• search
 • Live TV
ಮಂಡ್ಯ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಂಡ್ಯ ಜಿಲ್ಲೆಯ ಮೂವರು ಸಚಿವರಿಗೆ ಸಂಪುಟದಿಂದ ಕೊಕ್ ಸಾಧ್ಯತೆ?

|
   ಮಂಡ್ಯ ಚುನಾವಣೆಯಲ್ಲಿ ದಳ ಸೋತಿದ್ದಕ್ಕೆ ಮೈತ್ರಿ ಸರ್ಕಾರದ ಕಥೆ ಏನು? | Oneindia Kannada

   ಬೆಂಗಳೂರು, ಮೇ 27: ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ಅದರಲ್ಲೂ ಮಂಡ್ಯ ಚುನಾವಣೆಯಲ್ಲಿ ಸರ್ಕಾರಕ್ಕೆ ಮುಖಭಂಗವಾಗಿದ್ದರಿಂದ ಸಹಜವಾಗಿ ಕರ್ನಾಟಕ ಸಚಿವ ಸಂಪುಟದಲ್ಲಿ ಬದಲಾವಣೆಯ ನಿರೀಕ್ಷೆಗಳು ಹುಟ್ಟಿಕೊಂಡಿವೆ. ಸಮನ್ವಯ ಸಮಿತಿ ಮುಖ್ಯಸ್ಥ, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸಂಪುಟ ಪುನರ್ ರಚನೆ ಸದ್ಯಕ್ಕಿಲ್ಲ ಎಂದಿದ್ದಾರೆ. ಆದರೆ, ಸಚಿವ ಸಂಪುಟ ಸೇರಬಲ್ಲ ಶಾಸಕರ ಸಂಭಾವ್ಯ ಪಟ್ಟಿ, ಸಂಪುಟದಿಂದ ಕೊಕ್ ಪಡೆಯಲಿರುವರ ಪಟ್ಟಿ ಸದ್ಯಕ್ಕೆ ಚರ್ಚೆಯಲ್ಲಿದೆ.

   ಮೈತ್ರಿ ಸರ್ಕಾರದ ಸಂಪುಟ ಪುನಾರಚನೆ : 6 ಸಚಿವರು ಸಂಪುಟದಿಂದ ಔಟ್

   ಕರ್ನಾಟಕದ ಮೈತ್ರಿ ಸರ್ಕಾರ ಸಂಪುಟ ಪುನಾರಚನೆಗೆ ಮುಂದಾಗಿದೆ. ಹೊಸ ಸಚಿವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮುಂದಾಗಿದ್ದಾರೆ ಎಂಬ ಸುದ್ದಿಯ ಬಗ್ಗೆ ಸಾರಿಗೆ ಸಚಿವ ಡಿ.ಸಿ ತಮ್ಮಣ್ಣ ಪ್ರತಿಕ್ರಿಯಿಸಿದ್ದಾರೆ.

   ಮೈತ್ರಿ ಸರ್ಕಾರದ ಸಂಪುಟ ಸೇರುವ ಸಂಭಾವ್ಯ ಶಾಸಕರ ಪಟ್ಟಿ

   ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ -ಕಾಂಗ್ರೆಸ್ ಅಭ್ಯರ್ಥಿ, ಮುಖ್ಯಮಂತ್ರಿಗಳ ಪುತ್ರ ನಿಖಿಲ್ ಕುಮಾರಸ್ವಾಮಿ ಅವರಿಗೆ ಸೋಲುಂಟಾಗಿದ್ದರಿಂದ ಮಂಡ್ಯ ಲೋಕಸಭಾ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳ ಶಾಸಕರ ತಲೆದಂಡ ಮಾಡಲು ಚಿಂತನೆ ನಡೆದಿದೆ.

   ಅದರಲ್ಲೂ ಮೇಲುಕೋಟೆ, ಮದ್ದೂರು ಹಾಗೂ ಕೆಆರ್ ನಗರ ವಿಧಾನಸಭಾ ಕ್ಷೇತ್ರಗಳ ಶಾಸಕರನ್ನು ಸಂಪುಟದಿಂದ ಹೊರಹಾಕುವ ಮುನ್ಸೂಚನೆ ಸಿಕ್ಕಿದೆ. ಹೀಗಾಗಿ, ಮದ್ದೂರು ಶಾಸಕ ಡಿಸಿ ತಮ್ಮಣ್ಣ ಅವರನ್ನು ಈ ಬಗ್ಗೆ ಪ್ರಶ್ನಿಸಲಾಯಿತು. ಇದಕ್ಕೆ ಉತ್ತರಿಸಿದ ತಮ್ಮಣ್ಣ, ಸಚಿವ ಸಂಪುಟಕ್ಕೆ ನಾನು ಬೇಡವೆನಿಸಿದರೆ, ಹೊರ ಹಾಕಲಿ ಎಂದಿದ್ದಾರೆ.

   ಯಾರು ಯಾರಿಗೆ ಎದುರಾಗಿದೆ ಭೀತಿ

   ಯಾರು ಯಾರಿಗೆ ಎದುರಾಗಿದೆ ಭೀತಿ

   ಮಂಡ್ಯ ಲೋಕಸಭೆ ಚುನಾವಣೆ ಉಸ್ತುವಾರಿ ವಹಿಸಿಕೊಂಡಿದ್ದ ಮೇಲುಕೋಟೆ ಶಾಸಕ, ಸಣ್ಣ ನೀರಾವರಿ ಸಚಿವ ಸಿ.ಎಸ್ ಪುಟ್ಟರಾಜು, ಮದ್ದೂರು ಶಾಸಕ, ಸಾರಿಗೆ ಸಚಿವ, ದೇವೇಗೌಡರ ಸಂಬಂಧಿ ಡಿಸಿ ತಮ್ಮಣ್ಣ, ಕೆಆರ್ ನಗರದ ಶಾಸಕ, ಪ್ರವಾಸೋದ್ಯಮ ಸಾ.ರಾ ಮಹೇಶ್ ಅವರ ಹೆಸರು ಮುಂಚೂಣಿಯಲ್ಲಿದೆ. ಆದರೆ, ಸಚಿವ ಸಂಪುಟದಿಂದ ಯಾರನ್ನು ಕೂಡಾ ಕೈಬಿಡಲಾಗುವುದಿಲ್ಲ, ಸಂಪುಟ ಪುನರ್ ರಚನೆ ಸದ್ಯಕ್ಕಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

   ಜೆಡಿಎಸ್ ನಾಯಕರಲ್ಲದೆ ಕಾಂಗ್ರೆಸ್ಸಿಗರಿಗೂ ಚಿಂತೆ

   ಜೆಡಿಎಸ್ ನಾಯಕರಲ್ಲದೆ ಕಾಂಗ್ರೆಸ್ಸಿಗರಿಗೂ ಚಿಂತೆ

   ಕಾಂಗ್ರೆಸ್ ಪಕ್ಷದಿಂದ ಸಿ.ಎಸ್.ಪುಟ್ಟರಂಗ ಶೆಟ್ಟಿ, ಡಾ.ಜಯಮಾಲಾ, ಯು.ಟಿ.ಖಾದರ್ ಸಚಿವ ಸ್ಥಾನ ಕಳೆದುಕೊಳ್ಳಬಹುದು ಎಂಬ ಸುದ್ದಿಗಳು ಹಬ್ಬಿವೆ.ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಿವಿ ಸದಾನಂದ ಗೌಡರ ವಿರುದ್ಧ ಸೋಲು ಕಂಡ ಸಚಿವ ಕೃಷ್ಣ ಬೈರೇಗೌಡ ಅವರ ಹೆಸರು ಸಹ ಕೇಳಿ ಬರುತ್ತಿದೆ. ಆದರೆ, ಸದ್ಯಕ್ಕೆ ಜೆಡಿಎಸ್ ಸಚಿವರನ್ನು ಮಾತ್ರ ಕೈಬಿಡಲಾಗುತ್ತದೆ ಎಂಬ ಸುದ್ದಿಯೂ ಹರಿದಾಡುತ್ತಿದೆ.

   6 ಸಚಿವರನ್ನು ಕೈ ಬಿಟ್ಟು 2 ಸ್ಥಾನ ಭರ್ತಿ

   6 ಸಚಿವರನ್ನು ಕೈ ಬಿಟ್ಟು 2 ಸ್ಥಾನ ಭರ್ತಿ

   ಕಾಂಗ್ರೆಸ್ಸಿನಿಂದ 3, ಜೆಡಿಎಸ್ಸಿನಿಂದ3 ಸಚಿವರನ್ನು ಸಂಪುಟದಿಂದ ಕೈ ಬಿಡಲಾಗುತ್ತದೆ. ಜೆಡಿಎಸ್‌ ಕೋಟಾದಲ್ಲಿ ಖಾಲಿ ಇರುವ 2 ಸಚಿವ ಸ್ಥಾನ ಭರ್ತಿ ಮಾಡಲಾಗುತ್ತದೆ. ಒಟ್ಟು 8 ಸಚಿವರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಂಪುಟವನ್ನು ಸೇರಲಿದ್ದಾರೆ ಎಂಬ ಮಾಹಿತಿಯಿದೆ. ಆದರೆ, ತಕ್ಷಣಕ್ಕೆ ಈ ಬಗ್ಗೆ ಯಾವುದೇ ಸುಳಿವು ಜೆಡಿಎಸ್ ಕಡೆಯಿಂದ ಬಂದಿಲ್ಲ.

   ಮೂರಲ್ಲ ಆರು ಸಚಿವರನ್ನು ಕೈ ಬಿಡುವುದು

   ಮೂರಲ್ಲ ಆರು ಸಚಿವರನ್ನು ಕೈ ಬಿಡುವುದು

   ಕಾಂಗ್ರೆಸ್‌ ಮತ್ತು ಜೆಡಿಎಸ್ ಪಕ್ಷದ ತಲಾ ಮೂವರು ಸಚಿವರನ್ನು ಕೈ ಬಿಡುವುದು. ಜೆಡಿಎಸ್ ಪಾಲಿನ ಎರಡು ಸಚಿವ ಸ್ಥಾನಗಳನ್ನು ಭರ್ತಿ ಮಾಡುವುದು ಸದ್ಯದ ಚಿಂತನೆ. ಕೆಲವು ಹಿರಿಯ ನಾಯಕರನ್ನು ಸಚಿವ ಸ್ಥಾನದಿಂದ ಕೆಳಗಿಳಿಸಿ ಪಕ್ಷ ಸಂಘಟನೆ ಹೊಣೆ ನೀಡಲು ತೀರ್ಮಾನಿಸಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ.

   English summary
   Let them drop from Cabinet, I don't mind, I m ready for the party to sack me from my post. If I am capable let the make me continue, otherwise I don't want any pst said Transport Minister DC Thammanna to ANI. After Mandya Lok sabha Election debacle Maddur MLA DC Thammanna likely to face heat.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X