VB Train Video: ವಾರಣಾಸಿ-ದೆಹಲಿ 'ವಿಬಿ' ರೈಲು ಸಂಚಾರದ ಸುಂದರ ವಿಡಿಯೋ ಶೇರ್ ಮಾಡಿ ರೈಲ್ವೆ ಇಲಾಖೆ
ಬೆಂಗಳೂರು, ಡಿಸೆಂಬರ್ 17: ಪ್ರಪಂಚದ ಅತೀ ದೊಡ್ಡ ರೈಲ್ವೆ ಜಾಲಗಳಲ್ಲಿ ಭಾರತೀಯ ರೈಲ್ವೆಯು ಪ್ರಮುಖವಾದದ್ದು. ಇತ್ತೀಚೆಗೆ ದೇಶದ ರೈಲ್ವೆ ಇಲಾಖೆ ಆರಂಭಿಸಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ರೈಲಿಗೆ ಬೇಡಿಕೆ ಸೃಸ್ಟಿಯಾಗಿದ್ದು, ದೇಶದ ನಾನಾ ಭಾಗಗಳಲ್ಲಿ ಈ ರೈಲು ಸೇವೆ ನೀಡುತ್ತಿವೆ. ತನ್ನದೇ ಆದ ವಿಶಿಷ್ಟತೆ ಹೊಂದಿರುವ ಈ ರೈಲು ಸಂಚಾರದ ವಿಡಿಯೋವನ್ನು ಸ್ವತಃ ಇಲಾಖೆ ಹಂಚಿಕೊಂಡಿದೆ.
ಭಾರತೀಯ ರೈಲ್ವೆ ಜಾಲದಲ್ಲಿ ಸುಂದರ ಬೆಟ್ಟ ಗುಡ್ಡಗಳು ಮತ್ತು ಸುತ್ತಲೂ ಹಸಿರ ಹೊದಿಕೆಯ ಮಧ್ಯೆ ಸುಂದರ ಪರಿಸರದಲ್ಲಿ ವಾರಣಾಸಿಯ ವಂದೇ ಭಾರತ್ ರೈಲು ಸಂಚಾರ ದೃಶ್ಯಗಳು ಸಾರ್ವಜನಿಕರನ್ನು ಆಕರ್ಷಿಸುತ್ತಿದೆ. ಈ ಕುರಿತು ವಿಡಿಯೋವನ್ನು ರೈಲ್ವೆ ಇಲಾಖೆಯು ತನ್ನ ಸಾಮಾಜಿಕ ಜಾಲತಾಣ X ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ವಂದೇ ಭಾರತ್ ಎಕ್ಸ್‌ಪ್ರೆಸ್ ಓಡುತ್ತಿರುವ ವೀಡಿಯೊವನ್ನು ಸೊಗಸಾಗಿ ಸೆರೆಯ ಹಿಡಿಯಲಾಗಿದೆ. ವಾರಣಾಸಿ-ದೆಹಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ಕೇವಲ ಇದು ರೈಲಲ್ಲ. ಇದು ಚಲಿಸುವ ಕ್ಯಾನ್ವಾಸ್ ಆಗಿಅದ್ದು, ವಾರಣಾಸಿಯ ಹೊರವಲಯದಲ್ಲಿರುವ ಸೊಂಪಾದ ಕೃಷಿ ಭೂಮಿಗಳ ಮೂಲಕ ವೇಗವಾಗಿ ಚಲಿಸುವಾಗ ನೀಲಿ ಬಿಳಿ ಬಣ್ಣದ ರೈಲು ಹಸಿರ ಕೃಷಿ ಭೂಮಿ ಮಧ್ಯೆ ಸಾಗುವುದು ಆಕರ್ಷಕವಾಗಿದೆ.
ವ್ಯವಸ್ಥಿತಿಯ ಸೌಕರ್ಯದ ಜತೆಗೆ ಉತ್ತಮ ಅನುಭವ
ಈ ಅತಿ ವೇಗದದಲ್ಲಿ ಚಲಿಸುವ ಈ ವಂದೇ ಭಾರತ ರೈಲಿನ ಪ್ರಯಾಣವು ಪ್ರಯಾಣಿಕರಿಗೆ ಆರಾಮದಾಯಕ ಮತ್ತು ವಿಶಿಷ್ಟ ಶೈಲಿಯ ಅನುಭವ ನೀಡುತ್ತಿದೆ. ಒಳಾಂಗಣ ಮತ್ತು ಸೌಲಭ್ಯಗಳಲ್ಲಿ ಸುವ್ಯವಸ್ಥೆಯನ್ನು ಹೊಂದಿದೆ. ಪ್ರಯಾಣಿಕರಿಗೆ ಸೌಕರ್ಯ, ವೇಗದ ಸಾರಿಗೆ ಒದಗಿಸುವ ಜೊತೆಗೆ ಭಾರತದ ಹೃದಯಭಾಗದ ರಮಣೀಯ ಸೌಂದರ್ಯವನ್ನು ಪ್ರಯಾಣಿಕರು ಆನಂದಿಸುವಂತೆ ಮಾಡಿದೆ. ಇದು ಈ ವಿಡಿಯೋದಲ್ಲಿ ಕಾಣಿಸುತ್ತಿದೆ.
Painting a vivid symphony on green canvas, Varanasi-Delhi #VandeBharat Express speeding through the farmlands in Varanasi outskirts.
— Ministry of Railways (@RailMinIndia) December 15, 2023
📸: Ayushman pic.twitter.com/goasEsBeS1
ವಾರಣಾಸಿಯಿಂದ ದೆಹಲಿಗೆ ತೆರಳುವ ವಂದೇ ಭಾರತ್ ಎಕ್ಸ್‌ಪ್ರೆಸ್ ವಾರಣಾಸಿ ಹೊರವಲಯದಲ್ಲಿರುವ ಕೃಷಿ ಭೂಮಿಗಳ ಮೂಲಕ ವೇಗವಾಗಿ ಚಲಿಸುವ ದೃಶ್ಯವನ್ನು ರೈಲ್ವೆ ಇಲಾಕೆ ಟ್ವೀಟ್ ಮಾಡಿದೆ.
ಉತ್ತರ ಪ್ರದೇಶಕ್ಕೆ ಶೀಘ್ರವೇ ಹೊಸ 'ವಿಬಿ' ರೈಲು
ಭಾರತೀಯ ರೈಲ್ವೆ ಇಲಾಖೆ ದೇಶ ವಿವಿಧ ರಾಜ್ಯಗಳಲ್ಲಿ ವಂದೇ ಭಾರತ್ ರೈಲು (ವಿಬಿ) ರೈಲಿ ಸಂಖ್ಯೆ ಹೆಚ್ಚಿಸುತ್ತಿದೆ. ಇದೀಗ ಉತ್ತರ ಪ್ರದೇಶಕ್ಕೆ ಮತ್ತೊಂದು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಪರಿಚಯಿಸಲು ಸಿದ್ಧವಾಗಿದೆ. ಈ ಘೋಷಣೆಯೊಂದಿಗೆ, ರಾಷ್ಟ್ರೀಯ ಸಾರಿಗೆ ವ್ಯವಸ್ಥೆಯು ರಾಜ್ಯಕ್ಕೆ ಮೂರು ಸೆಮಿ-ಹೈ-ಸ್ಪೀಡ್ ರೈಲುಗಳನ್ನು ಗೊತ್ತುಪಡಿಸಿದೆ.

ಪ್ರಧಾನಿ ಮೋದಿಯವರು ಡಿಸೆಂಬರ್ 18 ರಂದು (ಸೋಮವಾರ) ವಾರಣಾಸಿ ರೈಲು ನಿಲ್ದಾಣದಲ್ಲಿ ಈ ಆಧುನಿಕ ರೈಲನ್ನು ಉದ್ಘಾಟಿಸಲಿದ್ದಾರೆ. ರೈಲು ವಾರಣಾಸಿ ರೈಲು ನಿಲ್ದಾಣದಿಂದ ತನ್ನ ಉದ್ಘಾಟನಾ ಸಂಚಾರ ಆರಂಭಿಸಲಿದೆ.
ಮುಂದಿನ ದಿಗನಳಲ್ಲಿ ಬರುವ ರೈಲುಗಳು ಈಗಿರುವಂತೆ ನೀಲಿ ಮತ್ತು ಬಿಳಿ ಬಣ್ಣಗಳಿಂದ ಕೂಡಿರುತ್ತವೆ. ಒಂದು ವಿಬಿ ವಾರಣಾಸಿ ಮತ್ತು ನವದೆಹಲಿ ನಡುವೆ ಕಾರ್ಯನಿರ್ವಹಿಸಲು ಸಿದ್ಧವಾಗಿದೆ. 2019 ರಲ್ಲಿ ಹೊಸ ದೆಹಲಿ-ವಾರಣಾಸಿ-ನವದೆಹಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಖ್ಯೆ (22435/22436) ಅನ್ನು ಪರಿಚಯಿಸಿದ ನಂತರ, ಇದು ಅದೇ ಮಾರ್ಗದಲ್ಲಿ ಎರಡನೇ ಸಂಚರಿಸುವ ಎರಡನೇ ರೈಲು ಆಗಿದೆ ಎಂದು ಇಲಾಖೆ ತಿಳಿಸಿದೆ.












Click it and Unblock the Notifications