ಕ್ವಿಟ್ ಎನ್‌ಡಿಎ ಮತ್ತು ಸೇವ್ ಇಂಡಿಯಾ: ಪ್ರೊ. ಮಹೇಶ್‌ಚಂದ್ರಗುರು

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜಿಂದಾಬಾದ್ ಎನ್ನುವವರು ಅಪ್ಪನಿಗೆ ಹುಟ್ಟಿದವರಲ್ಲ ಎಂದು ವಿಶ್ರಾಂತ ಪ್ರಾಧ್ಯಾಪಕ ಬಿ.ಪಿ.ಮಹೇಶ್ ಚಂದ್ರಗುರು ಆಕ್ರೋಶ ವ್ಯಕ್ತಪಡಿಸಿದರು.

ಸುದ್ಧಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಂವಿಧಾನ ಮುಟ್ಟಿದರೆ ರಕ್ತಪಾತವಾಗುತ್ತದೆ. ನಾವು ಗುಲಾಮಗಿರಿ ಒಪ್ಪುಕೊಳ್ಳುವುದಿಲ್ಲ, 35 ವರ್ಷ ನಾನು ಫ್ರೊಫೆಸರ್ ಕೆಲಸ ಮಾಡಿದಿನಿ, ಮೋದಿ ಜಿಂದಾಬಾದ್ ಎನ್ನುವವರು ಅಪ್ಪಂಗೆ ಹುಟ್ಟಿದವರಲ್ಲ ನಾನು ಓಪನ್ನಾಗಿಯೇ ಹೇಳುತ್ತೇನೆ ಯಾರು ಏನೇ ಹೇಳಿದರು ನಮಗೆ ಚಿಂತೆಯಿಲ್ಲ, ನಮಗೆ ಕರ್ನಾಟಕ ಜಿಂದಾಬಾದ್ ಬೇಕು ಎಂದು ಕಿಡಿಕಾರಿದರು.

Quit NDA and Save India Prof Maheshchandra Guru Urges Support for Congress

ಈಗಾಗಲೇ ಕ್ವಿಟ್ ಎನ್‌ಡಿಎ ಮತ್ತು ಸೇವ್ ಇಂಡಿಯಾ ಎಂಬ ಘೋಷಣೆಯೊಂದಿಗೆ ಸಂವಿಧಾನ ಉಳಿಸುವ ಏಕೈಕ ಪಕ್ಷವಾದ ಕಾಂಗ್ರೆಸ್‌ಗೆ ಹಾಗೂ ಕರ್ನಾಟಕ ರಾಜ್ಯದಲ್ಲಿ ಉತ್ತಮ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬೆಂಬಲಿಸುತ್ತಿದ್ದೇವೆ ಎಂದರು.

ಕಾಂಗ್ರೆಸ್‌ನಿಂದ ಮಾತ್ರ ಸಂವಿಧಾನ ರಕ್ಷಣೆ ಸಾಧ್ಯ

ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಂವಿಧಾನ ರಕ್ಷಣೆ ಮಾಡಲು ಸಾಧ್ಯ, 1980ರ ದಶಕದಲ್ಲಿ ಆರಂಭಗೊಂಡ ಆರ್‌ಎಸ್‌ಎಸ್ ನಿರ್ದೇಶಿತ ಕೋಮುವಾದಿ ರಾಜಕಾರಣ ಭಾರತದ ಸಾಮಾಜಿಕ ನ್ಯಾಯ ಚಳವಳಿಗೆ ಮಾರಣಾಂತಿಕ ಕೊಡಲಿ ಪೆಟ್ಟು ನೀಡಿತು. ಮಂದಿರವಾದಿಗಳು ಧಾರ್ಮಿಕ ಅಲ್ಪಸಖ್ಯಾತರು ಮತ್ತು ಅತಿ ಹಿಂದುಳಿದ ಸಮುದಾಗಳ ಬದುಕಿನ ಜೊತೆ ಚೆಲ್ಲಾಟವಾಡಿ ಕೋಮುವಾದಿ ರಾಜಕಾರಣವನ್ನು ಬಲಪಡಿಸಿ ಸಾಂವಿಧಾನಿಕ ಆಶಯಗಳನ್ನು ಗಾಳಿಗೆ ತೂರಿದರು ಎಂದು ಆರೋಪಿಸಿದರು.

ಕಾಂಗ್ರೆಸ್‌ನವರು ಬಡತನ ನಿರ್ಮೂಲನೆ ಮಾಡಲು ಐದು ಗ್ಯಾರಂಟಿಗಳನ್ನು ತಂದಿದೆ, ಇದು ಆಶಾದಾಯಕ ಬೆಳವಣಿಗೆಯಾಗಿದೆ, ಇದು ಎನ್‌ಡಿಎ ಅಧಿಕಾರಕ್ಕೆ ಬುರುವ ಮುನ್ನ ನಡೆಸಿದ ಯುಪಿಎ ಸರ್ಕಾರ ಉತ್ತಮ ಆಡಳಿತ ನೀಡಿರುವ ಸಮಾಧಾನವಿದೆ, ನಮ್ಮ ಕಾಂಗ್ರೆಸ್ ನೇತೃತ್ವದ ಯುಪಿಎ ಎಂದಿಗೂ ರಾಜ್ಯಾಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳಲಿಲ್ಲ ಎಂಬುದು ಸಹ ಸಂತಸ ತಂದಿದೆ ಎಂದರು.

ಸಿದ್ದರಾಮಯ್ಯ ಅವರು ಜತ್ಯಾತೀತ ಮನೋಭಾವ ಹೊಂದಿದ ಪುಣ್ಯಾತ್ಮ ಅಂತಹವರಿಗೆ ಮತ ನೀಡುವುದರಲ್ಲಿ ತಪ್ಪಿಲ್ಲ, ಸಂವಿಧಾನ ಬದಲಿಸುತ್ತೇವೆ ಎಂದು ಹೇಳುವ ಬಿಜೆಪಿಯನ್ನು ಕಿತ್ತೊಗೆಯಬೇಕು. ಬಡವರ ಅಭಿವೃದ್ಧಿಗಾಗಿ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ, ನರಸಿಂಹ ರಾವ್, ಮನಮೋಃನ್‌ಸಿಂಗ್ ಮೊದಲಾದವರು ನಡೆಸಿದ ಪ್ರಯತ್ನಗಳು ವಿಶೇಷ ಮಹತ್ವ ಹೊಂದಿದ್ದವು ಎಂದು ವಿವರಿಸಿದರು.

ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶ್‌ಗೌಡ ಮಾತನಾಡಿ, ಈ ದೇಶದಲ್ಲಿ ಆಗುತ್ತಿರುವ ನಡವಳಿಕೆ, ನೀಡುತ್ತಿರುವ ಹೇಳಿಕೆಗಳ ಬಗ್ಗೆ ಚಿಂತನೆ ನಡೆಯಬೇಕು. ಸಾಮಾನ್ಯ ಕುಟುಂಬದ ವ್ಯಕ್ತಿ ಬದುಕುವ ಅವಕಾಶವನ್ನು ಸಂವಿಧಾನ ಕಲ್ಪಿಸಿದೆ, ಆದರೆ ಸಂವಿಧಾನದ ಆಶಯಗಳು ಕುಂಠಿತವಾಗುತ್ತಿರುವ ಹಿನ್ನೆಲೆಯಲ್ಲಿ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಉಳಿಸಬೇಕಿದ್ದು, ಲೋಕಸಭಾ ಚುನಾವಣೆಯಲ್ಲಿ ಉತ್ತಮರನ್ನು ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+