ಮಳೆ.. ಮಳೆ.. ಮುಂದಿನ 24 ಗಂಟೆಯಲ್ಲಿ ಭರ್ಜರಿ ಮಳೆ!
ಕರ್ನಾಟಕದಲ್ಲಿ ಕಳೆದ ವಾರ ಭರ್ಜರಿಯಾಗಿ ಮಳೆ ಸುರಿದಿತ್ತು, ಆದರೆ ಈ ವಾರ ಮತ್ತೆ ಮಳೆ ಮೋಡಗಳು ಮಾಯವಾಗಿವೆ. ಭಾರಿ ಬಿಸಿಲಿನ ಬೇಗೆಗೆ ಜನರು ಕೂಡ ನರಳಾಡಿದ್ದಾರೆ. ಇದೇ ಸಮಯದಲ್ಲಿ ಹವಾಮಾನ ಇಲಾಖೆ ಗುಡ್ ನ್ಯೂಸ್ ಕೊಟ್ಟಿದ್ದು, ಮುಂದಿನ 24 ಗಂಟೆಯಲ್ಲಿ ಭರ್ಜರಿ ಮಳೆ ಬೀಳುವ ಬಗ್ಗೆ ಮುನ್ಸೂಚನೆ ನೀಡಲಾಗಿದೆ. ಹಾಗಾದರೆ ಕರ್ನಾಟಕದ ಯಾವ ಯಾವ ಜಿಲ್ಲೆಯಲ್ಲಿ ಮುಂದಿನ 24 ಗಂಟೆಯಲ್ಲಿ ಭರ್ಜರಿ ಮಳೆ ಬೀಳಲಿದೆ ಗೊತ್ತಾ? ಮಳೆಯ ಬಗ್ಗೆ ಮಾಹಿತಿಗೆ ಮುಂದೆ ಓದಿ.
ಮಳೆ ಬರದೇ ಕರ್ನಾಟಕದಲ್ಲಿ ಕುಡಿಯುವ ನೀರಿಗೂ ಕನ್ನಡಿಗರು ಪರಿತಪಿಸುತ್ತಾ, ಪರದಾಟ ಪಡುತ್ತಿದ್ದಾರೆ. ದಿನ ಬೆಳಗಾದರೆ ಸಾಕು ಕನ್ನಡಿಗರು ನೀರಿಗಾಗಿ ಹೋರಾಟ ಮಾಡಬೇಕಾಗಿರುವ ಪರಿಸ್ಥಿತಿ ಬಂದಿದೆ. ಹೀಗಿದ್ದಾಗ ಕಳೆದ ವಾರ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲೂ ಭರ್ಜರಿಯಾಗಿ ಮಳೆ ಬಿದ್ದಿತ್ತು. ಆದರೆ ಈ ವಾರ ಮತ್ತೆ ಮಳೆಯ ಮೋಡಗಳೇ ಕಾಣುತ್ತಿಲ್ಲ. ಇಂತಹ ಸ್ಥಿತಿ ಎದುರಾದ ಸಮಯದಲ್ಲೇ ಹವಾಮಾನ ಇಲಾಖೆ ಮಾತ್ರ ಭರ್ಜರಿ ಸುದ್ದಿ ನೀಡಿದೆ. ಅದ್ರಲ್ಲೂ ಮುಂದಿನ 24 ಗಂಟೆ ಸಮಯದಲ್ಲಿ ಈ ಜಿಲ್ಲೆಗಳಲ್ಲಿ ಭರ್ಜರಿ ಮಳೆ ಬೀಳಲಿದೆಯಂತೆ.

ಕರ್ನಾಟಕದ ಯಾವ ಜಿಲ್ಲೆಗಳಲ್ಲಿ ಮಳೆ?
ಹವಾಮಾನ ಇಲಾಖೆ ಈಗ ನೀಡಿರುವ ಮಾಹಿತಿ ಪ್ರಕಾರ, ದಾವಣಗೆರೆ, ಹಾವೇರಿ ಜಿಲ್ಲೆಗಳಲ್ಲಿ ಭರ್ಜರಿ ಮಳೆ ಬೀಳಲಿದೆಯಂತೆ. ಹಾಗೇ ಚಿಕ್ಕಮಗಳೂರು, ಕೊಡಗು ಜಿಲ್ಲೆ, ಚಿತ್ರದುರ್ಗದಲ್ಲಿ ಭರ್ಜರಿ ಮಳೆ ಪಕ್ಕಾ ಆಗಿದೆ. ಮತ್ತೊಂದು ಕಡೆ ಬೀದರ್, ಕಲಬುರಗಿ, ವಿಜಯಪುರ ಸೇರಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಾಗಲಕೋಟೆ, ಧಾರವಾಡ & ಹುಬ್ಬಳ್ಳಿಯಲ್ಲಿ ಒಳ್ಳೆ ಮಳೆ ಬೀಳಲಿದೆ. ಬೆಳಗಾವಿ ಜಿಲ್ಲೆಯ ಕೆಲವು ಭಾಗಗಳು ಸೇರಿದಂತೆ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಭಾಗಗಳಲ್ಲೂ ಉತ್ತಮವಾಗಿ ಮಳೆ ಬೀಳುವ ಮುನ್ಸೂಚನೆ, ಇದೀಗ ನೀಡಲಾಗಿದೆ.

ಈ ಬಾರಿ ಭೀಕರ ಬರ
4-5 ವರ್ಷದಿಂದ ಬೆಂಗಳೂರು & ಕರ್ನಾಟಕದ ಜನರು, ಭಾರಿ ಮಳೆಗೆ ಬೆಚ್ಚಿ ಬಿದ್ದಿದ್ದರು. ತಗ್ಗು ಪ್ರದೇಶದ ಜನಕ್ಕೆ ಮಳೆ ನೀರು ಸಾಕಷ್ಟು ಸಮಸ್ಯೆ ನೀಡಿತ್ತು. ಆದ್ರೂ ಕಳೆದ ವರ್ಷ ಮಳೆ ನಾಪತ್ತೆ ಆಗಿತ್ತು. ಬೇಸಿಗೆ ಸಮಯದಲ್ಲಿ ಬಿದ್ದಿದ್ದ ಒಂದೆರಡು ಮಳೆ ಮಾತ್ರ ಕರ್ನಾಟಕಕ್ಕೆ ತಂಪೆರದಿತ್ತು. ಅದನ್ನ ಬಿಟ್ಟು ಮುಂಗಾರು ಸಮಯ ಜೂನ್ ತಿಂಗಳಲ್ಲೇ ಕರ್ನಾಟಕದಲ್ಲಿ ಮಳೆ ಕೊರತೆ ಆತಂಕ ಹುಟ್ಟಿಸಿತ್ತು. ಇದೀಗ ಕರ್ನಾಟಕದಲ್ಲಿ ನಿಧಾನವಾಗಿ ಜೋರು ಮಳೆ ಬೀಳುತ್ತಿದ್ದು, ಪರಿಸ್ಥಿತಿ ಕೂಡ ಸುಧಾರಿಸುತ್ತಿದೆ.
ಬೋರ್‌ಗಳಲ್ಲಿ ನೀರು ಖಾಲಿ!
ಕರ್ನಾಟಕದ ಬಹುತೇಕ ಬೋರ್‌ಗಳು ಖಾಲಿ ಖಾಲಿ ಆಗಿದ್ದು, ಅಂತರ್ಜಲ ಕುಸಿಯುತ್ತಿರುವ ಕಾರಣಕ್ಕೆ ಜನರು ಕುಡಿಯುವ ನೀರಿಗೂ ಪರದಾಡುತ್ತಿದ್ದರು. ಆದರೆ ಕಳೆದ ವಾರ ಸುರಿದಿದ್ದ ಮಳೆ ಒಂದಷ್ಟು ಕೆರೆ ಹಾಗೂ ತೊರೆಗಳನ್ನು ತುಂಬಿಸಿದೆ. ಈ ನೀರಿನಿಂದ ಇನ್ನೂ ಒಂದು, ಅಥವಾ ಎರಡು ತಿಂಗಳು ದಿನದೂಡಬಹುದು. ಆದ್ರೆ ಮೇ ಅಂತ್ಯಕ್ಕೆಲ್ಲ ಒಳ್ಳೆಯ ಮಳೆಯು ಬೀಳುವ ನಿರೀಕ್ಷೆ ಇರುವುದು ಖುಷಿ ಕೊಡುತ್ತಿದೆ. ಹೀಗೆ ರೈತರು, ಉತ್ತಮವಾಗಿ ಮುಂಗಾರು ಮಳೆ ಬರಲಿದೆ ಅಂತಾ ಕಾಯುತ್ತಿದ್ದಾರೆ. ಹೀಗಾಗಿ ಇದೀಗ ಮಳೆರಾಯ ಕರುಣೆ ತೋರಬೇಕು ಹಾಗೇ ಉತ್ತಮವಾಗಿ ಮಳೆ ಸುರಿಸಿ ಪರಿಸ್ಥಿತಿ ಸರಿ ಮಾಡಬೇಕಿದೆ.
ಭರ್ಜರಿ ಮಳೆಯ ಮುನ್ಸೂಚನೆ
ಮಳೆ ಇಲ್ಲದೆ ಕನ್ನಡದ ರೈತರು ಪರದಾಡುವ ಸಮಯದಲ್ಲಿ ಕಳೆದ ವಾರ ಭರ್ಜರಿಯಾಗೇ, ಮಳೆರಾಯ ತನ್ನ ಕರುಣೆ ತೋರಿಸಿದ್ದಾನೆ. ಹಿಂಗೆ ಕಳೆದ ವಾರ ಭರ್ಜರಿಯಾಗಿ ಮಳೆ ಬಿದ್ದು ಏಪ್ರಿಲ್ 3ನೇ ವಾರದಲ್ಲಿ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಭಾರಿ ಮಳೆ ಬಂದಿತ್ತು. ಹೀಗೆ ಭಾರಿ ಮಳೆ ಬಿದ್ದ ಕಾರಣಕ್ಕೆ ಕನ್ನಡಿಗರು ಒಂದಷ್ಟು ಖುಷಿಪಟ್ಟರು. ಆದರೆ ಈಗ, ಏಪ್ರಿಲ್ 4ನೇ ವಾರಕ್ಕೆ ಮತ್ತೆ ಮಳೆ ಮೋಡಗಳು ಮರೆಯಾಗಿವೆ. ಹೀಗಿದ್ದಾಗ ಮುಂದಿನ 24 ಗಂಟೆಯಲ್ಲಿ ಭರ್ಜರಿ ಮಳೆ ಬೀಳುವ ಮುನ್ಸೂಚನೆ ಸಿಕ್ಕಿದೆ.
ಮಳೆ ಬಂದರೆ ಮಾತ್ರ ನೆಮ್ಮದಿ!
ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ನೀರು ಇಲ್ಲದೆ ರೈತರು ಪರದಾಡಿ ಹೋಗಿದ್ದು, ನೀರಿಗೆ ಹೋರಾಟ ಮಾಡಿದ್ದಾರೆ. ಹೀಗಿದ್ದಾಗ ಕಳೆದ ವಾರ ಮಲೆನಾಡು ಪ್ರದೇಶ, ಉತ್ತರ ಕರ್ನಾಟಕ ಸೇರಿದಂತೆ ದಕ್ಷಿಣ ಕರ್ನಾಟಕದಲ್ಲೂ ಉತ್ತಮವಾಗಿ ಮಳೆ ಬಿದ್ದಿತ್ತು. ಹಾಗೇ ಕರಾವಳಿ ಜಿಲ್ಲೆ ಭಾಗಕ್ಕೂ ಮಳೆಯ ಸಿಂಚನವಾಗಿತ್ತು. ಆದರೆ ಈ ವಾರ ಸಂಪೂರ್ಣವಾಗಿ ಮಳೆಯೇ ಬಂದ್ ಆಗಿದೆ. ಹಾಗಾದ್ರೆ ಮುಂದಿನ 24 ಗಂಟೆಯಲ್ಲಿ ಮಳೆ ಆಗಲಿದೆ ಅಂತಾ ಎಚ್ಚರಿಕೆ ನೀಡಿರುವ, ಕರ್ನಾಟಕದ ಆ ಜಿಲ್ಲೆಗಳು ಯಾವುವು?












Click it and Unblock the Notifications