Gyanvapi case: ಜ್ಞಾನವಾಪಿ ಮಸೀದಿಯಲ್ಲಿ ಹಿಂದೂಗಳಿಗೆ ಪೂಜೆ ಸಲ್ಲಿಸಲು ಯಾವುದೇ ತಡೆಯಿಲ್ಲ!
ಲಕ್ನೋ, ಫೆಬ್ರವರಿ.26: ವಾರಣಾಸಿಯ ಜ್ಞಾನವಾಪಿ ಮಸೀದಿಯೊಳಗಿನ ನಿರ್ಬಂಧಿತ ಪ್ರದೇಶವಾದ 'ವ್ಯಾಸ್ ಕಾ ತೆಖಾನಾ'ದಲ್ಲಿ ಹಿಂದೂಗಳ ಪ್ರಾರ್ಥನೆಗೆ ಅವಕಾಶ ನೀಡುವ ವಾರಣಾಸಿ ಜಿಲ್ಲಾ ನ್ಯಾಯಾಲಯದ ತೀರ್ಪಿನ ವಿರುದ್ಧ ಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿ ಸಲ್ಲಿಸಿದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ತಿರಸ್ಕರಿಸಿದೆ.
ಫೆಬ್ರವರಿ 15 ರಂದು ಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿಯ ಎರಡು ಅರ್ಜಿಗಳ ವಿಚಾರಣೆ ಪೂರ್ಣಗೊಂಡ ನಂತರ ಸೋಮವಾರ (ಫೆಬ್ರವರಿ.26) ತೀರ್ಪು ಹೊರ ಬಂದಿದೆ. ಅಲಹಾಬಾದ್ ಹೈಕೋರ್ಟ್ ನ ನ್ಯಾಯಮೂರ್ತಿ ರೋಹಿತ್ ರಂಜನ್ ಅಗರ್ವಾಲ್ ಅವರು ತೀರ್ಪು ಪ್ರಕಟಿಸಿದ್ದಾರೆ.

ಈ ಹಿಂದೆ ಹಿಂದೂ ಮತ್ತು ಮುಸ್ಲಿಂ ಪರ ವಕೀಲರ ಸುದೀರ್ಘ ವಾದ ಮತ್ತು ಚರ್ಚೆಯ ನಂತರ ನ್ಯಾಯಾಲಯ ತೀರ್ಪನ್ನು ಕಾಯ್ದಿರಿಸಿತ್ತು. ಜನವರಿ 31 ರಂದು ವಾರಣಾಸಿ ನ್ಯಾಯಾಲಯವು ಜ್ಞಾನವಾಪಿ ಮಸೀದಿಯ ದಕ್ಷಿಣ ನೆಲಮಾಳಿಗೆಯಲ್ಲಿ ಹಿಂದೂಗಳು ಪ್ರಾರ್ಥನೆ ಸಲ್ಲಿಸಬಹುದು ಎಂದು ತೀರ್ಪು ನೀಡಿತ್ತು. ಇದಕ್ಕೆ ಮುಸ್ಲಿಂ ಸಮುದಾಯ ವಿರೋಧೀಸಿತ್ತು.
ಶ್ರೀ ಕಾಶಿ ವಿಶ್ವನಾಥ ದೇವಸ್ಥಾನ ಟ್ರಸ್ಟ್‌ನಿಂದ ನಾಮನಿರ್ದೇಶನಗೊಂಡ 'ಪೂಜೆ' ಮತ್ತು 'ಪೂಜಾರಿ'ಗೆ ವ್ಯವಸ್ಥೆ ಮಾಡುವಂತೆ ನ್ಯಾಯಾಲಯವು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿತ್ತು. ಇದರ ನಂತರ, ವಾರಣಾಸಿಯ ಜ್ಞಾನವಾಪಿ ಮಸೀದಿಯನ್ನು ನಿರ್ವಹಿಸುವ ಅಂಜುಮನ್ ಇಂತೇಜಾಮಿಯಾ ಮಸಾಜಿದ್ ಸಮಿತಿಯು ಫೆಬ್ರವರಿ 1 ರಂದು ಅಲಹಾಬಾದ್ ಹೈಕೋರ್ಟ್‌ಗೆ ವಾರಣಾಸಿ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದೆ.
ಮಸೀದಿ ಸಮಿತಿಯ ಮನವಿಯನ್ನು ತುರ್ತಾಗಿ ಆಲಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದ ಕೆಲವೇ ದಿನಗಳಲ್ಲಿ ಅಲಹಾಬಾದ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಗಮನಾರ್ಹವಾಗಿ, ಮಸೀದಿಯು ನೆಲಮಾಳಿಗೆಯಲ್ಲಿ ನಾಲ್ಕು 'ತಹ್ಖಾನಾ'ಗಳನ್ನು (ನೆಲಮಾಳಿಗೆ) ಹೊಂದಿದೆ, ಅದರಲ್ಲಿ ಒಂದು ಇನ್ನೂ ಅಲ್ಲಿ ವಾಸಿಸುತ್ತಿದ್ದ ವ್ಯಾಸ್ ಕುಟುಂಬದ ವಶದಲ್ಲಿದೆ.

ಮಸೀದಿ ಸಮಿತಿಯ ಪ್ರಕಾರ, ಮಸೀದಿ ಆವರಣದ ಒಂದು ಭಾಗವಾಗಿ 'ವ್ಯಾಸ್ ತೆಹ್ಖಾನಾ' ಅವರ ಸ್ವಾಧೀನದಲ್ಲಿದೆ. ತೆಹ್ಖಾನಾದ ಒಳಗೆ ಪೂಜೆ ಮಾಡುವ ಯಾವುದೇ ಹಕ್ಕು ವ್ಯಾಸ್ ಕುಟುಂಬ ಅಥವಾ ಬೇರೆಯವರಿಗೆ ಇಲ್ಲ. ಆದರೆ, 1993 ರವರೆಗೆ ವ್ಯಾಸ್ ಕುಟುಂಬವು ನೆಲಮಾಳಿಗೆಯಲ್ಲಿ ಧಾರ್ಮಿಕ ಸಮಾರಂಭಗಳನ್ನು ನಡೆಸಿದೆ ಎಂದು ಹಿಂದೂ ಪರ ವಾದಿಸುವವರು ಹೇಳಿಕೊಂಡಿದ್ದಾರೆ. ರಾಜ್ಯ ಸರ್ಕಾರದ ನಿರ್ದೇಶನದ ಅನುಸಾರವಾಗಿ ಅವರು ಅದನ್ನು ನಿಲ್ಲಿಸಬೇಕಾಯಿತು ಎನ್ನಲಾಗಿದೆ.
ಇದಕ್ಕೂ ಮೊದಲು, ಹೈದರಾಬಾದ್ ಸಂಸದ, AIMIM ಅಧ್ಯಕ್ಷ ಅಸಾದುದ್ದೀನ್ ಓವೈಸಿ, ಮಸೀದಿ ಸಂಕೀರ್ಣದೊಳಗೆ ಹಿಂದೂ ಭಕ್ತರಿಗೆ ಪ್ರಾರ್ಥನೆ ಸಲ್ಲಿಲಯಸಲು ಅವಕಾಶ ನೀಡುವ ವಾರಣಾಸಿ ನ್ಯಾಯಾದ ತೀರ್ಪನ್ನು "ಆರಾಧನಾ ಸ್ಥಳಗಳ ಕಾಯಿದೆಯ ಉಲ್ಲಂಘನೆ" ಎಂದು ಆರೋಪಿಸಿದ್ದರು.
" ಈ ತೀರ್ಪು ನೀಡಿದ ನ್ಯಾಯಾಧೀಶರು ನಿವೃತ್ತಿಯ ಕೊನೆಯ ದಿನವಾಗಿತ್ತು. ಜ.17ರಂದು ಜಿಲ್ಲಾಧಿಕಾರಿಯನ್ನು ರಿಸೀವರ್ ಆಗಿ ನೇಮಿಸಿದ ನ್ಯಾಯಾಧೀಶರು ಅಂತಿಮವಾಗಿ ನೇರವಾಗಿ ತೀರ್ಪು ನೀಡಿದ್ದಾರೆ. 1993ರಿಂದ ಇಲ್ಲಿಯವರೆಗೆ ಯಾವುದೇ ಪ್ರಾರ್ಥನೆ ನಡೆದಿಲ್ಲ ಎಂದರು. 30 ವರ್ಷಗಳು ಕಳೆದಿವೆ. ಒಳಗೆ ವಿಗ್ರಹವಿದೆ ಎಂದು ಅವರಿಗೆ ಹೇಗೆ ಗೊತ್ತು? ಇದು ಪೂಜಾ ಸ್ಥಳಗಳ ಕಾಯಿದೆಯ ಉಲ್ಲಂಘನೆಯಾಗಿದೆ. 7 ದಿನಗಳೊಳಗೆ ಗ್ರಿಲ್‌ಗಳನ್ನು ತೆರೆಯುವಂತೆ ಅವರು ಆದೇಶಿಸಿದ್ದಾರೆ. ಮೇಲ್ಮನವಿ ಸಲ್ಲಿಸಲು 30 ದಿನಗಳ ಕಾಲಾವಕಾಶ ನೀಡಬೇಕಿತ್ತು. ಇದು ತಪ್ಪು ನಿರ್ಧಾರ" ಎಂದು ಆರೋಪಿಸಿದ್ದರು.












Click it and Unblock the Notifications