• search
  • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರೈತರಿಗೆ ತಮ್ಮ ಉತ್ಪನ್ನಗಳ ನೇರ ಮಾರಾಟ ಹಕ್ಕು ನೀಡುವುದು ತಪ್ಪೇ: ಮೋದಿ

|

ವಾರಾಣಸಿ,ನವೆಂಬರ್ 30:ರೈತರಿಗೆ ನೇರವಾಗಿ ತಮ್ಮ ಉತ್ಪನ್ನಗಳ ಮಾರಾಟ ಹಕ್ಕು ನೀಡುವುದು ತಪ್ಪೇ ಎಂದು ಪ್ರಧಾನಿ ಮೋದಿ ಪ್ರಶ್ನಿಸಿದ್ದಾರೆ.

ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸಬೇಕೆಂಬ ಸ್ವಾಮಿನಾಥನ್ ವರದಿ ಅನುಷ್ಠಾನ ಕಾಗದಕ್ಕೆ ಸೀಮಿತವಾಗಿಲ್ಲ., ನಾವು ಹೇಳಿದಂತೆ ಅದನ್ನು ಮಾಡಿ ತೋರಿಸಿದ್ದೇವೆ.

ರೈತರ ಪ್ರತಿಭಟನೆ, ಅಶ್ರುವಾಯು ಪ್ರಯೋಗ, ದೆಹಲಿ ಗಡಿಯಲ್ಲಿ ಸ್ಥಿತಿ ಉದ್ವಿಗ್ನ

ಅದಲ್ಲದೆ ಈಗಾಗಲೇ ಅದು ರೈತರ ಬ್ಯಾಂಕ್ ಖಾತೆಗಳಿಗೂ ಮುಟ್ಟಿದೆ. ಮೊದಲು ಆ ಸರ್ಕಾರದ ನೀತಿಗಳನ್ನು ವಿರೋಧಿಸುವುದು ಪ್ರತಿಪಕ್ಷಗಳ ಕೆಲಸವಾಗಿತ್ತು. ಆದರೆ ಇಂದು ಕೃಷಿಗೆ ಸಂಬಂಧಿಸಿದ ವಿಚಾರಗಳಿಗೆ ಜನರನ್ನು ಸುಳ್ಳು ಅಜೆಂಡಾಗಳ ಮೂಲಕ ದಿಕ್ಕು ತಪ್ಪಿಸಲಾಗುತ್ತಿದೆ. ಆದಾರ ರಹಿತ ಮಾಹಿತಿಯೊಂದಿಗೆ ತಪ್ಪು ಅಭಿಪ್ರಾಯಗಳನ್ನು ನೀಡಲಾಗುತ್ತಿದೆ.

ರೈತರ ಮಂಡಿಗಳನ್ನು ಮುಚ್ಚುವುದೇ ಆಗಿದ್ದರೆ ಅದಕ್ಕೆ ಕೋಟಿಗಟ್ಟಲೆ ಹಣ ಏಕೆ ಸುರಿಯುತ್ತಿದ್ದೆವು, ಇದರ ಬಗ್ಗೆಯೂ ಜನರು ಯೋಚನೆ ಮಾಡಬೇಕಿದೆ. ಪ್ರತಿಪಕ್ಷಗಳು ಭ್ರಮೆಯನ್ನು ಸೃಷ್ಟಿಸುತ್ತಿವೆ.

ಸುಮಾರು 1 ಲಕ್ಷ ಕೋಟಿ ವೆಚ್ಚದಲ್ಲಿ ದೇಶಾದ್ಯಂತ ಶೀತಲಗೃಹ ನಿರ್ಮಾಣ ಮಾಡಲಾಗುತ್ತಿದೆ.ಇದರಿಂದ ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ದೇಶ ವಿದೇಶಗಳಿಗೆ ರಫ್ತು ಮಾಡಲು ಸಾಧ್ಯವಾಗುತ್ತದೆ. ವಾರಾಣಸಿಯ ಖ್ಯಾತ ಮಾವಿನ ಹಣ್ಣುಗಳು ಲಂಡನ್, ಮಧ್ಯಪ್ರಾಚ್ಯ ದೇಶಗಳಿಗೆ ರಫ್ತಾಗುತ್ತಿದೆ.ಮೊದಲಿನಂತೆ ಮಾವಿನ ಹಣ್ಣುಗಳ ಪ್ಯಾಕೇಜ್‌ಗೆ ಬೇರೆ ನಗರಗಳಿಗೆ ಹೋಗುವಂತಿಲ್ಲ.

ಕೃಷಿಯಲ್ಲಿನ ಕೆಲವು ಸುಧಾರಣೆಗಳು ರೈತರಿಗೆ ಹೊಸ ಅವಕಾಶಗಳು ಹಾಗೂ ಕಾನೂನು ರಕ್ಷಣೆಗಳನ್ನು ನೀಡಿದೆ. ಈ ಹಿಂದೆ ಸಾಕಷ್ಟು ಸಾಲಮನ್ನಾ ಯೋಜನೆಯನ್ನು ಘೋಷಿಸಲಾಗಿದೆ ಆದರೆ ಅದು ಸಾಕಷ್ಟು ರೈತರಿಗೆ ಸಿಗಲಿಲ್ಲ. ಆದರೆ ಈಗ ಅತ್ಯಂತ ದೊಡ್ಡ ಮಾರುಕಟ್ಟೆ ಅವಕಾಶಗಳನ್ನು ನೀಡಿ ಅವರ ಸುಧಾರಣೆಗೆ ಶ್ರಮವಹಿಸಲಾಗಿದೆ.

ರಾಷ್ಟ್ರೀಯ ಹೆದ್ದಾರಿ ಯೋಜನೆಯಿಂದ ವಾರಾಣಸಿ ಹಾಗೂ ಪ್ರಯಾಗ್‌ರಾಜ್‌ನ ಅಭಿವೃದ್ಧಿಗೆ ಪೂರಕವಾಗಲಿದೆ.

ಕಳೆದ ಕೆಲವು ವರ್ಷಗಳಿಂದ ವಾರಾಣಸಿಯನ್ನು ಸುಂದರಗೊಳಿಸುವ ಕಾಯಕ ಸಾಗಿದೆ ಈಗ ನೂತನ ಹದ್ದಾರಿಗಳು, ರಸ್ತೆ ಅಗಲೀಕರಣ ಸೇರಿ ಇತರೆ ಕಾಮಗಾರಿಗಳಿಂದ ವಾರಾಣಸಿಗೆ ಹೊಸ ರೂಪ ನೀಡಲಾಗುತ್ತಿದೆ.

ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾದ ಮೇಲೆ ಉತ್ತರ ಪ್ರದೇಶವು ಅಭಿವೃದ್ಧಿಯತ್ತ ಸಾಗಿದೆ ಸುಮಾರು 12 ವಿಮಾನ ನಿಲ್ದಾಣಗಳ ಅಭಿವೃದ್ಧಿಕಾರ್ಯಕ್ರಮ ಭರದಿಂದ ಸಾಗಿದೆ.

ರಸ್ತೆ ಸಂಪರ್ಕ ಸೇರಿ ಇತರೆ ಸಾರಿಗೆ ವ್ಯವಸ್ಥೆ ಅಭಿವೃದ್ಧಿಯಾದಂತೆ ಇದರ ಲಾಭ ನೇರವಾಗಿ ರೈತರಿಗೆ ದೊರೆಯಲಿದೆ.

English summary
The new agricultural laws have been brought in for benefit of the farmers. We will see and experience benefits of these new laws in the coming days: PM Modi in Varanasi
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X