ಕೇಂದ್ರದಿಂದ ಜನರಿಗೆ 'ಸ್ಲೋ ಡೆತ್': ಇಂಧನ ಬೆಲೆ ಏರಿಕೆಗೆ ಸಿಪಿಐಎಂ ಆಕ್ರೋಶ
ನವದೆಹಲಿ, ಮಾರ್ಚ್ 29: ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯು ಕಳೆದ ಎಂಟು ದಿನಗಳಲ್ಲಿ ಏಳು ದಿನಗಳ ಏರಿಕೆ ಕಂಡಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆಯು ನೂರರ ಗಡಿಯನ್ನು ದಾಟಿದೆ. ಈ ಇಂಧನ ದರ ಏರಿಕೆ ಬಗ್ಗೆ ಕೇಂದ್ರ ಸರ್ಕಾರದ ವಿರುದ್ಧ ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐಎಂ) ಆಕ್ರೋಶ ವ್ಯಕ್ತಪಡಿಸಿದೆ.
ಇಂಧನ ಬೆಲೆ ಏರಿಕೆಯ ಕುರಿತು ಸಿಪಿಐ(ಎಂ) ಮಂಗಳವಾರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು, ಕೇಂದ್ರವು ಈ ಏರಿಕೆಯೊಂದಿಗೆ ಜನರನ್ನು ಚಿತ್ರಹಿಂಸೆಯ ಮೂಲಕ ನಿಧಾನವಾಗಿ ಮರಣಕ್ಕೆ ಶಿಕ್ಷೆಗೆ ಒಡ್ಡುತ್ತಿದ್ದಾರೆ ಎಂದು ಸಿಪಿಐಎಂ ಆರೋಪ ಮಾಡಿದೆ.
Modi govt making sure that there’s no sense of relief having survived the Covid pandemic.
— Sitaram Yechury (@SitaramYechury) March 29, 2022
Condemning people to a tortuous slow death.
At least now scrap central cess/surcharges on petro products & reduce prices. pic.twitter.com/N8SXb2jVZq
ಸರ್ಕಾರಿ ಸ್ವಾಮ್ಯದ ಮೂರು ಪ್ರಮುಖ ತೈಲ ಕಂಪನಿಗಳು ಮಾರ್ಚ್ 29ರಂದು ಪೆಟ್ರೋಲ್, ಡೀಸೆಲ್ ದರ ಪರಿಷ್ಕರಣೆ ಮಾಡಿದೆ. ಇಂದು (ಮಾರ್ಚ್ 29,2022) ಸಹ, ಪೆಟ್ರೋಲ್ ಪ್ರತಿ ಲೀಟರ್‌ಗೆ 80 ಪೈಸೆ ಏರಿಕೆಯಾಗಿದ್ದು, ಡೀಸೆಲ್‌ಗೆ 70 ಪೈಸೆ ಏರಿಕೆಯಾಗಿದೆ.

ಟ್ವೀಟ್ ಮೂಲಕ ಮೋದಿ ಸರ್ಕಾರದ ವಿರುದ್ಧ ಯೆಚೂರಿ ವಾಗ್ದಾಳಿ
ಈ ಬಗ್ಗೆ ಟ್ವೀಟ್ ಮೂಲಕ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ವಾಗ್ದಾಳಿ ನಡೆಸಿದ್ದಾರೆ. "ಮೋದಿ ಸರ್ಕಾರವು ಕೋವಿಡ್ ಸಾಂಕ್ರಾಮಿಕ ರೋಗದಿಂದ ಬದುಕುಳಿದವರಿಗೆ ಯಾವುದೇ ಪರಿಹಾರವನ್ನು ನಾವು ನೀಡಲಾರೆವು ಎಂಬುವುದನ್ನು ಮತ್ತೆ ಖಚಿತಪಡಿಸುತ್ತಿದೆ. ಜನರನ್ನು ಕ್ರೂರವಾಗಿ ಸ್ಲೋ ಡೆತ್‌ಗೆ ಒಡ್ಡುತ್ತಿದೆ," ಎಂದು ಆರೋಪ ಮಾಡಿದ್ದಾರೆ.
ಹಾಗೆಯೇ ಕನಿಷ್ಠ ಈಗ ಪೆಟ್ರೋಲ್ ಉತ್ಪನ್ನಗಳ ಮೇಲಿನ ಕೇಂದ್ರ ಸೆಸ್ / ಹೆಚ್ಚುವರಿ ಶುಲ್ಕಗಳನ್ನು ರದ್ದುಗೊಳಿಸಿ ಹಾಗೂ ಬೆಲೆಗಳನ್ನು ಕಡಿಮೆ ಮಾಡಿ ಎಂದು ಆಗ್ರಹ ಮಾಡಿದ್ದಾರೆ. ಅಗತ್ಯ ಔಷಧಿಗಳ ಬೆಲೆ ಏರಿಕೆಯ ಬಗ್ಗೆಯೂ ಅವರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
"ಪೆಟ್ರೋಲ್ ಬೆಲೆ ಏರಿಕೆಯ, ಹಣದುಬ್ಬರ ಏರಿಕೆಯ ನಡುವೆ ಮೋದಿ ಸರ್ಕಾರವು ಅಗತ್ಯ ಔಷಧಿಗಳ ಬೆಲೆಗಳನ್ನು ಹೆಚ್ಚಿಸಲು ಅನುಮತಿ ನೀಡಿದೆ. 800 ಕ್ಕೂ ಹೆಚ್ಚು ಔಷಧಿಗಳ ಬೆಲೆ ಏರಿಕೆ ಮಾಡಲಾಗಿದೆ. ಏಪ್ರಿಲ್ 2 ರಂದು ಬೆಲೆ ಏರಿಕೆಯ ವಿರುದ್ಧ ಪ್ರತಿಭಟನೆಗಳಲ್ಲಿ ಭಾಗವಹಿಸಿ," ಎಂದು ಕರೆ ನೀಡಿದ್ದಾರೆ.
ದೇಶದಲ್ಲಿ ಇಂಧನ ಬೆಲೆ ಎಷ್ಟಿದೆ?
ದೆಹಲಿಯಲ್ಲಿ ಈಗ ಈಗ ಪೆಟ್ರೋಲ್ ಬೆಲೆ ರೂ. 100.21 ಆಗಿದೆ. ಈ ಹಿಂದೆ ದೆಹಲಿಯಲ್ಲಿ ಪೆಟ್ರೋಲ್ ಬೆಲೆಯು ಲೀಟರ್‌ಗೆ 99.41 ರೂಪಾಯಿ ಆಗಿತ್ತು. ಇನ್ನು ಡಿಸೇಲ್ ಬೆಲೆಯು ಲೀಟರ್‌ಗೆ 91.47 ಗೆ ತಲುಪಿದೆ. ಕರ್ನಾಟಕ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್ ದರ ಏರಿಕೆ ಕಂಡಿದ್ದು, 105.62 ರೂಪಾಯಿಗೆ ಹೆಚ್ಚಿದೆ. ನಿನ್ನೆ 104.78 ರೂಪಾಯಿ ಇದ್ದ ಪೆಟ್ರೋಲ್ ಬೆಲೆಯು ಇಂದು 0.84 ಪೈಸೆ ಹೆಚ್ಚಳವಾಗಿ 105.62 ರೂಪಾಯಿಗೆ ತಲುಪಿದೆ.
ಇನ್ನು ಕರ್ನಾಟಕದಲ್ಲಿ ಡೀಸೆಲ್ ಬೆಲೆಯು ಕೂಡಾ ಏರಿದೆ. 0.68 ಪೈಸೆ ಹೆಚ್ಚಳವಾಗಿ, ಡಿಸೇಲ್ ಬೆಲೆಯು 89.70 ಗೆ ತಲುಪಿದೆ. ಚೆನ್ನೈನಲ್ಲಿ ಪೆಟ್ರೋಲ್ ದರ 105.94 ರೂಪಾಯಿ, ಡೀಸೆಲ್ ದರ 96.00 ರೂಪಾಯಿ ಇದೆ. ಕೋಲ್ಕತ್ತಾದಲ್ಲಿ ಪೆಟ್ರೋಲ್ ದರ 109.68 ರೂಪಾಯಿ, ಡೀಸೆಲ್ ದರ 94.62 ರೂಪಾಯಿ ಆಗಿದೆ. ದೇಶದ ವಾಣಿಜ್ಯ ನಗರಿ ಮುಂಬೈನಲ್ಲಿ ಇಂದು ಪೆಟ್ರೋಲ್ ಬೆಲೆ 85 ಪೈಸೆ ಹೆಚ್ಚಾಗಿ ರೂ. 115.04 ಗೆ ತಲುಪಿದರೆ, ಡೀಸೆಲ್ ಬೆಲೆ 75 ಪೈಸೆ ಹೆಚ್ಚಾಗಿದ್ದು ರೂ. 99.25. ಆಗಿದೆ. ಹೈದರಾಬಾದ್‌ನಲ್ಲಿ ಪೆಟ್ರೋಲ್ ದರ 113.61 ರೂಪಾಯಿ ಆಗಿದ್ದರೆ, ಡೀಸೆಲ್ ದರ 99.84 ರೂಪಾಯಿ ಆಗಿದೆ.












Click it and Unblock the Notifications