'ನೀತಿ ಸಂಹಿತೆ ಉಲ್ಲಂಘನೆ': ಅಬಕಾರಿ ಕಾಯ್ದೆಯಡಿ 10,000ಕ್ಕೂ ಹೆಚ್ಚು ಕೇಸ್: ಈವರೆಗೆ ದಾಖಲಾದ ವಿವಿಧ ಪ್ರಕರಣ ಪಟ್ಟಿ, ವಿವರ
ಬೆಂಗಳೂರು, ಏಪ್ರಿಲ್ 11: ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ ಕಾವು ಹೆಚ್ಚಾಗಿದೆ. ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ. ಜಾರಿಯಲ್ಲಿರುವ ನೀತಿ ಸಂಹಿತೆ ಉಲ್ಲಂಘನೆಯ ಪ್ರಕರಣಗಳು ಕುರಿತು ರಾಜ್ಯ ಮುಖ್ಯ ಚುನಾವಣಾಧಿಕಾರಿಗಲು ಮಾಹಿತಿ ನೀಡಿದ್ದಾರೆ. ಯಾವ ಯಾವ ಪ್ರಕರಣಗಳು ಎಷ್ಟೆಷ್ಟು? ದಾಖಲಾಗಿವೆ ಎಂಬ ಮಾಹಿತಿ, ಪಟ್ಟಿ ಇಲ್ಲಿದೆ.
ನಗದು, ಮದ್ಯ, ಡ್ರಗ್ಸ್, ಬೆಲೆಬಾಳುವ ವಸ್ತುಗಳು ಇತ್ಯಾದಿ ಅಕ್ರಮ ಸಾಗಣೆ ವಿರುದ್ಧ ರಾಜ್ಯಾದ್ಯಂತ ಹದ್ದಿನ ಕಣ್ಣಿರಿಸಲಾಗಿದೆ. ಇದರೊಂದಿಗೆ 'ಅಬಕಾರಿ ಇಲಾಖೆ ಘೋರ ಅಪರಾಧಯಡಿ, ಪವಾನಗಿ ಉಲ್ಲಂಘನೆ ಅಡಿ, NDPS ಅಡಿ, ಕರ್ನಾಟಕ ಅಬಕಾರಿ ಕಾಯ್ದೆಯಡಿ 1956ರ ಕಾಯ್ದೆಯಡಿ ಸಾವಿರಾರು ಪ್ರಕರಣಗಳನ್ನು ದಾಖಲಿಸಲಾಗಿದೆ.

ಅಬಕಾರಿ ಕಾಯ್ದೆಯಡಿ 10,718 ಕೇಸು ದಾಖಲು
ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆಯ ಕಾರಣಕ್ಕಾಗಿ 'ಕರ್ನಾಟಕ ಅಬಕಾರಿ ಕಾಯ್ದೆಯಡಿ 1956ರ ಕಾಯ್ದೆ'ಯಡಿ ಬರೋಬ್ಬರಿ 10,718 ಪ್ರಕರಣಗಳು ದಾಖಲಿಸಲಾಗಿದೆ. ಲೋಕಸಭಾ ಚುನಾವಣೆ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ನಿಭಾಯಿಸುತ್ತಿದ್ದರೂ ಉಲ್ಲಂಘನೆ ಪ್ರಕರಣಗಳು ವರದಿ ಆಗಿವೆ. ಕಾನೂನು ಉಲ್ಲಂಘಿಸಿದವರ ವಿರುದ್ಧ ಕ್ರಮ ಜರುಗಿಸಲಾಗುತ್ತಿದೆ
ಅಕ್ರಮ ಸಾಗಾಣೆ ವಿರುದ್ಧ 1,505 ಪ್ರಕರಣ
ಅಕ್ರಮ ನಗದು, ಮದ್ಯ, ಡ್ರಗ್ಸ್, ಬೆಲೆಬಾಳುವ ವಸ್ತುಗಳು ಇತ್ಯಾದಿ ಅಕ್ರಮ ಸಾಗಣೆ ವಿರುದ್ಧ ರಾಜ್ಯಾದ್ಯಂತ ಹದ್ದಿನ ಕಣ್ಣಿಡಲಾಗಿದೆ. ಈ ವಿಚಾರವಾಗಿ ಇದುವರೆಗೆ 1,505 ಪ್ರಕರಣಗಳು ಮತ್ತು NDPS ಅಡಿ 112 ಪ್ರಕರಣಗಳೂ ದಾಖಲಾಗಿವೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳು ತಿಳಿಸಿದರು.

ಘೋರ ಅಪರಾಧದಡಿ 1848 ಕೇಸು ದಾಖಲು
ಅಬಕಾರಿ ಇಲಾಖೆ ಘೋರ ಅಪರಾಧದ ಅಡಿಯಲ್ಲಿ 1848 ಕೇಸುಗಳು ಪತ್ತೆಯಾಗಿವೆ. ಇದೇ ವೇಳೆ ಪರವಾನಗಿ ಉಲ್ಲಂಘನೆ ಅಡಿಯಲ್ಲಿ ಒಟ್ಟು 2217 ಕೇಸುಗಳು ದಾಖಲಾಗಿವೆ. ಈ ಮೇಲಿನ ಎಲ್ಲ ಪ್ರಕರಣಗಳು ಒಳಗೊಂಡಂತೆ ಒಟ್ಟು ಚುನಾವಣಾ ಮತ್ತು ಕಸ್ಟಮ್ಸ್ ಅಧಿಕಾರಿಗಳು ಒಟ್ಟು ಈವರೆಗೆ 1118 ವಿವಿಧ ರೀತಿಯ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಮೂಲಕ ನೀತಿ ಸಂಹಿತೆ ಪಾಲನೆಯ ಮಹತ್ವ ಸಾರಿದ್ದಾರೆ.
ಕರ್ನಾಟಕದಾದ್ಯಂತ ಮುಖ್ಯ ರಸ್ತೆಗಳು, ಹೆದ್ದಾರಿಗಳು ಸೇರಿದಂತೆ ಅಲ್ಲಲ್ಲಿ ಪೊಲೀಸ್ ಮತ್ತು ಚುನಾವಣಾ ಸಿಬ್ಬಂದಿ ತಂಡ ಚೆಕ್ ಪೋಸ್ಟ್ ತೆರೆದಿದೆ. ಕಣ್ತಪ್ಪಿಸಿ ನಗದು, ಆಮಿಷ ಒಡ್ಡಲು ಉಡುಗೊರೆ ಇನ್ನಿತರ ವಸ್ತುಗಳು ಸಾಗಾಟವಾಗದಂತೆ ಎಚ್ಚರಿಕೆ ವಹಿಸಲಾಗಿದೆ.
ಚೆಕ್‌ಪೋಸ್ಟ್‌ಗಳಲ್ಲಿ ಡ್ರಂಕ್ ಡ್ರೈವ್ ತಪಾಸಣೆ
ಇತ್ತೀಚೆಗೆ ಇದೇ ಚೆಕ್ ಪೋಸ್ಟ್‌ಗಳಲ್ಲಿ ಡ್ರಂಕ್ ಆಂಡ್ ಡ್ರೈವ್ ತಪಾಸಣೆ ಸಹ ಆರಂಭಿಸಲಾಗಿದೆ. ಇದರಿಂದ ಕುಡಿದು ಪಾನಮತ್ತರಾಗಿ ವಾಹನ ಚಾಲಿಸುವುದು ತಪ್ಪಲಿದೆ. ಜೊತೆಗೆ ಅಪರಾಧ ಚಟುವಟಿಕೆಗಳಿಗೂ ಏಕಕಾಲಕ್ಕೆ ಕಡಿವಾಣ ಹಾಕು ಪೊಲೀಸ್ ಇಲಾಖೆ ನಿರ್ಧರಿಸಿದೆ. ಪೊಲೀಸರ ಈ ನಿರ್ಧಾರಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ದಾಖಲಾದ ಪ್ರಕರಣಗಳ ಪಟ್ಟಿ-ವಿವರ
* 'ಕರ್ನಾಟಕ ಅಬಕಾರಿ ಕಾಯ್ದೆಯಡಿ 1956ರ ಕಾಯ್ದೆ'ಯಡಿ- 10,718 ಪ್ರಕರಣಗಳು
* ಅಕ್ರಮ ನಗದು, ಮದ್ಯ, ಡ್ರಗ್ಸ್, ಬೆಲೆಬಾಳುವ ವಸ್ತುಗಳು ಸಾಗಣೆ ವಿರುದ್ಧ- 1,505 ಪ್ರಕರಣ
* ಅಬಕಾರಿ ಇಲಾಖೆ ಘೋರ ಅಪರಾಧದ ಅಡಿ- 1848 ಕೇಸು ದಾಖಲು
* ಪರವಾನಗಿ ಉಲ್ಲಂಘನೆ ಅಡಿ- 2217 ಪ್ರಕರಣ ದಾಖಲು
* NDPS ಅಡಿ -112 ಪ್ರಕರಣ ದಾಖಲು
* ಈವರೆಗೆ ಒಟ್ಟು 1118 ವಿವಿಧ ರೀತಿಯ ವಾಹನಗಳು ಜಪ್ತಿ












Click it and Unblock the Notifications