Rain Alert: ಮಳೆ.. ಮಳೆ.. ಭರ್ಜರಿ ಮಳೆ.. ರೈತರು ಫುಲ್ ಖುಷ್!

ಕರ್ನಾಟಕದಲ್ಲಿ ಮಳೆಯೇ ಇಲ್ಲದೆ ರೈತರು, ಜನರು ನರಳಾಡಿ ಹೋಗುವಾಗ ಭರ್ಜರಿಯಾಗಿ ಮಳೆ ಸುರಿಯುತ್ತಿದೆ. ಅದರಲ್ಲಿಯೂ ಕಳೆದ ವಾರ ಪೂರ್ತಿ ಭಾರಿ ಮಳೆಯಿಂದ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಜನ ಕುಣಿದಾಡಿದ್ದರು. ಹಾಗೇ ಒಣಗಿ ಹೋಗುತ್ತಿದ್ದ ಬೆಳೆ ಉಳಿಸಿಕೊಂಡ ಖುಷಿಯಲ್ಲಿ ರೈತರು ಇದ್ದರು. ಈ ಖುಷಿ ಇದೀಗ ಮತ್ತೆ ಮುಂದುವರಿದಿದ್ದು, ಈ ವಾರ ಕೂಡ ಭರ್ಜರಿ ಮಳೆಯ ಸೂಚನೆ ಸಿಗುತ್ತಿದೆ. ಹಾಗೇ ಇಂದು ಕೂಡ ಭರ್ಜರಿ ಮಳೆ ಬಿದ್ದಿದೆ.

ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಇಂದು ಕೂಡ ಮಳೆರಾಯನ ಅಬ್ಬರ ಮುಂದುವರಿದಿದ್ದು, ಈ ಪೈಕಿ ಕನ್ನಡಿಗರ ಜೀವನದಿ ಕಾವೇರಿ ತಾಯಿ ತವರು, ಕೊಡಗು ಜಿಲ್ಲೆಯಲ್ಲಿ ವರುಣ ತನ್ನ ಅಬ್ಬರ ಮುಂದುವರಿಸಿದ್ದಾನೆ. ಕೊಡಗು ಜಿಲ್ಲೆಯಲ್ಲಿ ಭಾರಿ ಮಳೆ ಆಗುತ್ತಿದ್ದು, ಜನರಿಗೂ ಫುಲ್ ಖುಷಿಯಾಗುತ್ತಿದೆ. ಇನ್ನು ಮತ್ತೊಂದು ಕಡೆ ವಿದ್ಯಾಕಾಶಿ ಧಾರವಾಡ & ಹುಬ್ಬಳ್ಳಿಗೂ ಭಾರಿ ಮಳೆಯ ಸಿಂಚನವಾಗುತ್ತಿದೆ. ನಿನ್ನೆ ಕೂಡ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದೆ ಆದರೆ ಬೆಂಗಳೂರಿನ ಬಗ್ಗೆಯೇ ಚಿಂತೆ ಶುರುವಾಗಿದೆ. ಹಾಗಾದರೆ, ಬೆಂಗಳೂರಿನಲ್ಲಿ ಭರ್ಜರಿ ಮಳೆ ಸುರಿಯುವುದು ಯಾವಾಗ? ಮುಂದೆ ಓದಿ.

Karnataka Farmers Are Very Happy After Rain Started In The State

ಬೆಂಗಳೂರಲ್ಲಿ ಭರ್ಜರಿ ಮಳೆ ಯಾವಾಗ?

ಮಳೆ.. ಮಳೆ.. ಬಿರು ಬೇಸಿಗೆ ನಡುವೆ ಕಳೆದ ವಾರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭರ್ಜರಿ ಮಳೆ ಬಿದ್ದಿತ್ತು. ಕರ್ನಾಟಕದ ಕರಾವಳಿ ಜಿಲ್ಲೆಗಳು ಸೇರಿ ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು, ತುಮಕೂರು, ಹಾಸನ, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ ಮತ್ತು ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿ ಜನ ನಿಟ್ಟುಸಿರು ಬಿಟ್ಟಿದ್ದರು. ಆದ್ರೆ ಬೆಂಗಳೂರಿನ ಕಥೆ ಏನು? ಅತಿಹೆಚ್ಚು ಮಳೆ ಬೀಳುತ್ತಾ ಇದ್ದ ನಮ್ಮ ಬೆಂಗಳೂರಲ್ಲಿ ಈಗ ಮಳೆ ಯಾವಾಗ ಬರುತ್ತೆ? ಎನ್ನುವಾಗ ಶನಿವಾರ ಒಂದಷ್ಟು ಮಳೆ ಬಿದ್ದರೂ ಸಮಾಧಾನ ಆಗಿಲ್ಲ. ಹಾಗಾದರೆ ಬೆಂಗಳೂರಿನಲ್ಲಿ ಭರ್ಜರಿ ಮಳೆ ಯಾವಾಗ?

ಮಳೆ ಎಲ್ಲೆಲ್ಲಿ ಭರ್ಜರಿಯಾಗಿ ಬಂದಿತ್ತು?

ಶನಿವಾರ ಬೆಂಗಳೂರು ನಗರದ ಹೃದಯ ಎಂದು ಕರೆಸಿಕೊಳ್ಳುವ ವಿಧಾನಸೌಧದ ಸುತ್ತಮುತ್ತಲ ಪ್ರದೇಶ ಸೇರಿ, ಮೆಜೆಸ್ಟಿಕ್ ಪ್ರದೇಶ, ಮಡಿವಾಳ, ಎಚ್‌ಎಸ್‌ಆರ್ ಲೇಔಟ್, ಬೊಮ್ಮನಹಳ್ಳಿ, ಬಿಟಿಎಂ & ಬನಶಂಕರಿ ಬಡಾವಣೆ ಸುತ್ತಮುತ್ತ ಭರ್ಜರಿ ಮಳೆ ಬಂದಿತ್ತು. ಹಾಗೇ ಇದರ ಜೊತೆಗೆ ರಾಜಾಜಿನಗರ & ಮಾಗಡಿ ರಸ್ತೆಯಲ್ಲೂ ಮಳೆ ಬಂದಿದೆ. ಇನ್ನು ಹೆಬ್ಬಾಳ ಸುತ್ತಮುತ್ತ ಮಲ್ಲೇಶ್ವರ ಪ್ರದೇಶದಲ್ಲಿ ಕೂಡ ಭರ್ಜರಿ ಮಳೆ ಬಿತ್ತು ಬೆಂಗಳೂರು, ತಮಿಳುನಾಡು ಕೂಡಿಸುವ ಹೊಸೂರು ರಸ್ತೆಯ ಸುತ್ತಮುತ್ತಲ ಪ್ರದೇಶದಲ್ಲೂ ಭಾರಿ ಮಳೆಯಾಗಿತ್ತು. ಆದರೂ ಇದೀಗ ದಿಢೀರ್ ಮತ್ತೆ ಮಳೆಯ ಮೋಡಗಳೇ ಕಾಣೆಯಾಗಿವೆ, ಇದು ಚಿಂತೆ ಹೆಚ್ಚಿಸಿದೆ.

2023 ರಲ್ಲಿ ಭೀಕರ ಬರ ಬಂದಿತ್ತು

ಮುಂಗಾರು ಮಳೆ ಕೈಕೊಟ್ಟ ಕಾರಣ 2023 ರಲ್ಲಿ ಬರದ ಬೇಗೆಯಲ್ಲಿ ಕರ್ನಾಟಕ ಬೆಂದು ಹೋಗಿ ಜನ ಪರದಾಡಿದ್ದಾರೆ. ಇದೇ ಕಾರಣಕ್ಕೆ ಈ ಬಾರಿಯ ಬೇಸಿಗೆಯಲ್ಲಿ ಪರದಾಟ ಶುರುವಾಗಿ ಹನಿ ಹನಿ ನೀರು ಬಂಗಾರವಾಗಿದೆ. 2024 ಬೇಸಿಗೆ ಆರಂಭಕ್ಕೆ ಮೊದಲೇ, ತಲೆನೋವು ಶುರುವಾಗಿತ್ತು. ಕುಡಿವ ನೀರು ಒದಗಿಸಲು ರಾಜ್ಯ ಸರ್ಕಾರ ಪರದಾಡುತ್ತಿದೆ. ಈ ಸಮಯದಲ್ಲೇ ನಮ್ಮ ರಾಜ್ಯದ ಹಲವು ಪ್ರದೇಶದಲ್ಲಿ ಟ್ಯಾಂಕರ್ ಮಾಫಿಯಾ ಕೂಡ ಶುರುವಾಗಿದೆ ಹೀಗಿದ್ದಾಗ ಮಳೆರಾಯ ಕೂಡ ಕನ್ನಡಗರ ಮೇಲೆ ಕರುಣೆ ತೋರಿಸಿ ಮಳೆ ಬರಿಸಿದ್ದಾನೆ. ಆದರೆ ಈಗಿನ ಸ್ಥಿತಿಯಲ್ಲಿ ಬೆಂಗಳೂರಿನಲ್ಲಿ ಭರ್ಜರಿ ಮಳೆ ಆಗಬೇಕಿದೆ. ಇಲ್ಲವಾದರೆ ಬೆಂಗಳೂರಿನಲ್ಲಿ ಪರದಾಟ ತೀವ್ರವಾಗಲಿದೆ.

ಗದ್ದೆ, ಹೊಲಗಳಿಗೆ ಹೊಸ ಕಳೆ!

ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಫೆಬ್ರವರಿ & ಮಾರ್ಚ್ ತಿಂಗಳಲ್ಲಿ ಭಾರಿ ಬಿಸಿಲಿನಿಂದ, ಜನರು ಬೆಚ್ಚಿಬಿದ್ದಿದ್ದರು. ಅದರಲ್ಲೂ ಉತ್ತರ ಕರ್ನಾಟಕದ ಜನರಿಗೆ ಭಾರಿ ಬಿಸಿಲು ಸಮಸ್ಯೆ ತಂದೊಡ್ಡಿತ್ತು. ಆದರೆ ಕಳೆದ ವಾರ ಪೂರ್ತಿ ವರುಣದೇವ ಒಂದಷ್ಟು ಕರುಣೆ ತೋರಿಸಿದ್ದ. ಈ ಹಿನ್ನೆಲೆಯಲ್ಲಿ ಜನರು ನಿಟ್ಟುಸಿರು ಬಿಟ್ಟರು. ಆದ್ರೆ ಈ ವಾರ ಮತ್ತೆ ಮಳೆ ಕೈಕೊಟ್ಟಿದೆ. ಹೀಗಿದ್ದರೂ ಒಂದಷ್ಟು ಖುಷಿಯಾಗಿರುವ ರೈತರು ಮುಂದಿನ ದಿನಗಳಲ್ಲಿ ಮತ್ತೆ ಮಳೆರಾಯ ಕರ್ನಾಟಕದಲ್ಲಿ ಅಬ್ಬರಿಸಲಿದ್ದಾನೆ ಎಂದು ಕಾಯುತ್ತಿದ್ದಾರೆ. ಹೀಗಾಗಿ ಶೀಘ್ರದಲ್ಲಿಯೇ ಗುಡ್ ನ್ಯೂಸ್ ಸಿಗುವ ನಿರೀಕ್ಷೆ ಕೂಡ ದಟ್ಟವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+