RCB Playoff Big Update: ಆರ್‌ಸಿಬಿ ಪ್ಲೇ-ಆಫ್ ಲೆಕ್ಕಾಚಾರದ ಬಿಗ್ ಅಪ್ಡೇಟ್
RCB Playoff IPL 2026: ಐಪಿಎಲ್ 2026ರ ಲೀಗ್ ಹಂತದ ಪಂದ್ಯಗಳು ಮುಗಿಯುವ ಹಂತದಲ್ಲಿವೆ. ಅದರಲ್ಲೂ ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಉತ್ತಮ ಪ್ರದರ್ಶನದ ಮೂಲಕ ಸದ್ಯ ಪಾಯಿಂಟ್ಸ್ ಟೇಬಲ್‌ನಲ್ಲಿ 16 ಅಂಕಗಳೊಂದಿಗೆ ಅಗ್ರಸ್ಥಾನ ಅಲಂಕರಿದೆ. ಆದರೂ ಕೆಳಗಿರುವ ತಂಡಗಳಿ ಇನ್ನೂ ಎರಡು ಪಂದ್ಯಗಳು ಬಾಕಿಯಿವೆ. ಹಾಗಾದ್ರೆ ಆರ್‌ಸಿಬಿ ಪ್ಲೇ-ಆಫ್ ಹಾದಿ ಸುಗಮವಾಗಲು ಇನ್ನೂ ಎಷ್ಟು ಗೆಲುವು ಸಾಧಿಸಬೇಕು ಗೊತ್ತಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಏಕನಾ ಕ್ರೀಡಾಂಗಣದಲ್ಲಿ ಶುಕ್ರವಾರ (ಮೇ 15) ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 7 ವಿಕೆಟ್‌ಗಳ ಸೋಲನುಭವಿಸಿದ ನಂತರ ಐಪಿಎಲ್ 2026ರ ಪ್ಲೇ-ಆಫ್ ರೇಸ್ ಮತ್ತಷ್ಟು ರೋಚಕತೆ ಪಡೆದಿದೆ. 5 ಬಾರಿಯ ಚಾಂಪಿಯನ್ ಆಗಿರುವ ಸಿಎಸ್‌ಕೆಗೆ ಈ ಸೋಲಿನಿಂದ ಭಾರಿ ಹಿನ್ನಡೆಯಾಗಿದೆ. ಈ ಸೋಲಿನಿಂದಾಗಿ ಅವರು ಐಪಿಎಲ್ ಅಂಕಪಟ್ಟಿಯಲ್ಲಿ ಒಂದು ಸ್ಥಾನವನ್ನು ಕಳೆದುಕೊಂಡು ಸದ್ಯ 6ನೇ ಸ್ಥಾನಕ್ಕೆ ಕುಸಿದಿದ್ದಾರೆ. ರಾಜಸ್ಥಾನ್ ರಾಯಲ್ಸ್ ಸಹ ಅಷ್ಟೇ ಅಂಕಗಳನ್ನು ಹೊಂದಿದ್ದರೂ ಅವರಿಗೆ ಇನ್ನೂ ಮೂರು ಪಂದ್ಯಗಳು ಬಾಕಿಯಿವೆ ಮತ್ತು ಉತ್ತಮ ನೆಟ್ ರನ್ ರೇಟ್ ಹೊಂದಿದ್ದಾರೆ.

ಎಲ್‌ಎಸ್‌ಜಿ ವಿರುದ್ಧ ಸಿಎಸ್‌ಕೆ ಹೀನಾಯ ಸೋಲು
ಮೇ 15 ನಡೆದ ರೋಚಕ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್‌ಕೆ ಕಾರ್ತಿಕ್ ಶರ್ಮಾ ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 187 ರನ್‌ಗಳ ಮೊತ್ತ ಪೇರಿಸಿತು. ಲಕ್ನೋ ಪರ ವೇಗಿ ಆಕಾಶ್ ಸಿಂಗ್ ಮೂರು ವಿಕೆಟ್ ಪಡೆದು ಮಿಂಚಿದರು. ಬಳಿಕ ಬ್ಯಾಟ್ ಬೀಸಿದ ಲಕ್ನೋ ಸೂಪರ್ ಜೈಂಟ್ಸ್ ಪರ ಮಿಚೆಲ್ ಮಾರ್ಷ್ ಕೇವಲ 38 ಎಸೆತಗಳಲ್ಲಿ 90 ರನ್ ಚಚ್ಚುವ ಮೂಲಕ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು.
ಪ್ಲೇ-ಆಫ್‌ಗೆ ಯಾವ ತಂಡ ಎಷ್ಟು % ಅವಕಾಶ ಹೊಂದಿದೆ?
ವರದಿಗಳ ಪ್ರಕಾರ, ಗುಜರಾತ್ ಟೈಟಾನ್ಸ್ ತಂಡ ಪ್ಲೇ-ಆಫ್‌ಗೆ ಅರ್ಹತೆ ಪಡೆಯುವ ಅತಿ ಹೆಚ್ಚು ಅಂದರೆ ಶೇಕಡಾ 98 ರಷ್ಟು ಅವಕಾಶವನ್ನು ಹೊಂದಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಶೇಕಡಾ 96.1ರಷ್ಟು ಅವಕಾಶದೊಂದಿಗೆ ಎರಡನೇ ಸ್ಥಾನದಲ್ಲಿದೆ. ಗ್ರೂಪ್ ಹಂತದಲ್ಲಿ ಉಭಯ ತಂಡಗಳಿಗೂ ಇನ್ನು 2 ಪಂದ್ಯಗಳು ಬಾಕಿ ಉಳಿದಿವೆ. ಸದ್ಯ ಈ ಎರಡೂ ತಂಡಗಳು ತಲಾ 16 ಅಂಕಗಳನ್ನು ಹೊಂದಿವೆ.
ಯಾವೆಲ್ಲಾ ತಂಡಗಳಿಗೆ ಪ್ಲೇ-ಆಫ್ ಹಾದಿ ಕಠಿಣ?
ಮೂರನೇ ಸ್ಥಾನದಲ್ಲಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡ 12ರಲ್ಲಿ 7 ಪಂದ್ಯಗಳಲ್ಲಿ ಗೆದ್ದು 14 ಅಂಕಗಳನ್ನು ಹೊಂದಿದ್ದು, ಪ್ಲೇ-ಆಫ್‌ಗೆ ಅರ್ಹತೆ ಪಡೆಯುವ ಶೇಕಡಾ 70.3ರಷ್ಟು ಅವಕಾಶವನ್ನು ಹೊಂದಿದೆ. ಇನ್ನು ರಾಜಸ್ಥಾನ್ ರಾಯಲ್ಸ್ ತಂಡವು ಪಂಜಾಬ್ ಕಿಂಗ್ಸ್‌ಗಿಂತ ಒಂದು ಅಂಕ ಕಡಿಮೆ ಹೊಂದಿದ್ದರೂ ಶೇಕಡಾ 51.6ರಷ್ಟು ಅವಕಾಶವನ್ನು ಹೊಂದಿದೆ. ಪಂಜಾಬ್ ಕಿಂಗ್ಸ್ 12 ಪಂದ್ಯಗಳಲ್ಲಿ 6ರಲ್ಲಿ ಗೆದ್ದು 13 ಅಂಕಗಳನ್ನು ಗಳಿಸಿದೆ. ಆದರೆ ಶ್ರೇಯಸ್ ಅಯ್ಯರ್ ನಾಯಕತ್ವದ ಈ ತಂಡವು ಇತ್ತೀಚಿನ ಪಂದ್ಯಗಳಲ್ಲಿ ಸತತವಾಗಿ ವೈಫಲ್ಯ ಅನುಭವಿಸುತ್ತಿರುವುದನ್ನು ಗಮನಿಸಿದರೆ ಅವರ ಅರ್ಹತೆಯ ಅವಕಾಶ ಶೇಕಡಾ 48.8ರಷ್ಟಿದೆ ಎಂದು ಹೇಳಲಾಗುತ್ತಿದೆ.
ಆರ್‌ಸಿಬಿ ಪ್ಲೇ-ಆಫ್ ಲೆಕ್ಕಾಚಾರ
ಸಿಎಸ್‌ಕೆ ತಂಡದ ಪ್ಲೇ-ಆಫ್ ಕನಸಿಗೆ ಎಲ್‌ಎಸ್‌ಜಿ ವಿರುದ್ಧದ ಸೋಲು ದೊಡ್ಡ ಹೊಡೆತ ನೀಡಿದೆ. ಸದ್ಯ ಅವರ ಅರ್ಹತೆಯ ಅವಕಾಶ ಶೇಕಡಾ 28.4ಕ್ಕೆ ಇಳಿಕೆ ಆಗಿದೆ. ಇನ್ನು ಕೊಲ್ಕತ್ತಾ ನೈಟ್ ರೈಡರ್ಸ್ ಪ್ಲೇ-ಆಫ್ ತಲುಪುವ ಸಾಧ್ಯತೆ ಶೇಕಡಾ 3.6 ರಷ್ಟಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್ ತಂಡವು ಶೇಕಡಾ 3.1ರಷ್ಟು ಮಾತ್ರ ಅವಕಾಶ ಹೊಂದಿದೆ. ಒಟ್ಟಿನಲ್ಲಿ ಆರ್‌ಸಿಬಿ ಇನ್ನೂ ಎರಡೂ ಪಂದ್ಯಗಳು ಬಾಕಿಯಿದ್ದು, ಅದರಲ್ಲಿ ಒಂದು ಗೆದ್ದರೂ ನೇರವಾಗಿ ಪ್ಲೇ-ಆಫ್ ಪ್ರವೇಶ ಪಡೆಯುವ ಸಾಧ್ಯತೆ ಹೆಚ್ಚಿದೆ. ಒಂದು ವೇಳೆ ಎರಡರಲ್ಲೂ ಗೆಲುವು ಸಾಧಿಸಿದರೆ ಬೆಂಗಳೂರು ತಂಡಕ್ಕೆ ಯಾವುದೇ ಭಯವಿರುವುದಿಲ್ಲ, ಹೆಚ್ಚಿನ ಅನುಕೂಲವಾಗಲಿದೆ. ಈಗಾಗಲೇ ಆರ್‌ಸಿಬಿ ಉತ್ತಮ ರನ್‌ರೇಟ್ ಕಾಯ್ದುಕೊಂಡಿದೆ. ಈಗಲೂ ಯಾವುದೇ ಭಯವಿಲ್ಲ.. ಆದರೂ ಮುಂದಿನ ಹಂತಕ್ಕೆ ಪ್ರವೇಶ ಪಡೆಯುವಾಗ ಯಾವದೇ ಅಡೆತಡೆಗಳು ಬರಬಾರದೆಂದರೆ ಮುಂದಿನ ಪಂದ್ಯಗಳಲ್ಲಿ ಗೆಲುವು ಸಾಧಿಸುವವುದು ಅನಿವಾರ್ಯವಾಗಿದೆ.












Click it and Unblock the Notifications