ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೂತನ ಪೊಲೀಸ್ ಮಹಾನಿರ್ದೇಶಕ ಓಂಪ್ರಕಾಶ್ ಯಾರು?

|
Google Oneindia Kannada News

ಬೆಂಗಳೂರು, ಮಾ. 1 : ಪೊಲೀಸ್ ಮಹಾನಿರ್ದೇಶಕ ಹುದ್ದೆಗೆ ಎದ್ದಿದ್ದ ಗೊಂದಲಗಳಿಗೆ ಅಂತಿಮವಾಗಿ ತೆರೆ ಬಿದ್ದಿದೆ. ಹಿರಿಯ ಐಪಿಎಸ್ ಅಧಿಕಾರಿ ಓಂಪ್ರಕಾಶ್ ನೂತನ ಪೊಲೀಸ್ ಮಹಾನಿರ್ದೇಶಕರಾಗಿ (ಡಿಜಿಪಿ-ಐಜಿಪಿ) ಅಧಿಕಾರ ಸ್ವೀಕರಿಸಿದ್ದಾರೆ.

ನಿವೃತ್ತರಾದ ಲಾಲ್ ರುಖುಮೋ ಪಚಾವೋ ಅವರು ಬೇಟನ್ ನೀಡುವ ಮೂಲಕ ಓಂಪ್ರಕಾಶ್ ಅಧಿಕಾರ ಅವರಿಗೆ ಅಧಿಕಾರನ ಹಸ್ತಾಂತರಿಸಿದರು. ಗೃಹ ರಕ್ಷಕದಳ ಹಾಗೂ ಅಗ್ನಿ ಶಾಮಕದ ಪೊಲೀಸ್ ಮಹಾನಿರ್ದೇಶಕರಾಗಿದ್ದ ಓಂಪ್ರಕಾಶ್ ಅವರನ್ನು ನೂತನ ಡಿಜಿಪಿಯಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿತ್ತು.[ಬೆಂಗಳೂರು: ಶಾಲೆಗಳಲ್ಲಿ ವಿದ್ಯಾರ್ಥಿ ಪೊಲೀಸ್ ವ್ಯವಸ್ಥೆ]

police

ಡಿಜಿಪಿ ಐಜಿಪಿ ಹುದ್ದೆಗೆ ನಾಲ್ವರು ಅಧಿಕಾರಿಗಳ ನಡುವೆ ಪೈಪೋಟಿಯಿತ್ತು. ಸಿಬಿಐ ಜಂಟಿ ಪೊಲೀಸ್ ಮಹಾ ನಿರ್ದೇಶಕರಾಗಿರುವ ರೂಪ್ ಕುಮಾರ್ ದತ್ತಾ ಮತ್ತು ಸೇವಾ ಹಿರಿತನದ ಆಧಾರದಲ್ಲಿ ಸುಶಾಂತ್ ಮಹಾಪಾತ್ರರ ಜತೆಗೆ ಓಂಪ್ರಕಾಶ್ ಅವರ ಹೆಸರೂ ರೇಸ್‌ನಲ್ಲಿತ್ತು. ಆದರೆ ಸರ್ಕಾರ ಅಂತಿಮವಾಗಿ ಓಂಪ್ರಕಾಶ್ ಅವರನ್ನು ನೇಮಕ ಮಾಡಿದೆ.

ಓಂಪ್ರಕಾಶ್ ಯಾರು?

1957ರ ಜನವರಿ 17 ರಂದು ಬಿಹಾರದ ಚಂಪಾರಣ್ ಜಿಲ್ಲೆಯ ಪಿಪ್ರಾಸಿ ಗ್ರಾಮದಲ್ಲಿ ಜನಿಸಿದ ಓಂಪ್ರಕಾಶ್, 1979ರಲ್ಲಿ ಬನಾರಸ್‌ನ ಹಿಂದು ವಿಶ್ವ ವಿದ್ಯಾಲಯದಿಂದ ಭೂಗರ್ಭಶಾಸ್ತ್ರದಲ್ಲಿ ಎಂಎಸ್ಸಿ ಪದವಿ ಪಡೆದರು. 1981ರಲ್ಲಿ ಐಪಿಎಸ್ ತೇರ್ಗಡೆಗೊಂಡು ಕರ್ನಾಟಕ ಕೇಡರ್‌ನಲ್ಲಿ ನೇಮಕಗೊಂಡರು.

ದಕ್ಷಿಣ ಕನ್ನಡ ಮತ್ತು ಬಳ್ಳಾರಿ ಜಿಲ್ಲೆಯಲ್ಲಿ ಎಎಸ್‌ಪಿಯಾಗಿ ಕರ್ತವ್ಯ ನಿರ್ವಹಿಸಿರುವ ಅನುಭವ ಓಂಪ್ರಕಾಶ್ ಅವರಿಗಿದೆ. 1985ರಲ್ಲಿ ಎಸ್‌ಪಿ ಹುದ್ದೆಗೆ ಬಡ್ತಿ ಹೊಂದಿ 1985ರಿಂದ 87ರ ವರೆಗೆ ರಾಜ್ಯ ಗುಪ್ತಚರ ಆಯೋಗ ಮತ್ತು ಲೋಕಾಯುಕ್ತದ ಎಸ್‌ಪಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ನಂತರ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಎಸ್‌ಪಿಯಾಗಿದ್ದರು.

ಸಿಐಡಿ, ಬೆಳಗಾವಿ ಉಪವಿಭಾಗದ ಐಜಿಪಿಯಾಗಿ, ಸಾರಿಗೆ ಆಯುಕ್ತರಾಗಿ, ಎಡಿಜಿಪಿ ಹುದ್ದೆಗೇರಿ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದಲ್ಲಿ ಕೆಲಸ ಮಾಡಿದ್ದರು. 2012ರ ಮೇ 31 ರಂದು ಅಗ್ನಿಶಾಮಕದ ಡಿಜಿಪಿ ಆಗಿ ಅಧಿಕಾರ ಸ್ವೀಕರಿಸಿದ್ದರು.

ಕೋಮುಗಲಭೆ ನಿಯಂತ್ರಣ
ಓಂಪ್ರಕಾಶ್ ಕೋಮುಗಲಭೆ ನಿಯಂತ್ರಣದಲ್ಲಿ ಕಾರ್ಯಕ್ಷಮತೆಗೆ ಹೆಸರುವಾಸಿಯಾಗಿದ್ದಾರೆ. ಶಿವಮೊಗ್ಗ ಜಿಲ್ಲೆಯ ಎಸ್‌ಪಿಯಾಗಿದ್ದಾಗ ಬಾಬರಿ ಮಸೀದಿ ಧ್ವಂಸದ ನಂತರ ಜಿಲ್ಲೆಯಲ್ಲಿ ಸಣ್ಣ ಮಟ್ಟದ ಅಹಿತಕರ ಘಟನೆಗೂ ಅವಕಾಶ ಕೊಡದಂತೆ ಕರ್ತವ್ಯ ನಿರ್ವಹಿಸಿದರು. 1993ರ ಏಪ್ರಿಲ್‌ನಿಂದ ಸೆಪ್ಟೆಂಬರ್ ತಿಂಗಳವರೆಗೂ ಭಟ್ಕಳದಲ್ಲಿ ನಿರಂತರವಾಗಿ ನಿಯಂತ್ರಣಕ್ಕೆ ಸಿಗದ ಕೋಮುಗಲಭೆ, ಹಿಂಸೆಯನ್ನು ತಹಬಂದಿಗೆ ತಂದಿದ್ದರು.

ಪದಕ-ಪ್ರಶಸ್ತಿ

ವಿಶಿಷ್ಟ ಸೇವೆಗಾಗಿ ರಾಷ್ಟ್ರಪತಿ ಪೊಲೀಸ್ ಪದಕ, ಶ್ಲಾಘನೀಯ ಕರ್ತವ್ಯ ನಿರ್ವಹಣೆಗಾಗಿ ರಾಷ್ಟ್ರಪತಿ ಪೊಲೀಸ್ ಪದಕದ ಸೇರಿದಂತೆ ಹಲವು ಪುರಸ್ಕಾರಗಳನ್ನು ಓಂ ಪ್ರಕಾಶ ಪಡೆದಿದ್ದಾರೆ.

English summary
Senior IPS officer Om Prakash on Saturday took charge as Director General and Inspector General of Police (DG&IGP) of the State.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X