ಮೈಸೂರು: ಪ್ರಧಾನಿ ಮೋದಿ ಕುರಿತಾದ ಹಾಡು ಶೇರ್ ಮಾಡಿ ಎಂದಿದ್ದಕ್ಕೆ ಯುವಕನ ಮೇಲೆ ಹಲ್ಲೆ

ಪ್ರಧಾನಿ ನರೇಂದ್ರ ಮೋದಿ ಕುರಿತಾದ ಹಾಡೊಂದನ್ನು ಶೇರ್ ಮಾಡಿ ಎಂದಿದ್ದಕ್ಕೆ ಯುವಕ ಮೇಲೆ ಅನ್ಯ ಕೋಮಿನ ಗುಂಪೊಂದು ಹಲ್ಲೆ ನಡೆಸಿದ್ದು, ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಮೈಸೂರು ತಾಲೂಕಿನ ಮೆಲ್ಲಹಳ್ಳಿ ಗ್ರಾಮದ ರೋಹಿತ್ ರಮಣ ದೂರು ನೀಡಿದ್ದು, ನಜರ್‌ಬಾದ್ ಠಾಣೆಯಲ್ಲಿ ದೂರು ದಾಖಲಾಗಿದೆ.

Mysuru man claims attacked for Ask to share song on PM Modi police to probe

ಏನಿದು ಪ್ರಕರಣ?

ರೋಹಿತ್ ರಮಣ ಎಂಬ ಯುವಕ ಎಲ್ಲೆಡೆ ಮೋದಿ ಕುರಿತಾದ ಹಾಡನ್ನು ಶೇರ್ ಮಾಡಿಸುತ್ತಿದ್ದ. ಶುಕ್ರವಾರ ಮೈಸೂರಿನ ಸರಕಾರಿ ಗೆಸ್ಟ್ ಹೌಸ್‌ನಲ್ಲಿ ಕುಳಿತಿದ್ದನು. ಈ ವೇಳೆ ಅಲ್ಲಿಗೆ ಬಂದ ಅನ್ಯ ಯುವನಿಗೆ ರೋಹಿತ್ ಹಾಡು ತೋರಿಸಿ ಶೇರ್ ಮಾಡುವಂತೆ ಕೇಳಿಕೊಂಡಿದ್ದಾನೆ. ಹಾಡು ನೋಡಿ ಇಷ್ಟ ಪಟ್ಟ ಯುವಕ ಚೆನ್ನಾಗಿದೆ. ನನ್ನ ಸ್ನೇಹಿತರಿಗೂ ತೋರಿಸು. ಅವರು ಶೇರ್ ಮಾಡುತ್ತಾರೆ ಎಂದು ಹೇಳಿ ಅಲ್ಲಿಂದ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾನೆ.

ನಿರ್ಜನ ಪ್ರದೇಶದಲ್ಲಿ ಮುಸ್ಲಿಂ ಯುವಕರು ಹಲ್ಲೆ ನಡೆಸಿದರು. ನನ್ನ ಮುಖಕ್ಕೆ ಬಿಯರ್ ಸುರಿದರು. ನನ್ನ ಕೈ ಕುಯ್ದು. ನನ್ನ ಮೇಲೆ ಮೂತ್ರ ವಿಸರ್ಜನೆ ಮಾಡಿದರು ಎಂದು ರೋಹಿತ್ ದೂರಿನಲ್ಲಿ ಆರೋಪಿಸಿದ್ದಾನೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಲಕ್ಷ್ಮಿಪುರಂ ಪೊಲೀಸ್ ಸಮ್ಮುಖದಲ್ಲಿ ಹಲ್ಲೆಗೊಳಗಾದ ಯುವಕ ರೋಹಿತ್‌ನ ವೈದ್ಯಕೀಯ ತಪಾಸಣೆ ನಡೆಸಲಾಗಿದೆ. ಪ್ರಕರಣ ನಜರಬಾದ್ ಠಾಣೆ ವ್ಯಾಪ್ತಿಗೆ ಬರುವುದರಿಂದ ಅಲ್ಲಿಗೆ ವರ್ಗಾಯಿಸಲಾಗಿದೆ.

ಶಾಸಕ ಶ್ರೀವತ್ಸ ಖಂಡನೆ

ಮೋದಿ ಅವರ ಕುರಿತ ಹಾಡು ಶೇರ್ ಮಾಡುವಂತೆ ಕೇಳಿದ್ದಕ್ಕೆ ಹಲ್ಲೆ ಮಾಡಿರುವುದು ಸರಿಯಲ್ಲ ಎಂದು ಶಾಸಕ ಶ್ರೀವತ್ಸ ಖಂಡಿಸಿದ್ದಾರೆ. ಇಂದು ಆ ಯುವಕನ ಮೇಲೆ ಮೋದಿ ಹಾಡು ಹಾಡಿದ ವಿಚಾರಕ್ಕೆ ಹಲ್ಲೆ ಮಾಡಲಾಗಿದೆ ಎಂದು ಹೇಳಲಾಗಿದೆ. ಯುವಕನೇ ಹೇಳುವಂತೆ ಯುವಕರ ಗುಂಪು ಹಲ್ಲೆ ಮಾಡಿ ಮೂತ್ರ ವಿಸರ್ಜನೆ ಮಾಡಿರುವುಸು ಸರಿಯಲ್ಲ . ಈ ಬಗ್ಗೆ ಮುಂದಿನ ದಿನಗಳಲ್ಲಿ ಹೋರಾಟ ಮಾಡುತ್ತೇವೆ ಎಂದರು.

ವ್ಯಾಪಕ ಖಂಡನೆ

ಒಂದು ಕಡೆ ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ ಎನ್ನುವ ಯುವತಿ ಕೊಲೆ ಪ್ರಕರಣದ ಬಗ್ಗೆ ಸಾಕಷ್ಟು ಆಕ್ರೋಶ ವ್ಯಕ್ತವಾಗುತ್ತಿರುವಾಗಲೇ ಈ ರೀತಿಯ ಘಟನೆ ನಡೆದಿರುವುದು ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಈಗಾಗಲೇ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ವಿಪಕ್ಷಗಳು ಕೂಡ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+