ಬೆಳ್ಳಂಬೆಳಿಗ್ಗೆ ಗಾಳಿ, ಗುಡುಗು, ಚಟಪಟ ಶಬ್ದ ಕೇಳಿದ ದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಸಂತಸ ತಂದ ಮಳೆರಾಯ
ದೆಹಲಿ ಏಪ್ರಿಲ್ 22: ಧೂಳು, ಬಿಸಿಲು, ಉಸಿರುಗಟ್ಟುವ ವಾತಾವರಣದಿಂದ ಕಂಗೆಟ್ಟಿದ್ದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದು ಮುಂಜಾನೆ ಭಾರೀ ಮಳೆಯಾಗಿದೆ. ಬೆಳ್ಳಂಬೆಳಿಗ್ಗೆ ದೆಹಲಿ ಜನ ಮಳೆಯನ್ನು ಕಣ್ತುಂಬಿಕೊಂಡಿದ್ದಾರೆ.
ಏಪ್ರಿಲ್ 22ರ ಮುಂಜಾನೆ ದೆಹಲಿಯ ಹಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗಿದೆ. ಈ ಸಮಯದಲ್ಲಿ ಗುಡುಗು ಸಹಿತ ಬಲವಾದ ಗಾಳಿ ಬೀಸಿದೆ. ಇದರಿಂದಾಗಿ ಹವಾಮಾನ ಸಂಪೂರ್ಣವಾಗಿ ಬದಲಾಗಿದೆ. ಉತ್ತಮ ಮಳೆಯಿಂದಾಗಿ ತಾಪಮಾನ ತಗ್ಗಿದ್ದು, ಬಿಸಿಲಿನ ತಾಪದಿಂದ ಜನರಿಗೆ ನೆಮ್ಮದಿ ಸಿಕ್ಕಿದೆ.

ಕಳೆದ ರಾತ್ರಿಯಿಡಿ ಬಿಸಿ ವಾತಾವರಣ ಆವರಿಸಿತ್ತು. ಇಂದು ಬೆಳಗಿನ ಜಾವ ಆಗಸದಲ್ಲಿ ಕಪ್ಪು ಮೋಡಗಳು ಕಂಡು ಬಂದವು. ಬಳಿಕ ದಾರಾಕಾರ ಮಳೆಯಾಗಿದೆ. ಇಂದು ಹಗಲಿನಲ್ಲಿ ಮಳೆ ಮುಂದುವರೆಯುವ ಸಾಧ್ಯತೆ ಇದೆ.
ಆಕಾಶದಲ್ಲಿ ಕಪ್ಪು ಮೋಡಗಳು
ಹವಾಮಾನ ಇಲಾಖೆಯು ಈಗಾಗಲೇ ಏಪ್ರಿಲ್ 21 ಮತ್ತು 22 ರಂದು ಬಲವಾದ ಗಾಳಿ ಮತ್ತು ಮಳೆಯನ್ನು ಮುನ್ಸೂಚನೆ ನೀಡಿತ್ತು. ಹವಾಮಾನ ಇಲಾಖೆ ಪ್ರಕಾರ, ಇಂದು ಆಕಾಶದಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿರಲಿದ್ದು, ಜೋರಾದ ಗಾಳಿಯೊಂದಿಗೆ ತುಂತುರು ಮಳೆಯಾಗುವ ಸಾಧ್ಯತೆ ಇದೆ.
ತಾಪಮಾನದ ಕುರಿತು ಮಾತನಾಡುವುದಾದರೆ, ದೆಹಲಿಯಲ್ಲಿ ಕನಿಷ್ಠ ತಾಪಮಾನ 24 ಡಿಗ್ರಿ ತಲುಪಿದೆ. ಇಂದು ಗರಿಷ್ಠ ತಾಪಮಾನ 38 ಡಿಗ್ರಿ ಸೆಲ್ಸಿಯಸ್ ತಲುಪಬಹುದು. ಮುಂದಿನ ದಿನಗಳ ಬಗ್ಗೆ ಮಾತನಾಡುವುದಾದರೆ, ಏಪ್ರಿಲ್ ಅಂತ್ಯದವರೆಗೆ ಹವಾಮಾನವು ಹೀಗೆಯೇ ಇರುತ್ತದೆ. ಇಲ್ಲಿ ಬಲವಾದ ಗಾಳಿಯಿಂದಾಗಿ ಮೋಡಗಳ ಚಲನೆ ಮುಂದುವರಿಯುತ್ತದೆ.

ಶಾಖ ಚೇತರಿಕೆ
ಏಪ್ರಿಲ್ 23 ರಂದು ದೆಹಲಿಯ ಕನಿಷ್ಠ ತಾಪಮಾನ ಒಂದು ಪಾಯಿಂಟ್ ಕಡಿಮೆಯಾಗಬಹುದು. ಆದಾಗ್ಯೂ, ಗರಿಷ್ಠ ತಾಪಮಾನವು ಒಂದು ಹಂತಕ್ಕೆ ಹೆಚ್ಚಾಗಬಹುದು. ಏಪ್ರಿಲ್ 24 ಮತ್ತು ಏಪ್ರಿಲ್ 26 ರ ನಡುವೆ ಗರಿಷ್ಠ ತಾಪಮಾನವು 40 ಡಿಗ್ರಿ ತಲುಪಬಹುದು. ಏಪ್ರಿಲ್ 25 ಮತ್ತು ಏಪ್ರಿಲ್ 27 ರಂದು ಬಲವಾದ ಗಾಳಿ ಮೋಡ ರೂಪುಗೊಳ್ಳಲಿವೆ. ಒಟ್ಟಿನಲ್ಲಿ ದೆಹಲಿಯಲ್ಲಿ ಹಗಲಿನಲ್ಲಿ ಬಿಸಿಲಿನ ವಾತಾವರಣವಿದ್ದು, ಬೆಳಗ್ಗೆ ಮತ್ತು ಸಂಜೆ ವಾತಾವರಣ ಕೊಂಚ ತಣ್ಣಗಾಗುತ್ತಿತ್ತು. ಆದರೀಗ ಮಳೆಯಿಂದಾಗಿ ವಿಪರೀತ ಸೆಖೆಯಿಂದ ಮುಕ್ತಿ ದೊರೆತಿದೆ.
ಪಶ್ಚಿಮ ಹಿಮಾಲಯದಲ್ಲಿ ಪಾಶ್ಚಿಮಾತ್ಯ ಅಡಚಣೆಗಳು ಒಂದರ ನಂತರ ಒಂದರಂತೆ ಬರುತ್ತಿವೆ. ಇದರಿಂದಾಗಿ ಅನೇಕ ರಾಜ್ಯಗಳ ಹವಾಮಾನದಲ್ಲಿ ಬದಲಾವಣೆಗಳು ಕಂಡುಬಂದಿದೆ. ಶ್ರೀನಗರ-ಲಡಾಖ್ ರಸ್ತೆ ಮತ್ತು ಝೋಜಿಲಾ ಟಾಪ್‌ನಲ್ಲಿ ತಾಜಾ ಹಿಮಪಾತವಾಗಿದೆ. ಇತ್ತ ಜಾರ್ಖಂಡ್, ಒಡಿಶಾ, ಪಶ್ಚಿಮ ಬಂಗಾಳ, ಯುಪಿ ಮತ್ತು ವಿದರ್ಭದ ಹಲವು ಭಾಗಗಳನ್ನು ಒಳಗೊಂಡಿರುವ ದೇಶದ ಅನೇಕ ರಾಜ್ಯಗಳು ಬಿಸಿಲಿನ ತಾಪದಿಂದ ಹೆಣಗಾಡುತ್ತಿವೆ.












Click it and Unblock the Notifications