ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದೆಲ್ಲೆಡೆ ಮಳೆ, ನಾಳೆಯೂ ಇದೇ ಸ್ಥಿತಿ, ಮತದಾನ ಬೇಗ ಮಾಡಿ

By Manjunatha
|
Google Oneindia Kannada News

ಬೆಂಗಳೂರು, ಮೇ 11: ನಿನ್ನೆಯಂತೆ ಇಂದೂ ಕೂಡ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಕಡೆ ಭಾರಿ ಗುಡುಗು ಸಹಿತ ಮಳೆಯಾಗುತ್ತಿದ್ದು, ಇನ್ನೂ ಎರಡು ದಿನ ಇದೇ ಹವಾಮಾನ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ನಿನ್ನೆ ನಗರದಲ್ಲಿ ಸ್ವಲ್ಪ ತಡವಾಗಿ ಆರಂಭವಾಗಿದ್ದ ಮಳೆ ಇಂದು ಸಂಜೆ 4:30ಕ್ಕೆ ಆರಂಭವಾಗಿದೆ. ನಾಳೆ ಕೂಡಾ ಸಂಜೆ ಅಥವಾ ರಾತ್ರಿ ಮಳೆ ಆಗುವ ಸಂಭವ ಇದ್ದು ಮತದಾನದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಬೆಂಗಳೂರು: ಭಾರಿ ಮಳೆಗೆ ಚರಂಡಿ ನೀರು ಮನೆಗೆ ನುಗ್ಗಿ ವೃದ್ಧೆ ಸಾವುಬೆಂಗಳೂರು: ಭಾರಿ ಮಳೆಗೆ ಚರಂಡಿ ನೀರು ಮನೆಗೆ ನುಗ್ಗಿ ವೃದ್ಧೆ ಸಾವು

ಭಾರಿ ಗುಡುಗು ಸಹಿತ ಮಳೆಯಿಂದಾಗಿ ನಗರದ ಮಲ್ಲೇಶ್ವರ, ಕೆಂಗೇರಿ, ಮೈಸೂರು ರಸ್ತೆ ಇನ್ನೂ ಹಲವು ಕಡೆ ರಸ್ತೆ ತುಂಬಿ ನೀರು ಹರಿದಿದ್ದು, ಟ್ರಾಫಿಕ್ ಉಂಟಾಗಿದೆ.

Heavy Rain in Bengaluru and many district of state

ನಾಳೆ ಸಹ ಸಂಜೆ ವೇಳೆಗೆ ಮಳೆ ಪ್ರಾರಂಭವಾಗುವ ಸಾಧ್ಯತೆ ಇರುವ ಕಾರಣ ಮತದಾರರು ಬೇಗನೇ ಮತ ಚಲಾಯಿಸಿದರೆ ಉತ್ತಮ. ಇಂದು ಸಂಜೆ 4:30ಕ್ಕೆ ಮಳೆ ಪ್ರಾರಂಭವಾಗಿದ್ದು ನಾಳೆ ಸಹ ಹೀಗೆಯೇ ಆದರೆ ಮತದಾನ ಕಡಿಮೆ ಆಗುವ ಸಾಧ್ಯತೆ ಇರುತ್ತದೆ. ಮಳೆಯ ಕಾರಣದಿಂದಾಗಿ ಮತದಾನ ಕಡಿಮೆ ಆದಲ್ಲಿ ಮುರೂ ಪಕ್ಷಗಳಿಗೆ ಸಮಸ್ಯೆ ಆಗಲಿದೆ.

English summary
Heavy rain and thunder in Bengaluru and many other districts of Karnataka. It may rain tomorrow also so it could be affect on voting. As per the meteorological department there will be rain in two more days in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X