ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಬದಲಾಯಿಸಿ, ಅಮಿತ್‌ ಶಾಗೆ ಪತ್ರ!

|
Google Oneindia Kannada News

Recommended Video

ಬಿ ಎಸ್ ಯಡಿಯೂರಪ್ಪ ವಿರುದ್ಧ ಅಮಿತ್ ಶಾಗೆ ಬಂತೊಂದು ಪತ್ರ | ಆ ಪತ್ರದಲ್ಲೇನಿದೆ? | oneindia kannada

ಬೆಂಗಳೂರು, ಸೆಪ್ಟೆಂಬರ್ 20 : ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡಬೇಕು ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ಪತ್ರ ಬರೆಯಲಾಗಿದೆ. ಹೌದು...ಬಿಜೆಪಿ ಕಾರ್ಯಕರ್ತರೇ ಈ ಪತ್ರ ಬರೆದಿದ್ದು, ಅಚ್ಚರಿಗೆ ಕಾರಣವಾಗಿದೆ.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕರ್ನಾಟಕ ಬಿಜೆಪಿ ಅಧ್ಯಕ್ಷರು, ವಿಧಾನಸಭೆ ವಿಪಕ್ಷ ನಾಯಕರು. ಅವರು ಎರಡು ಪ್ರಮುಖ ಹುದ್ದೆಯಲ್ಲಿದ್ದಾರೆ. ಹಿಂದೆಯೂ ಅವರನ್ನು ಬದಲಾವಣೆ ಮಾಡುವ ಸುದ್ದಿಗಳು ಹಬ್ಬಿತ್ತು.

ಕರ್ನಾಟಕ ಬಿಜೆಪಿ ವಿಶೇಷ ಸಭೆಯಲ್ಲಿ ನಡೆದ ಚರ್ಚೆಗಳೇನು?ಕರ್ನಾಟಕ ಬಿಜೆಪಿ ವಿಶೇಷ ಸಭೆಯಲ್ಲಿ ನಡೆದ ಚರ್ಚೆಗಳೇನು?

ಬೀದರ್ ಮೂಲದ ಭರತ್ ಖಂಡ್ರೆ ಎನ್ನುವ ಕಾರ್ಯಕರ್ತ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದು, ರಾಜ್ಯಾಧ್ಯಕ್ಷ ಸ್ಥಾನದಿಂದ ಅವರನ್ನು ಬದಲಾವಣೆ ಮಾಡಿ ಎಂದು ಒತ್ತಾಯ ಮಾಡಿದ್ದಾರೆ. ಈ ಪತ್ರ ಈಗ ಮಾಧ್ಯಮಗಳಿಗೆ ಸಿಕ್ಕಿದೆ.

ಕಾಂಗ್ರೆಸ್ ಅಸಮಾಧಾನ, ಬಿಜೆಪಿಗೆ ಲಾಭಕ್ಕಿಂತ ನಷ್ಟವಾಗಿದ್ದೇ ಹೆಚ್ಚುಕಾಂಗ್ರೆಸ್ ಅಸಮಾಧಾನ, ಬಿಜೆಪಿಗೆ ಲಾಭಕ್ಕಿಂತ ನಷ್ಟವಾಗಿದ್ದೇ ಹೆಚ್ಚು

ಕರ್ನಾಟಕದಲ್ಲಿ ಬಿಜೆಪಿಗೆ ಅಧಿಕಾರ ಕೈ ತಪ್ಪಲು ಬಿ.ಎಸ್.ಯಡಿಯೂರಪ್ಪ ಅವರೇ ಕಾರಣ ಎಂದು ಪತ್ರದಲ್ಲಿ ಆರೋಪಿಸಿದ್ದಾರೆ. ಕರ್ನಾಟಕದ ಪಕ್ಷದ ಹಿತದೃಷ್ಟಿಯಿಂದ ಯಡಿಯೂರಪ್ಪ ಅವರನ್ನು ತಕ್ಷಣ ಬದಲಾವಣೆ ಮಾಡಬೇಕು ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ. ಪತ್ರದಲ್ಲಿರುವ ಪ್ರಮುಖ ಅಂಶಗಳು....

ಸಮ್ಮಿಶ್ರ ಸರಕಾರದ ಅಸ್ಥಿರತೆ: ಬಿಜೆಪಿ ಬಿಡುಗಡೆ ಮಾಡಿದ ತುರ್ತು ಮಾಧ್ಯಮ ಪ್ರಕಟಣೆಸಮ್ಮಿಶ್ರ ಸರಕಾರದ ಅಸ್ಥಿರತೆ: ಬಿಜೆಪಿ ಬಿಡುಗಡೆ ಮಾಡಿದ ತುರ್ತು ಮಾಧ್ಯಮ ಪ್ರಕಟಣೆ

ಯಡಿಯೂರಪ್ಪ ನೇತೃತ್ವ

ಯಡಿಯೂರಪ್ಪ ನೇತೃತ್ವ

2018ರ ಮೇ ನಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ರಚನೆ ಮಾಡುವ ಅವಕಾಶ ಕಳೆದುಕೊಂಡಿದ್ದೇವೆ. ಚುನಾವಣೆಯಲ್ಲಿ ಬಿಜೆಪಿ 104 ಸ್ಥಾನಗಳಲ್ಲಿ ಜಯಗಳಿಸಿತು. ಯಡಿಯೂರಪ್ಪ ಅವರು ಕೆಪಿಜೆಪಿಯಿಂದ ಬಂದ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವ ಮೂಲಕ ಬಿಜೆಪಿಯ 150 ಸೀಟು ಗೆಲ್ಲುವ ಸಂಕಲ್ಪವನ್ನು ಹಾಳು ಮಾಡಿದ್ದಾರೆ.

104 ಸೀಟು ಯಡಿಯೂರಪ್ಪ ನೋಡಿ ಬಂದಿಲ್ಲ

104 ಸೀಟು ಯಡಿಯೂರಪ್ಪ ನೋಡಿ ಬಂದಿಲ್ಲ

2018ರ ಚುನಾವಣೆಯಲ್ಲಿ 104 ಜನ ಶಾಸಕರು ಆಯ್ಕೆಯಾದರು. ಯಡಿಯೂರಪ್ಪ ಅವರ ಪ್ರಭಾವಕ್ಕಾಗಲಿ ಅಥವ ಯಡಿಯೂರಪ್ಪ ಅವರ ಲಿಂಗಾಯತ ಸಮುದಾಯದವರಿಂದಾಗಲಿ 104 ಸೀಟು ಬಂದಿಲ್ಲ.

ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರು ರಾಜ್ಯದ ಜನರ ಮೇಲೆ ಅಪಾರವಾದ ಪ್ರೀತಿ, ವಿಶ್ವಾಸ ಇಟ್ಟಿದ್ದಾರೆ. ಇದರಿಂದಾಗಿ 150 ಸೀಟು ಬರಬಹುದಿತ್ತು. ಆದರೆ, ಯಡಿಯೂರಪ್ಪ ಅವರು ಬಿಜೆಪಿ ಪಕ್ಷಕ್ಕೆ ಹಾನಿ ಉಂಟು ಮಾಡಿದ್ದರಿಂದ 104 ಸೀಟು ಬಂದಿದೆ.

1 ಸೀಟನ್ನು ಬಿಜೆಪಿ ಗೆದ್ದಿಲ್ಲ

1 ಸೀಟನ್ನು ಬಿಜೆಪಿ ಗೆದ್ದಿಲ್ಲ

ಬೀದರ್ ಜಿಲ್ಲೆಯಲ್ಲಿ 5 ಸಾಮಾನ್ಯ ಕ್ಷೇತ್ರಗಳು ಇವೆ. ಈ ಕ್ಷೇತ್ರಗಳಲ್ಲಿ ಕೆಜೆಪಿಯಿಂದ ಬಂದವರಿಗೆ ಟಿಕೆಟ್ ನೀಡಲಾಗಿದೆ. ಬೀದರ್ ಜಿಲ್ಲೆಯಲ್ಲಿ ನರೇಂದ್ರ ಮೋದಿ ಮತ್ತು ಯೋಗಿ ಆದಿತ್ಯನಾಥ್ ಅವರು ಬಂದು ಚುನಾವಣಾ ಪ್ರಚಾರ ಮಾಡಿದ್ದರು. ಆದರೆ, ಜಿಲ್ಲೆಯ 5ರಲ್ಲಿ 1 ಸ್ಥಾನದಲ್ಲಿಯೂ ಬಿಜೆಪಿ ಗೆದ್ದಿಲ್ಲ.

ಸ್ಪಷ್ಟ ಬಹುಮತ ಬಂದಿಲ್ಲ

ಸ್ಪಷ್ಟ ಬಹುಮತ ಬಂದಿಲ್ಲ

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿಯೂ ಎಲ್ಲಿಯೂ ಪಕ್ಷಕ್ಕೆ ಸ್ಪಷ್ಟ ಬಹುಮತ ಬಂದಿಲ್ಲ. ಇದರಿಂದಾಗಿ ಯಡಿಯೂರಪ್ಪ ಅವರನ್ನು ಜನರು ಸ್ವೀಕಾರ ಮಾಡುತ್ತಿಲ್ಲ ಎಂಬುದು ತಿಳಿದುಬಂದಿರುತ್ತದೆ. ಆದ್ದರಿಂದ, ತುರ್ತಾಗಿ ಪಕ್ಷದ ರಾಜ್ಯಾಧ್ಯಕ್ಷ ಹುದ್ದೆಯಿಂದ ಯಡಿಯೂರಪ್ಪ ಅವರನ್ನು ಕೆಳಗಿಳಿಸಲು ಕ್ರಮ ಕೈಗೊಳ್ಳಬೇಕು.

ಪಕ್ಷದ ಹಿತದೃಷ್ಠಿಯಿಂದ ಬದಲಾವಣೆ

ಪಕ್ಷದ ಹಿತದೃಷ್ಠಿಯಿಂದ ಬದಲಾವಣೆ

ನರೇಂದ್ರ ಮೋದಿ ಅವರು ನೀವು ಹಗಲಿರುಳೆನ್ನದೇ ಪಕ್ಷವನ್ನು ಕಟ್ಟಿದ್ದೀರಿ. ಕರ್ನಾಟಕ ರಾಜ್ಯದ ಮೇಲೆ ಅಪಾರವಾದ ಪ್ರೀತಿ ಇಟ್ಟುಕೊಂಡಿದ್ದೀರಿ. ಕರ್ನಾಟಕ ರಾಜ್ಯದ ಪಕ್ಷದ ಹಿತದೃಷ್ಟಿಯಿಂದ ಯಡಿಯೂರಪ್ಪ ಅವರನ್ನು ಬೇಗ ಬದಲಾವಣೆ ಮಾಡಬೇಕು ಎಂದು ಪತ್ರದಲ್ಲಿ ಭರತ್ ಖಂಡ್ರೆ ಮನವಿ ಮಾಡಿದ್ದಾರೆ.

English summary
Bharath Kandre BJP activist from Bidar, Karnataka in his letter to BJP president Amit Shah urged that change Karnataka BJP president B.S.Yeddyurappa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X