ಮಂಡ್ಯದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪರ ದರ್ಶನ ಪ್ರಚಾರ ಮಾಡಿದ್ದು ಏಕೆ? ಇದಕ್ಕೂ ಸುಮಲತಾಗೂ ಸಂಬಂಧ ಇದೆಯಾ?

ಬೆಂಗಳೂರು, ಏಪ್ರಿಲ್‌ 18: ಲೋಕಸಭಾ ಚುನಾವಣೆ ಹಿನ್ನೆಲೆ ರಾಜ್ಯದಲ್ಲಿ ತಮ್ಮ ತಮ್ಮ ಅಭ್ಯರ್ಥಿಗಳ ಪರವಾಗಿ ಅಬ್ಬರ ಪ್ರಚಾರದಲ್ಲಿ ರಾಜಕೀಯ ನಾಯಕರು ತೊಡಿಗಿದ್ದು, ಮಂಡ್ಯ ಸಂಸದೆ ಸುಮಲತಾ ಮಾನಸ ಪುತ್ರ ಎಂದೇ ಕರೆಸಿಕೊಂಡಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮಂಡ್ಯ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರ ಪ್ರಚಾರ ಮಾಡಿ ಅಚ್ಚರಿ ಮೂಡಿಸಿದ್ದಾರೆ.

ಹೌದು, ಕಳೆದ ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಸುಮಲತಾ ಅಂಬರೀಷ್ ಅವರ ಪರವಾಗಿ ಪ್ರಚಾರ ನಡೆಸಿದ್ದ ನಟ ದರ್ಶನ್‌ ಅವರು ಇದೀಗ ಮಂಡ್ಯ ಕಾಂಗ್ರೆಸ್‌ ಅಭ್ಯರ್ಥಿ ಪರವಾಗಿ ಪ್ರಚಾರ ನಡೆಸಿದ್ದು, ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಕೆಲ ದಿನಗಳ ಹಿಂದೆಯಷ್ಟೇ ಸುಮಲತಾ ಅಂಬರೀಶ್‌ ಅವರು ಕಾರ್ಯಕರ್ತರ ಜೊತೆಗೆ ಸಭೆ ನಡೆಸಿ ನಾನು ಈ ಬಾರಿ ಚುನಾವಣೆಯಲ್ಲಿ ಸ್ಪರ್ಧೆ ನಡೆಸುವುದಿಲ್ಲ ಎಂದು ಹೇಳಿದ್ರು. ಅಲ್ಲದೇ ಸುಮಲತಾ ಅಂಬರೀಶ್‌ ಅವರು ಬಿಜೆಪಿ ಸೇರ್ಪಡೆಯಾದ ಬಳಿಕ ದರ್ಶನ ಅವರು ಕಾಂಗ್ರೆಸ್‌ ಅಭ್ಯರ್ಥಿ ಪರ ಪ್ರಚಾರ ಮಾಡಿದ್ದು ಯಾಕೆ ಎನ್ನುವ ಪ್ರಶ್ನೆ ಉದ್ಭವಿಸಿದೆ.

Lok Sabha Poll Why Actor Darshan Campaign For Congress Candidate Star Chandru In Mandya

ಮಂಡ್ಯ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿ ಹೆಚ್​ಡಿ ಕುಮಾರಸ್ವಾಮಿಯವರ ಎದುರಾಳಿ ಸ್ಟಾರ್ ಚಂದ್ರು ಅವರ ಪರ ನಟ ದರ್ಶನ ಪರ ಪ್ರಚಾರ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ. ಅಲ್ಲದೇ ಸುಮಲತಾ ಅಂಬರೀಶ್‌ ಅವರು ಬಿಜೆಪಿ ಸೇರ್ಪಡೆಯಾದ ಬಳಿಕ ಸೈಲೆಂಟ್‌ ಆಗಿದ್ದು, ಇದೀಗ ದರ್ಶನ್ 'ಕೈ' ಅಭ್ಯರ್ಥಿ ಪರ ಪ್ರಚಾರಕ್ಕಿಳಿದಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.

ಸುಮಲತಾ ಅಂಬರೀಶ್‌ ಅವರನ್ನು ಅಮ್ಮ ಎಂದು ಗೌರವಿಸುವ ದರ್ಶನ್‌, ಅವರು ಹಾಳು ಬಾವಿಗೆ ಬೀಳು ಎಂದರೂ ಬೀಳ್ತೇನೆ ಎಂದು ನಟ ದರ್ಶನ ಹೇಳಿದ್ರು. ಆದರೆ, ಈಗ ಸುಮಲತಾ ಅಂಬರೀಶ್‌ ಅವರು ಬೆಂಬಲಿಸಿರುವ ಅಭ್ಯರ್ಥಿ ವಿರುದ್ಧ ದರ್ಶನ್‌ ಪ್ರಚಾರ ನಡೆಸುತ್ತಿದ್ದಾರೆ. ಇನ್ನೂ ನಟ ದರ್ಶನ್‌ ಅವರು ಕಾಂಗ್ರೆಸ್‌ ಅಭ್ಯರ್ಥಿ ಪರ ಪ್ರಚಾರ ನಡೆಸಿರುವುದು ಎಚ್‌ಡಿ ಕುಮಾರಸ್ವಾಮಿ ಅಸಮಾಧಾನಕ್ಕೆ ಕಾರಣವಾಗಿದೆ. ನಟ ದರ್ಶನ್‌ ಅವರು ಎಚ್‌ಡಿ ಕುಮಾರಸ್ವಾಮಿ ಅವರ ಮೇಲಿರುವ ಮುನಿಸು ಕಾರಣ ಕಾಂಗ್ರೆಸ್‌ ಅಭ್ಯರ್ಥಿ ಪರ ಪ್ರಚಾರ ನಡೆಸಿದ್ದಾರೆ ಎನ್ನುವ ಊಹಾಪೋಹಗಳು ಹರಿದಾಡುತ್ತಿವೆ.

ಕಾಂಗ್ರೆಸ್‌ ಅಭ್ಯರ್ಥಿ ಪರ ನಟ ದರ್ಶನ ಪ್ರಚಾರ ನಡೆಸಿದ್ದು, ಈ ಪ್ರಚಾರಕ್ಕೂ ಮಂಡ್ಯ ಹಾಲಿ ಸಂಸದೆ ಸುಮಲತಾ ಅಂಬರೀಶ್‌ ಕ್ಕೂ ಸಂಬಂಧವಿದ್ಯಾ ಎನ್ನುವ ಚರ್ಚೆ ರಾಜ್ಯ ರಾಜಕೀಯದಲ್ಲಿ ಕೇಳಿ ಬರುತ್ತಿದೆ. ಇನ್ನೂ ಕಾಂಗ್ರೆಸ್‌ ಅಭ್ಯರ್ಥಿ ಪರ ಪ್ರಚಾರದ ಕುರಿತು ನಟ ದರ್ಶನ ಮಾತನಾಡಿ, ನಾನು ಪಕ್ಷದ ಪರ ಬರುವುದಿಲ್ಲ. ವ್ಯಕ್ತಿಯ ಪರ ನಿಲ್ಲುತ್ತೇನೆ. ಮಾಧ್ಯಮದವರು ಏನೇನೋ ಹಾಕಿದರೆ ಕಷ್ಟ. ಸುಮಲತಾ ಅವರಿಗೆ ಟಿಕೆಟ್‌ ಸಿಕ್ಕಿಲ್ಲ, ಹೀಗಾಗಿ ನೀವು ನಮ್ಮ ಪರ ಪ್ರಚಾರಕ್ಕೆ ಬರಬೇಕು ಎಂದು ಉದಯ ಗೌಡ್ರು ಕರೆದಿದ್ದರು. ಅದಕ್ಕೆ ಸ್ಟಾರ್‌ ಚಂದ್ರು ಪರ ಪ್ರಚಾರಕ್ಕೆ ಬಂದಿದ್ದೇನೆ. ಸ್ಟಾರ್‌ ಚಂದ್ರುಗೆ ಮತ ನೀಡಿ, ಉದಯ್‌ ಗೌಡ್ರು, ನರೇಂದ್ರ ಅವರ ಕೈ ಬಲಪಡಿಸಿ ಎಂದು ನಟ ದರ್ಶನ್‌ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+