HSRP: ಈ ನಂಬರ್ ಪ್ಲೇಟ್ ಅಳವಡಿಸದ ವಾಹನ ಸವಾರರಿಗೆ ದಂಡಾಸ್ತ್ರ ಪ್ರಯೋಗ, ಯಾವಾಗಿನಿಂದ? ಸಾರಿಗೆ ಇಲಾಖೆ ಹೇಳಿದ್ದೇನು?
ಬೆಂಗಳೂರು, ಏಪ್ರಿಲ್, 08: ಈಗಾಗಲೇ ಸಾರಿಗೆ ಇಲಾಖೆ 2019ರ ಹಿಂದಿನ ವಾಹನಗಳಿಗೆ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಸುವಂತೆ ಸೂಚನೆ ನೀಡಿತ್ತು. ಆದರೆ ಕೆಲವು ಜನರು ಇದನ್ನು ಪಾಲಿಸಿದರೆ, ಇನ್ನು ಬಹುತೇಕ ಮಂದಿ ಈ ನಂಬರ್ ಪ್ಲೇಟ್ ಅನ್ನು ಅಳವಡಿಕೆ ಮಾಡಿಕೊಂಡಿಲ್ಲ ಎನ್ನುವುದು ಸಾರಿಗೆ ಇಲಾಖೆಯ ವಾದವಾಗಿದೆ. ಆದ್ದರಿಂದ ಯಾರೂ ತಮ್ಮ ವಾಹನಗಳಿಗೆ ಈ ನಂಬರ್ ಪ್ಲೇಟ್ ಅನ್ನು ಹಾಕಿಸಿಲ್ಲವೋ ಅಂತಹವರ ಮೇಳೆ ದಂಡಾಸ್ತ್ರ ಪ್ರಯೋಗ ಮಾಡಲು ಇಲಾಖೆ ಮುಂದಾಗಿದೆ.
2019ಕ್ಕಿಂತ ಮೊದಲು ಖರೀದಿ ಮಾಡಿದ ವಾಹನಗಳಿಗೆ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಕೆ ಕಡ್ಡಾಯ ಆಗಿದೆ. ರಾಜ್ಯ ಸಾರಿಗೆ ಇಲಾಖೆ ಮೇ 31ರವರೆಗೆ ಎಚ್‌ಎಸ್‌ಆರ್‌ಪಿ ಪಡೆಯಲು ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡಿದೆ. ಜೂನ್ 1ರಿಂದ ಪೊಲೀಸ್ ಇಲಾಖೆ ಜೊತೆ ಸೇರಿ HSRP ಇಲ್ಲದ ವಾಹನಗಳಿಗೆ ದಂಡ ವಿಧಿಸಲು ಸಾರಿಗೆ ಇಲಾಖೆ ನಿರ್ಧಾರ ಮಾಡಿದೆ ಎಂದು ತಿಳಿದುಬಂದಿದೆ.

HSRP ನಂಬರ್ ಪ್ಲೇಟ್ ಅಳವಡಿಕೆಗೆ ಈಗಾಗಲೇ ಎರಡು ಬಾರಿ ಗುಡುವು ವಿಸ್ತರಣೆ ಮಾಡಲಾಗಿದೆ. ಈ ಹಿಂದೆ 2023ರ ನವೆಂಬರ್ 13ರೊಳಗೆ ಎಚ್‌ಎಸ್‌ಆರ್‌ಪಿ ಅಳವಡಿ ಮಾಡಲು ಗಡುವು ನೀಡಲಾಗಿದ್ದು, ಆ ವೇಳೆ ಕೇವಲ 30,000 ವಾಹನಗಳ ಮಾಲೀಕರು ಮಾತ್ರ ನೋಂದಣಿ ಮಾಡಿಕೊಂಡಿದ್ದರು. ಆದ್ದರಿಂದ ಮತ್ತೆ ಫೆಬ್ರವರಿ 17 ರವರೆಗೆ ಗಡುವನ್ನು ವಿಸ್ತರಣೆ ಮಾಡಲಾಯಿತು. ಈ ವೇಳೆಗೆ 18 ಲಕ್ಷ ವಾಹನಗಳಿಗೆ HSRP ಅಳವಡಿಕೆ ಮಾಡಿಕೊಂಡಿದ್ದರು. ಮತ್ತೆ ಮೇ 31ರವರೆಗೆ HSRP ಅಳವಡಿಕೆ ಗಡುವು ವಿಸ್ತರಣೆ ಮಾಡಲಾಗಿದೆ.
ಈ ಗುಡುವಿನ ನಂತರವೂ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಲವಡಿಕೆ ಮಾಡದ ವಾಹನಗಳ ವಿರುದ್ಧ ದಂಡ ಪ್ರಯೋಗ ಮಾಡಲು ಸಾರಿಗೆ ಇಲಾಖೆ ಎಚ್ಚರಿಕೆ ನೀಡಿದ್ದು, ನಂತರ ವಾಹನ ಮಾಲೀಕರು ನೋಂದಣಿ ಪ್ರಮಾಣ ಹೆಚ್ಚಾಗಿ 18ಲಕ್ಷಕ್ಕೆ ತಲುಪಿದೆ. ಈಗ 52 ಲಕ್ಷ ವಾಹನಗಳ ನೋಂದಣಿಯಾಗಿದೆ.
ಎರಡನೇ ತಿಂಗಳಲ್ಲಿ 34 ಲಕ್ಷ ವಾಹನಗಳು HSRP ಅಳವಡಿಸಿಕೊಂಡಿದ್ದು, ಇನ್ನೂ ಸುಮಾರು 1.48 ಕೋಟಿ ವಾಹನಗಳು HSRP ಅಳವಡಿಸಿಕೊಳ್ಳಬೇಕಿದೆ. ನಿಗದಿತ ಗಡುವಿನೊಳಗೆ HSRP ಅಳವಡಿಸದಿದ್ದರೆ ಮತ್ತೊಮ್ಮೆ ಗಡುವು ವಿಸ್ತರಣೆ ಮಾಡಬಹುದು. ಗಡುವು ವಿಸ್ತರಿಸದಿದ್ದರೆ HSRP ಇಲ್ಲದ ವಾಹನಗಳಿಗೆ 500 ರಿಂದ 1000 ರೂಪಾಯಿ ದಂಡ ವಿಧಿಸಲಾಗುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications