'ಹೊಸ ವಂದೇ ಭಾರತ್ ಸೆಮಿ ಹೈ ಸ್ಪೀಡ್ ರೈಲು'ಗಳು ಈ ಮಾರ್ಗದಲ್ಲಿ ಸಂಚರಿಸಲಿವೆ, ನಿಲುಗಡೆ, ರಾಜ್ಯಗಳ ಮಾಹಿತಿ
ಬೆಂಗಳೂರು, ಡಿಸೆಂಬರ್ 17: ಭಾರತೀಯ ರೈಲ್ವೆ ಇಲಾಖೆ ಅತೀ ಶೀಘ್ರದಲ್ಲೇ ದೇಶದ ವಿವಿಧ ರಾಜ್ಯಗಳ ನಾನಾ ಮಾರ್ಗಗಳಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ಪರಿಚಯಿಸಲಿದೆ. ಭಾರತದಲ್ಲಿ ಸದ್ಯ ಒಟ್ಟು 34 ವಂದೇ ಭಾರತ್ ರೈಲುಗಳು ದೈನಂದಿನ ಕಾರ್ಯಾಚರಣೆಯಲ್ಲಿ ತೊಡಗಿವೆ. ಬ್ರಾಡ್ ಗೇಜ್ (B.G.) ವಿದ್ಯುದೀಕೃತ ನೆಟ್‌ವರ್ಕ್ ಹೊಂದಿರುವ ರಾಜ್ಯಗಳಲ್ಲಿ ಈ ನೂತನ ಒಂದೇ ಭಾರತ್ ರೈಲು ಸಂಚಾರ ನಡೆಸಲಿವೆ.
ವಂದೇ ಭಾರತ್ ಎಕ್ಸ್‌ಪ್ರೆಸ್ ಸ್ಥಳೀಯವಾಗಿ ತಯಾರಿಸಿದ ಸೆಮಿ ಸ್ಪೀಡ (ಅರೆ-ಹೈ ಸ್ಪೀಡ್) ಮತ್ತು ಸ್ವಯಂ ಚಾಲಿತ ರೈಲುಗಳು ಇವಾಗಿವೆ. ಅತ್ಯಾಧುನಿಕ ಪ್ರಯಾಣಿಕ ಸೌಕರ್ಯಗಳನ್ನು ಹೊಂದಿವೆ. ಪ್ರಯಾಣಿಕರಿಗೆ ಆಧುನಿಕ ವ್ಯವಸ್ಥೆ ವೇಗದ ಸಾರಿಗೆ ಒದಗಿಸುತ್ತಿವೆ. ಆರಾಮದಾಯ ಹೊಸ ಅನುಭವವನ್ನು ನೀಡುತ್ತಿವೆ.

ಪರಿಚಯವಾಗಲಿರುವ 'ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಪಟ್ಟಿ
ಜಮ್ಮು-ಶ್ರೀನಗರ ವಂದೇ ಭಾರತ್ ಎಕ್ಸ್‌ಪ್ರೆಸ್
ರೈಲ್ವೆ ಇಲಾಖೆ ಮೂಲಗಳ ಪ್ರಕಾರ, ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಜಮ್ಮು ಮತ್ತು ಕಾಶ್ಮೀರದ ಉಧಮ್‌ಪುರ-ಶ್ರೀನಗರ-ಬಾರಾಮುಲ್ಲಾ ರೈಲು ಲಿಂಕ್ (USBRL) ಗೆ ನಿಗದಿಪಡಿಸಿದೆ. ಒಟ್ಟು ಎಂಟು ಬೋಗಿಗಳ ವಿದ್ಯುತ್ ರೈಲು ಕಣಿವೆ ಪ್ರದೇಶದಲ್ಲಿ ಮೊದಲ ಬಾರಿಗೆ ಓಡಾಡಲಿದೆ.
ಉತ್ತರ ರೈಲ್ವೇಯು ಕಳೆದ ವಾರ ರಾಂಬನ್ ಜಿಲ್ಲೆಯ ಬನಿಹಾಲ್ ಮತ್ತು ಖಾರಿ ರೈಲು ನಿಲ್ದಾಣಗಳ ನಡುವೆ ಈಗಾಗಲೇ ಯಶಸ್ವಿಯಾಗಿ ಪ್ರಾಯೋಗಿಕ ಸಂಚಾರ ನಡೆಸಿದೆ. ಈ ಹೊಸ ರೈಲ್ವೆ ಸಂಪರ್ಕದ ಮೂಲಕ ಜಮ್ಮು-ಶ್ರೀನಗರ ಪ್ರಯಾಣವು 3.5 ಗಂಟೆಗಳನ್ನು ತೆಗೆದುಕೊಳ್ಳುವ ನಿರೀಕ್ಷೆ ಇದೆ ಎಂದು ಅಂದಾಜಿಸಲಾಗಿದೆ.
ಸಿಕಂದರಾಬಾದ್-ಪುಣೆ ವಂದೇ ಭಾರತ್ ರೈಲು
ದಕ್ಷಿಣ ಮಧ್ಯ ರೈಲ್ವೆ (SCR) ತೆಲಂಗಾಣದ ಸಿಕಂದರಾಬಾದ್ ಮತ್ತು ಮಹಾರಾಷ್ಟ್ರದ ಪುಣೆ ನಗರಗಳ ನಡುವೆ ಸೆಮಿ-ಹೈ-ಸ್ಪೀಡ್ ರೈಲನ್ನು ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಸದ್ಯ ಹಾಲಿ ಈ ಮಾರ್ಗದಲ್ಲಿ ಶತಾಬ್ದಿ ಎಕ್ಸ್‌ಪ್ರೆಸ್ ಅನ್ನು ಬದಲಾಯಿಸಲಿದೆ. ಈ ಮಾರ್ಗದಲ್ಲಿ 'ವಿಬಿ' ರೈಲು ಸಂಚಾರ ಖಚಿತವಾಗಿದ್ದು, ಆದರೆ ರೈಲು ನಿಲ್ದಾಣ, ನಿಲುಗಡೆ ಕುರಿತು ಇನ್ನಷ್ಟೇ ಮಾಹಿತಿ ಸಿಗಬೇಕಿದೆ. ಇದು ಸಿಕಂದರಾಬಾದ್, ಬೇಗಂಪೇಟ್, ವಿಕಾರಾಬಾದ್ ಜೆಎನ್, ತಾಂಡೂರ್, ವಾಡಿ ಜೆಎನ್, ಕಲಬುರಗಿ ಜೆಎನ್, ಸೋಲಾಪುರ, ಪುಣೆ ಭಾಗಗಳಲ್ಲಿ ಸಂಚರಿಲಿದೆ.
ಬೆಂಗಳೂರು-ಕೊಯಮತ್ತೂರು ವಂದೇ ಭಾರತ್ ಎಕ್ಸ್‌ಪ್ರೆಸ್
ದಕ್ಷಿಣ ಭಾರತದ ರಾಜ್ಯವಾದ ತಮಿಳುನಾಡಿನ ಕೊಯಮತ್ತೂರು ನಗರಕ್ಕೆ ಸಂಪರ್ಕ ಕಲ್ಪಿಸುವ ಮತ್ತೊಂದು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಕರ್ನಾಟಕದ ಮಾರ್ಗವಾಗಿ ಓಡುವ ಸಾಧ್ಯತೆ ಇದೆ. ಈ ಮೂಲಕ ರಾಜ್ಯಕ್ಕೆ ಮತ್ತೊಂದು ವಿಬಿ ರೈಲಿನ ಪ್ರವೇವಾದಂತಾಗುತ್ತದೆ. ಈಗಾಗಲೇ ಚೆನ್ನೈ-ಬೆಂಗಳೂರು-ಮೈಸೂರಿಗೆ ವಿಬಿ ರೈಲು ಮೊದಲ ಕರ್ನಾಟಕ ರೈಲು ಸಂಚರಿಸುತ್ತಿದೆ. ನಂತರ ಬೆಂಗಳೂರು-ಬೆಳಗಾವಿವರೆಗೆ ಎರಡನೇ ವಿಬಿ ರೈಲು ಸೇವೆ ನೀಡುತ್ತಿದೆ.

ಬಿಜೆಪಿ ನಾಯಕ ಮತ್ತು ಕೊಯಮತ್ತೂರು ದಕ್ಷಿಣ ಶಾಸಕಿ ವನತಿ ಶ್ರೀನಿವಾಸನ್ ಅವರ ಪ್ರಕಾರ, ರೈಲ್ವೆ ಬೆಂಗಳೂರು ಮತ್ತು ಕೊಯಮತ್ತೂರು ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ಸೇವೆ ನಿರೀಕ್ಷೆಯಲ್ಲಿದೆ. ಈ ಕುರಿತು ಅಧಿಕೃತ ಮಾಹಿತಿಗೆ ಕಾಯುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ವಾರಣಾಸಿ ದೆಹಲಿ ವಂದೇ ಭಾರತ್ ಎಕ್ಸ್‌ಪ್ರೆಸ್
ಇದೇ ಡಿಸೆಂಬರ್ 18 ರಂದು ಪ್ರಧಾನಿ ಮೋದಿ ಅವರು ದೆಹಲಿ ವಾರಣಾಸಿ ಮಾರ್ಗದಲ್ಲಿ ಎರಡನೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಲಿದ್ದಾರೆ. ಈ ಭಾಗದಲ್ಲಿ ಮತ್ತೊಂದು ರೈಲು ಅಗತ್ಯತೆ ಕಂಡು ಎರಡನೇ ವಿಬಿ ರೈಲನ್ನು ಆರಂಭಿಸಲಾಗುತ್ತಿದೆ.
ದೆಹಲಿಯಿಂದ 22436 ಸಂಖ್ಯೆಯ ದೆಹಲಿ-ವಾರಣಾಸಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಬೆಳಗ್ಗೆ 6 ಗಂಟೆಗೆ ಹೊರಟು ವಾರಣಾಸಿಯನ್ನು ಮಧ್ಯಾಹ್ನ 2 ಗಂಟೆಗೆ ತಲುಪುತ್ತದೆ. ಹಿಂದಿರುಗುವ ಪ್ರಯಾಣದಲ್ಲಿ, ರೈಲು ವಾರಣಾಸಿಯಿಂದ ಮಧ್ಯಾಹ್ನ 3 ಗಂಟೆಗೆ ಹೊರಟು ರಾತ್ರಿ 11 ಗಂಟೆಗೆ ದೆಹಲಿ ತಲುಪುತ್ತದೆ ಎಂದು ರೈಲ್ವೆ ಮೂಲಗಳು ಮಾಹಿತಿ ನೀಡಿವೆ.
ಈ ಮೇಲಿನ ಮಾರ್ಗದ ಹೊಸ ರೈಲುಗಳು ಮಾತ್ರವಲ್ಲದೇ ಮುಂಬೈ-ಜಲ್ನಾ, ಪುಣೆ-ವಡೋದರಾ, ಮಡಗಾಂವ್-ಮಂಗಳೂರು, ದೆಹಲಿ-ಅಮೃತಸರ, ಟಾಟಾನಗರ-ವಾರಣಾಸಿ, ಪಾಟ್ನಾ-ಜಲ್ಪೈಗುರಿ, ಇಂದೋರ್-ಸೂರತ್, ಮುಂಬೈ- ಈ ಕೆಳಗಿನ ಮಾರ್ಗಗಳಲ್ಲಿ ವಂದೇ ಭಾರತ್ ರೈಲು ನಿರೀಕ್ಷೆ ಇದೆ.
ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು 2047 ರ ವೇಳೆಗೆ ದೇಶವು 4,500 ವಂದೇ ಭಾರತ್ ರೈಲುಗಳನ್ನು ಓಡಿಸಲಿದೆ ಎಂದು ಡಿಸೆಂಬರ್ 8 ರಂದು ಹೇಳಿದ್ದರು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ರಾಜ್ಯಸಭೆಗೆ ಲಿಖಿತ ಉತ್ತರದಲ್ಲಿ ರೈಲ್ವೆ ಕೋಚ್, ನಿಲ್ದಾಣ ಮಾರ್ಗಗಳ ಕುರಿತು ಸದನಕ್ಕೆ ಮಾಹಿತಿ ನೀಡಿದ್ದರು.












Click it and Unblock the Notifications