ಕರ್ನಾಟಕದ ಈ 4 ಜಿಲ್ಲೆಗಳಲ್ಲಿ ಹೊಸ ಕೈಗಾರಿಕೆಗಳ ನಿರೀಕ್ಷೆ; ಬೃಹತ್ ಬಂಡವಾಳ ಹೂಡಿಕೆಗೆ 8 ಕಂಪನಿಗಳ ಸಕಾರಾತ್ಮಕ ಸ್ಪಂದನೆ

ಬೆಂಗಳೂರು: ಕರ್ನಾಟಕ ಕೈಗಾರಿಕಾ ಕ್ಷೇತ್ರಕ್ಕೆ ಬಂಡವಾಳ ಸೆಳೆಯುವ ಮಹತ್ವ ಉಪಕ್ರಮವನ್ನು ರಾಜ್ಯ ಸರ್ಕಾರ ಮುಂದುವರಿಸಿದೆ. ಪರಿಣಾಮ 8 ವಿದೇಶಿ ಕಂಪನಿಗಳು ರಾಜ್ಯದಲ್ಲಿ ಹೂಡಿಕೆಗೆ ಒಲವು ವ್ಯಕ್ತಪಡಿಸಿವೆ. ಮುಂದಿನ ದಿನಗಳಲ್ಲಿ ಉತ್ತರ ಕರ್ನಾಟಕದ 3 ಸೇರಿ ಒಟ್ಟು ನಾಲ್ಕು ರಾಜ್ಯಗಳಲ್ಲಿ ಕೈಗಾರಿಕೆಳು ಅಭಿವೃದ್ಧಿ ಆಗುವ ಎಲ್ಲ ಲಕ್ಷಣಗಳು ಕಾಣಿಸುತ್ತಿವೆ. ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಅವರು, ಪೂರ್ವ ಭಾರತದತ್ತ ಗಮನ ಹರಿಸಿರುವ 8 ಪ್ರಮುಖ ಕಂಪನಿಗಳ ಜತೆ ಸೋಮವಾರ ಕೋಲ್ಕತ್ತಾದಲ್ಲಿ ಮಾತುಕತೆ ನಡೆಸಿದರು.

ಸಚಿವ ಎಂಬಿ ಪಾಟೀಲರು, ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಖುಷ್ಬೂ ಗೋಯೆಲ್ ಮುಂತಾದವರಿದ್ದ ರಾಜ್ಯ ಸರ್ಕಾರದ ಉನ್ನತ ಮಟ್ಟದ ನಿಯೋಗವು ಕೊಲ್ಕತ್ತದಲ್ಲಿ ವಿದೇಶಿ ಕಂಪನಿಗಳ ಮುಖ್ಯಸ್ಥರನ್ನು ಭೇಟಿ ಮಾಡಿತು.

Industrial Growth

ಪ್ಲೈವುಡ್ ತಯಾರಿಕೆಗೆ ಹೆಸರಾಗಿರುವ ಗ್ರೀನ್ ಪ್ಲೈ, ಗಣಿಗಾರಿಕೆ ಮತ್ತು ಖನಿಜ ಸಂಸ್ಕರಣೆಗೆ ಹೆಸರಾಗಿರುವ ತೇಗಾ ಇಂಡಸ್ಟ್ರೀಸ್, ಕೃಷ್ಯುತ್ಪನ್ನ ಸಂಸ್ಕರಣೆಯಲ್ಲಿ ಮುಂಚೂಣಿಯಲ್ಲಿರುವ ರೀಗಾಲ್ ರಿಸೋರ್ಸಸ್, ಗ್ರಾಫೈಟ್ ಎಲೆಕ್ಟ್ರೋಡ್ ತಯಾರಿಕೆಗೆ ಖ್ಯಾತವಾಗಿರುವ ಗ್ರಾಫೈಟ್ ಇಂಡಿಯಾ, ಸೋಲಾರ್ ಪಿ.ವಿ. ಮಾಡ್ಯೂಲ್ ತಯಾರಿಸುವ ವಿಕ್ರಂ ಸೋಲಾರ್, ಉಡುಪು ತಯಾರಿಕೆಗೆ ಹೆಸರಾಗಿರುವ ರೂಪಾ ಇಂಡಸ್ಟ್ರೀಸ್ ಕಂಪನಿಯ ಉನ್ನತ ಮಟ್ಟದ ಪ್ರತಿನಿಧಿಗಳ ಜತೆ ಎಂ.ಬಿ.ಪಾಟೀಲರು ವಿಸ್ತೃತ ವಿಚಾರ ವಿನಿಮಯ ನಡೆಸಿದರು. ಜೊತೆಗೆ ಕರ್ನಾಟಕದಲ್ಲಿರುವ ವಿಫಲು ಹೂಡಿಕೆ ಅವಕಾಶ, ಕೈಗಾರಿಕೆ ಅಭಿವೃದ್ಧಿ, ವಿಸ್ತರಣೆಗೆ ಬೇಕಾದ ಸಂಪನ್ಮೂಲಗಳನ್ನು ಮನವರಿಕೆ ಮಾಡಿಕೊಟ್ಟರು.

E-Bus: 'ಸೋಮಾರಿ-ಕಮಿಷನ್' ಕಾಂಗ್ರೆಸ್ ಸರ್ಕಾರದಿಂದ ಬೆಂಗಳೂರಿಗೆ 4,500 ಇ-ಬಸ್ ಕೈತಪ್ಪುವ ಸಾಧ್ಯತೆ! ಜೆಡಿಎಸ್
E-Bus: 'ಸೋಮಾರಿ-ಕಮಿಷನ್' ಕಾಂಗ್ರೆಸ್ ಸರ್ಕಾರದಿಂದ ಬೆಂಗಳೂರಿಗೆ 4,500 ಇ-ಬಸ್ ಕೈತಪ್ಪುವ ಸಾಧ್ಯತೆ! ಜೆಡಿಎಸ್

ಈ 4 ಜಿಲ್ಲೆಗಳಲ್ಲಿ ಇವಿ ವಾಹನ ತಯಾರಿಕೆ, ಇತರ ಕೈಗಾರಿಕೆ?

ರಾಜ್ಯ ಸರ್ಕಾರವು ಬಿಯಾಂಡ್ ಬೆಂಗಳೂರು ಉಪಕ್ರಮದಡಿ ಸಮಗ್ರ ಕೈಗಾರಿಕಾ ಬೆಳವಣಿಗೆಗೆ ಒತ್ತು ಕೊಟ್ಟಿದೆ. ಆದ್ದರಿಂದ ಹೂಡಿಕೆದಾರರು ವಿಜಯಪುರ, ತುಮಕೂರು, ಬೆಳಗಾವಿ, ಹುಬ್ಬಳ್ಳಿ ಮುಂತಾದ ಕಡೆಗಳತ್ತಲೂ ಗಮನ ಹರಿಸಬೇಕು. ಈ ಭಾಗಗಳಲ್ಲಿ ವಿದ್ಯುತ್ ಚಾಲಿತ ವಾಹನಗಳ ತಯಾರಿಕೆ, ಮರುಬಳಕೆ ಇಂಧನ ಮುಂತಾದ ಕ್ಷೇತ್ರಗಳಲ್ಲಿ ಹೆಚ್ಚಿನ ಬೆಳವಣಿಗೆಗೆ ಯಥೇಚ್ಛ ಅವಕಾಶಗಳಿವೆ. ಹೀಗಾಗಿ ಕಂಪನಿಗಳ ನಿಯೋಗವು ಭೂಮಿ, ನೀರು, ವಿದ್ಯುತ್ ಲಭ್ಯತೆಗಳ ಬಗ್ಗೆ ತಿಳಿದುಕೊಳ್ಳಲು ರಾಜ್ಯಕ್ಕೆ ಭೇಟಿ ನೀಡಬೇಕು. ಇದಕ್ಕೆ ರಾಜ್ಯ ಸರಕಾರವು ಸಂಪೂರ್ಣ ಸಹಕಾರ ನೀಡಲಿದೆ ಎಂದು ಅವರು ಮನದಟ್ಟು ಮಾಡಿಕೊಟ್ಟಿದ್ದಾರೆ.

ತೊಗರಿಬೇಳೆ ಉತ್ಪನ್ನಗಳಿಗೆ ಗಮನ ಕೊಡಿ

ರೀಗಾಲ್ ರಿಸೋರ್ಸಸ್ ಕಂಪನಿಯು ಸದ್ಯಕ್ಕೆ ಮೆಕ್ಕೆಜೋಳದ ಉತ್ಪನ್ನಗಳನ್ನು ಮಾತ್ರ ಉತ್ಪಾದಿಸುತ್ತಿದೆ. ತೊಗರಿಬೇಳೆ ಮತ್ತಿತರ ಕೃಷಿ ಉತ್ಪನ್ನಗಳ ಕಡೆಗೂ ಅದು ಗಮನ ಹರಿಸಬೇಕು. ಹಾಗೆಯೇ, ರೂಪಾ ಇಂಡಸ್ಟ್ರೀಸ್ ರಾಜ್ಯದಲ್ಲಿ ತನ್ನ ಮತ್ತೊಂದು ತಯಾರಿಕಾ ಘಟಕವನ್ನು ಸ್ಥಾಪಿಸಲು ಬಯಸಿದೆ. ಈ ಉದ್ದೇಶಿತ ಯೋಜನೆಗಳಿಗೆ ಸಂಬಂಧಿಸಿ ಮತ್ತಷ್ಟು ಚರ್ಚಿಸಿ, ಮುಂದಿನ ಹಂತಕ್ಕೆ ಕೊಂಡೊಯ್ಯಲಾಗುವುದು ಎಂದು ಪಾಟೀಲ ವಿವರಿಸಿದರು.

ಇಂದಿನ ಸಭೆಗಳಲ್ಲಿ ಭಾಗವಹಿಸಿದ್ದ ಗ್ರೀನ್ ಪ್ಲೈ ಕಂಪನಿಯ ಸಿಎಫ್ಒ ಸಂಜೀವ್ ಕೇಸರಿ ಮತ್ತು ಉಪಾಧ್ಯಕ್ಷ ಜಿತೇಂದ್ರಕುಮಾರ್ ಜೈನ್, ತೇಗಾ ಇಂಡಸ್ಟ್ರೀಸ್ ಪರವಾಗಿ ಅದರ ಜಾಗತಿಕ ಅಧ್ಯಕ್ಷ ಪ್ರತೀಕ್ ಬಸು ರಾಯ್, ರೀಗಾಲ್ ರಿಸೋರ್ಸಸ್ ಪರವಾಗಿ ಸಿಎಫ್ಒ ರೋಹನ್ ಕಿಶೋರಪುರಿಯಾ ಮತ್ತು ಸಿದ್ಧಾರ್ಥ ವರ್ಮಾ, ಗ್ರಾಫೈಟ್ ಇಂಡಿಯಾದ ಕಾರ್ಯ ನಿರ್ವಾಹಕ ನಿರ್ದೇಶಕ ಆಶುತಕೋಷ್ ದೀಕ್ಷಿತ್ ಮತ್ತು ಉಪಾಧ್ಯಕ್ಷ ಸಿದ್ಧಾಂತ್ ಬಾಂಗೂರ್, ವಿಕ್ರಂ ಸೋಲಾರ್ ಕಂಪನಿಯ ಉಪಾಧ್ಯಕ್ಷ ವಿವೇಕ್ ಚೌಧರಿ ಮತ್ತು ಸಿಇಒ ಅರುಣ್ ಮಿತ್ತಲ್, ರೂಪಾ ಇಂಡಸ್ಟ್ರೀಸ್ ಸಂಸ್ಥೆಯ ಸಿಎಫ್ಒ ಸಮಿತ್ ಕೋವಾಲ ಮತ್ತು ಹಣಕಾಸು ವ್ಯವಸ್ಥಾಪಕ ಪ್ರವೀಣ್ ಅವರು ಸಚಿವರ ಮಾತಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

ಆದಷ್ಟು ಶೀಘ್ರವೇ ವಿದೇಶಿ ಕಂಪನಿಗಳ ಮುಖ್ಯಸ್ಥರು ಸಚಿವರ ಆಹ್ವಾನದ ಮೇರೆಗೆ ಹೂಡಿಕೆ ಅವಕಾಶಗಳು, ಸಂಪನ್ಮೂಲಗಳ ವೀಕ್ಷಣೆಗಾಗಿ ರಾಜ್ಯಕ್ಕೆ ಆಗಮಿಸಬಹುದು. ಈ ಬೃಹತ್ ಹೂಡಿಕೆ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ ಮತ್ತಷ್ಟು ಮಾಹಿತಿಗಳು ಸಿಗಲಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+