Lok Sabha Election 2024: ಮತದಾನ ಮಾಡಿದವರಿಗೆ ಬೆಂಗಳೂರಿನ ಈ ಹೋಟೆಲ್‌ಗಳಲ್ಲಿ ಊಚಿತ ಊಟ & ತಿಂಡಿ-ಮಾಹಿತಿ
ಬೆಂಗಳೂರು, ಏಪ್ರಿಲ್, 25: ಲೋಕಸಭೆ ಚುನಾವಣೆ ಹಿನ್ನೆಲೆ, ಹೆಚ್ಚಿನ ಪ್ರಮಾಣದಲ್ಲಿ ಮತದಾನ ಆಗಲಿ ಎನ್ನುವ ಉದ್ದೇಶದಿಂದ ಬೆಂಗಳೂರಿನ ಈ ಹೋಟೆಲ್‌ಗಳಲ್ಲಿ ಮತ ಚಲಾಯಿಸಿದವರಿಗೆ ಊಚಿತ ಊಟ ಹಾಗೂ ತಿಂಡಿ ನೀಡಲಾಗುತ್ತದೆ ಎಂದು ಘೋಷಣೆ ಮಾಡಲಾಗಿದೆ. ಹಾಗಾದರೆ ಯಾವೆಲ್ಲ ಹೋಟೆಲ್‌ಗಳಲ್ಲಿ ಏನೆಲ್ಲ ಊಟವನ್ನು ಊಚಿತವಾಗಿ ನೀಡಲಾಗುತ್ತದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಮತದಾನದ ಬಗ್ಗೆ ಜಾಗೃತಿ ಮೂಡಿಸುವುದಕ್ಕಾಗಿ ಹಾಗೂ ಮತದಾನ ಪ್ರಮಾಣವನ್ನು ಹೆಚ್ಚಿಸುವ ಉದ್ದೇಶದಿಂದ ಬೆಂಗಳೂರಿನ ಹಲವು ಹೋಟೆಲ್‌ಗಳು ವಿಶೇಷ ಜಾಗೃತಿ ಕಾರ್ಯಕ್ರಮ ಆಯೋಜನೆ ಮಾಡಲು ಮುಂದಾಗಿದೆ. ಇನ್ನು ಕಳೆದ ವರ್ಷ ವಿಧಾನಸಭೆ ಚುನಾವಣೆಯಲ್ಲಿ ಮಾಡಿದ್ದಂತೆಯೇ ಈ ಬಾರಿಯೂ ಲೋಕಸಭೆ ಚುನಾವಣೆಯಲ್ಲಿ ಮತ ಚಲಾಯಿಸಿದರಿಗೆ ಮಾತ್ರ ಉಚಿತ ಊಟ, ರಿಯಾಯಿತಿ ದರದಲ್ಲಿ ತಿಂಡಿ ನೀಡಲಾಗುತ್ತದೆ ಎಂದು ಘೋಷಣೆ ಮಾಡಿವೆ.

ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ನಿಸರ್ಗ ಗ್ರ್ಯಾಂಡ್ ಹೋಟೆಲ್ "ವೋಟ್ ಮಾಡಿ, ಊಟ ಮಾಡಿ" ಅಭಿಯಾನದಡಿ ಮತದಾನ ಮಾಡಿದ ಗುರುತು ತೋರಿಸಿದವರಿಗೆ ಬೆಣ್ಣೆ ದೋಸೆ, ಲಡ್ಡು ಮತ್ತು ಜ್ಯೂಸ್ ನೀಡಲಾಗುತ್ತದೆ ಎಂದು ಘೋಷಣೆ ಮಾಡಿದೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರಿನಲ್ಲಿ ಕೇವಲ ಶೇಕಡಾ 54ರಷ್ಟು ಮಾತ್ರ ಮಾತದಾನ ಆಗಿದೆ. ಆದ್ದರಿಂದ ಬೆಂಗಳೂರಿನ ಹೋಟೆಲ್‌ಗಳು ಈ ಜಾಗೃತಿಯ ನಿರ್ಧಾರಕ್ಕೆ ಬಂದಿವೆ ಎನ್ನಲಾಗಿದೆ. ರಾಜ್ಯದಲ್ಲಿ ಏಪ್ರಿಲ್ 26 ಹಾಗೂ ಮೇ 7ರಂದು ಎರಡು ಹಂತಗಳಲ್ಲಿ ಲೋಕಸಭಾ ಚುನಾವಣೆಯ ಮತದಾನ ನಡೆಯಲಿದೆ.
ರಾಜ್ಯದಲ್ಲಿ 14 ಲೋಕಸಭಾ ಕ್ಷೇತ್ರಗಳಿಗೆ ಏಪ್ರಿಲ್ 26ರಂದು ಮೊದಲ ಹಂತದ ಚುನಾವಣೆ ನಡೆಯಲಿದ್ದು, ಮತದಾನ ಮಾಡಿದವರಿಗೆ ಬೆಂಗಳೂರಿನ ಕೆಲವು ಹೋಟೆಲ್‌ಗಳು ಊಚಿತ ಆಹಾರ ನೀಡುವುದಾಗಿ ಘೋಷಣೆ ಮಡಿವೆ. ನಗರದಲ್ಲಿ ಕಳೆದ ಬಾರಿ ಮತದಾನ ಕಡಿಮೆ ಪ್ರಮಾಣದಲ್ಲಿ ಆಗಿದ್ದು, ಈ ಕಾರಣದಿಂದ ಮತದಾನಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಈ ಮಾರ್ಗವನ್ನು ಅನುಸರಿಸುತ್ತಿದ್ದೇವೆ ಎಂದು ಹೋಟೆಲ್ ಮಾಲೀಕರು ಹೇಳಿದ್ದಾರೆ.
"ನಾವು ಮತದಾರರನ್ನು ಪ್ರೋತ್ಸಾಹಿಸಲು ಬಯಸುತ್ತೇವೆ ಮತ್ತು ಅದಕ್ಕಾಗಿಯೇ ನಾವು ಈ ಆಲೋಚನೆಯನ್ನು ಮಾಡಿದ್ದೇವೆ" ಎಂದು ನೃಪತುಂಗ ರಸ್ತೆಯಲ್ಲಿರುವ ಹೋಟೆಲ್ ನಿಸರ್ಗ ಗ್ರ್ಯಾಂಡ್‌ನ ಮಾಲೀಕ ಎಸ್‌ಪಿ ಕೃಷ್ಣರಾಜ್ ಹೇಳಿದರು. ಮತದಾನದ ನಂತರ ಹೋಟೆಲ್‌ಗೆ ಭೇಟಿ ನೀಡುವ ಎಲ್ಲಾ ಮತದಾರರಿಗೆ ಉಚಿತ ಖಾಲಿ ದೋಸೆ, ಲಡ್ಡು ಮತ್ತು ಜ್ಯೂಸ್ ಅನ್ನು ಕೊಡುವುದಾಗಿ ಘೋಷಣೆ ಮಾಡಿದ್ದಾರೆ.
ನಿಸರ್ಗ ಗ್ರ್ಯಾಂಡ್‌ನ ಮಾಲೀಕ ಕೃಷ್ಣರಾಜ್ ಅವರು ಮಾತನಾಡಿ, "2018ರಿಂದ ಪ್ರತಿ ಚುನಾವಣೆಯ ಸಮಯದಲ್ಲಿ ಉಚಿತ ಆಹಾರವನ್ನು ಮತದಾನ ಮಾಡಿದವರಿಗೆ ನೀಡುತ್ತಾ ಬಂದಿದ್ದೇವೆ. ಕಳೆದ ವರ್ಷ ವಿಧಾನಸಭಾ ಚುನಾವಣೆಯ ಸಮಯದಲ್ಲಿ ನಮ್ಮ ಹೋಟೆಲ್‌ನಲ್ಲಿ ಊಟ ಸವಿದು ಹೋಗಿರುವ ಗ್ರಾಹಕರು ಈ ಚುನಾವಣೆಯಲ್ಲೂ ನೀವು ಉಚಿತವಾಗಿ ಊಟ ನೀಡುತ್ತೀರಾ ಎಂದು ವಿಚಾರಿಸುತ್ತಿದ್ದಾರೆ" ಎಂದು ಹೇಳಿದರು.












Click it and Unblock the Notifications