Lok Sabha Elections 2024:ಮತದಾನದ ದಿನ ಏನಿರುತ್ತೆ...ಏನಿರಲ್ಲ..?

ಬೆಂಗಳೂರು, ಏಪ್ರಿಲ್. 24: ಲೋಕಸಭಾ ಚುನಾವಣೆ ಎರಡನೇ ಹಂತದ ಮತದಾನ ಏಪ್ರಿಲ್ 26ರ ಶುಕ್ರವಾರ ನಡೆಯಲಿದೆ. ಇದು ರಾಜ್ಯದಲ್ಲಿ ಮೊದಲ ಹಂತದ ಮತದಾನ. ನಂತರ ಮೇ 7ರಂದು ಎರಡನೇ ಹಂತದ ಮತದಾನ ನಡೆಯಲಿದೆ. ಹೀಗಾಗಿ ಮತದಾನ ನಡೆಯುವ ದಿನ ರಾಜ್ಯ ಸರ್ಕಾರ ರಜೆ ಘೋಷಿಸಿದೆ.

ಬೆಂಗಳೂರು ಕೂಡ ಲೋಕಸಭಾ ಚುನಾವಣೆ 2024 ರ ಹಂತ 2 ರ ಭಾಗವಾಗಿ ಮತ ಚಲಾಯಿಸಲು ಸಜ್ಜಾಗಿದೆ. ರಜೆ ಘೋಷಣೆಯಾಗಿರುವ ಕಾರಣ ಮತ್ತು ಮತ ಚಲಾಯಿಸಲು ಜನ ತೆರಳುವ ಕಾರಣ ಮತದಾನದ ದಿನ ನಗರದಲ್ಲಿ ಏನೇನು ಸಿಗಲಿದೆ.. ಯಾವ ಯಾವ ಸೇವೆಗಳು ಇರಲಿವೆ...? ಏನೇನು ಇರುವುದಿಲ್ಲ ಎಂಬುದನ್ನು ತಿಳಿಯೋಣ.

What s closed and what s open in city during Lok Sabha Elections

ಚುನಾವಣಾ ದಿನ ಏನೇನು ಮುಚ್ಚಲಿದೆ?

ಚುನಾವಣಾ ದಿನದಂದು ರೂಢಿಯಲ್ಲಿರುವಂತೆ, ಬೆಂಗಳೂರಿನ ಶಾಲಾ ಕಾಲೇಜುಗಳು ಮತ್ತು ಇತರ ಶಿಕ್ಷಣ ಸಂಸ್ಥೆಗಳು ಮುಚ್ಚಲ್ಪಡುತ್ತವೆ. ಅನಗತ್ಯ ಸರ್ಕಾರಿ ಸೇವೆಗಳು, ಸರ್ಕಾರಿ ಕಚೇರಿಗಳನ್ನು ಚುನಾವಣಾ ದಿನದಂದು ಮುಚ್ಚಲಾಗುತ್ತದೆ. ಹೆಚ್ಚುವರಿಯಾಗಿ, ಕಾರ್ಪೊರೇಟ್ ಕಚೇರಿಗಳು ತಮ್ಮ ಉದ್ಯೋಗಿಗಳಿಗೆ ಮತದಾನ ಮಾಡಲು ಅನುಮತಿಸಲು ಕನಿಷ್ಠ ರಜೆಯನ್ನು ಒದಗಿಸುತ್ತವೆ. ಇದು ಕಾನೂನಿನ ಪ್ರಕಾರ ಕಡ್ಡಾಯವಾಗಿದೆ.

2024 ರ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕರ್ನಾಟಕ ಹೈಕೋರ್ಟ್ ಏಪ್ರಿಲ್ 26 ಮತ್ತು ಮೇ 7 ರಂದು ಹೈಕೋರ್ಟ್ ಪೀಠಗಳಿಗೆ ಸಾರ್ವತ್ರಿಕ ರಜೆಯನ್ನು ಘೋಷಿಸಿದೆ. ಬ್ಯಾಂಕ್‌ಗಳು ಸಹ ಮುಚ್ಚಲ್ಪಡುತ್ತವೆ. ಇನ್ನು, ಏಪ್ರಿಲ್ 24 ರಂದು ಸಂಜೆ 5:00 ರಿಂದ ಏಪ್ರಿಲ್ 26 ರ ಮಧ್ಯರಾತ್ರಿ 12:00 ರವರೆಗೆ ಮದ್ಯದಂಗಡಿಗಳು ಮುಚ್ಚಲಿವೆ. ಈ ಸಮಯದಲ್ಲಿ ಮದ್ಯದ ಉತ್ಪಾದನೆ, ಮಾರಾಟ, ವಿತರಣೆ, ಸಾಗಣೆ, ಸಂಗ್ರಹಣೆ ಇತ್ಯಾದಿಗಳನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳ ಕಚೇರಿ ಆದೇಶವನ್ನು ಬಿಡುಗಡೆ ಮಾಡಿದೆ.

ಮತದಾನದ ದಿನದಂದು ಯಾವುದೇ ಅಹಿತಕರ ಘಟನೆಗಳನ್ನು ತಪ್ಪಿಸಲು, ಸಿಆರ್ಪಿಸಿಯ ಸೆಕ್ಷನ್ 144 ರ ಅಡಿಯಲ್ಲಿ ಬೆಂಗಳೂರು ನಗರ ಕಮಿಷನರೇಟ್ ವ್ಯಾಪ್ತಿಯಲ್ಲಿ ಏಪ್ರಿಲ್ 24 ರಂದು ಸಂಜೆ 6 ರಿಂದ ಏಪ್ರಿಲ್ 26 ರ ಮಧ್ಯರಾತ್ರಿಯವರೆಗೆ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ.

What s closed and what s open in city during Lok Sabha Elections

ಯಾವ ಯಾವ ಸೇವೆಗಳು ಸಿಗಲಿವೆ?

ನಗರ ಸಾರಿಗೆ ಬಸ್‌ಗಳಾದ ಬಿಎಂಟಿಸಿ, ಬಿಎಂಆರ್‌ಸಿಎಲ್ (ನಮ್ ಮೆಟ್ರೊ) ಆಸ್ಪತ್ರೆಗಳು ಮುಂತಾದ ಅಗತ್ಯ ಸೇವೆಗಳು ತೆರೆದಿರಲಿವೆ. ವಾಣಿಜ್ಯ ಸಂಸ್ಥೆಗಳು ಸಹ ತೆರೆದಿರುತ್ತವೆ. ಆದರೆ, ತಮ್ಮ ಅರ್ಹ ಉದ್ಯೋಗಿಗಳಿಗೆ ದಿನದ ಆರಂಭದಲ್ಲಿ ಮತ ಚಲಾಯಿಸಲು ಅವಕಾಶ ನೀಡಲು ತಡವಾಗಿ ಕಚೇರಿ ಓಪನ್ ಆಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+