೆ ಅಧಿಕಾರಿಗಳನ್ನು ದುರ್ಬಲಗೊಳಿಸಿರುವುದು ತೀವ್ರ ಖಂಡನೀಯವಾಗಿದೆ ಎಂದು ಸಿಪಿಐ(ಎಂ) ಹೇಳಿದೆ.

ಮುಖ್ಯಮಂತ್ರಿಗಳು ಇಂತಹ ಗೂಂಡಾ ಮಾಫಿಯಾ, ಮತಾಂಧ ಶಕ್ತಿಗಳನ್ನು ನಿಗ್ರಹಿಸಲು ಮಧ್ಯಪ್ರವೇಶಿಸಿ ಕಾನೂನು ಸುವ್ಯವಸ್ಥೆಯನ್ನು ಬಲಗೊಳಿಸಬೇಕು. ಇಲ್ಲವಾದರೆ ನಿಮ್ಮಂತಹ ಮುಖ್ಯಮಂತ್ರಿಗಳ ಅವಶ್ಯಕತೆ ರಾಜ್ಯಕ್ಕಿಲ್ಲ. ಆದ್ದರಿಂದ ತಾವು ರಾಜೀನಾಮೆ ನೀಡಿ ವಿಧಾನಸಭೆ ವಿಸರ್ಜಿಸಿ ಚುನಾವಣೆ ಎದುರಿಸುವಂತೆ ಸಿಪಿಐ(ಎಂ) ಆಗ್ರಹಿಸಿದೆ.

English summary
CPIM Condemns Perpetrators collapse Muslim Shops near Dharwad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X