School Holiday Tomorrow: ಶಾಲಾ - ಕಾಲೇಜು ಸೇರಿ ಸರ್ಕಾರಿ ರಜೆ, ಈ ಭಾಗದಲ್ಲಿ ಮದ್ಯ ಮಾರಾಟವೂ ನಿಷೇಧ

School Holiday: ಮೊಹರಂ ಹಬ್ಬದ (ಆಶುರಾ) ಪ್ರಯುಕ್ತ ಜೂನ್ 26 ಶುಕ್ರವಾರ ಕರ್ನಾಟಕದಾದ್ಯಂತ ಸರ್ಕಾರಿ ರಜೆ ಇರಲಿದೆ. ಮೊಹರಂ ಹಿನ್ನೆಲೆಯಲ್ಲಿ ಶಾಲಾ - ಕಾಲೇಜುಗಳು ಸೇರಿದಂತೆ ರಾಜ್ಯದಾದ್ಯಂತ ಸರ್ಕಾರಿ ರಜೆ ಇದೆ. ಇದರೊಂದಿಗೆ ಕರ್ನಾಟಕದ ವಿವಿಧ ಭಾಗಗಳಲ್ಲಿ ಮದ್ಯ ಮಾರಾಟ ನಿಷೇಧವೂ ಇರಲಿದೆ. ಮೊಹರಂ ಪ್ರಯುಕ್ತವಾಗಿ ಸರ್ಕಾರಿ ಕಚೇರಿಗಳು ಹಾಗೂ ಬ್ಯಾಂಕುಗಳಿಗೆ ಸಾರ್ವಜನಿಕ ರಜೆ ಸಹ ಘೋಷಿಸಲಾಗಿದೆ. ಇನ್ನು ಈ ಸಾರ್ವಜನಿಕರ ರಜೆಯು ವಾರಾಂತ್ಯದಲ್ಲಿ (ಶನಿವಾರ ಮತ್ತು ಭಾನುವಾರ) ಬರುವುದರಿಂದ ಮೂರು ದಿನಗಳ ಸತತ ರಜೆ ಸಿಕ್ಕಂತೆ ಆಗಿದೆ. ಕರ್ನಾಟಕದಲ್ಲಿ ನಾಳೆ ಅಂದರೆ ಜೂನ್ 26ರ ಶುಕ್ರವಾರ ಯಾವೆಲ್ಲ ಸರ್ಕಾರಿ ಸೇವೆಗಳು ಇರಲಿವೆ, ಯಾವುದು ಇರುವುದಿಲ್ಲ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಜೂನ್ 26, 2026 (ಶುಕ್ರವಾರ) ಕರ್ನಾಟಕ ಸೇರಿದಂತೆ ಭಾರತದಾದ್ಯಂತ ಮೊಹರಂ ರಜೆ ಇರಲಿದೆ. ಶುಕ್ರವಾರದಂ ಬ್ಯಾಂಕುಗಳು, ಸರ್ಕಾರಿ ಕಚೇರಿಗಳು ಮತ್ತು ಶೈಕ್ಷಣಿಕ ಸಂಸ್ಥೆಗಳು ಸಂಪೂರ್ಣವಾಗಿ ಮುಚ್ಚಿರಲಿವೆ. ಜೂನ್ 26ರಂದು ಮುಸ್ಲಿಂ ಸಮುದಾಯದವರು ಇಮಾಮ್ ಹುಸೇನ್ ಅವರ ತ್ಯಾಗ ಬಲಿದಾನವನ್ನು ಸ್ಮರಿಸಿ ಪ್ರಾರ್ಥನೆ, ಮೆರವಣಿಗೆ ಹಾಗೂ ಧಾರ್ಮಿಕ ಸಭೆಗಳನ್ನು ನಡೆಸುತ್ತಾರೆ. ಈ ದಿನ ಬ್ಯಾಂಕ್ ವಹಿವಾಟುಗಳು ನಡೆಯುವುದಿಲ್ಲವಾದರೂ ಸಹ ಡಿಜಿಟಲ್ ಪಾವತಿಗಳು ಮತ್ತು ಎಟಿಎಂಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ಹೀಗಾಗಿ, ಬ್ಯಾಂಕಿಂಗ್ ಅಥವಾ ಹಣಕಾಸಿನ ವಹಿವಾಟಿನ ಮೇಲೆ ಯಾವುದೇ ರೀತಿಯ ಪರಿಣಾಮಗಳು ಬೀರುವುದಿಲ್ಲ.

School Holiday Tomorrow

ಕರ್ನಾಟಕ ಸರ್ಕಾರವು 2026ರ ಸಾರ್ವಜನಿಕ ರಜೆಪಟ್ಟಿಯಲ್ಲಿಯೇ ಮೊಹರಂ (Muharram 2026) ರಜೆಯನ್ನು ಪ್ರಕಟಿಸಿತ್ತು. ಶಾಲಾ ರಜೆ ವೇಳಾಪಟ್ಟಿ ಬಿಡುಗಡೆ ಸಮಯದಲ್ಲಿಯೇ ಈ ರಜೆಯನ್ನು ಸಹ ಸೇರಿಸಲಾಗಿತ್ತು. ಅಂದರಂತೆ ಜೂನ್‌ 26ರಂದು ಶುಕ್ರವಾರದಂದು ಕರ್ನಾಟಕದ ಎಲ್ಲಾ ಶಾಲಾ- ಕಾಲೇಜುಗಳಿಗೆ ಮೊಹರಂ ಪ್ರಯುಕ್ತ ಸರ್ಕಾರಿ ರಜೆ ಇರಲಿದೆ. ಇದರೊಂದಿಗೆ ಶನಿವಾರ ಅರ್ಧ ದಿನ ರಜೆ ಹಾಗೂ ಭಾನುವಾರ ಎಂದಿನಂತೆ ರಜೆ ಇರಲಿದೆ.

ವಿದ್ಯಾರ್ಥಿಗಳಿಗೆ ಗುಡ್‌ ನ್ಯೂಸ್‌: ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗಳ ಮೇಲ್ದರ್ಜೆ, ಹೈಸ್ಕೂಲ್ ಹಂತಕ್ಕೂ ವಿಸ್ತರಣೆ
ವಿದ್ಯಾರ್ಥಿಗಳಿಗೆ ಗುಡ್‌ ನ್ಯೂಸ್‌: ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗಳ ಮೇಲ್ದರ್ಜೆ, ಹೈಸ್ಕೂಲ್ ಹಂತಕ್ಕೂ ವಿಸ್ತರಣೆ

ಮದ್ಯ ಮಾರಾಟ ನಿಷೇಧ

ಇನ್ನು ಕರ್ನಾಟಕದ ವಿವಿಧ ಭಾಗಗಳಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಉದ್ದೇಶದಿಂದ ಮೊಹರಂ ಹಬ್ಬದ ಹಿನ್ನೆಲೆಯಲ್ಲಿ 3 ದಿನಗಳ ಕಾಲ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಬೆಂಗಳೂರು: ಪಾಲಿಕೆ ಶಾಲಾ ಕಾಲೇಜುಗಳ ಪ್ರವೇಶಾತಿಗೆ ಜುಲೈ 31 ರವರೆಗೂ ಅವಕಾಶ, ದಾಖಲಾತಿ ಆಗಿದ್ದೆಷ್ಟು?
ಬೆಂಗಳೂರು: ಪಾಲಿಕೆ ಶಾಲಾ ಕಾಲೇಜುಗಳ ಪ್ರವೇಶಾತಿಗೆ ಜುಲೈ 31 ರವರೆಗೂ ಅವಕಾಶ, ದಾಖಲಾತಿ ಆಗಿದ್ದೆಷ್ಟು?

ಇದೀಗ ಬಳ್ಳಾರಿ ಜಿಲ್ಲೆಯಾದ್ಯಂತ 3 ದಿನಗಳ ಕಾಲ ಮದ್ಯ ಮಾರಾಟ ನಿಷೇಧಿಸಲಾಗಿದೆ. ಬಳ್ಳಾರಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ ನಾಗೇಂದ್ರ ಪ್ರಸಾದ್ ಅವರು ಮದ್ಯ ಮಾರಾಟ ನಿಷೇಧಕ್ಕೆ ಸಂಬಂಧಿಸಿದಂತೆ ಆದೇಶ ಹೊರಡಿಸಿದ್ದಾರೆ. ಜಿಲ್ಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ತಡೆಯುವ ಉದ್ದೇಶದಿಂದ ಈ ಕ್ರಮ ತೆಗೆದುಕೊಂಡಿರುವುದಾಗಿ ಹೇಳಿದ್ದಾರೆ. ಜೂನ್ 27ರ ಬೆಳಿಗ್ಗೆ 6 ಗಂಟೆಯವರೆಗೆ ಮದ್ಯ ಮಾರಾಟ ನಿಷೇಧ ಇರಲಿದೆ. ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 21ರಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಈ ಆದೇಶವನ್ನು ಹೊರಡಿಸಲಾಗಿದೆ. ಅಲ್ಲದೆ ಈ ಅವಧಿಯಲ್ಲಿ ಜಿಲ್ಲೆಯಾದ್ಯಂತ ಎಲ್ಲಾ ರೀತಿಯ ಮದ್ಯ ಮಾರಾಟ ಮತ್ತು ಮದ್ಯ ಸಾಗಾಣಿಕೆಯನ್ನು ನಿಷೇಧಿಸಲಾಗಿದೆ ಎಂದು ಸರ್ಕಾರಿ ಆದೇಶದಲ್ಲಿ ಜಿಲ್ಲಾಧಿಕಾರಿ ಉಲ್ಲೇಖಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+