Ice Cream: ಐಸ್ ಕ್ರೀಮ್ ಸೇವಿಸಿದ ಅವಳಿ ಮಕ್ಕಳು ಸಾವು
ಮಂಡ್ಯ, ಏಪ್ರಿಲ್ 18: ಐಸ್ ಕ್ರೀಮ್ ಸೇವಿಸಿದ ಬಳಿಕ ಅವಳಿ ಮಕ್ಕಳು ಸಾವನ್ನಪ್ಪಿರುವ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಬೆಟ್ಟಹಳ್ಳಿ ಗ್ರಾಮದಲ್ಲಿ ನಡೆದಿದೆ.
ಬೆಟ್ಟಹಳ್ಳಿ ಗ್ರಾಮದ ಪ್ರಸನ್ನ ಮತ್ತು ಪೂಜಾ ದಂಪತಿಯ ಒಂದೂವರೆ ವರ್ಷದ ತ್ರಿಶೂಲ್ ಮತ್ತು ತ್ರಿಶಾ ಮೃತಪಟ್ಟಿರುವ ಮಕ್ಕಳು. ಇವರ ಜೊತೆ ಐಸ್ ಕ್ರೀಮ್ ತಿಂದಿದ್ದ ತಾಯಿ ಪೂಜಾ ಕೂಡ ಅಸ್ವಸ್ಥಗೊಂಡಿದ್ದು, ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ವಾಹನದಲ್ಲಿ ಬೆಟ್ಟಹಳ್ಳಿಗೆ ತಂದಿದ್ದ ಐಸ್ ಕ್ರೀಂ ಖರೀದಿಸಿ ತಿಂದ ಕೆಲ ಹೊತ್ತಿನ ಬಳಿಕ ಮಕ್ಕಳು ಅಸ್ವಸ್ಥಗೊಂಡಿವೆ. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಮಕ್ಕಳು ಮೃತಪಟ್ಟಿದ್ದಾರೆ. ಇದೇ ವಾಹನದಲ್ಲಿ ಗ್ರಾಮದ ಇನ್ನೂ ಹಲವರು ಐಸ್ ಕ್ರೀಂ ಖರೀದಿಸಿ ತಿಂದಿದ್ದರು. ಬೇರೆಯವರಲ್ಲಿ ಯಾವುದೇ ಸಮಸ್ಯೆ ಕಂಡು ಬಂದಿಲ್ಲ. ಹೀಗಾಗಿ ಮಕ್ಕಳ ಸಾವು ಪ್ರಕರಣ ಅನುಮಾನಾಸ್ಪವಾಗಿದೆ. ಘಟನೆ ಸಂಬಂಧ ಅರಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಬಗ್ಗೆ ತನಿಖೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇಬ್ಬರು ಮಕ್ಕಳು, ಹೆಂಡತಿಗೆ ವಿಷ ಹಾಕಿ ಕೊಂದ ಪಾಪಿ
ಮಂಡ್ಯ: ಹೆಂಡತಿ, ಇಬ್ಬರು ಮಕ್ಕಳಿಗೆ ಕುಡಿಯೋ ನೀರಿನಲ್ಲಿ ವಿಷ ಹಾಕಿ ಕೊಂದಿರುವ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ನಡೆದಿದೆ. ಕೀರ್ತನಾ (23), ಜಯಸಿಂಹ (4), ರಿಷಿಕಾ (1.5) ಮೃತ ದುರ್ದೈವಿಗಳು. ನರಸಿಂಹ ಪ್ರಕರಣದ ಆರೋಪಿಯಾಗಿದ್ದಾನೆ.
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಕೋಪಗೊಂಡಿದ್ದ ನರಸಿಂಹ ಹೆಂಡತಿ, ಮಕ್ಕಳಿಗೆ ನರಸಿಂಹ ಕುಡಿಯುವ ನೀರಿಗೆ ವಿಷ ಹಾಕಿ ಕೊಂದಿದ್ದಾನೆ ಎನ್ನಲಾಗಿದೆ. ಕ್ರಿಮಿನಾಶಕ ಬೆರೆಸಿದ್ದ ನೀರು ಕುಡಿದ ಕೆಲವೊತ್ತಿನಲ್ಲೇ ಮನೆಯಲ್ಲಿದ್ದ ನಾಲ್ವರು ಅಸ್ವಸ್ಥರಾಗಿದ್ದಾರೆ. ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗದಲ್ಲಿ ಮಕ್ಕಳು ಸಾವನ್ನಪ್ಪಿದ್ದಾರೆ. ಆಸ್ಪತ್ರೆಗೆ ಹೋದ ಬಳಿಕ ಕೀರ್ತನಾ ಎಂಬ ಮಹಿಳೆ ಪ್ರಾಣ ಬಿಟ್ಟಿದ್ದಾರೆ. ಸದ್ಯ ನರಸಿಂಹಗೆ ನಾಗಮಂಗಲ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸಂಬಂಧ ನಾಗಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.











Click it and Unblock the Notifications